ಮುಖೇಶ್ ಅಂಬಾನಿಗೆ ಬಿಗ್ ಶಾಕ್: ಬರೋಬ್ಬರಿ 79 ಲಕ್ಷ ಚಂದಾದಾರರನ್ನು ಕಳೆದುಕೊಂಡ ಜಿಯೋ; ಏರ್‌ಟೆಲ್, ವಿ ಸ್ಥಿತಿ ಗಂಭೀರ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಖೇಶ್ ಅಂಬಾನಿಗೆ ಬಿಗ್ ಶಾಕ್: ಬರೋಬ್ಬರಿ 79 ಲಕ್ಷ ಚಂದಾದಾರರನ್ನು ಕಳೆದುಕೊಂಡ ಜಿಯೋ; ಏರ್‌ಟೆಲ್, ವಿ ಸ್ಥಿತಿ ಗಂಭೀರ

ಮುಖೇಶ್ ಅಂಬಾನಿಗೆ ಬಿಗ್ ಶಾಕ್: ಬರೋಬ್ಬರಿ 79 ಲಕ್ಷ ಚಂದಾದಾರರನ್ನು ಕಳೆದುಕೊಂಡ ಜಿಯೋ; ಏರ್‌ಟೆಲ್, ವಿ ಸ್ಥಿತಿ ಗಂಭೀರ

ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್‌ನಲ್ಲಿ 14 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದರೆ, ಸೆಪ್ಟೆಂಬರ್‌ನಲ್ಲಿ 15 ಲಕ್ಷ ಚಂದಾದಾರರು ವೊಡಾಫೋನ್ ಐಡಿಯಾ (ವಿ) ಅನ್ನು ತೊರೆದಿದ್ದಾರೆ. ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ.

79 ಲಕ್ಷ ಚಂದಾದಾರರನ್ನು ಕಳೆದುಕೊಂಡ ಮುಖೇಶ್‌ ಅಂಬಾನಿ ಒಡೆತನದ ಜಿಯೋ
79 ಲಕ್ಷ ಚಂದಾದಾರರನ್ನು ಕಳೆದುಕೊಂಡ ಮುಖೇಶ್‌ ಅಂಬಾನಿ ಒಡೆತನದ ಜಿಯೋ

ಟೆಲಿಕಾಂ ಕಂಪನಿಗಳು ತಮ್ಮ ಸುಂಕವನ್ನು ದುಬಾರಿ ಮಾಡಿದ ನಂತರ ನಿರಂತರವಾಗಿ ಹಿನ್ನಡೆಯನ್ನು ಎದುರಿಸುತ್ತಿವೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಸೆಪ್ಟೆಂಬರ್ ತಿಂಗಳ ಚಂದಾದಾರರ ಡೇಟಾವನ್ನು ಬಿಡುಗಡೆ ಮಾಡಿದೆ. TRAI ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಗಮನಿಸಿದರೆ, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಸ್ಥಿತಿ ತುಂಬಾ ಕಠಿಣವಾಗಿದೆ ಎಂಬುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಮುನ್ನಡೆ ಸಾಧಿಸುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಟೆಲಿಕಾಂ ಕಂಪನಿಗಳು ಒಂದು ಕೋಟಿಗೂ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿವೆ ಎಂದು ಡೇಟಾ ತೋರಿಸಿದೆ.

ಏರ್‌ಟೆಲ್-ವಿ-ಜಿಯೊ ಸ್ಥಿತಿ ಗಂಭೀರ

ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್‌ನಲ್ಲಿ 14 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದರೆ, ಸೆಪ್ಟೆಂಬರ್‌ನಲ್ಲಿ 15 ಲಕ್ಷ ಚಂದಾದಾರರು ವೊಡಾಫೋನ್ ಐಡಿಯಾ (ವಿ) ಅನ್ನು ತೊರೆದಿದ್ದಾರೆ. ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಜಿಯೋ ಸುಮಾರು 79 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಇದರರ್ಥ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಹೋಲಿಸಿದರೆ ಜಿಯೋ ಸ್ಥಿತಿ ಹದಗೆಟ್ಟಿದೆ.

ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಮತ್ತೆ ಜನರ ವಿಶ್ವಾಸವನ್ನು ಗಳಿಸಲು ಬಯಸಿದರೆ, ಕಂಪನಿಯು ತನ್ನ ಕಾರ್ಯತಂತ್ರವನ್ನು ಸ್ವಲ್ಪ ಬದಲಾಯಿಸಬೇಕಾಗಿದೆ. ಸುಂಕದ ಹೆಚ್ಚಳದಿಂದಾಗಿ, ಕೋಪಗೊಂಡ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ಮುಖ ಮಾಡಿದ್ದಾರೆ. ಏಕೆಂದರೆ BSNL ಯೋಜನೆಗಳು ತುಂಬಾ ಅಗ್ಗವಾಗಿವೆ.

ಜಿಯೋ, ಏರ್​​ಟೆಲ್ ಮತ್ತು ವಿ ಗ್ರಾಹಕರನ್ನು ಮತ್ತೆ ನೆಟ್‌ವರ್ಕ್‌ಗೆ ಸಂಪರ್ಕಿಸಬೇಕಾದರೆ, ಯೋಜನೆಗಳನ್ನು ಅಗ್ಗವಾಗಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಇಲ್ಲವೇ ಬಳಕೆದಾರರಿಗೆ ಫ್ರೆಂಡ್ಲಿ ಪ್ಯಾಕ್‌ ಅನ್ನು ನೀಡಬೇಕು. ಕಡಿಮೆ ಬೆಲೆಗೆ ಉತ್ತಮ ಪ್ರಯೋಜನಗಳನ್ನು ನೀಡುವ ಇಂತಹ ಹೊಸ ಯೋಜನೆಗಳನ್ನು ಖಾಸಗಿ ಟೆಲಿಕಾಂ ಕಂಪನಿಗಳು ಪ್ರಾರಂಭಿಸಬೇಕು.

ಬಿಎಸ್‌ಎನ್‌ಎಲ್‌ಗೆ ಒಳ್ಳೆಯ ದಿನಗಳು

ಎಲ್ಲರೂ ಖಾಸಗಿ ಕಂಪನಿಗಳೊಂದಿಗೆ ಬೆರೆಯುತ್ತಿದ್ದ ಕಾಲವಿತ್ತು. ಆದರೆ ಸುಂಕ ಏರಿಕೆಯ ನಂತರ ಇಡೀ ಆಟವೇ ಬದಲಾಗಿದೆ. ಒಂದೆಡೆ ಏರ್‌ಟೆಲ್, ಜಿಯೋ ಮತ್ತು ವಿಐ ಸುಂಕ ಹೆಚ್ಚಳವನ್ನು ಘೋಷಿಸಿದರೆ, ಇನ್ನೊಂದೆಡೆ ನಾವು ಸುಂಕವನ್ನು ಹೆಚ್ಚಿಸುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಸ್ಪಷ್ಟಪಡಿಸಿದೆ. ಕ್ರಮೇಣ ಜನರು BSNL ನೆಟ್‌ವರ್ಕ್‌ಗೆ ಸಂಪರ್ಕ ಸಾಧಿಸಲು ಇದು ಕಾರಣವಾಗಿದೆ. ಚಂದಾದಾರರನ್ನು ಕಳೆದುಕೊಳ್ಳುವ ಬದಲು, BSNL ಸೆಪ್ಟೆಂಬರ್‌ನಲ್ಲಿ 8 ಲಕ್ಷ ಹೊಸ ಚಂದಾದಾರರನ್ನು ನೆಟ್‌ವರ್ಕ್‌ಗೆ ಸೇರಿಸಿದೆ.

ವರದಿ: ವಿನಯ್ ಭಟ್

Whats_app_banner