ಐಫೋನ್ ಅಲ್ಲವೇ ಅಲ್ಲ; ಇಲ್ಲಿವೆ ನೋಡಿ ವಿಶ್ವದ ಟಾಪ್ 5 ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು
ಪ್ರಪಂಚದಲ್ಲಿ ಐಫೋನ್‌ಗೆ ಇರುವ ಕ್ರೇಜ್ ಬೇರೆ ಫೋನ್‌ಗಳಿಗಿಲ್ಲ. ಇದು ಅತ್ಯಂತ ದುಬಾರಿ ಫೋನ್ ಎಂದು ಹೆಚ್ಚಿನವರ ಲೆಕ್ಕಾಚಾರ. ಆದರೆ, ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಕೂಡಾ ಇವೆ. ಸ್ಯಾಮ್‌ಸಂಗ್, ಶವೋಮಿ ಕೂಡಾ ದುಬಾರಿ ಫೋನ್‌ಗಳನ್ನು ತಂದಿವೆ.
ಅನೇಕ ಜನರು ಐಫೋನ್ ಅನ್ನು ದುಬಾರಿ ಸ್ಮಾರ್ಟ್ ಫೋನ್ ಎಂದು ಅಂದುಕೊಂಡಿರುತ್ತಾರೆ. ಐಫೋನ್‌ನ ಇತ್ತೀಚಿನ ಆವೃತ್ತಿಯ ಬೆಲೆ ಸುಮಾರು ಒಂದೂವರೆ ಲಕ್ಷ ರೂಪಾಯಿವರೆಗೆ ಇದೆ. ಆದರೆ, ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಫೋನ್ ಇದಲ್ಲ. ಇದಕ್ಕಿಂತ ಹೆಚ್ಚಿನ ಬೆಲೆಯ ದುಬಾರಿ ಫೋನ್‌ಗಳು ಸಹ ವಿಶ್ವದಲ್ಲಿ ಲಭ್ಯವಿವೆ. ಆ ಫೋನ್‌ಗಳು ಯಾವುವು? ಅದು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಹುವೈ ಮ್ಯಾಟ್ 30 RS
ಪೋರ್ಚೆ ಡಿಸೈನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಬರೋಬ್ಬರಿ ರೂ. 2,14,990. ಈ ಫೋನ್ ಇನ್ನೂ ಬಿಡುಗಡೆಯಾಗಿಲ್ಲ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು ಕಿರಿನ್ 990 ಆಕ್ಟಾ ಕೋರ್ ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ 2.86 GHz ಪ್ರೊಸೆಸರ್ ಅನ್ನು ಹೊಂದಿದೆ. ಇದು 6.53 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.
ಹುವೈ ಮ್ಯಾಟ್ X2 ಸ್ಮಾರ್ಟ್‌ಫೋನ್
ಇದರ ಬೆಲೆ ರೂ. 2,04,999 ನಿಗದಿಪಡಿಸಲಾಗಿದೆ. 90Hz ರಿಫ್ರೆಶ್ ಹೊಂದಿರುವ ಈ ಡಿಸ್‌ಪ್ಲೇ ಮೇಲೆ ಮಾತ್ರೆ ಆಕಾರದ ಪಂಚ್ ಹೋಲ್ ಅನ್ನು ನೀಡಲಾಗಿದೆ. ಇದರಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳನ್ನು ಕೊಡಲಾಗಿದೆ. ಕಿರಿನ್ 9000 ಪ್ರೊಸೆಸರ್ ಜೊತೆಗೆ 8 GB RAM ಮತ್ತು 512 GB ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಛಾಯಾಗ್ರಹಣಕ್ಕಾಗಿ, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 16-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್, 12-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿದೆ. ಇದು 10x ಆಪ್ಟಿಕಲ್ ಜೂಮ್‌ನೊಂದಿಗೆ ಬರುತ್ತದೆ. ಫೋನ್ 100x ಡಿಜಿಟಲ್ ಜೂಮ್ ಮತ್ತು 2.5cm ಸೂಪರ್ ಮ್ಯಾಕ್ರೋ ಮೋಡ್ ಅನ್ನು ಹೊಂದಿದೆ. ಸೆಲ್ಫಿಗಾಗಿ ಫೋನ್ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. 4500mAh ಬ್ಯಾಟರಿಯನ್ನು ನೀಡಲಾಗಿದ್ದು, 55 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ದುಬಾರಿ ಫೋನ್‌ಗಳ ಪಟ್ಟಿಯಲ್ಲಿರುವ ಮತ್ತೊಂದು ಫೋನ್ ಲಂಬೋರ್ಗಿನಿ 88 ಟೌರಿ. ಈ ಫೋನಿನ ಬೆಲೆ ರೂ. 3,60,000. ಇದು 5 ಇಂಚಿನ ಪರದೆಯನ್ನು ಹೊಂದಿದೆ. ಈ ಫೋನ್ ಕ್ವಾಡ್ ಕೋರ್ 2.3 GHz ಚಿಪ್‌ಸೆಟ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಆಲ್ಟ್ರಾ ಸ್ಮಾರ್ಟ್‌ಫೋನ್ ಬೆಲೆ ರೂ. 1,99,990 ನಿಗದಿಪಡಿಸಲಾಗಿದೆ. ಈ ಫೋನ್ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 8.2 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 200MP ಕ್ವಾಡ್ ಕ್ಯಾಮೆರಾವನ್ನು ಹೊಂದಿದೆ.
ಶವೋಮಿ ರೆಡ್ಮಿ K20 ಪ್ರೊ ಸಿಗ್ನೇಚರ್
ಶವೋಮಿ ಬಜೆಟ್ ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಕಂಪನಿಯಿಂದ ಪ್ರೀಮಿಯಂ ಫೋನ್ ಕೂಡ ಬಿಡುಗಡೆ ಆಗಿದೆ. ಶವೋಮಿ ರೆಡ್ಮಿ K20 ಪ್ರೊ ಸಿಗ್ನೇಚರ್ ಆವೃತ್ತಿ ಫೋನ್ ಅನ್ನು ಪರಿಚಯಿಸಿತ್ತು. ಚಿನ್ನ ಮತ್ತು ವಜ್ರಗಳಿಂದ ತಯಾರಿಸಲಾದ ಈ ಫೋನ್ ಬೆಲೆ ರೂ. 4,80,000. ಇದು 6.39 ಇಂಚಿನ ಡಿಸ್‌ಪ್ಲೇ ಹೊಂದಿದೆ. 27 ವ್ಯಾಟ್ಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4000 mAh ಬ್ಯಾಟರಿಯನ್ನು ಒದಗಿಸಲಾಗಿದೆ.