6000mAh ಬ್ಯಾಟರಿ, 50MP ಕ್ಯಾಮೆರಾ: ಸ್ಯಾಮ್​ಸಂಗ್ಸ್‌​ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್‌​ಫೋನ್
ಕನ್ನಡ ಸುದ್ದಿ  /  ಜೀವನಶೈಲಿ  /  6000mah ಬ್ಯಾಟರಿ, 50mp ಕ್ಯಾಮೆರಾ: ಸ್ಯಾಮ್​ಸಂಗ್ಸ್‌​ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್‌​ಫೋನ್

6000mAh ಬ್ಯಾಟರಿ, 50MP ಕ್ಯಾಮೆರಾ: ಸ್ಯಾಮ್​ಸಂಗ್ಸ್‌​ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್‌​ಫೋನ್

ಸ್ಯಾಮ್​ಸಂಗ್ ಕಂಪನಿ ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಸ್ಮಾರ್ಟ್​ಫೋನ್ ಲಾಂಚ್ ಮಾಡುತ್ತಲೇ ಇರುತ್ತದೆ. ಈ ಬಾರಿ ಗ್ಯಾಲಕ್ಸಿ M35 5G ಫೋನಿನೊಂದಿಗೆ ಪುನಃ ಬಂದಿದೆ. ಇದೊಂದು ಮಧ್ಯಮ ಬೆಲೆಯ ಫೋನ್‌ ಆಗಿದ್ದು, ಭರ್ಜರಿ ಬ್ಯಾಟರಿ, ಆಕರ್ಷಕ ಕ್ಯಾಮೆರಾಗಳಿಂದ ಕೂಡಿದೆ.

ಸ್ಯಾಮ್​ಸಂಗ್ಸ್‌​ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್‌​ಫೋನ್ ಗ್ಯಾಲಕ್ಸಿ M35 5G
ಸ್ಯಾಮ್​ಸಂಗ್ಸ್‌​ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್‌​ಫೋನ್ ಗ್ಯಾಲಕ್ಸಿ M35 5G (Samsung)

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ ಇದೀಗ ಹೊಸ ಸ್ಮಾರ್ಟ್​ಫೋನ್ ಮೂಲಕ ಭಾರತಕ್ಕೆ ಮತ್ತೆ ಬಂದಿದೆ. ದೇಶದಲ್ಲಿ ಅತಿ ಹೆಚ್ಚು ಫೋನುಗಳನ್ನು ಬಿಡುಗಡೆ ಮಾಡುವ ಸ್ಯಾಮ್​ಸಂಗ್ ಈಗ ತನ್ನ ಗ್ಯಾಲಕ್ಸಿ ಎಮ್ ಸರಣಿಯ ಅಡಿಯಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ M35 5G ಫೋನನ್ನು ಅನಾವರಣ ಮಾಡಿದೆ. 20,000 ರೂಪಾಯಿ ಒಳಗಡೆ ಲಭ್ಯವಿರುವ ಈ ಫೋನಿನಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ, ಬರೋಬ್ಬರಿ 6000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. ಈ ಫೋನಿನ ಬೆಲೆ, ವೈಶಿಷ್ಟ್ಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಗ್ಯಾಲಕ್ಸಿ M35 5G ಬೆಲೆ, ಲಭ್ಯತೆ

ಭಾರತದಲ್ಲಿ ಗ್ಯಾಲಕ್ಸಿ M35 5G ಆರಂಭಿಕ ಬೆಲೆ 6GB RAM + 128GB ಮಾದರಿಗೆ 19,999 ರೂಪಾಯಿ ಇದೆ. ಅಂತೆಯೆ ಇದರ 8GB RAM + 128GB ಮತ್ತು 8GB RAM + 256GB ರೂಪಾಂತರಗಳ ಬೆಲೆ ಕ್ರಮವಾಗಿ ರೂ. 21,499 ಮತ್ತು 24,299 ರೂಪಾಯಿ ನಿಗದಿ ಮಾಡಲಾಗಿದೆ. ಇದು ಅಮೆಜಾನ್, ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಜುಲೈ 20 ರಿಂದ ದೇಶದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

ಕಂಪನಿಯು ಸೀಮಿತ ಅವಧಿಗೆ 1,000 ರೂ. ರಿಯಾಯಿತಿಗಳನ್ನು ಘೋಷಿಸಿದೆ. ಹಾಗೆಯೆ ಎಲ್ಲಾ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂ. ತ್ವರಿತ ರಿಯಾಯಿತಿ ಇದೆ. ಈ ಹ್ಯಾಂಡ್ಸೆಟ್ ಅನ್ನು ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ - ಡೇಬ್ರೇಕ್ ಬ್ಲೂ, ಮೂನ್ಲೈಟ್ ಬ್ಲೂ ಮತ್ತು ಥಂಡರ್ ಗ್ರೇ.

ಗ್ಯಾಲಕ್ಸಿ M35 5G ಫೀಚರ್ಸ್

ಗ್ಯಾಲಕ್ಸಿ M35 5G ಸ್ಮಾರ್ಟ್​ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಪೂರ್ಣ-HD+ (1,080 x 2,340 ಪಿಕ್ಸೆಲ್‌ಗಳು) ಸೂಪರ್ AMOLED ಇನ್ಫಿನಿಟಿ-O ಡಿಸ್‌ಪ್ಲೇಯನ್ನು ಹೊಂದಿದೆ. 1,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮಟ್ಟ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯಿಂದ ಕೂಡಿದೆ. ಇದು ಆಕ್ಟಾ-ಕೋರ್ Exynos 1380 SoC ಮೂಲಕ 8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ.

ಫೋಟೋಗಳಿಗಾಗಿ, ಈ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ (f/1.8) ಜೊತೆಗೆ 8-ಮೆಗಾಪಿಕ್ಸೆಲ್ ಸಂವೇದಕವನ್ನು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ (f/2.2) ಜೊತೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ (f/2.4) ಲೆನ್ಸ್ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ f/2.2 ದ್ಯುತಿರಂಧ್ರದೊಂದಿಗೆ 13-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

ಗ್ಯಾಲಕ್ಸಿ M35 5G ಸ್ಮಾರ್ಟ್​ಫೋನ್ ಬರೋಬ್ಬರಿ 6,000mAh ಬ್ಯಾಟರಿಯೊಂದಿಗೆ ರಿಲೀಸ್ ಆಗಿದೆ. ಇದು ಎಷ್ಟು ವೋಲ್ಟ್ ಫಾಸ್ಟ್ ಚಾರ್ಜರ್ ಸಪೋರ್ಟ್ ಮಾಡುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಡಾಲ್ಬಿ ಅಟ್ನೋಮಸ್​ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಫೋನ್ 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.3, ಜಿಪಿಎಸ್ ಮತ್ತು ಯುಎಸ್​ಬಿ ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಸ್ಯಾಮ್‌ಸಂಗ್‌ನ ನಾಕ್ಸ್ ಸೆಕ್ಯುರಿಟಿ ಮತ್ತು ಟ್ಯಾಪ್ & ಪೇ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Whats_app_banner