ಇದು ಸಾಮಾನ್ಯವಾದ ಹೆಲ್ಮೆಟ್ ಅಲ್ಲ; ಇದನ್ನು ಹಾಕಿಕೊಂಡರೆ ನೀವು ಫುಲ್ ಸೇಫ್, ಬೆಲೆ ಎಷ್ಟು ನೋಡಿ
ಸ್ಟೀಲ್‌ಬರ್ಡ್‌ನ ಹೊಸ SBA 8 BT ಹೆಲ್ಮೆಟ್ ಅನೇಕ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಆಗಿದೆ. ಐಎಸ್ಐ ಪ್ರಮಾಣೀಕೃತ ಫ್ಲಿಪ್ ಅಪ್ ಹೆಲ್ಮೆಟ್ ಇದಾಗಿದ್ದು, ಇದರಲ್ಲಿ ಬ್ಲೂಟೂತ್ ಫೀಚರ್ಸ್ ಸಹ ಒದಗಿಸಲಾಗಿದೆ. ಇದರ ಬೆಲೆ ಎಷ್ಟು, ಇತರೆ ಏನೆಲ್ಲ ಫೀಚರ್ಸ್ ಇವೆ ಎಂಬುದನ್ನು ನೋಡೋಣ.
ಭಾರತದಲ್ಲಿ ಬೈಕ್ ಅಥವಾ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಹೆಲ್ಮೆಟ್ ಹಾಕಿಲ್ಲ ಎಂದಾದರೆ ಫೈನ್ ಹಾಕಲಾಗುತ್ತದೆ. ಫೈನ್ ಬೀಳುತ್ತೆ ಎನ್ನುವುದಕ್ಕಿಂತ ಹೆಚ್ಚಾಗಿ ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಲೇಬೇಕು. ಇಂದು ಮಾರುಕಟ್ಟೆಯಲ್ಲಿ ಹಲವು ರೀತಿಯ ಹೆಲ್ಮೆಟ್‌ಗಳು ಲಭ್ಯವಿದ್ದು, ಇವುಗಳ ಶ್ರೇಣಿ 500ರಿಂದ 10,000 ಸಾವಿರ ರೂಪಾಯಿವರೆಗೆ ಇದೆ. ಆದರೆ ಬ್ಲೂಟೂತ್ ಮತ್ತು ಎಲ್ಇಡಿ ಇರುವ ಹೆಲ್ಮೆಟ್ ನೀವು ನೋಡಿದ್ದೀರಾ? ಹೌದು, ಇಂದು ನಾವು ಬ್ಲೂಟೂತ್ ಮತ್ತು ಎಲ್ಇಡಿ ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಅಂತಹ ಅದ್ಭುತ ಹೆಲ್ಮೆಟ್ ಬಗ್ಗೆ ಹೇಳಲಿದ್ದೇವೆ.
ಈ ಹೆಲ್ಮೆಟ್‌ನ ಹೆಸರು ಸ್ಟೀಲ್‌ಬರ್ಡ್ SBA 8 BT (Steelbird SBA 8 BT). ಈ ಫ್ಲಿಪ್-ಅಪ್ ಮಾಡ್ಯುಲರ್ ಹೆಲ್ಮೆಟ್ ಸಾಕಷ್ಟು ವಿಶೇಷವಾಗಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹೆಲ್ಮೆಟ್‌ಗಳಲ್ಲಿ ಒಂದಾಗಿದೆ. ಇದನ್ನು ಹೈಟೆಕ್ ಹೆಲ್ಮೆಟ್ ಎಂದು ಕರೆದರೆ ತಪ್ಪಾಗುವುದಿಲ್ಲ. ಏಕೆಂದರೆ ಇದು ಗ್ರಾಹಕರಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡುತ್ತಿದೆ. ಟ್ರೆಂಡಿ ಮಾತ್ರವಲ್ಲದೆ ನಿಮಗೆ ಸುರಕ್ಷತೆ ಮತ್ತು ಅನುಕೂಲವನ್ನು ಕೂಡ ನೀಡುತ್ತದೆ. ಇದರ ಬೆಲೆ 3,999 ರೂಪಾಯಿ. ಇತ್ತೀಚೆಗಷ್ಟೆ ಬಿಡುಗಡೆ ಆಗಿರುವ ಈ ಹೆಲ್ಮೆಟ್ ಹೊಸ ಟ್ರೆಂಡ್ ಸೃಷ್ಟಿಸಿದೆ.
ISI ಪ್ರಮಾಣೀಕರಿಸಲಾಗಿದೆ
ಈ ಹೆಲ್ಮೆಟ್ ಅನ್ನು ಭಾರತೀಯ ಗುಣಮಟ್ಟ ಸಂಸ್ಥೆ (ISI) ಪ್ರಮಾಣೀಕರಿಸಿದೆ. ಇದು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಲಾಗಿದೆ. ಈ ಹೆಲ್ಮೆಟ್ ಅನ್ನು ಎಬಿಎಸ್ ಶೆಲ್‌ನಿಂದ ಮಾಡಲಾಗಿದ್ದು ಇದು ನಿಮ್ಮ ತಲೆಯನ್ನು ಯಾವುದೇ ಅಪಾಯ ಬಂದರೂ ರಕ್ಷಿಸುತ್ತದೆ. ಹಾಗೆಯೆ ಗಾಳಿಯ ಚಲನೆಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಈ ಮೂಲಕ ಹೆಲ್ಮೆಟ್ ಹಾಕಿದಾಗ ಉಸಿರು ಗಟ್ಟುವ ರೀತಿ ಆಗದೆ ಸವಾರನನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.
ಈ ಹೆಲ್ಮೆಟ್ ಮೃದುವಾದ ಮತ್ತು ಉಸಿರಾಡುವ ಪ್ಯಾಡಿಂಗ್ ಅನ್ನು ಕೂಡ ಹೊಂದಿದ್ದು ಅದು ದೀರ್ಘ ಪ್ರಯಾಣದ ಸಮಯದಲ್ಲಿಯೂ ಸಹ ಯಾವುದೇ ತೊಂದರೆ ಆಗುವುದಿಲ್ಲ. ಹೆಲ್ಮೆಟ್‌ನ ಒಳಭಾಗವನ್ನು ಕೂಡ ತೆಗೆಯಬಹುದು ಮತ್ತು ಇದನ್ನು ತೊಳೆಯಬಹುದು. ಫ್ಲಿಪ್-ಅಪ್ ವಿನ್ಯಾಸವನ್ನು ಹೊಂದಿರುವ ಈ ಹೆಲ್ಮೆಟ್‌ನಲ್ಲಿ ಬ್ಲೂಟೂತ್ ಸಂಪರ್ಕವನ್ನು ನೀಡಲಾಗಿದ್ದು, ನಿಮಗೆ ಸಂಗೀತವನ್ನು ಕೇಳಲು ಅಥವಾ ನಿಮ್ಮ ಫೋನ್‌ನಿಂದ ಕಾಲ್ ಮಾಡಲು ಅನುಮತಿಸುತ್ತದೆ.
ಈ ಸ್ಟೀಲ್‌ಬರ್ಡ್ ಹೆಲ್ಮೆಟ್‌ನ ವಿನ್ಯಾಸವು ಸಾಕಷ್ಟು ವಿಶಿಷ್ಟವಾಗಿದೆ. ಕಂಪನಿಯು ಇದರಲ್ಲಿ ಫ್ಲಿಪ್ ಅಪ್ ಸೌಲಭ್ಯವನ್ನು ಒದಗಿಸಿದೆ. ಅಂದರೆ ನೀವು ಹೆಲ್ಮೆಟ್ ತೆಗೆಯದೆಯೇ ನೀರನ್ನು ಕುಡಿಯಬಹುದು. ಇದಲ್ಲದೆ, ಈ ಹೆಲ್ಮೆಟ್‌ನಲ್ಲಿ ಎಲ್‌ಇಡಿ ಲೈಟ್‌ಗಳನ್ನು ಸಹ ನೀಡಲಾಗಿದ್ದು, ಇದು ನಿಮಗೆ ರಾತ್ರಿಯಲ್ಲಿ ತುಂಬಾ ಸಹಾಯ ಮಾಡುತ್ತದೆ.
ವಿಶೇಷವಾಗಿ ಈ ಹೆಲ್ಮೆಟ್ ಇನ್ನರ್ ಮಾಸ್ಕ್ ಹೊಂದಿದ್ದು ಇದು ನಿಮ್ಮ ಕಣ್ಣುಗಳನ್ನು ಅಧಿಕ ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ. ಹಾಗೆಯೆ ಇದು ರಿಲೀಸ್ ವಿಸರ್ ಅನ್ನು ಹೊಂದಿದ್ದು ಅದನ್ನು ಸುಲಭವಾಗಿ ಬದಲಾಯಿಸಬಹುದು. ಒಟ್ಟಾರೆಯಾಗಿ, ಸ್ಟೀಲ್‌ಬರ್ಡ್ SBA 8 BT ಬೆಲೆಗೆ ತಕ್ಕಂತೆ ಸೌಕರ್ಯ ಮತ್ತು ವೈಶಿಷ್ಟ್ಯಗಳೊಂದಿಗೆ ಉತ್ತಮ ಹೆಲ್ಮೆಟ್ ಆಗಿದೆ. ನೀವು ಹೆಚ್ಚಾಗಿ ಲಾಂಗ್ ಡ್ರೈವ್ ಹೋಗುವವರಾಗಿದ್ದರೆ ಇದು ಉತ್ತಮ ಆಯ್ಕೆಯಾಗಿದೆ.
ವರದಿ: ವಿನಯ್ ಭಟ್.
ಇನ್ನಷ್ಟು ಟೆಕ್ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | 6000mAh ಬ್ಯಾಟರಿ, 50MP ಕ್ಯಾಮೆರಾ: ಸ್ಯಾಮ್ಸಂಗ್ಸ್ನಿಂದ ಕಡಿಮೆ ಬೆಲೆಗೆ ಬಂತು ಬೆರಗುಗೊಳಿಸುವ ಸ್ಮಾರ್ಟ್ಫೋನ್