ಕನ್ನಡ ಸುದ್ದಿ  /  ಜೀವನಶೈಲಿ  /  Mobile Tips: ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು; ಈ ಟ್ರಿಕ್ ತಿಳಿಯಿರಿ

Mobile Tips: ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು; ಈ ಟ್ರಿಕ್ ತಿಳಿಯಿರಿ

ಮೊಬೈಲ್ ಇದ್ದು, ಅದರಲ್ಲಿ ನೆಟ್‌ವರ್ಕ್ ಇಲ್ಲದೆ ಇದ್ದರೆ ದೊಡ್ಡ ಹಿಂಸೆ. ನೀವು ಯಾರಿಗೂ ಕರೆ ಮಾಡಲು ಸಾಧ್ಯವಿಲ್ಲ. ಇಂಟರ್ನೆಟ್ ಬಳಸಲೂ ಆಗುವುದಿಲ್ಲ. ನೀವು ಸಹ ಕೆಟ್ಟ ಮೊಬೈಲ್ ನೆಟ್‌ವರ್ಕ್‌ನಿಂದ ಬಳಲುತ್ತಿದ್ದೀರಾ? ಹಾಗಾದರೆ, ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದಾದ ಟ್ರಿಕ್ ಒಂದನ್ನು ನಾವಿಲ್ಲಿ ಹೇಳುತ್ತೇವೆ.

 ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು; ಈ ಟ್ರಿಕ್ ತಿಳಿಯಿರಿ
ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು; ಈ ಟ್ರಿಕ್ ತಿಳಿಯಿರಿ

ಸಂವಹನದ ಮುಖ್ಯ ಮಾಧ್ಯಮ ಫೋನ್ ಆಗಿರುವುದರಿಂದ ನಿಮ್ಮ ಫೋನ್‌ನಲ್ಲಿ ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿರುವುದು ಮುಖ್ಯವಾಗಿದೆ. ಆದರೆ, ಕೆಲವೊಮ್ಮೆ ನಮಗೆ ಅಗತ್ಯದ ಸಂದರ್ಭದಲ್ಲೇ ಸಿಗ್ನಲ್ ಇರುವುದಿಲ್ಲ. ಇದರಿಂದ ಬಳಕೆದಾರರು ಅನೇಕ ಸಮಸ್ಯೆಗಳಿಗೆ ಸಿಲುಕಿ ಬಿಡುತ್ತಾರೆ. ಅಥವಾ ಕಡಿಮೆ ಸಿಗ್ನಲ್ ಇದ್ದರೆ ಫೋನ್‌ನಲ್ಲಿ ಸರಿಯಾಗಿ ಮಾತನಾಡಲು ಸಾಧ್ಯವಿಲ್ಲ, ಕರೆ ಇದ್ದಕ್ಕಿದ್ದಂತೆ ಕಟ್ ಆಗುತ್ತದೆ. ನಿಮ್ಮಲ್ಲಿ ಹಲವರು ಈ ಸಮಸ್ಯೆಯನ್ನು ಅನುಭವಿಸಿರಬೇಕು. ಆದರೆ ಇದಕ್ಕೆ ಪರಿಹಾರಗಳಿವೆ. ನಿಮ್ಮ ಫೋನ್ ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೂ ನೀವು ಕಾಲ್ ಮಾಡಿ ಮಾತನಾಡಬಹುದು.

ಇನ್ಮುಂದೆ ನಿಮ್ಮ ಮೊಬೈಲ್​ನಲ್ಲಿ ನೆಟ್​ವರ್ಕ್ ಇಲ್ಲದೆ ಕರೆಗಳನ್ನು ಮಾಡಲು ತೊಂದರೆಯಾಗುತ್ತಿದ್ದರೆ ಚಿಂತಿಸಬೇಡಿ. ಇದರ ಬದಲು ವೈಫೈ ಕರೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ದುರ್ಬಲ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಇಲ್ಲದಿದ್ದರೂ ಕರೆಗಳನ್ನು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ವೈಫೈ ಕಾಲಿಂಗ್ ಎಂದರೇನು? ಅದನ್ನು ಹೇಗೆ ಪ್ರಾರಂಭಿಸಬೇಕು? ಎಂದು ನೋಡೋಣ.

ಟ್ರೆಂಡಿಂಗ್​ ಸುದ್ದಿ

ವೈಫೈ ಕಾಲಿಂಗ್ ಎಂದರೇನು?

ವೈಫೈ ಕರೆ ಎನ್ನುವುದು ಸೆಲ್ಯುಲಾರ್ ನೆಟ್‌ವರ್ಕ್ ಬದಲಿಗೆ ವೈಫೈ ನೆಟ್‌ವರ್ಕ್ ಬಳಸಿ ಕರೆಗಳನ್ನು ಮಾಡಲು ನಿಮಗೆ ಅನುಮತಿಸುವ ತಂತ್ರಜ್ಞಾನವಾಗಿದೆ. ಸೆಲ್ಯುಲಾರ್ ಸಿಗ್ನಲ್ ದುರ್ಬಲವಾಗಿರುವ ಅಥವಾ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಕರೆ ಮಾಡುವ ಅನುಭವವನ್ನು ಸುಧಾರಿಸುವುದು ಇದರ ಮುಖ್ಯ ಬಳಕೆಯಾಗಿದೆ. ಉದಾಹರಣೆಗೆ, ಗ್ರಾಮೀಣ ಪ್ರದೇಶಗಳಲ್ಲಿ, ಕಿಕ್ಕಿರಿದ ಕಟ್ಟಡಗಳಲ್ಲಿ ಅಥವಾ ಸಿಗ್ನಲ್ ಇಲ್ಲದ ಸ್ಥಳಗಳಲ್ಲಿ ವೈಫೈ ಕರೆ ಬಹಳ ಉಪಯುಕ್ತವಾಗಿದೆ.

ವೈಫೈ ಕರೆಯ ಅನುಕೂಲಗಳು

ಸೆಲ್ಯುಲಾರ್ ನೆಟ್‌ವರ್ಕ್‌ಗಳಿಗಿಂತ ವೈಫೈ ನೆಟ್‌ವರ್ಕ್‌ಗಳು ಉತ್ತಮವಾಗಿರುತ್ತವೆ. ನಿಮಗೆ ಉತ್ತಮ ಗುಣಮಟ್ಟದ ಧ್ವನಿ ಕರೆಗಳನ್ನು ನೀಡುತ್ತದೆ. ವೈಫೈ ಕರೆ ಮಾಡುವುದರಿಂದ ಕಾಲ್ ಡ್ರಾಪ್ ಸಮಸ್ಯೆ ಉಂಟಾಗುವುದಿಲ್ಲ. ಮೊಬೈಲ್ ಸಿಗ್ನಲ್ ಇಲ್ಲದಿರುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಇದರಿಂದ ನಿಮ್ಮ ಹಣ ಕೂಡ ಉಳಿಯುತ್ತದೆ.

ವೈಫೈ ಕರೆಯನ್ನು ಸಕ್ರಿಯಗೊಳಿಸುವುದು ಹೇಗೆ?

ವೈಫೈ ಕರೆಯನ್ನು ಸಕ್ರಿಯಗೊಳಿಸುವುದು ತುಂಬಾ ಸುಲಭ, ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು. ನಿಮ್ಮ ಮೊಬೈಲ್​ನಲ್ಲಿ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಕರೆ ಅಥವಾ ಫೋನ್ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ. ಇಲ್ಲಿ ನೀವು ವೈಫೈ ಕರೆ ಮಾಡುವ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಕಾಣಿಸುವ ಟಾಗಲ್ ಅನ್ನು ಆನ್ ಮಾಡಿ. ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ ನಂತರ ನೀವು ಸೆಲ್ಯುಲಾರ್ ನೆಟ್‌ವರ್ಕ್ ಹೊಂದಿಲ್ಲದಿದ್ದಾಗ ನಿಮ್ಮ ಫೋನ್ ವೈ-ಫೈ ನೆಟ್‌ವರ್ಕ್ ಮೂಲಕ ಕರೆಗಳನ್ನು ಮಾಡಬಹುದು.

ನೆಟ್​ವರ್ಕ್ ಟ್ರಿಕ್ಸ್

ಕೆಲವೊಮ್ಮೆ ನಿಮ್ಮ ಫೋನ್‌ಗೆ ಉತ್ತಮ ಸಿಗ್ನಲ್ ಸಿಗದ ಸ್ಥಳದಲ್ಲಿ ನೀವು ಇರುವಾಗ, ಈ ಟ್ರಿಕ್ ಅನ್ನು ಪ್ರಯತ್ನಿಸಬಹುದು. ಒಂದು ಕಪ್ ಅಥವಾ ಜಾರ್‌ನಂತಹ ಗಾಜಿನೊಳಗೆ ನಿಮ್ಮ ಫೋನ್ ಅನ್ನು ಇರಿಸಿದರೆ, ಅದು ನಿಮಗೆ ಉತ್ತಮ ಸಿಗ್ನಲ್ ಪಡೆಯಲು ಸಹಾಯ ಮಾಡುತ್ತದೆ. ಇದು ವಿಚಿತ್ರವೆನಿಸುತ್ತದೆ, ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತದೆ.

ನೆಟ್‌ವರ್ಕ್ ಬೂಸ್ಟರ್

ನಿಮ್ಮ ಮನೆಯಲ್ಲಿ ಸಿಗ್ನಲ್ ಇಲ್ಲ ಎಂದಾದಲ್ಲಿ ನೆಟ್​ವರ್ಕ್ ಬೂಸ್ಟರ್ ಅನ್ನು ಸಹ ಹಾಕಬಹುದು. ನೀವು ಇದನ್ನು ಆನ್‌ಲೈನ್‌ನಲ್ಲಿ ಅಥವಾ ಮಾರುಕಟ್ಟೆಯಿಂದ ಸುಲಭವಾಗಿ ಖರೀದಿಸಬಹುದು. ಎರಡು ಸಾವಿರ ರೂ. ಯಿಂದ 25,000 ವರೆಗಿನ ದರದಲ್ಲಿ ಇದು ಲಭ್ಯವಿದೆ. (ಬರಹ: ವಿನಯ್‌ ಭಟ್‌)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)