ಪಾಸ್‌ವರ್ಡ್ ರಹಿತ ಲಾಗಿನ್‌ ಫೀಚರ್‌ ಪರಿಚಯಿಸಿದ ವಾಟ್ಸಾಪ್‌; ಪಾಸ್‌ಕೀ ಸಕ್ರಿಯಗೊಳಿಸೋದು ಹೇಗೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪಾಸ್‌ವರ್ಡ್ ರಹಿತ ಲಾಗಿನ್‌ ಫೀಚರ್‌ ಪರಿಚಯಿಸಿದ ವಾಟ್ಸಾಪ್‌; ಪಾಸ್‌ಕೀ ಸಕ್ರಿಯಗೊಳಿಸೋದು ಹೇಗೆ ನೋಡಿ

ಪಾಸ್‌ವರ್ಡ್ ರಹಿತ ಲಾಗಿನ್‌ ಫೀಚರ್‌ ಪರಿಚಯಿಸಿದ ವಾಟ್ಸಾಪ್‌; ಪಾಸ್‌ಕೀ ಸಕ್ರಿಯಗೊಳಿಸೋದು ಹೇಗೆ ನೋಡಿ

WhatsApp Passkeys: ಆರಂಭದಲ್ಲಿ ಪಾಸ್‌ಕೀ ಫೀಚರ್‌ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿರಲಿದೆ. ಈ ವೈಶಿಷ್ಟ್ಯ ಮುಂದಿನ ದಿನಗಳಲ್ಲಿ ಎಲ್ಲಾ ಸಾಧನಗಳಲ್ಲಿ ಲಭ್ಯವಾಗಲಿದೆ.

ವಾಟ್ಸಾಪ್‌ ಪಾಸ್‌ಕೀಸ್‌ ಬಳಸುವುದು ಹೇಗೆ (ಸಾಂದರ್ಭಿಕ ಚಿತ್ರ)
ವಾಟ್ಸಾಪ್‌ ಪಾಸ್‌ಕೀಸ್‌ ಬಳಸುವುದು ಹೇಗೆ (ಸಾಂದರ್ಭಿಕ ಚಿತ್ರ)

ಜಗತ್ತಿನ ಕೋಟ್ಯಾಂತರ ಜನರು ವಾಟ್ಸಾಪ್‌ (WhatsApp) ಬಳಸುತ್ತಾರೆ. ತ್ವರಿತ ಸಂದೇಶ ಕಳುಹಿಸಲು ಬಳಸಲಾಗುವ ಈ ಅಪ್ಲಿಕೇಶನ್‌ನಲ್ಲಿ ಹೊಸ ಹೊಸ ಫೀಚರ್‌ಗಳು ಬರುತ್ತಿವೆ. ಇತ್ತೀಚೆಗೆ ಮತ್ತೊಂದು ಹೊಸ ಅಪ್ಡೇಟ್‌ ಲಾಂಚ್‌ ಮಾಡಲಾಗಿದ್ದು, ವಾಟ್ಸಾಪ್‌ಗೆ ಲಾಗ್ ಇನ್ ಆಡಲು ಪಾಸ್‌ಕೀ (Passkeys) ಎಂಬ ಫೀಚರ್‌ ಘೋಷಿಸಲಾಗಿದೆ. ಆರಂಭದಲ್ಲಿ ಇದು ಈಗ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿರಲಿದೆ.

“ಆಂಡ್ರಾಯ್ಡ್ ಬಳಕೆದಾರರು ಪಾಸ್‌ಕೀಗಳೊಂದಿಗೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ವಾಟ್ಸಾಪ್‌ಗೆ ಲಾಗ್ ಇನ್ ಆಗಬಹುದು. ಮುಖ, ಫಿಂಗರ್ ಪ್ರಿಂಟ್ ಅಥವಾ ಪಿನ್ ಮೂಲಕ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಾಕ್ ಮಾಡಬಹುದು” ಎಂದು ವಾಟ್ಸಾಪ್‌ ತಿಳಿಸಿದೆ.

ಸುಲಭ ಮತ್ತು ಸುರಕ್ಷಿತ

ಈ ಪಾಸ್‌ಕೀಗಳು ಲಾಗಿನ್ ಪ್ರಕ್ರಿಯೆಯನ್ನು ಸುಲಭ ಮಾತ್ರವಲ್ಲದೆ ಹೆಚ್ಚು ಸುರಕ್ಷಿತವಾಗಿಸುತ್ತದೆ ಎಂದು ವಾಟ್ಸಾಪ್‌ ಹೇಳಿದೆ. ಈ ಫೀಚರ್‌ ಅನ್ನು ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳೊಳಗೆ ಲಾಂಚ್‌ ಮಾಡುವ ಕುರಿತು ಮೆಟಾ-ಮಾಲೀಕತ್ವದ ಸಂಸ್ಥೆ ತಿಳಿಸಿದೆ. ಆದರೆ ಐಒಎಸ್ ಸಾಧನಗಳಲ್ಲಿ ಈ ವೈಶಿಷ್ಟ್ಯ ಲಭ್ಯವಾಗಲಿದೆಯೇ ಎಂಬುದರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

ಪಾಸ್‌ಕೀಸ್‌ ಎಂದರೇನು? What are Passkeys?

ಈ ಫೀಚರ್‌ ಮೂಲಕ, ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ (username and password) ಸಂಯೋಜನೆಗಳನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ. ವಾಟ್ಸಾಪ್‌ ಘೋಷಿಸಿರುವಂತೆ, ಪಾಸ್‌ಕೀಗಳೊಂದಿಗೆ ಬಳಕೆದಾರರು ತಮ್ಮ ವಾಟ್ಸಾಪ್‌ ಅಕೌಂಟನ್ನು ಅನ್‌ಲಾಕ್ ಮಾಡಲು ತಮ್ಮ ಮುಖ, ಫಿಂಗರ್ ಪ್ರಿಂಟ್ ಅಥವಾ ಪಿನ್‌ (PIN) ಅನ್ನು ಮಾತ್ರ ಬಳಸಬೇಕಾಗುತ್ತದೆ.

ಸಾಮಾನ್ಯವಾಗಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳು ಹೆಚ್ಚಿನ ಸಂದರ್ಭಗಳಲ್ಲಿ ದುರ್ಬಳಕೆಯಾಗುತ್ತವೆ. ಆದರೆ, ಪಾಸ್‌ಕೀಗಳು ಎಂದರೆ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಒಬ್ಬರ ಖಾತೆಗೆ ಲಾಗ್ ಇನ್ ಆಗಲು ಆದೇ ವ್ಯಕ್ತಿಯ ಭೌತಿಕ ಉಪಸ್ಥಿತಿಯ ಅಗತ್ಯವಿರುತ್ತದೆ. ಹೀಗಾಗಿ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲು ಅಥವಾ ಬಳಸಲು ಬೇರೆಯವರಿಗೆ ಸಾಧ್ಯವಾಗುವುದಿಲ್ಲ.

ಆಪಲ್‌ (Apple) ಮತ್ತು ಗೂಗಲ್‌ ( Google) ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ತಮ್ಮ ಬಳಕೆದಾರರಿಗೆ ಪಾಸ್‌ಕೀಗಳ ಮೂಲಕ ಲಾಗಿನ್‌ ಆಗಲು ಅನುವು ಮಾಡಿಕೊಟ್ಟಿವೆ. ಗೂಗಲ್ ಪ್ರಕಾರ, ಪಾಸ್‌ಕೀಗಳು ಸಾಂಪ್ರದಾಯಿಕ ಪಾಸ್‌ವರ್ಡ್‌ಗಳಿಗಿಂತ ಸರಿಸುಮಾರು 40 ಪ್ರತಿಶತದಷ್ಟು ವೇಗವಾಗಿರುತ್ತವೆ.‌ ಅಲ್ಲದೆ ಸುರಕ್ಷತೆಯನ್ನು ಹೆಚ್ಚಿಸುವ ನಿರ್ದಿಷ್ಟ ರೀತಿಯ ಕ್ರಿಪ್ಟೋಗ್ರಫಿಯನ್ನು ಬಳಸಿಕೊಳ್ಳುತ್ತವೆ.

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಾಟ್ಸಾಪ್‌ ಪಾಸ್‌ಕೀಗಳನ್ನು ಸಕ್ರಿಯಗೊಳಿಸುವುದು ಹೇಗೆ?

ಈ ವೈಶಿಷ್ಟ್ಯವು ಪ್ರಪಂಚದಾದ್ಯಂತದ ಇನ್ನೂ ಆಕ್ಟಿವೇಟ್‌ ಆಗಿಲ್ಲ. ಒಂದು ಬಾರಿ ಅಪ್ಡೇಟ್‌ ಆದ ಬಳಿಕ ಹೊಸ ಪಾಸ್‌ಕೀಗಳ ಆಯ್ಕೆಯನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದನ್ನು ನೋಡೋಣ.

  • ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ‌
  • ಸೆಟ್ಟಿಂಗ್ಸ್‌ ಮೆನು ಓಪನ್‌ ಮಾಡಿ
  • "ಅಕೌಂಟ್‌" ಮೇಲೆ ಕ್ಲಿಕ್‌ ಮಾಡಿ
  • "ಪಾಸ್‌ಕೀಸ್‌" ಆಯ್ಕೆ ಮಾಡಿ
  • "ಕ್ರಿಯೇಟ್‌ ಎ ಪಾಸ್‌ಕೀ" ಆಯ್ಕೆ ಮಾಡಿ.
  • ಪಾಸ್‌ಕೀ ಕಾರ್ಯವನ್ನು ವಿವರಿಸುವ ಮಾಹಿತಿ ಪಾಪ್‌ಅಪ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಓದಿ.
  • "ಕಂಟಿನ್ಯೂ" ಮೇಲೆ ಟ್ಯಾಪ್ ಮಾಡಿ.
  • ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್‌ ಕಡೆಯಿಂದ ಸೂಚನೆ ಕಾಣಿಸಿಕೊಳ್ಳುತ್ತದೆ. ನೀವು ವಾಟ್ಸಾಪ್‌ನಲ್ಲಿ ಪಾಸ್‌ಕೀ ರಚಿಸಲು ಬಯಸುತ್ತೀರಾ ಎಂದು ಕೇಳುತ್ತದೆ.
  • ನಿಮ್ಮ ಫೋನ್‌ನ ಸ್ಕ್ರೀನ್ ಲಾಕ್ ವಿಧಾನದೊಂದಿಗೆ ಲಾಗ್ ಇನ್ ಮಾಡುವುದನ್ನು ಸಕ್ರಿಯಗೊಳಿಸಲು "ಯೂಸ್‌ ಸ್ಕ್ರೀನ್ ಲಾಕ್" ಆಯ್ಕೆ ಮಾಡಿ "ಕಂಟಿನ್ಯೂ" ಕ್ಲಿಕ್‌ ಮಾಡಿ.
  • ಕೊನೆಯಲ್ಲಿ ನಿಮ್ಮ ಮಾಹಿತಿಗಾಗಿ ನಿಮ್ಮ ವಾಟ್ಸಾಪ್‌ ಪಾಸ್‌ಕೀಯನ್ನು ತೋರಿಸಲಾಗುತ್ತದೆ.

Whats_app_banner