ವಿವೋ ಟಿ3 ಅಲ್ಟ್ರಾ vs ಮೊಟೊರೊಲಾ ಎಡ್ಜ್ 50 ಪ್ರೊ; ಯಾವುದು ಖರೀದಿಸಲಿ ಅನ್ನೋ ಗೊಂದಲವಿದ್ದರೆ ಈ ಮಾಹಿತಿ ನಿಮಗಾಗಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿವೋ ಟಿ3 ಅಲ್ಟ್ರಾ Vs ಮೊಟೊರೊಲಾ ಎಡ್ಜ್ 50 ಪ್ರೊ; ಯಾವುದು ಖರೀದಿಸಲಿ ಅನ್ನೋ ಗೊಂದಲವಿದ್ದರೆ ಈ ಮಾಹಿತಿ ನಿಮಗಾಗಿ

ವಿವೋ ಟಿ3 ಅಲ್ಟ್ರಾ vs ಮೊಟೊರೊಲಾ ಎಡ್ಜ್ 50 ಪ್ರೊ; ಯಾವುದು ಖರೀದಿಸಲಿ ಅನ್ನೋ ಗೊಂದಲವಿದ್ದರೆ ಈ ಮಾಹಿತಿ ನಿಮಗಾಗಿ

Vivo T3 Ultra vs Motorola Edge 50 Pro: ಸದ್ಯ ಜನರು ಖರೀದಿಗೆ ಆಸಕ್ತಿ ತೋರುತ್ತಿರುವ ವಿವೋ ಟಿ3 ಅಲ್ಟ್ರಾ ಮತ್ತು ಮೊಟೊರೊಲಾ ಎಡ್ಜ್ 50 ಪ್ರೊ ನಡುವೆ ಯಾವುದು ಉತ್ತಮ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಇವೆರಡರ ನಡುವಿನ ವಿವರವಾದ ವ್ಯತ್ಯಾಸ ನೋಡೋಣ. ಕ್ಯಾಮೆರಾ, ಬ್ಯಾಟರಿ ಕಾರ್ಯಕ್ಷಮತೆ ಹಾಗೂ ಇನ್ನಿತರ ಅಂಶಗಳ ಆಧಾರದಲ್ಲಿ ನೀವು ಖರೀದಿ ನಿರ್ಧಾರ ಮಾಡಬಹುದು.

ವಿವೋ ಟಿ3 ಅಲ್ಟ್ರಾ vs ಮೊಟೊರೊಲಾ ಎಡ್ಜ್ 50 ಪ್ರೊ
ವಿವೋ ಟಿ3 ಅಲ್ಟ್ರಾ vs ಮೊಟೊರೊಲಾ ಎಡ್ಜ್ 50 ಪ್ರೊ

ಮಧ್ಯಮ ಶ್ರೇಣಿಯಲ್ಲಿ ಒಂದೊಳ್ಳೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ನಿಮ್ಮದಾಗಿದ್ದರೆ, ಎರಡು ಉತ್ತಮ ಆಯ್ಕೆಗಳನ್ನು ನಾವು ಕೊಡುತ್ತೇವೆ. ವಿವೋ ಮತ್ತು ಮೊಟೊರೊಲಾ ಕಂಪನಿಯ ಈ ಅಪ್ಡೇಟ್‌ಡ್‌ ಫೋನ್‌ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದು ನಿಮಗೆ ಉತ್ತಮ ಆಯ್ಕೆಯಾಗಬಹುದು. ಅದುವೇ ವಿವೋ ಟಿ 3 ಅಲ್ಟ್ರಾ ಮತ್ತು ಮೊಟೊರೊಲಾ ಎಡ್ಜ್ 50 ಪ್ರೊ (Vivo T3 Ultra vs Motorola Edge 50 Pro). ವಿವೋ ಟಿ3 ಅಲ್ಟ್ರಾ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಮೊಟೊರೊಲಾ ಎಡ್ಜ್ 50 ಪ್ರೊ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಯಿತು. ಎರಡೂ ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹಲವು ಅಪ್ಡೇಟೆಡ್ ಫೀಚರ್‌ಗಳು ಈ ಫೋನ್‌ನಲ್ಲಿವೆ. ಆದರೆ, ಯಾವುದನ್ನು ಖರೀದಿಸಬೇಕು ಎನ್ನುವ ಗೊಂದಲ ನಿಮಗಿದ್ದರೆ, ಅದಕ್ಕೊಂದು ಸಲಹೆ ಕೊಡುವ ಪ್ರಯತ್ನ ನಾವು ಮಾಡುತ್ತೇವೆ.

ವಿವೋ ಟಿ 3 ಅಲ್ಟ್ರಾ ಮತ್ತು ಮೊಟೊರೊಲಾ ಎಡ್ಜ್ 50 ಪ್ರೊ ನಡುವೆ ಕೆಲವೊಂದು ಹೋಲಿಕೆಗಳನ್ನು ಮಾಡಿ ನೋಡೋಣ. ಅದರಂತೆ ನಿಮ್ಮ ಆದ್ಯತೆಗೆ ಅನುಸಾರವಾಗಿ ನೀವು ಖರೀದಿಸಬಯಸುವ ಫೋನ್ ನಿರ್ಧರಿಸಿ.

ವಿವೋ ಟಿ3 ಅಲ್ಟ್ರಾ vs ಮೊಟೊರೊಲಾ ಎಡ್ಜ್ 50 ಪ್ರೊ

ಫೋನ್ ವಿನ್ಯಾಸ

ವಿವೋ ಟಿ3 ಅಲ್ಟ್ರಾ, ವಿ 40 ಸೀರೀಸ್‌ನಂತೆಯೇ ವಿನ್ಯಾಸ ಹೊಂದಿದೆ. ಆದರೆ, ಇದರ ವಿಶೇಷಣಗಳು ಹಾಗೂ ಕಾರ್ಯಕ್ಷಮತೆಯ ಉದ್ದೇಶಗಳು ಭಿನ್ನವಾಗಿವೆ. ವಿವೋ ಟಿ3 ಅಲ್ಟ್ರಾ ಗ್ಲಾಸ್ ಬ್ಯಾಕ್ ಮತ್ತು ಹಿಂಭಾಗದ ಹೊಳೆಯುವ ಪ್ಯಾನಲ್ ವಿನ್ಯಾಸದೊಂದಿಗೆ ಸ್ಲಿಮ್ ಲುಕ್‌ ಹೊಂದಿದೆ. ಅತ್ತ ಮೊಟೊರೊಲಾ ಎಡ್ಜ್ 50 ಪ್ರೊ ಅತ್ಯಂತ ಸರಳ ಮತ್ತು ಪ್ರೀಮಿಯಂ ವಿನ್ಯಾಸವನ್ನು ಉಳಿಸಿಕೊಂಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಐಪಿ 68 ರೇಟಿಂಗ್ ನೀಡುತ್ತವೆ. ಎರಡರಲ್ಲೂ ಗಟ್ಟಿಮುಟ್ಟಾದ ವಿನ್ಯಾಸವಿದೆ.

ಡಿಸ್‌ಪ್ಲೇ

ವಿವೋ ಟಿ3 ಅಲ್ಟ್ರಾ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಹೊಂದಿದೆ. ಮೊಟೊರೊಲಾ ಎಡ್ಜ್ 50 ಪ್ರೊ 6.7 ಇಂಚಿನ ಪಿಒಎಲ್ಇಡಿ ಡಿಸ್‌ಪ್ಲೇ ಹೊಂದಿದ್ದು, 144 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 2000 ನಿಟ್ಸ್ ಪೀಕ್ ಬ್ರಟ್‌ನೆಸ್ ಹೊಂದಿದೆ.

ಕ್ಯಾಮೆರಾ

ವಿವೋ ಟಿ 3 ಅಲ್ಟ್ರಾ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಒಐಎಸ್ ಬೆಂಬಲದೊಂದಿಗೆ 50 ಎಂಪಿ ಪ್ರಾಥಮಿಕ ಕ್ಯಾಮೆರಾ ಮತ್ತು 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಮತ್ತೊಂದೆಡೆ, ಮೊಟೊರೊಲಾ ಎಡ್ಜ್ 50 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊದಿಗೆ ಬರುತ್ತದೆ. 50 ಎಂಪಿ ಒಐಎಸ್ ಮುಖ್ಯ ಕ್ಯಾಮೆರಾ, 13 ಎಂಪಿ ಅಲ್ಟ್ರಾವೈಡ್ ಮತ್ತು 10 ಎಂಪಿ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಎರಡೂ ಫೋನ್‌ಗಳು 50 ಎಂಪಿ ಸೆಲ್ಫಿ ಸ್ನ್ಯಾಪರ್ ಅನ್ನು ಬೆಂಬಲಿಸುತ್ತವೆ.

ಬ್ಯಾಟರಿ

ವಿವೋ ಟಿ 3 ಅಲ್ಟ್ರಾ 5500 ಎಂಎಎಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಫೋನ್ 80 ವ್ಯಾಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಅತ್ತ ಎಡ್ಜ್ 50 ಪ್ರೊ 4500 ಎಂಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು 125 ವ್ಯಾಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ.

ಕಾರ್ಯಕ್ಷಮತೆ

ವಿವೋ ಟಿ3 ಅಲ್ಟ್ರಾ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 12 ಜಿಬಿ ರಾಮ್ ಮತ್ತು 512 ಜಿಬಿ ಸ್ಟೋರೇಜ್ ವೇರಿಯಂಟ್‌ ಹೊಂದಿದೆ. ಮತ್ತೊಂದೆಡೆ, ಮೊಟೊರೊಲಾ ಎಡ್ಜ್ 50 ಪ್ರೊ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 7 ಜನರೇಷನ್ ಜೊತೆಗೆ 12 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ.

ಬೆಲೆ

ವಿವೋ ಟಿ 3 ಅಲ್ಟ್ರಾ 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ ಇರುವ ಫೋನ್‌ ಬೆಲೆ 31999 ರೂಪಾಯಿ ಆರಂಭಿಕ ಬೆಲೆಯಲ್ಲಿ ಬರುತ್ತದೆ. ಮೊಟೊರೊಲಾ ಎಡ್ಜ್ 50 ಪ್ರೊ 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಫೋನ್‌ ಬೆಲೆ 31999 ರೂಪಾಯಿಯಾಗಿದೆ. ನಿಮಗೆ ಬೇಕಾದ ಫೀಚರ್ಸ್‌ ಆಧಾರದಲ್ಲಿ ಒಂದನ್ನು ಖರೀದಿ ಮಾಡಬಹುದು.

Whats_app_banner