Mobile Recharge: ಫೋನ್ ಪೇ, ಗೂಗಲ್ ಪೇ ಮೂಲಕ ಕಮಿಷನ್ ಹಣ ಕೊಡದೆ ರೀಚಾರ್ಜ್ ಮಾಡುವುದು ಹೇಗೆ: ಇಲ್ಲಿದೆ ಟ್ರಿಕ್-tech tips google pay phone pay mobile recharge charges how to recharge in upi s without paying extra vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mobile Recharge: ಫೋನ್ ಪೇ, ಗೂಗಲ್ ಪೇ ಮೂಲಕ ಕಮಿಷನ್ ಹಣ ಕೊಡದೆ ರೀಚಾರ್ಜ್ ಮಾಡುವುದು ಹೇಗೆ: ಇಲ್ಲಿದೆ ಟ್ರಿಕ್

Mobile Recharge: ಫೋನ್ ಪೇ, ಗೂಗಲ್ ಪೇ ಮೂಲಕ ಕಮಿಷನ್ ಹಣ ಕೊಡದೆ ರೀಚಾರ್ಜ್ ಮಾಡುವುದು ಹೇಗೆ: ಇಲ್ಲಿದೆ ಟ್ರಿಕ್

ನೀವುಗೂಗಲ್ ಪೇ, ಫೋನ್ ಪೇ ಸೇರಿದಂತೆ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡುತ್ತಿದ್ದೀರಾ?ಹಾಗಿದ್ದರೆ ನಿಮಗೆ 3 ರೂಪಾಯಿ ಕಡಿತವಾಗುತ್ತಿರುವುದು ಗೊತ್ತಿರಬಹುದು. ಮೊದಲೇ ರೀಚಾರ್ಜ್ ಬೆಲೆ ಜಾಸ್ತಿಯಿದೆ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ?ಹಾಗಿದ್ದರೆ ಈ ಶುಲ್ಕವನ್ನು ತಪ್ಪಿಸಲು ಸಿಂಪಲ್ ಟ್ರಿಕ್ ಇಲ್ಲಿದೆ. (ಬರಹ: ವಿನಯ್ ಭಟ್)

ಈ ಹಂತಗಳನ್ನು ಅನುಸರಿಸುವ ಮೂಲಕ ಜಿಯೋದಲ್ಲಿ ರೀಚಾರ್ಜ್ ಕಡಿತ ಶುಲ್ಕವನ್ನು ತಪ್ಪಿಸಬಹುದು.
ಈ ಹಂತಗಳನ್ನು ಅನುಸರಿಸುವ ಮೂಲಕ ಜಿಯೋದಲ್ಲಿ ರೀಚಾರ್ಜ್ ಕಡಿತ ಶುಲ್ಕವನ್ನು ತಪ್ಪಿಸಬಹುದು. (Google)

ಪ್ರಸ್ತುತ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ರೀಚಾರ್ಜ್ ಮಾಡುವಾಗ ರೂ. 3 ರೀಚಾರ್ಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಎಲ್ಲರಿಗೂ ಬಹುದೊಡ್ಡ ತಲೆನೋವಾಗಿದೆ. ನೀವು ಈ ಶುಲ್ಕವನ್ನು ತಪ್ಪಿಸಲು ಬಯಸಿದರೆ ಇಲ್ಲೊಂದು ಸುಲಭ ಟ್ರಿಕ್ ಇದೆ. ಕೆಳಗಿನ ಈ ಹಂತಗಳನ್ನು ಅನುಸರಿಸುವ ಮೂಲಕ ಜಿಯೋದಲ್ಲಿ ರೀಚಾರ್ಜ್ ಕಡಿತ ಶುಲ್ಕವನ್ನು ತಪ್ಪಿಸಬಹುದು.

ಶುಲ್ಕವನ್ನು ಪಾವತಿಸದೆ ಜಿಯೋ ಸಿಮ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

- ಮೊದಲು ನೀವು ಪ್ಲೇಸ್ಟೋರ್‌ನಲ್ಲಿ ಜಿಯೋ ಕಂಪನಿಯ ವಿಶೇಷ ಅಪ್ಲಿಕೇಶನ್ ಆಗಿರುವ My Jio ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

- ನಂತರ ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗ್ ಇನ್ ಮಾಡಿ.

- ಇದರ ನಂತರ ನೀವು ಡಿಸ್​ಪ್ಲೇ ಮೇಲೆ ರೀಚಾರ್ ಮಾಡಲು ಆಯ್ಕೆಗಳನ್ನು ನೋಡುತ್ತೀರಿ.

- ಅದರಿಂದ ನಿಮಗೆ ಅಗತ್ಯವಿರುವ ರೀಚಾರ್ಜ್ ಯೋಜನೆಯನ್ನು ಆರಿಸಿ.

- ಸರಿಯಾದ ಯೋಜನೆಯನ್ನು ಆಯ್ಕೆ ಮಾಡಿದ ನಂತರ, ಪಾವತಿಗೆ ಮುಂದುವರಿಯಿರಿ ಕ್ಲಿಕ್ ಮಾಡಿ.

- ಈಗ ಪೇ ಮೂಲಕ UPI ಐಡಿ ಕ್ಲಿಕ್ ಮಾಡಿ.

- ಇದರ ನಂತರ ನೀವು ನಿಮ್ಮ ಗೂಗಲ್ ಪೇ ಅಥವಾ ಫೋನ್ ಪೇ ಸೇರಿದಂತೆ ಯಾವುದೇ UPI ಹಂತವನ್ನು ನಮೂದಿಸಿದ ಅಪ್ಲಿಕೇಶನ್‌ಗೆ ಹೋಗಬಹುದು ಮತ್ತು ಯಾವುದೇ ರೀತಿಯ ಶುಲ್ಕವಿಲ್ಲದೆ ರೀಚಾರ್ಜ್ ಮಾಡಬಹುದು.

- ನೀವು ಯುಪಿಐ ಅಪ್ಲಿಕೇಶನ್ ಮೂಲಕ ನೇರವಾಗಿ ರೀಚಾರ್ಜ್ ಮಾಡಿದ್ದರೆ ನಿಮಗೆ 3 ರೂ. ವಿನ ಶುಲ್ಕ ವಿಧಿಸಲಾಗುತ್ತದೆ. ಅದೇ ನೀವು ಜಿಯೋ ಅಪ್ಲಿಕೇಶನ್ ಮೂಲಕ ಯುಪಿಐ ಬಳಸಿ ರೀಚಾರ್ಜ್ ಮಾಡಿದರೆ, ಯಾವುದೇ ಅನಗತ್ಯ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಜಿಯೋ ರೀಚಾರ್ಜ್ ಯೋಜನೆಗಳ ಬೆಲೆ ಹೆಚ್ಚಳ

ಇತ್ತೀಚೆಗೆ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಅನಿರೀಕ್ಷಿತ ಬೆಲೆ ಏರಿಕೆ ಬಳಕೆದಾರರು ಬರೆಯಾಗಿದೆ. ಜಿಯೋ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದೆ ಮಾತ್ರವಲ್ಲದೆ 5G ಸೇವೆಗಳ ಬಳಕೆಯ ಮೇಲೆ ನಿರ್ಬಂಧಗಳನ್ನೂ ವಿಧಿಸಿದೆ.

ಈ ಕಾರಣದಿಂದಾಗಿ, ಅನೇಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL ಗೆ ಬದಲಾಯಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ, ಬಳಕೆದಾರರನ್ನು ಮರಳಿ ತರಲು, ಅನೇಕ ದೂರಸಂಪರ್ಕ ಕಂಪನಿಗಳು ಕ್ರಿಯಾಶೀಲ ಕೊಡುಗೆಗಳನ್ನು ನೀಡುತ್ತಿವೆ. ಜಿಯೋ ವಿವಿಧ ಸೇವೆಗಳು ಮತ್ತು ಯೋಜನೆಗಳನ್ನು ಸಹ ಘೋಷಿಸುತ್ತಿದೆ.

ಜಿಯೋದ ಹೊಸ ಪ್ಲಾನ್ ಕೇವಲ ರೂ.198ಕ್ಕೆ ಬಿಡುಗಡೆ

ಜಿಯೋದ ಈ ಹೊಸ ಯೋಜನೆಯನ್ನು ಕೇವಲ ರೂ. 198 ಕ್ಕೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸೇರಿದಂತೆ ಅನಿಯಮಿತ 5G ಸೇವೆಯನ್ನು ನೀಡುತ್ತದೆ.

(Tech Tips to save money on mobile recharge through Google Pay Phone Pay how to recharge via UPI without paying extra)

mysore-dasara_Entry_Point