ನಿಮ್ಮ ಸ್ಮಾರ್ಟ್‌ಫೋನ್‌ ಹಳೆದಾಯ್ತ ಅನ್ನಿಸ್ತಿದ್ಯಾ? ಹಳೆ ಫೋನ್ ಅನ್ನು ಹೊಚ್ಚ ಹೊಸದರಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್-tech tips how to clean your smart phone here s the trick vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಸ್ಮಾರ್ಟ್‌ಫೋನ್‌ ಹಳೆದಾಯ್ತ ಅನ್ನಿಸ್ತಿದ್ಯಾ? ಹಳೆ ಫೋನ್ ಅನ್ನು ಹೊಚ್ಚ ಹೊಸದರಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್

ನಿಮ್ಮ ಸ್ಮಾರ್ಟ್‌ಫೋನ್‌ ಹಳೆದಾಯ್ತ ಅನ್ನಿಸ್ತಿದ್ಯಾ? ಹಳೆ ಫೋನ್ ಅನ್ನು ಹೊಚ್ಚ ಹೊಸದರಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್

ಹೊಸ ಫೋನ್ ಖರೀದಿಸಿ ಒಂದು ವರ್ಷ ಕಳೆಯುವ ಮೊದಲೇ ಇಂದು ಜನರು ಮತ್ತೊಂದು ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಾರೆ.ಆದರೆ ಹೀಗೆ ಮಾಡುವುದು ಸರಿಯಲ್ಲ.ಇದರಿಂದ ನಿಮಗೆ ಹಣವೂ ಖರ್ಚಾಗುತ್ತದೆ.ಇದರ ಬದಲು ನಿಮ್ಮ ಬಳಿ ಇರುವ ಫೋನ್ ಅನ್ನು ನೀವು ಸುಲಭವಾಗಿ ಹೊಸದರಂತೆ ಮಾಡಬಹುದು. ಈ ಬಗ್ಗೆ ಇಲ್ಲಿದೆ ಸಲಹೆ. (ಬರಹ:ವಿನಯ್ ಭಟ್)

ಹಳೆಯ ಫೋನ್ ಅನ್ನು ಸುಲಭವಾಗಿ ಹೊಸದರಂತೆ ಮಾಡಬಹುದು, ಇಲ್ಲಿದೆ ಸಲಹೆ.
ಹಳೆಯ ಫೋನ್ ಅನ್ನು ಸುಲಭವಾಗಿ ಹೊಸದರಂತೆ ಮಾಡಬಹುದು, ಇಲ್ಲಿದೆ ಸಲಹೆ.

ಇಂದು ಭಾರತದಲ್ಲಿ ಸ್ಮಾರ್ಟ್​ಫೋನ್​ಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಆಕರ್ಷಕವಾದ ಹೊಸ ಫೋನ್ ಬಿಡುಗಡೆಯಾದ ಕೂಡಲೇ ಜನರು ಅದನ್ನು ಖರೀದಿಸುತ್ತಾರೆ. ಫೋನ್​ನಲ್ಲಿ ಸಣ್ಣ ಸ್ಕ್ರಾಚ್ ಆದರೂ ಹೊಸ ಮೊಬೈಲ್​ನ ಮೊರೆ ಹೋಗುವವರಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಸ್ಮಾರ್ಟ್‌ಫೋನ್ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತದೆ. ಆಗ ಜನರು ಮತ್ತೊಂದು ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಾರೆ. ಆದರೆ, ಹೀಗೆ ಮಾಡುವುದು ಸರಿಯಲ್ಲ. ಇದರಿಂದ ನಿಮಗೆ ಹಣವೂ ಖರ್ಚಾಗುತ್ತದೆ. ಇದರ ಬದಲು ನಿಮ್ಮ ಹಳೆಯ ಫೋನ್ ಅನ್ನು ನೀವು ಸುಲಭವಾಗಿ ಹೊಸದರಂತೆ ಮಾಡಬಹುದು.

ಡಿಸ್​ಪ್ಲೇಯನ್ನು ಸ್ವಚ್ಛಗೊಳಿಸಿ

- ಸ್ಮಾರ್ಟ್​ಫೋನ್​ ಡಿಸ್​ಪ್ಲೇಯನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.

- ಯಾವುದೇ ದ್ರವವನ್ನು ನೇರವಾಗಿ ಡಿಸ್​ಪ್ಲೇಯ ಮೇಲೆ ಸುರಿಯಬೇಡಿ.

- ಡಿಸ್​ಪ್ಲೇಯ ಮೇಲೆ ಸ್ಕ್ರಾಚ್ ಅನ್ನು ತಪ್ಪಿಸಲು ಪ್ಲಾಸ್ಟಿಕ್ ಅಥವಾ ಗಾಜಿನ ಪ್ರೊಟೆಕ್ಷನ್ ಬಳಸಿ.

ಫೋನ್ ಬಾಡಿಯನ್ನು ಸ್ವಚ್ಛಗೊಳಿಸಿ

- ಫೋನ್‌ನ ಬಾಡಿಯನ್ನು ಸ್ವಚ್ಛಗೊಳಿಸಲು, ಸೋಪ್ ನೀರಿನಲ್ಲಿ ಅದ್ದಿದ ಮೃದುವಾದ ಬಟ್ಟೆಯನ್ನು ಬಳಸಿ.

- ಫೋನ್ ಅನ್ನು ನೀರಿನಲ್ಲಿ ಮುಳುಗಿಸಬೇಡಿ.

- ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಅನ್ನು ಸ್ವಚ್ಛಗೊಳಿಸಲು ಹತ್ತಿ ಬಟ್ಟೆಯನ್ನು ಬಳಸಿದರೆ ಉತ್ತಮ.

ವೇಗದ ಕಾರ್ಯಕ್ಕೆ ಈ ಸೂತ್ರ

ಸಾಫ್ಟ್‌ವೇರ್ ಅಪ್‌ಡೇಟ್: ಫೋನ್ ಸ್ಪೀಡ್ ಆಗಿ ಕಾರ್ಯನಿರ್ವಹಿಸಲು ಮೊದಲನೆಯದಾಗಿ ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಗೆ ನವೀಕರಿಸಿ.

ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ: ನೀವು ಬಳಸದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ.

ಸಂಗ್ರಹ ಮತ್ತು ಡೇಟಾ: ಅಪ್ಲಿಕೇಶನ್ ಸ್ಟೋರೇಜ್ ಮತ್ತು ಡೇಟಾವನ್ನು ಕ್ಲೀಯರ್ ಮಾಡುವ ಮೂಲಕ ಫೋನ್ ಮೆಮೊರಿಯನ್ನು ಹೆಚ್ಚಿಸಬಹುದು.

ಬ್ಯಾಕ್​ಗ್ರೌಂಡ್ ಅಪ್ಲಿಕೇಶನ್‌: ಬ್ಯಾಕ್​ಗ್ರೌಂಡ್​ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡುವ ಮೂಲಕ ಬ್ಯಾಟರಿ ಅವಧಿಯನ್ನು ವಿಸ್ತರಿಸಬಹುದು.

ಫೋನ್ ರೀಬೂಟ್ ಮಾಡಿ: ನಿಯಮಿತವಾಗಿ ಫೋನ್ ಅನ್ನು ರೀಬೂಟ್ ಮಾಡುವುದರಿಂದ ಸಣ್ಣ-ಪುಣ್ಣ ಸಮಸ್ಯೆಗಳು ಕಾಣಿಸುವುದಿಲ್ಲ.

ಹೆಚ್ಚುವರಿ ಸಲಹೆ

ಸೂರ್ಯನ ನೇರ ಬೆಳಕಿನಲ್ಲಿ ಅಥವಾ ಬಿಸಿಯಾದ ಸ್ಥಳದಲ್ಲಿ ಫೋನ್ ಅನ್ನು ಇರಿಸಬೇಡಿ. ಹಾಗೆಯೇ ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ರಕ್ಷಿಸಲು ನಿಮ್ಮ ಫೋನ್ ಅನ್ನು ನಿಯಮಿತವಾಗಿ ಸ್ಕ್ಯಾನ್ ಮಾಡುತ್ತಿರಿ.

ಯಾವ ರೀತಿಯ ಹೊಸ ಫೋನ್ ಪಡೆಯಬೇಕು?

ನೀವು ಯಾವುದೇ ಹೊಸ ಫೋನ್ ಖರೀದಿಸುವ ಮೊದಲು ಅದು ನಿಮ್ಮ ಪ್ರಸ್ತುತ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಮುಂಬರುವ 4-5 ವರ್ಷ ಬರಬೇಕು. ಜೊತೆಗೆ ಮುಂದಿನ ವರ್ಷಗಳಲ್ಲಿ ಆ ಫೋನ್ ಹೊಸ ಅಪ್ಡೇಟ್ ಅನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ನೀವು ಯಾವುದೇ ಹೊಸ ಫೋನ್ ಖರೀದಿಸಿದರೂ ಅದು ಇತ್ತೀಚಿನ ಪೀಳಿಗೆಯದ್ದಾಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಮುಂದಿನ 3-4 ವರ್ಷಗಳವರೆಗೆ ಫೋನ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಉದಾಹರಣೆಗೆ, ನೀವು ಐಫೋನ್ ಖರೀದಿಸಲು ಬಯಸಿದರೆ ಐಫೋನ್ 15 ಸರಣಿಯನ್ನು ಖರೀದಿಸಿ. ಕಡಿಮೆ ಬೆಲೆ ಇದೆ ಎಂದು ಐಫೋನ್ 14 ಖರೀದಿಸುವುದು ಒಳ್ಳೆಯ ಆಯ್ಕೆಯಲ್ಲ.