ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, IRCTC ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, Irctc ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ

ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, IRCTC ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ

How to Reset Your IRCTC Password; ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿರಾ, ಪ್ರಯಾಣಕ್ಕೆ ಅಗತ್ಯ ಸಿದ್ದತೆ ಈಗಲೇ ಮಾಡಿಕೊಳ್ಳಿ. ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, IRCTC ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ. ಆದ್ಯತೆ ರೈಲು ಟಿಕೆಟ್ ಆಗಿದ್ದರೆ ಈ ಕೆಲಸ ಬೇಗ ಮಾಡಿ.

ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, IRCTC ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ. (ಸಾಂಕೇತಿಕ ಚಿತ್ರ)
ದೀಪಾವಳಿಗೆ ಟ್ರೇನ್ ಟಿಕೆಟ್ ಬುಕ್‌ ಮಾಡಬೇಕಾ, IRCTC ಪಾಸ್‌ವರ್ಡ್‌ ಮರೆತು ಹೋಗಿದ್ರೆ ರೀಸೆಟ್ ಮಾಡೋಕೆ ಈ 5 ಸಿಂಪಲ್ ಸ್ಟೆಪ್ಸ್ ಅನುಸರಿಸಿ. (ಸಾಂಕೇತಿಕ ಚಿತ್ರ) (canva)

ಗೌರಿ ಗಣೇಶ ಹಬ್ಬ ಆಯಿತು, ಇನ್ನೇನು ನವರಾತ್ರಿ, ದಸರಾ ಸಡಗರ. ಇದಾಗುತ್ತಲೇ ದೀಪಾವಳಿ ಹಬ್ಬ. ಮಹಾನಗರಗಳಲ್ಲಿ, ಪಟ್ಟಣಗಳಲ್ಲಿರುವ ಜನ ಹಬ್ಬಕ್ಕೆ ತಮ್ಮೂರಿಗೆ ಹೋಗಲು ರೈಲು ಟಿಕೆಟ್ ಬುಕ್ ಮಾಡಲಾರಂಭಿಸಿದ್ದಾರೆ. ಈಗಂತೂ ರೈಲು ಟಿಕೆಟ್ ಬುಕ್ ಮಾಡಬೇಕಾದರೆ ರೈಲ್ವೆ ನಿಲ್ದಾಣಕ್ಕೆ ಹೋಗಿ ಗಂಟೆಗಟ್ಟಲೆ ಕಾಯಬೇಕಾದ್ದಿಲ್ಲ. ಐಆರ್‌ಸಿಟಿಸಿ ಆಪ್‌ ಮತ್ತು ವೆಬ್‌ಸೈಟ್‌ಗೆ ಲಾಗಿನ್ ಆದರೆ ಸಾಕು. ಕೆಲವೇ ನಿಮಿಷಗಳಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವ ಕೆಲಸ ಮುಗಿದಿರುತ್ತದೆ.

ರೈಲು ಟಿಕೆಟ್ ಬುಕ್‌ ಬಹಳ ದಿನಗಳಾಗಿ ಹೋಗಿದ್ದು, ಈಗ ದೀಪಾವಳಿ ಸಂದರ್ಭಕ್ಕೆ ಟಿಕೆಟ್ ಕಾಯ್ದಿರಿಸಲು ಪಾಸ್‌ವರ್ಡ್ ನೆನಪಾಗುತ್ತಿಲ್ಲವೆ. ನಿಜ ಇಂತಹ ಸಮಸ್ಯೆ ಸರ್ವೇ ಸಾಮಾನ್ಯ. ಐಆರ್‌ಸಿಟಿಸಿ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ, ಚಿಂತಿಸಬೇಕಾಗಿಲ್ಲ.

ಐಆರ್‌ಸಿಟಿಸಿ ಖಾತೆಯ ಪಾಸ್‌ವರ್ಡ್ ಅನ್ನು ರೀಸೆಟ್ (IRCTC Password Reset) ಮಾಡುವುದು ಅಥವಾ ಮರುಹೊಂದಿಸುವುದು ಹೇಗೆ ಎಂಬುದನ್ನು 5 ಸರಳ ಹಂತಗಳಲ್ಲಿ ಈ ವರದಿಯಲ್ಲಿ ವಿವರಿಸಿದ್ದೇವೆ. ಅದರಂತೆ ನೀವು ನಿಮ್ಮ ಐಆರ್‌ಸಿಟಿಸಿ ಖಾತೆಯ ಪಾಸ್‌ವರ್ಡ್ ಅನ್ನು ಸುಲಭವಾಗಿ ಮರುಹೊಂದಿಸಬಹುದು. ಪಾಸ್‌ವರ್ಡ್ ಇಲ್ಲದೆ ನೀವು ಐಆರ್‌ಸಿಟಿಸಿ ಖಾತೆಯಿಂದ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.

ಐಆರ್‌ಸಿಟಿಸಿ ಪಾಸ್‌ವರ್ಡ್ ರೀಸೆಟ್ ಮಾಡುವುದು ಹೇಗೆ

1) ಇದಕ್ಕಾಗಿ, ಮೊದಲು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ (https://www.irctc.co.in/nget/train-search) ಹೋಗಿ ಮತ್ತು ನಂತರ ನಿಮ್ಮ ಐಆರ್‌ಸಿಟಿಸಿ ಖಾತೆ ಐಡಿಯನ್ನು ನಮೂದಿಸಿ. ಈಗ ನೀವು ಫರ್ಗಾಟ್‌ ಪಾಸ್‌ವರ್ಡ್ ಆಯ್ಕೆಗೆ ಹೋಗಬೇಕು.

2). ಈಗ ನಿಮ್ಮ ನೋಂದಾಯಿತ ಇಮೇಲ್ ಐಡಿ, ಐಆರ್‌ಸಿಟಿಸಿ ಯೂಸರ್ ಐಡಿ, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಇದರ ನಂತರ, ಐಆರ್‌ಸಿಟಿಸಿ ಬಳಕೆದಾರರು ತಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ಮಾಹಿತಿಯನ್ನು ಪಡೆಯುತ್ತಾರೆ. ಅದನ್ನು ಬಳಸಿಕೊಂಡು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಮರುಪಡೆಯಬಹುದು.

3). ಈಗ ನೀವು ಐಆರ್‌ಸಿಟಿಸಿ ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸಬಹುದು. ನೀವು ನೆನಪಿಡುವ ಪಾಸ್‌ವರ್ಡ್ ಅನ್ನು ರಚಿಸಬಹುದು.

4). ಈಗ ನೀವು ಐಆರ್‌ಸಿಟಿಸಿ ಖಾತೆಯಲ್ಲಿ ಹೊಸದಾಗಿ ರಚಿಸಲಾದ ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಅದರ ನಂತರ ನೀವು ಐಆರ್‌ಸಿಟಿಸಿ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ನಿಮ್ಮ ರೈಲು ಟಿಕೆಟ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

5). ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಐಆರ್‌ಸಿಟಿಸಿ ಖಾತೆಯನ್ನು ಸಹ ನೀವು ಮರುಪಡೆಯಬಹುದು. ಪಾಸ್‌ವರ್ಡ್ ಮರುಪಡೆಯುವಿಕೆ ಪುಟದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ ಫೋನ್‌ಗೆ ಒಟಿಪಿ (ಒಂದು ಬಾರಿಯ ಪಾಸ್‌ವರ್ಡ್) ಕಳುಹಿಸಲಾಗುತ್ತದೆ. ಮರುಪ್ರಾಪ್ತಿ ಪುಟದಲ್ಲಿ ಈ ಕೋಡ್ ಅನ್ನು ನಮೂದಿಸಿ ಮತ್ತು ಹೊಸ ಪಾಸ್‌ವರ್ಡ್ ಅನ್ನು ರಚಿಸಿ ಮತ್ತು ಮರು-ನಮೂದಿಸಿ ಲಾಗಿನ್ ಆಗಿ.

ದೀಪಾವಳಿ ಸಮಯದಲ್ಲಿ ಹಬ್ಬದ ಸಂಚಾರ ದಟ್ಟಣೆ, ಈಗಲೇ ಟಿಕೆಟ್ ಬುಕ್ ಮಾಡಿ

ಭಾರತದಲ್ಲಿ ದೀಪಾವಳಿ ರೈಲ್ವೇ ಟಿಕೆಟ್ ಬುಕಿಂಗ್ ಎನ್ನುವುದು ಒಂದು ಸಾಹಸ. ಕೋಟ್ಯಂತರ ಜನ ತಮ್ಮೂರಿಗೆ ಹೊರಡುವ ಗಡಿಬಿಡಿಯಲ್ಲಿರುತ್ತಾರೆ. ಈ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚು. ಬಹುತೇಕರು ರೈಲು ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಹೀಗಾಗಿ ಹೆಚ್ಚಿನ ಬೇಡಿಕೆ ಇದ್ದು, ಬಹಳಷ್ಟು ಮುಂಚಿತವಾಗಿ ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಕಾಯ್ದಿರಿಸುವುದು ಒಳಿತು.

ಹೌದು, ಹೆಚ್ಚಿನ ಬೇಡಿಕೆಯ ಕಾರಣ, ನಿಮ್ಮ ಆದ್ಯತೆಯ ದಿನಾಂಕಗಳು ಮತ್ತು ಮಾರ್ಗಗಳನ್ನು ಸುರಕ್ಷಿತವಾಗಿರಿಸಲು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಅತ್ಯಗತ್ಯ. ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ದೀಪಾವಳಿ ಸಮೀಪಿಸುತ್ತಿದ್ದಂತೆ ಟಿಕೆಟ್‌ ಲಭ್ಯತೆ ಮತ್ತು ಸಂಭವನೀಯ ದರ ಹೆಚ್ಚಳ ಉಂಟಾಗಬಹುದು. ಆ ಕಡೆಗೂ ಗಮನಹರಿಸುವುದು ಸೂಕ್ತ.

Whats_app_banner