ನೀವು ಬಳಸುತ್ತಿರುವ ಫೋನ್ ಚಾರ್ಜರ್ ಅಸಲಿಯೇ ಅಥವಾ ನಕಲಿಯೇ? ಹೇಗೆ ತಿಳಿಯುವುದು, ಇಲ್ಲಿದೆ ಮಾಹಿತಿ
ಮಾರುಕಟ್ಟೆಯಲ್ಲಿ ಡ್ಯೂಪ್ಲಿಕೇಟ್ ಚಾರ್ಜರ್‌ಗಳ ಸಂಖ್ಯೆ ಹೆಚ್ಚುತ್ತಿವೆ.ಹಾಗಾಗಿ ನೀವು ಬಳಸುತ್ತಿರುವ ಚಾರ್ಜರ್ ಒರಿಜಿನಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. (ವರದಿ:ವಿನಯ್ ಭಟ್)
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಬಳಕೆ ಅನಿವಾರ್ಯವಾಗಿದೆ. ಎಲ್ಲರ ಕೈಯಲ್ಲೂ ಫೋನ್ ಇರಲೇಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಸಣ್ಣ ಅಗತ್ಯಕ್ಕೂ ನಾವು ಫೋನನ್ನು ಅವಲಂಬಿಸಿದ್ದೇವೆ. ಆದರೆ ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರೂ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಚಾರ್ಜಿಂಗ್ ಒಂದು. ಸಾಮಾನ್ಯವಾಗಿ ಫೋನ್ ಜೊತೆಗೆ ಬರುವ ಚಾರ್ಜರ್‌ಗಳು ಅಧಿಕ ದಿನ ಬಾಳಿಕೆ ಬರುತ್ತಿಲ್ಲ, ಕೆಲವು ದಿನಗಳ ನಂತರ ಕೆಟ್ಟು ಹೋಗುತ್ತವೆ. ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಚಾರ್ಜರ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ.
ಮೂಲ ಕಂಪನಿಯ ಚಾರ್ಜರ್‌ಗಳು ದುಬಾರಿಯಾಗಿರುವ ಕಾರಣ ಅನೇಕರು ಕಡಿಮೆ ವೆಚ್ಚದ ಟ್ರಾವೆಲಿಂಗ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಆದರೆ ಇವುಗಳಿಂದ ನಿಮ್ಮ ಸ್ಮಾರ್ಟ್ಫೋನ್ ಹಾಳಾಗುವ ಅಪಾಯ ಇರುತ್ತದೆ. ಕಡಿಮೆ ಬೆಲೆಯ ಚಾರ್ಜರ್ಗಳಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಆದರೆ, ಮಾರುಕಟ್ಟೆಯಲ್ಲಿ ಡ್ಯೂಪ್ಲಿಕೇಟ್ ಚಾರ್ಜರ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗಾಗಿ ನೀವು ಬಳಸುತ್ತಿರುವ ಚಾರ್ಜರ್ ಒರಿಜಿನಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಕೆಲವು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ.
ಚಾರ್ಜರ್‌ನ ಹಿಂಭಾಗದಲ್ಲಿ ಡಬಲ್ ಸ್ಕ್ವೇರ್ ಚಿಹ್ನೆ ಇದ್ದರೆ, ಮೊಬೈಲ್ ಚಾರ್ಜರ್‌ನ ಒಳಗೆ ಬಳಸುವ ವೈರಿಂಗ್ ಡಬಲ್ ಇನ್ಸುಲೇಟ್ ಆಗಿದೆ ಎಂದು ಅರ್ಥ. ಈ ಚಾರ್ಜರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ ಈ ಚಾರ್ಜರ್ ಅನ್ನು ಬಳಸುವುದು ಸುರಕ್ಷಿತವಾಗಿದೆ.
ಚಾರ್ಜರ್‌ನಲ್ಲಿ V ಅಕ್ಷರ ಇದ್ದರೆ, ಅದು ಚಾರ್ಜರ್‌ನ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದರರ್ಥ ಚಾರ್ಜರ್ ಐದು ಮಾನದಂಡಗಳನ್ನು ಪೂರೈಸುತ್ತದೆ. ಈ ಸಂಖ್ಯೆಯು ಚಾರ್ಜರ್‌ಗಳ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ಚಾರ್ಜರ್‌ನಲ್ಲಿ ಮನೆಯ ಚಿಹ್ನೆ ಕಾಣಿಸಿಕೊಂಡರೆ, ಚಾರ್ಜರ್ ವೈಯಕ್ತಿಕ ಬಳಕೆಗೆ ಮಾತ್ರ ಎಂದು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಈ ಚಾರ್ಜರ್ ಅನ್ನು ಹೆಚ್ಚಿನ ವೋಲ್ಟೇಜ್ ಪ್ರದೇಶಗಳಲ್ಲಿ ಬಳಸಬಾರದು. ಹೀಗೆ ಮಾಡುವುದರಿಂದ ಫೋನ್ ಹಾಳಾಗಬಹುದು.
ಚಾರ್ಜರ್‌ಗಳ ಮೇಲೆ 8 ಚಿಹ್ನೆಯನ್ನು ಬರೆದಿರುವುದನ್ನು ನೀವು ಗಮನಿಸಬಹುದು. ಇದರರ್ಥ ನಿಮ್ಮ ಚಾರ್ಜರ್ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ. ನಿಮ್ಮ ಚಾರ್ಜರ್ ಅನ್ನು ಉತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಇದು ಗುಣಮಟ್ಟದ ಚಾರ್ಜರ್ ಆಗಿದೆ.
ಕೆಲವು ಚಾರ್ಜರ್‌ಗಳು ಕ್ರಾಸ್ ಡಸ್ಟ್ ಬಿನ್ ಚಿಹ್ನೆಗಳನ್ನು ಸಹ ಹೊಂದಿವೆ. ಅಂದರೆ ಈ ಚಾರ್ಜರ್ ಹಾಳಾಗಿದ್ದರೆ ಡಸ್ಟ್ ಬಿನ್ಗೆ ಎಸೆಯಬಾರದು. ಇದು ಮರುಬಳಕೆ ಚಾರ್ಜರ್ ಆಗಿದೆ.
ನಕಲಿ ಚಾರ್ಜರ್‌ಗಳು ಸಾಮಾನ್ಯವಾಗಿ ಮೂಲ ಚಾರ್ಜರ್‌ಗಿಂತ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿರಬಹುದು. ಆದ್ದರಿಂದ, ನೀವು ಚಾರ್ಜರ್ ಅನ್ನು ಖರೀದಿಸುವಾಗ, ಫೋನ್‌ನ ಮೂಲ ಚಾರ್ಜರ್‌ನ ವಿನ್ಯಾಸವು ನೀವು ಖರೀದಿಸುವ ಚಾರ್ಜರ್‌ನಂತೆಯೇ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು. ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವನ್ನು ನೋಡಿದರೆ ಅದು ನಕಲಿ ಚಾರ್ಜರ್ ಆಗಿರಬಹುದು.
ಕೆಲವೊಮ್ಮೆ ಚಾರ್ಜರ್‌ನ ಕಂಪನಿಯ ಬ್ರಾಂಡ್ ಹೆಸರಿಗೆ ವಿಶೇಷ ಗಮನ ನೀಡಬೇಕು. ನಿಮ್ಮ ಚಾರ್ಜರ್ ಒರಿಜಿನಲ್ ಆಗಿದ್ದರೆ ನೀವು ಖಂಡಿತವಾಗಿಯೂ ಅದರಲ್ಲಿ ಬ್ರಾಂಡ್ ಹೆಸರನ್ನು ಕಾಣಬಹುದು. ಅದರ ಹೆಸರಿನಲ್ಲಿ ಯಾವುದೇ ತಪ್ಪು ಇದ್ದರೆ ಅಥವಾ ಫಾಂಟ್-ಶೈಲಿಯು ಸ್ವಲ್ಪ ವಿಭಿನ್ನವಾಗಿ ಕಂಡುಬಂದರೆ, ಅದು ನಕಲಿ ಚಾರ್ಜರ್ ಆಗಿರಬಹುದು.
ವಿಭಾಗ