ನಿಮ್ಮನ್ನು ಯಾರಾದ್ರೂ ವಾಟ್ಸ್ಆ್ಯಪ್ನಲ್ಲಿ ಬ್ಲಾಕ್ ಮಾಡಿದ್ದಾರಾ: ಈ ಟ್ರಿಕ್ಸ್ ಮೂಲಕ ನೀವೇ ಅನ್‌ಬ್ಲಾಕ್ ಮಾಡಿ
ವಾಟ್ಸ್ಆ್ಯಪ್ನಲ್ಲಿ ಒಮ್ಮೆ ಬ್ಲಾಕ್ ಮಾಡಿದರೆ ಬಳಿಕ ಯಾವುದೇ ಸಂಭಾಷಣೆ ನಡೆಸಲು ಆಗುವುದಿಲ್ಲ.ಆದರೆ ಒಂದಲ್ಲ ಎರಡು ಟ್ರಿಕ್ಗಳ ಮೂಲಕ ನಿಮ್ಮನ್ನು ಯಾರಾದರು ಬ್ಲಾಕ್ ಮಾಡಿದ್ದರೆ ನೀವೇ ಅನ್ಬ್ಲಾಕ್ ಮಾಡಬಹುದು.ಅದು ಹೇಗೆ ಎಂಬುದಕ್ಕೆ ಈ ಸ್ಟೋರಿ ಓದಿ. (ಬರಹ:ವಿನಯ್ ಭಟ್)
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿದೆ. ಇದು ಕೇವಲ ಚಾಟಿಂಗ್ಗೆಂದು ಮಾತ್ರ ಉಳಿದುಕೊಳ್ಳದೆ ಅನೇಕ ಉಪಯುಕ್ತ ಕೆಲಸಗಳು, ಆಫೀಸ್ ಕೆಲಸಗಳು ಕೂಡ ಇದರ ಮೂಲಕವೇ ನಡೆಯುತ್ತಿವೆ. ಹೀಗಿದ್ದಾಗ ನಿಮ್ಮ ಸ್ನೇಹಿತರು ಅಥವಾ ಆಫೀಸ್ ಕೊಲೀಗ್ ನಿಮ್ಮನ್ನು ವಾಟ್ಸ್ಆ್ಯಪ್ನಲ್ಲಿ ಬ್ಲಾಕ್ ಮಾಡುವ ಸಂದರ್ಭಗಳು ಹಲವು ಬಾರಿ ಉದ್ಭವಿಸುತ್ತವೆ. ಒಮ್ಮೆ ಬ್ಲಾಕ್ ಮಾಡಿದರೆ ಬಳಿಕ ಯಾವುದೇ ಸಂಭಾಷಣೆ ನಡೆಸಲು ಆಗುವುದಿಲ್ಲ. ಆದರೆ ಒಂದಲ್ಲ ಎರಡು ಟ್ರಿಕ್ಗಳ ಮೂಲಕ ನಿಮ್ಮನ್ನು ಯಾರಾದರು ಬ್ಲಾಕ್ ಮಾಡಿದ್ದರೆ ನೀವೇ ಅನ್ಬ್ಲಾಕ್ ಮಾಡಬಹುದು.
ಮೊದಲನೆಯದಾಗಿ, ಯಾವ ವ್ಯಕ್ತಿಯು ನಿಮ್ಮನ್ನು ನಿರ್ಬಂಧಿಸಿದ್ದಾರೆ ಎಂಬುದನ್ನು ಖಚಿತಪಡಿಸಿ. ಇದಕ್ಕಾಗಿ ಮೊದಲು ಮೆಸೇಜ್ ಕಳುಹಿಸಲು ಪ್ರಯತ್ನಿಸಿ. ನೀವು ಡಬಲ್ ಟಿಕ್ ಅನ್ನು ನೋಡದಿದ್ದರೆ ಮತ್ತು ಸಿಂಗಲ್ ಟಿಕ್ನಲ್ಲಿಯೇ ಇದ್ದರೆ ಅಥವಾ ಅವರ ಬಯೋ, ಪ್ರೊಫೈಲ್ ಫೋಟೋ ಕಾಣಿಸದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ಅರ್ಥಮಾಡಿಕೊಳ್ಳಿ. ಒಂದುವೇಳೆ ಅವರ ಫೋನ್ ಸ್ವಿಚ್ ಆಫ್ ಅಥವಾ ಡೇಟಾ ಆಫ್ ಆಗಿರುವ ಆಗಿರುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ನೇಹಿತರಿಂದ ಖಚಿತ ಮಾಹಿತಿ ಪಡೆಯಬಹುದು. ನಿಮ್ಮನ್ನು ನಿರ್ಬಂಧಿಸಿದ್ದರೆ ಈ ರೀತಿಯಲ್ಲಿ ಅನ್ಬ್ಲಾಕ್ ಮಾಡಬಹುದು.
ಈ ಟ್ರಿಕ್ ಮೂಲಕ ಅನ್ಬ್ಲಾಕ್ ಮಾಡಿ
ಹಂತ 1: ಮೊದಲನೆಯದಾಗಿ, ವಾಟ್ಸ್ಆ್ಯಪ್ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ "ಡಿಲೀಟ್ ಅಕೌಂಟ್" ಆಯ್ಕೆಯನ್ನು ಆರಿಸಿ. ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ಅನ್ನು ನೀವು ಸಂಪೂರ್ಣವಾಗಿ ಡಿಲೀಟ್ ಮಾಡಬೇಕು. ಬಳಿಕ ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಪುನಃ ಇನ್ಸ್ಟಾಲ್ ಮಾಡಿ ಮತ್ತು ಖಾತೆಯನ್ನು ಮತ್ತೆ ರಚಿಸಿ.
ಹಂತ 2: ಅಪ್ಲಿಕೇಶನ್ ಅನ್ನು ಮರುಸ್ಥಾಪಿಸಿದ ನಂತರ, ನಿಮ್ಮನ್ನು ಬ್ಲಾಕ್ ಮಾಡಿರುವ ಜನರಿಗೆ ಸಂದೇಶವನ್ನು ಕಳುಹಿಸಲು ನಿಮಗೆ ಸಾಧ್ಯವಾಗುತ್ತದೆ.
ಹಂತ 3: ನೆನಪಿನಲ್ಲಿಡಿ, ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಅಳಿಸಿದರೆ, ಎಲ್ಲಾ ವಾಟ್ಸ್ಆ್ಯಪ್ ಗುಂಪುಗಳಿಂದ ನೀವು ಹೊರಬರುತ್ತೀರಿ. ಆದ್ದರಿಂದ ನೀವು ಆ ಗ್ರೂಪ್ಗಳಿಗೆ ಪುನಃ ಹೊಸದಾಗಿ ಸೇರಬೇಕು. ಆ ಗುಂಪುಗಳು ನಿಮಗೆ ಮುಖ್ಯವಲ್ಲದಿದ್ದರೆ ನೀವು ಅದನ್ನು ನಿರ್ಲಕ್ಷಿಸಬಹುದು.
ಎರಡನೇ ಟ್ರಿಕ್
ನೀವು ನಿಮ್ಮನ್ನು ಬ್ಲಾಕ್ ಮಾಡಿರುವ ವ್ಯಕ್ತಿಯನ್ನು ಆರಿಸಿಕೊಂಡು ಗ್ರೂಪ್ ರಚಿಸಲು ನಿಮ್ಮ ಸ್ನೇಹಿತರಲ್ಲಿ ಒಬ್ಬರನ್ನು ಕೇಳಬಹುದು. ಈ ರೀತಿಯಾಗಿ ನೀವು ಆ ವ್ಯಕ್ತಿಗೆ ಗ್ರೂಪ್ ಚಾಟ್ ಕಳುಹಿಸಲು ಸಾಧ್ಯವಾಗುತ್ತದೆ.
ವಿಭಾಗ