ದೀಪಾವಳಿಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆದ ಟೆಕ್ಕಿ; ಬೆಳಗ್ಗೆ ಆಫೀಸ್‌, ಸಂಜೆ ಮೇಲೆ ಪಟಾಕಿ ವ್ಯಾಪಾರ
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆದ ಟೆಕ್ಕಿ; ಬೆಳಗ್ಗೆ ಆಫೀಸ್‌, ಸಂಜೆ ಮೇಲೆ ಪಟಾಕಿ ವ್ಯಾಪಾರ

ದೀಪಾವಳಿಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆದ ಟೆಕ್ಕಿ; ಬೆಳಗ್ಗೆ ಆಫೀಸ್‌, ಸಂಜೆ ಮೇಲೆ ಪಟಾಕಿ ವ್ಯಾಪಾರ

ಟೆಕ್ಕಿಯೊಬ್ಬರು ತಮ್ಮ ನಿತ್ಯದ ಕೆಲಸ ಮುಗಿಸಿ ದೀಪಾವಳಿ ಸಮಯದಲ್ಲಿ ಸೈಡ್‌ ಬ್ಯುಸಿನೆಸ್‌ ಆರಂಭಿಸಿದ್ದಾರೆ. ತಮ್ಮದೇ ಊರಿನಲ್ಲಿ ಸ್ನೇಹಿತರೊಂದಿಗೆ ಸೇರಿ ಪಟಾಕಿ ಅಂಗಡಿ ತೆರೆದು, ವ್ಯಾಪಾರ ನಡೆಸುತ್ತಾರೆ. ಈ ದೀಪಾವಳಿಗೆ ಭಾರಿ ಲಾಭ ಗಳಿಸುವ ವಿಶ್ವಾಸ ಹೊಂದಿದ್ದಾರೆ.

ದೀಪಾವಳಿಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆದ ಟೆಕ್ಕಿ; ಆಫೀಸ್‌ ಕೆಲಸ ಮುಗಿಸಿ ಪಟಾಕಿ ವ್ಯಾಪಾರ (Representational image)
ದೀಪಾವಳಿಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆದ ಟೆಕ್ಕಿ; ಆಫೀಸ್‌ ಕೆಲಸ ಮುಗಿಸಿ ಪಟಾಕಿ ವ್ಯಾಪಾರ (Representational image)

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಳಕಿನ ಹಬ್ಬದ ಸಂಭ್ರಮದ ಜೊತೆಗೆ ಪಟಾಕಿ ಸಿಡಿಸುವ ಜೋಶ್‌ ಕೂಡ ಸಾಮಾನ್ಯ. ಹಬ್ಬದ ಸೀಸನ್‌ಗೆಂದೇ ಹಲವೆಡೆ ತಾತ್ಕಾಲಿಕ ಪಟಾಕಿ ಮಳಿಗೆಗೆಳನ್ನು ಕೂಡಾ ತೆರೆಯಲಾಗುತ್ತದೆ. ಇಲ್ಲೊಬ್ಬ ಟೆಕ್ಕಿ, ತಮ್ಮ ಕೆಲಸದ ಅವಧಿಯನ್ನು ಮುಗಿಸಿ ಅದರೊಂದಿಗೆ ಪಟಾಕಿ ಮಳಿಗೆ ತೆರೆದು ಸೈಡ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ ಪಟಾಕಿ ವ್ಯಾಪಾರ ಜೋರಾಗಿರುತ್ತದೆ. ತಾತ್ಕಾಲಿಕವಾಗಿ ಈ ವ್ಯವಹಾರ ನಡೆಸಿ ಹಣ ಸಂಪಾದನೆ ಮಾಡುವವರು ಹಲವರಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಈ ಟೆಕ್ಕಿ.

ಟೆಕ್ಕಿಯೊಬ್ಬರು ತಮ್ಮದೇ ಊರಿನಲ್ಲಿ ಪಟಾಕಿ ಅಂಗಡಿ ಇಟ್ಟಿದ್ದಾನೆ. ಹಾಗಂತಾ ಇದು ಫುಲ್‌ ಟೈಮ್‌ ಉದ್ಯೋಗವಲ್ಲ. ಪಟಾಕಿ ಮಾರಾಟ ಮಾಡುವ ಸಲುವಾಗಿ ಕೆಲಸವನ್ನೂ ಬಿಟ್ಟಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ರೇ ಎಂಬ ಖಾತೆಯಲ್ಲಿ ಟೆಕ್ಕಿಯು ಪಟಾಕಿ ಮಳಿಗೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ರೇ ತಮ್ಮ ತಾತ್ಕಾಲಿಕ ಅಂಗಡಿಯ ಎರಡು ಛಾಯಾಚಿತ್ರಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ತಮ್ಮ ಊರಿನಲ್ಲಿ ಅಂಗಡಿಯನ್ನು ಸ್ಥಾಪಿಸಿರುವುದಾಗಿ ಅವರು ವಿವರಿಸಿದ್ದಾರೆ.

ಪಟಾಕಿಗಳನ್ನು ಮಾರಾಟ ಮಾಡಲು ಅಂಗಡಿಗೆ ಹೋಗುವುದಕಕ್ಕೂ ಮೊದಲು ತಮ್ಮ ನಿತ್ಯದ ಕೆಲಸ ಮಾಡುವುದಾಗಿ ಟೆಕ್ಕಿ ವಿವರಿಸಿದ್ದಾರೆ. ಬೆಳಗ್ಗೆ ಕಚೇರಿ ಕೆಲಸ ಮಾಡಿ ಬಂದು ಸಂಜೆ ಮೇಲೆ ಪಟಾಕಿ ವ್ಯಾಪಾರ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಸಂಜೆ 4ರಿಂದ ರಾತ್ರಿ 9ರವರೆಗೆ ಪಟಾಕಿಗಳನ್ನು ಮಾರಾಟ ಮಾಡುತ್ತಾರೆ.

“ಈ ದೀಪಾವಳಿಗೆ ಇತರ ಇಬ್ಬರು ಸ್ನೇಹಿತರೊಂದಿಗೆ (ತಾತ್ಕಾಲಿಕ) ಪಟಾಕಿ ಅಂಗಡಿಯನ್ನು ತೆರೆಯಲು ಎಲ್ಲವೂ ಸಿದ್ಧವಾಗಿದೆ” ಎಂದು ರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 10ರಿಂದ 4ರವರೆಗೆ ಕಚೇರಿ / ಕೋಡಿಂಗ್. ನಂತರ 4ರಿಂದ 9ರವರೆಗೆ ಪಟಾಕಿ ಅಂಗಡಿಯಲ್ಲಿ ಕೆಲಸ" ಎಂದು ಅವರು ಹೇಳಿದರು.

ಈ ಪೋಸ್ಟ್ ಎಕ್ಸ್ (ಟ್ವಿಟರ್)ನಲ್ಲಿ ಸಾವಿರಾರು ವೀಕ್ಷಣೆಗಳನ್ನು ಕಂಡಿದೆ. ಹಲವರು ಕಾಮೆಂಟ್ ಮಾಡಿದ್ದಾರೆ. ಟೆಕ್ಕಿಯ ಉದ್ಯಮಶೀಲತಾ ಮನೋಭಾವವನ್ನು ಹಲವರು ಶ್ಲಾಘಿಸಿದ್ದಾರೆ.

ರೇ ಅವರು ತಮ್ಮ ಊರಿನಲ್ಲಿ ಪಟಾಕಿ ಅಂಗಡಿಯನ್ನು ಸ್ಥಾಪಿಸಲಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ಊರು ಎಂಬುದನ್ನು ನಮೂದಿಸಿಲ್ಲ. ತಮ್ಮ ಊರಿನ ಜನರು ಆನ್‌ಲೈನ್ ಅಂಗಡಿಗಳನ್ನು ನಂಬುವುದಿಲ್ಲ. ಹೀಗಾಗಿ ದೀಪಾವಳಿಗೆ ಮುಂಚಿತವಾಗಿ ಈ ವ್ಯವಹಾರವು ಉತ್ತಮವಾಗಿ ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

Whats_app_banner