4K smart TV: ಅತ್ಯುತ್ತಮ 4ಕೆ ಸ್ಮಾರ್ಟ್‌ಫೋನ್ ಖರೀದಿಸಬೇಕಿದ್ರೆ ಈ 8 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ಹೊಸ 4ಕೆ ಸ್ಮಾರ್ಟ್ ಟಿವಿ ಖರೀದಿಸಬೇಕೆಂದುಕೊಂಡಿದ್ದೀರಾ? ಹತ್ತು ಹಲವು ಆಯ್ಕೆಗಳು ನಿಮ್ಮ ಮುಂದೆ ಇವೆ. ಆದರೆ, ಖರೀದಿಸುವ ಸಮಯದಲ್ಲಿ ಆ ಟಿವಿಯಲ್ಲಿರುವ ಡಿಸ್‌ಪ್ಲೇ ಗುಣಮಟ್ಟ, ಸ್ಮಾರ್ಟ್ ಫಂಕ್ಷನ್, ಆಡಿಯೋ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿ ನೀವು ಇರಬಹುದು. 4ಕೆ ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಹಲವು ಆಯ್ಕೆಗಳು ದೊರಕುತ್ತವೆ. ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ಸಾಕಷ್ಟು 4ಕೆ ಟಿವಿಗಳನ್ನು ಕಾಣಿಬಹುದು. ಆದರೆ, ಅವುಗಳಲ್ಲಿ ಯಾವ ಫೀಚರ್ ಕಡೆಗೆ ಗಮನ ನೀಡಬೇಕು ಎಂದು ತಿಳಿದಿರಬೇಕು. ಕೆಲವೊಮ್ಮೆ ದೊಡ್ಡ ಗಾತ್ರಕ್ಕೆ ಮಾತ್ರ ಗಮನ ನೀಡಿ ಕೆಲವರು ಇಂತಹ ಟಿವಿ ಖರೀದಿಸುತ್ತಾರೆ. ಟಿವಿ ಪರದೆ ದೊಡ್ಡದಾಗಿರುವುದರ ಜತೆಗೆ ಅದರ ಡಿಸ್‌ಪ್ಲೇ ಕ್ಲಾಲಿಟಿಯೂ ಉತ್ತಮವಾಗಿರಬೇಕು. ನೀವು ಹೊಸ 4ಕೆ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ಈ ಮುಂದಿನ 8 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
1. ಡಿಸ್‌ಪ್ಲೇ ತಂತ್ರಜ್ಞಾನ
4ಕೆ ಸ್ಮಾರ್ಟ್ ಟಿವಿಯ ಡಿಸ್‌ಪ್ಲೇ 3840 x 2160 ಪಿಕ್ಸೆಲ್ ರೆಸಲ್ಯೂಷನ್ ಹೊಂದಿರುತ್ತದೆ. ಇದು ಎಚ್‌ಡಿ ಟಿವಿಯ ನಾಲ್ಕು ಪಟ್ಟು ಹೆಚ್ಚು ವಿವರ ನೀಡುತ್ತದೆ. ಗಮನಿಸಿ, ರೆಸಲ್ಯೂಷನ್ ಹೆಚ್ಚಿರುವ ಮಾತ್ರಕ್ಕೆ ಚಿತ್ರದ ಗುಣಮಟ್ಟ ಉತ್ತಮ ಇರುತ್ತದೆ ಎಂದು ಹೇಳಲಾಗದು. ಇದಕ್ಕಾಗಿ ನೀವು ಡಿಸ್‌ಪ್ಲೇ ಯಾವ ಮಾದರಿಯದ್ದು ಎಂದು ಗಮನಿಸಬೇಕು. ಒಲೆಡ್ ಡಿಸ್‌ಪ್ಲೇಯು ಉತ್ತಮ ಕಾಂಟ್ರಾಸ್ಟ್ ಮತ್ತು ನಿಖರ ಬಣ್ಣ ಒದಗಿಸುತ್ತದೆ. ಆದರೆ, ಇದು ತುಸು ದುಬಾರಿ. ಕ್ಯುಲೆಡ್‌ನಲ್ಲಿ ವೈಬ್ರೆಂಟ್ ಬಣ್ಣಗಳು ದೊರಕುತ್ತವೆ. ಅತ್ಯಧಿಕ ಬ್ರೈಟ್‌ನೆಸ್ ಕೂಡ ದೊರಕುತ್ತದೆ. ಇದರ ದರ ತುಸು ಕಡಿಮೆ ಇರುತ್ತದೆ. ಮಿನಿ ಎಲ್‌ಇಡಿಯು ಉತ್ತಮ ಬ್ರೈಟ್‌ನೆಸ್ ನಿಯಂತ್ರಣ ಹೊಂದಿರುತ್ತದೆ. ಸ್ಟಾಂಡರ್ಡ್ ಎಲ್‌ಇಡಿ ಮಾಡೆಲ್‌ಗಳ ದರ ಕಡಿಮೆ ಇರುತ್ತದೆ. ಆದರೆ, ಕಾಂಟ್ರಾಸ್ಟ್ ಇರುತ್ತದೆ.
2. ಎಚ್‌ಡಿಆರ್ ಬೆಂಬಲ
ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್ ಬಣ್ಣ ಮತ್ತು ಕಾಂಟ್ರಾಸ್ಟ್ ಅನ್ನು ಹೆಚ್ಚಿಸುತ್ತದೆ. ಡಾಲ್ಬಿ ವಿಷನ್, ಎಚ್‌ಡಿಆರ್ 10 ಮತ್ತು ಎಚ್‌ಡಿಆರ್ 10+ನಂತಹ ಫಾರ್ಮ್ಯಾಟ್‌ಗಳು ಜನಪ್ರಿಯ. ರೋಮಾಂಚಕ ಬಣ್ಣಗಳು ಮತ್ತು ವರ್ಧಿತ ಕಾಂಟ್ರಾಸ್ಟ್ ಗಾಗಿ ಇಂತಹ ಯಾವುದಾದರೂ ಎಚ್‌ಡಿಆರ್ ಫಾರ್ಮ್ಯಾಟ್ ಇರುವುದನ್ನು ಖಚಿತಪಡಿಸಿಕೊಳ್ಳಿ.
3. ರಿಫ್ರೆಶ್ ದರ
120 ಹಟ್ಸ್‌ನಂತಹ ಹೆಚ್ಚಿನ ರಿಫ್ರೆಶ್ ದರ ಇದ್ದರೆ ಉತ್ತಮ. ನೀವು ಸ್ಪೋರ್ಟ್ಸ್ ಮತ್ತು ವಿಡಿಯೋ ಗೇಮ್ ಬಯಸಿದರೆ ಈಗಿನ 4ಕೆ ಟಿವಿಗಳಲ್ಲಿರುವ ವೇರಿಯಬಲ್ ರಿಫ್ರೆಶ್ ರೇಟ್ (ವಿಆರ್‌ಆರ್) ಮತ್ತು ಸ್ವಯಂ ಕಡಿಮೆ ಲೇಟೆನ್ಸಿ ಮೋಡ್ (ಎಎಲ್‌ಎಎಂ)ನಂತಹ ಫೀಚರ್‌ಗಳು ಬೆಸ್ಟ್. ಲ್ಯಾಗ್ ಮತ್ತು ಸ್ಕ್ರೀನ್ ಟಿಯರಿಂಗ್ ಕಡಿಮೆ ಮಾಡುವ ಮೂಲಕ ಉತ್ತಮ ಗೇಮಿಂಗ್ ಅನುಭವ ದೊರಕುತ್ತದೆ.
4. ಸ್ಮಾರ್ಟ್ ಫೀಚರ್‌ಗಳು
4ಕೆ ಟಿವಿಯಲ್ಲಿ ಸ್ಟ್ರೀಮಿಂಗ್ ಸರ್ವೀಸ್ ಮತ್ತು ಆಪ್‌ಗಳು ಇರಬೇಕು. ಆಂಡ್ರಾಯ್ಡ್ ಟಿವಿ, ವೆಬ್‌ಒಎಸ್, ಟೈಜೆನ್‌ನಂತಹ ಪ್ಲಾಟ್‌ಫಾರ್ಮ್‌ಗಳು ಉತ್ತಮವಾಗಿದೆ. ಇದರೊಂದಿಗೆ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್‌ನಂತಹ ವಾಯ್ಸ್ ಅಸಿಸ್ಟೆಂಟ್‌ಗಳು ಇರಬೇಕು. ಕೆಲವೊಂದು 4ಕೆ ಮಾಡೆಲ್‌ಗಳಲ್ಲಿ ಸ್ಮಾರ್ಟ್ ಹೋಮ್ ಫೀಚರ್‌ಗಳೂ ಇರುತ್ತವೆ.
5.ಕನೆಕ್ಟಿವಿಟಿ ಆಯ್ಕೆಗಳು
ಟಿವಿಯಲ್ಲಿ ಅಗತ್ಯವಿರುವಷ್ಟು ಎಚ್‌ಡಿಎಂಐ ಪೋರ್ಟ್‌ಗಳು ಇರುವುದನ್ನು ಖಚಿತಪಡಿಸಿಕೊಳ್ಳಿ. ಎಚ್‌ಡಿಎಂಐ 2.1ನಂತಹ ಪೋರ್ಟ್‌ಗಳು ಗೇಮಿಂಗ್ ಕನ್ಸೋಲ್‌ಗೆ ಅಗತ್ಯವಿರುತ್ತದೆ.
6. ಆಡಿಯೋ ಗುಣಮಟ್ಟ
4ಕೆ ಟಿವಿಗಳು ಉತ್ತಮ ದೃಶ್ಯ ಗುಣಮಟ್ಟ ಇದ್ದರೆ ಸಾಲದು, ಉತ್ತಮ ಸೌಂಡ್ ಕ್ವಾಲಿಟಿಯನ್ನೂ ಹೊಂದಿರಬೇಕು. ಸೌಂಡ್‌ಬಾರ್ ಅಥವಾ ಹೋಮ್ ಥಿಯೇಟರ್‌ಗಳನ್ನೂ ಟಿವಿ ಜತೆಗೆ ಖರೀದಿಸಬಹುದು.
7. ಎನರ್ಜಿ ಎಫಿಶಿಯನ್ಸಿ ಮತ್ತು ನಿರ್ಮಾಣ ಗುಣಮಟ್ಟ
ಹೆಚ್ಚು ವಿದ್ಯುತ್ ಖಾಲಿ ಮಾಡುವ ಟಿವಿಗಳು ವಿದ್ಯುತ್ ಬಿಲ್ ಹೆಚ್ಚಿಸಬಹುದು. ಇದರೊಂದಿಗೆ ಟಿವಿಯ ನಿರ್ಮಾಣ ಗುಣಮಟ್ಟವೂ ಉತ್ತಮವಾಗಿರಬೇಕು. ದೀರ್ಘಬಾಳ್ವಿಕೆ ಬರುವಂತೆ ಇರಬೇಕು.
8. ಉತ್ತಮ ಬ್ರ್ಯಾಂಡ್
ಎಲ್‌ಜಿ, ಸೋನಿ, ಸ್ಯಾಮ್‌ಸಂಗ್‌ನಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳ 4ಕೆ ಟಿವಿ ಖರೀದಿಸುವುದು ಉತ್ತಮ.
ಹೀಗೆ, ನಿಮ್ಮ ಮನೆಗೆ ಹೊಸ 4ಕೆ ಟಿವಿ ಖರೀದಿಸಲು ಬಯಸಿದರೆ ಡಿಸ್‌ಪ್ಲೇ ತಂತ್ರಜ್ಞಾನ, ಎಚ್‌ಡಿಆರ್ ಬೆಂಬಲ, ಸ್ಮಾರ್ಟ್ ಫೀಚರ್‌ಗಳು, ಬ್ರ್ಯಾಂಡ್, ಆಡಿಯೋ ಗುಣಮಟ್ಟ, ರಿಫ್ರೆಶ್ ದರ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.