Tech Tips: ಬಂಬಲ್‌, ಟಿಂಡರ್‌ನಂತಹ ಡೇಟಿಂಗ್‌ ಆಪ್‌ ಬಳಸುತ್ತಿದ್ದೀರಾ? ಈ ಎಚ್ಚರಿಕೆಯ ಸಲಹೆಗಳು ನಿಮಗಾಗಿಯೇ-technology are you using bumble tinder app here is some safety tips for keep yourself safe in online scam tech tips arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tech Tips: ಬಂಬಲ್‌, ಟಿಂಡರ್‌ನಂತಹ ಡೇಟಿಂಗ್‌ ಆಪ್‌ ಬಳಸುತ್ತಿದ್ದೀರಾ? ಈ ಎಚ್ಚರಿಕೆಯ ಸಲಹೆಗಳು ನಿಮಗಾಗಿಯೇ

Tech Tips: ಬಂಬಲ್‌, ಟಿಂಡರ್‌ನಂತಹ ಡೇಟಿಂಗ್‌ ಆಪ್‌ ಬಳಸುತ್ತಿದ್ದೀರಾ? ಈ ಎಚ್ಚರಿಕೆಯ ಸಲಹೆಗಳು ನಿಮಗಾಗಿಯೇ

Dating App Scam: ಭಾರತದಲ್ಲಿ ಡೇಟಿಂಗ್‌ ಆಪ್‌ ವಂಚನೆಗಳು ಹೆಚ್ಚುತ್ತಿವೆ. ಡೇಟಿಂಗ್‌ ಆಪ್‌ ಬಳಸುವಾಗ ಆಗುವ ಆನ್‌ಲೈನ್‌ ವಂಚನೆಗಳಿಂದ ಸುರಕ್ಷತೆ ಕಾಪಾಡಿಕೊಳ್ಳಲು ಸಹಾಯ ಮಾಡುವ ಸಲಹೆಗಳು ಇಲ್ಲಿವೆ. ಡೇಟಿಂಗ್‌ ಆಪ್ಲಿಕೇಶನ್‌ ಬಳಸುವಾಗ ಇರಬೇಕಾದ ಎಚ್ಚರಿಕೆಗಾಗಿ ಇದನ್ನು ಓದಿ.

Tech Tips: ಬಂಬಲ್‌, ಟಿಂಡರ್‌ನಂತಹ ಡೇಟಿಂಗ್‌ ಆಪ್‌ ಬಳಸುತ್ತಿದ್ದೀರಾ? ಈ ಎಚ್ಚರಿಕೆಯ ಸಲಹೆಗಳು ನಿಮಗಾಗಿಯೇ
Tech Tips: ಬಂಬಲ್‌, ಟಿಂಡರ್‌ನಂತಹ ಡೇಟಿಂಗ್‌ ಆಪ್‌ ಬಳಸುತ್ತಿದ್ದೀರಾ? ಈ ಎಚ್ಚರಿಕೆಯ ಸಲಹೆಗಳು ನಿಮಗಾಗಿಯೇ

ಡೇಟಿಂಗ್‌ ಆಪ್‌ನಲ್ಲಿ ಹೊಸಬರನ್ನು ಭೇಟಿಯಾಗುವುದೆಂದರೆ ಅನೇಕ ಹೊಸ ಸವಾಲುಗಳನ್ನು ಎದುರಿಸಿದಂತೆ. ಈ ಸವಾಲುಗಳು ಹೊಂದಾಣಿಕೆಯ ಸಮಸ್ಯೆಯ ಬಗ್ಗೆ ಅಲ್ಲ, ಇದು ಸಂಪೂರ್ಣ ಅಪರಿಚಿತನಾಗಿರುವ ಎದುರಿನ ವ್ಯಕ್ತಿಯ ಬಗ್ಗೆ. ಡೇಟಿಂಗ್‌ ಆಪ್‌ ಮೂಲಕ ಮಾತನಾಡುತ್ತಿರುವ ವ್ಯಕ್ತಿಯು ನೀವು ಅವನನ್ನು ಸ್ವತಃ ಭೇಟಿಯಾಗುವವರೆಗೂ ಆ ವ್ಯಕ್ತಿ ಯಾರೆಂಬುದೇ ನಿಮಗೆ ತಿಳಿದಿರುವುದಿಲ್ಲ. ಹಾಗಾಗಿ ಸ್ಕ್ಯಾಮರ್‌ಗಳು ಇದನ್ನೆ ಬಂಡವಾಳವಾಗಿಸಿಕೊಂಡು ವ್ಯಾಪಕವಾಗಿ ವಂಚನೆ ನಡೆಸುತ್ತಿದ್ದಾರೆ.

ಭಾರತದಲ್ಲಿ ಆನ್‌ಲೈನ್‌ ವಂಚನೆಗಳು ದಿನೇ ದಿನೇ ಹೆಚ್ಚುತ್ತಿವೆ. ಡೇಟಿಂಗ್‌ ಆಪ್ಲಿಕೇಶನ್‌ಗಳ ಮೂಲಕ ನಡೆಸುವ ವಂಚನೆಗಳೂ ಅದರಲ್ಲಿ ಸೇರಿವೆ. ನಕಲಿ ಪ್ರೊಫೈಲ್‌ ರಚಿಸಿ ಅದರ ಮೂಲಕ ಜನರು ವಂಚನೆಗೊಳಿಸುತ್ತಿರುವ ಹಲವಾರು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಜನಪ್ರಿಯ ಡೇಟಿಂಗ್‌ ಆಪ್‌ಗಳಾದ ಬಂಬಲ್‌ ಮತ್ತು ಟಿಂಡರ್‌ ಹಗರಣಗಳು ಹೆಚ್ಚುತ್ತಿವೆ. ಡೇಟಿಂಗ್‌ ಬಳಸುವ ಬಹುತೇಕರು ಇದೇ ಅಪ್ಲಿಕೇಶನ್‌ ಬಳಸುತ್ತಾರೆ. ಏಕೆಂದರೆ ಇವುಗಳಲ್ಲಿ ಸುಲಭವಾಗಿ ಪ್ರೊಫೈಲ್‌ ರಚಿಸಬಹುದು, ಚಾಟ್‌ ಮಾಡಬಹುದು. ಇದರಲ್ಲಿ ಉಚಿತ ಮತ್ತು ಪಾವತಿಸಿದ ವೈಶಿಷ್ಟ್ಯಗಳು ಸುಲಭವಾಗಿ ದೊರೆಯುತ್ತದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಪ್ರಕರಣದಲ್ಲಿ, ತಮಗೆ ಟಿಂಡರ್ ಆಪ್‌ ನಿಂದ 4.5 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ವಂಚಕನು ಮಹಿಳೆಯನ್ನು ತನ್ನನ್ನು ಪ್ರೀತಿಸುವಂತೆ ಮಾಡಿದ್ದನು ಮತ್ತು ತಾನು ಯುಕೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದನು. ಮಹಿಳೆಯನ್ನು ಭೇಟಿಯಾಗಲು ಭಾರತಕ್ಕೆ ಬರುವುದಾಗಿ ಹೇಳಿ, ಹಣ ಪಡೆದುಕೊಂಡು ಮಹಿಳೆಯನ್ನು ಮೂರ್ಖನನ್ನಾಗಿಸಿದ್ದಾನೆ. ಡೇಟಿಂಗ್‌ ಆಪ್‌ ಮೂಲಕ ಬಾಯ್‌ಫ್ರೆಂಡ್‌ ಆದ ಆತನ್ನು ನೋಡಲು ಮಹಿಳೆ ಉತ್ಸುಕಳಾಗಿದ್ದರಿಂದ ಸುಲಭವಾಗಿ ಆ ವ್ಯಕ್ತಿಯ ಬಲೆಯಲ್ಲಿ ಸಿಲುಕಿದಳು. ಇದೆಲ್ಲವೂ ಆ ವ್ಯಕ್ತಿಯ ಮೋಸದ ಜಾಲ ಎಂದು ಶೀಘ್ರದಲ್ಲೇ ಅವರಿಗೆ ತಿಳಿದುಬಂದಿದೆ. ನಂತರ ಮಹಿಳೆ ತಾನು ಕಳೆದುಕೊಂಡ 4.5 ಲಕ್ಷ ಹಣವನ್ನು ಪೊಲೀಸರು ವಸೂಲಿ ಮಾಡಿ ಕೊಡಬಹುದು ಎಂಬ ಭರವಸೆಯಿಂದ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಮತ್ತೊಂದು ಪ್ರಕರಣದಲ್ಲಿ, ದೆಹಲಿ ಮೂಲದ ವ್ಯಕ್ತಿಯೊಬ್ಬರು ಬಂಬಲ್‌ ಆಪ್‌ನ ಮುಖಾಂತರ ಮಹಿಳೆಯನ್ನು ಭೇಟಿಯಾಗಿ ಅವರೊಂದಿಗೆ ಡೇಟಿಂಗ್‌ಗೆ ಹೋದಾಗ 15,000 ರೂ.ಗಳನ್ನು ಕಳೆದುಕೊಂಡಿರುವುದಾಗಿ ತಮ್ಮ X (ಟ್ವಿಟರ್‌) ನಲ್ಲಿ ಘಟನೆಯನ್ನು ಹಂಚಿಕೊಂಡಿದ್ದಾರೆ. ನಂತರ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಂತಹ ಹಗರಣಗಳಿಗೆ ಏನಾದರೂ ಮಾಡುವಂತೆಯೂ ಕೇಳಿಕೊಂಡಿದ್ದಾನೆ.

ಇವೆಲ್ಲವೂ ಭಾರತದಲ್ಲಿ ನಡೆಯುತ್ತಿರುವ ಹಲವು ಡೇಟಿಂಗ್ ಆಪ್ ವಂಚನೆಗಳಿಗೆ ಕೆಲವು ಉದಾಹರಣೆಗಳಾಗಿವೆ. ವಂಚಕರು ಬಲಿಪಶುಗಳನ್ನಾಗಿ ಮಾಡಿ ಮೋಸಗೊಳಿಸಲು ಹಲವಾರು ವಿಧಾನಗಳನ್ನು ಬಳಸುತ್ತಾರೆ. ನಕಲಿ ಪ್ರೊಫೈಲ್‌ಗಳನ್ನು ರಚಿಸುವುದು, ಸುಳ್ಳು ಭರವಸೆಗಳನ್ನು ನೀಡುವುದು ಮತ್ತು ವ್ಯಕ್ತಿಯ ಮೇಲೆ ಒತ್ತಡ ಹೇರುವುದು ಹೀಗೆ ಮುಂತಾದ ತಂತ್ರಗಳನ್ನು ಬಳಸುತ್ತಾರೆ.

ಆನ್‌ಲೈನ್ ಡೇಟಿಂಗ್ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

ಹಾಗಾದರೆ, ಇಂತಹ ಮೋಸದ ಜಾಲಗಳಿಂದ ಸುರಕ್ಷಿತವಾಗಿರಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿದೆ. ಇಲ್ಲಿ ಕೆಲವು ಸಲಹೆಗಳಿವೆ ಅವುಗಳನ್ನು ಪಾಲಿಸಿ.

ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿ

ಡೇಟಿಂಗ್ ಅಪ್ಲಿಕೇಶನ್‌ ಮುಖಾಂತರ ನೀವು ಭೇಟಿಯಾದ ಯಾರೊಂದಿಗೂ ನಿಮ್ಮ ಮನೆಯ ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು.

ಹಣ ಕಳುಹಿಸಬೇಡಿ

ಅವರ ವಿವರಿಸುವ ವ್ಯಥೆ–ಕಥೆಗಳು ಎಷ್ಟೇ ಮನಮುಟ್ಟುವಂತಿದ್ದರೂ, ನೀವು ಎಲ್ಲಿಯವರೆಗೆ ವೈಯಕ್ತಿಕವಾಗಿ ಅವರನ್ನು ಭೇಟಿಯಾಗದ ಹೊರತು ಹಣವನ್ನು ಕಳುಹಿಸಬೇಡಿ.

ಹಣವನ್ನು ಕೇಳುವ ಡೇಟಿಂಗ್‌ ಆಪ್‌ ಸ್ನೇಹಿತರ ಬಗ್ಗೆ ಸಂಶಯವಿರಲಿ

ಯಾರಾದರೂ ನಿಮ್ಮಿಂದ ಹಣವನ್ನು ಕೇಳಲು ಪ್ರಾರಂಭಿಸಿದರೆ, ಅವರು ವಂಚಕರಾಗಿರಬಹುದು ಎಂಬುದು ನಿಮಗೆ ಎಚ್ಚರಿಕೆ ಗಂಟೆಯಾಗಿದೆ.

ವ್ಯಕ್ತಿಯ ಪ್ರೊಫೈಲ್ ಚಿತ್ರವನ್ನು ಪರಿಶೀಲಿಸಲು ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿ

ಅವರು ಪ್ರೊಫೈಲ್‌ನಲ್ಲಿ ಹಾಕಿಕೊಂಡ ಚಿತ್ರವನ್ನು ಇತರ ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಬಳಸಲಾಗುತ್ತಿದೆಯೇ ಎಂದು ನೋಡಲು ರಿವರ್ಸ್‌ ಇಮೇಜ್‌ ಸರ್ಚ್‌ ನಿಮಗೆ ಸಹಾಯ ಮಾಡುತ್ತದೆ. ಅದು ನಕಲಿ ಪ್ರೊಫೈಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಕಲ್ಪನೆ ನಿಮಗೆ ನೀಡುತ್ತದೆ.

ವ್ಯಕ್ತಿಯ ಹೆಸರನ್ನು ಗೂಗಲ್‌ನಲ್ಲಿ ಹುಡುಕಿ

ವ್ಯಕ್ತಿಯ ಬಗ್ಗೆ ಯಾವುದೇ ಅನುಮಾನಗಳಿವೆಯೇ ಎಂದು ನೋಡಲು ಅವರ ಹೆಸರನ್ನು ಗೂಗಲ್‌ನಲ್ಲಿ ಹುಡುಕಿ. ಇದು ನಿಮ್ಮ ಅನುಮಾನ ಬಗೆಹರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಇಲ್ಲಿ ಹೇಳಿರುವ ಸಲಹೆಗಳು ಪರಿಸ್ಥಿತಿ ಕೈ ಮೀರುವ ಮೊದಲು ನಿಮಗೆ ಸಹಾಯ ಮಾಡುತ್ತವೆ. ಮುಂದಿನ ಬಾರಿ ನಿಮ್ಮ ಮೊಬೈಲ್‌ ಪರದೆಯ ಮೇಲೆ ಎಡ, ಬಲ ಸ್ವೈಪ್‌ ಮಾಡಿ ಚಾಟ್‌ ಮಾಡುವ ಮೊದಲು ಈ ಸಲಹೆಗಳನ್ನೊಮ್ಮೆ ನೆನಪಿಸಿಕೊಳ್ಳಿ.