Flipkart GOAT Sale: ಅಮೆಜಾನ್‌ಗೆ ಟಕ್ಕರ್ ಕೊಟ್ಟ ಫ್ಲಿಪ್‌ಕಾರ್ಟ್; ಬರೋಬ್ಬರಿ 80 ರಷ್ಟು ಡಿಸ್ಕೌಂಟ್‌ನೊಂದಿಗೆ GOAT ಸೇಲ್
ಕನ್ನಡ ಸುದ್ದಿ  /  ಜೀವನಶೈಲಿ  /  Flipkart Goat Sale: ಅಮೆಜಾನ್‌ಗೆ ಟಕ್ಕರ್ ಕೊಟ್ಟ ಫ್ಲಿಪ್‌ಕಾರ್ಟ್; ಬರೋಬ್ಬರಿ 80 ರಷ್ಟು ಡಿಸ್ಕೌಂಟ್‌ನೊಂದಿಗೆ Goat ಸೇಲ್

Flipkart GOAT Sale: ಅಮೆಜಾನ್‌ಗೆ ಟಕ್ಕರ್ ಕೊಟ್ಟ ಫ್ಲಿಪ್‌ಕಾರ್ಟ್; ಬರೋಬ್ಬರಿ 80 ರಷ್ಟು ಡಿಸ್ಕೌಂಟ್‌ನೊಂದಿಗೆ GOAT ಸೇಲ್

ಪ್ರಸಿದ್ಧ ಇ- ಕಾಮರ್ಸ್ ತಾಣಗಳ ನಡುವಣ ಸೇಲ್ ಪೈಪೋಟಿ ಈ ಬಾರಿ ಕೂಡ ಮುಂದುವರೆದಿದೆ. ಅತ್ತ ಅಮೆಜಾನ್ ತನ್ನ ಪ್ರೈಮ್ ಡೇ ಸೇಲ್ ದಿನಾಂಕ ಘೋಷಣೆ ಮಾಡಿದ ಬಳಿಕ ಇದೀಗ ಫ್ಲಿಪ್‌ಕಾರ್ಟ್‌ ಸಹ ಹೊಸ ಸೇಲ್‌ನ ಬಗ್ಗೆ ಪ್ರಕಟಿಸಿದೆ. ಇದರ ಹೆಸರು ಫ್ಲಿಪ್ಕಾರ್ಟ್ ಗೋಟ್ ಸೇಲ್. ಈ ಸೇಲ್ ಯಾವಾಗ ಆರಂಭ? (ಬರಹ: ವಿನಯ್ ಭಟ್)

ಫ್ಲಿಪ್‌ಕಾರ್ಟ್‌ ಗೋಟ್ ಸೇಲ್ ಶೀಘ್ರ ಆರಂಭವಾಗಲಿದೆ.
ಫ್ಲಿಪ್‌ಕಾರ್ಟ್‌ ಗೋಟ್ ಸೇಲ್ ಶೀಘ್ರ ಆರಂಭವಾಗಲಿದೆ.

ಪ್ರಸಿದ್ಧ ಇ-ಕಾಮರ್ಸ್ ತಾಣ ಅಮೆಜಾನ್, ಪ್ರೈಮ್ ಡೇ ಸೇಲ್ 2024 ಆಯೋಜಿಸಲು ಸಿದ್ಧತೆ ನಡೆಸಿರುವುದು ಗೊತ್ತೇ ಇದೆ. ಜುಲೈ 20 ಮತ್ತು 21 ರಂದು ಈ ಬಹುನಿರೀಕ್ಷಿತ ಸೇಲ್ ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡುವುದಾಗಿ ಕಂಪನಿ ಘೋಷಿಸಿದೆ. ಅಮೆಜಾನ್‌ಗೆ ಟಕ್ಕರ್ ಕೊಡಲು ಮತ್ತೊಂದು ಇ- ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ ಮುಂದಾಗಿದೆ. ಫ್ಲಿಪ್‌ಕಾರ್ಟ್ ಬಹುದೊಡ್ಡ ಮಾರಾಟವನ್ನು ನಡೆಸಲು ತಯಾರಿ ನಡೆಸುತ್ತಿದೆ.

ಫ್ಲಿಪ್‌ಕಾರ್ಟ್ ಹೊಸದಾಗೊ GOAT (Greatest Of All Time = GOAT) ಎಂಬ ಮಾರಾಟವನ್ನು ನಡೆಸಲಿದೆ. ಗ್ರೇಟೆಸ್ಟ್ ಆಫ್ ಆಲ್ ಟೈಮ್ ಹೆಸರಿನಲ್ಲಿ ಭಾರಿ ಕೊಡುಗೆಗಳನ್ನು ನೀಡಲಾಗುವುದು ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಮೊಬೈಲ್ ಪರಿಕರ, ಗೃಹೋಪಯೋಗಿ ವಸ್ತು ಮತ್ತು ಸ್ಮಾರ್ಟ್‌ಟಿವಿಗಳ ಮೇಲೆ ಭಾರಿ ಕೊಡುಗೆಗಳು ಇರಲಿವೆ.

ಆದರೆ, ಈ ಸೇಲ್ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಫ್ಲಿಪ್‌ಕಾರ್ಟ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಏತನ್ಮಧ್ಯೆ, ಮಾರಾಟದ ಭಾಗವಾಗಿ ಐಫೋನ್ 15 ನಲ್ಲಿ ರಿಯಾಯಿತಿ ಲಭ್ಯವಿರುತ್ತದೆ. ಸ್ಮಾರ್ಟ್ ಟಿವಿಗಳ ಮೇಲೆ ಬರೋಬ್ಬರಿ ಶೇ 80 ವರೆಗೆ ರಿಯಾಯಿತಿ ನೀಡಲಾಗುವುದು. ಐಫೋನ್, ವಿವೋ, ರೆಡ್ಮಿ ಮತ್ತು ಒನ್‌ಪ್ಲಸ್‌ನಂಥ ಬ್ರ್ಯಾಂಡ್‌ಗಳಲ್ಲಿ ಡಿಸ್ಕೌಂಟ್ ಲಭ್ಯವಿರುತ್ತವೆ. ಇವುಗಳ ಹೊರತಾಗಿ ಟಿವಿಗಳು, ವಾಷಿಂಗ್ ಮೆಷಿನ್, ಆರ್‌ಒ, ಪ್ರಿಂಟರ್, ಮಿಕ್ಸರ್ ಇತ್ಯಾದಿಗಳಿಗೆ ಶೇ 80 ರಷ್ಟು ರಿಯಾಯಿತಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ಮೂಲಗಳ ಪ್ರಕಾರ ಫ್ಲಿಪ್‌ಕಾರ್ಟ್‌ 'ಗೋಟ್' ಮಾರಾಟ ಪ್ರಾರಂಭವಾಗುವ ದಿನಾಂಕ ಜುಲೈ 20, ಶನಿವಾರ ಎನ್ನಲಾಗಿದೆ. ಮಾರಾಟದ ಕೊನೆಯ ದಿನಾಂಕ ಜುಲೈ 25, ಗುರುವಾರ ಆಗಲಿದೆ ಎಂಬ ವರದಿಗಳು ಕೆಲವೆಡೆ ಪ್ರಕಟವಾಗಿವೆ. ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳ ಕ್ರೆಡಿಡ್, ಡೆಬಿಟ್ ಕಾರ್ಡ್‌ಗಳಲ್ಲಿ ಖರೀದಿಸಿದರೆ ಶೇ 10 ತ್ವರಿತ ರಿಯಾಯಿತಿ ಲಭ್ಯವಿರಲಿದೆ.

ಏತನ್ಮಧ್ಯೆ, ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಇತ್ತೀಚೆಗೆ ಹೊಸ ಸೇವೆಗಳನ್ನು ಪ್ರಾರಂಭಿಸಲಾಗಿದ. ಫ್ಲಿಪ್‌ಕಾರ್ಟ್ ಮೊಬೈಲ್ ರೀಚಾರ್ಜ್, ಫಾಸ್ಟ್ಯಾಗ್ ರೀಚಾರ್ಜ್ ಮತ್ತು ಡಿಟಿಎಚ್ ರೀಚಾರ್ಜ್‌ನಂತಹ ವೈಶಿಷ್ಟ್ಯಗಳು ಲಭ್ಯವಿವೆ. ಇತರ ಅಪ್ಲಿಕೇಶನ್‌ಗಳನ್ನು ಬಳಸದೆಯೇ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಲ್ ಪಾವತಿಗಳನ್ನು ಮಾಡಲು ಇದು ಬಳಕೆದಾರರಿಗೆ ಅವಕಾಶ ಸಿಗಲಿದೆ. ಯುಪಿಐ ಸೇವೆಗಳ ಜೊತೆಗೆ, ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳ ಸಹಾಯದಿಂದ ಬಿಲ್ ಪಾವತಿಗಳನ್ನು ಮಾಡಬಹುದು.

Whats_app_banner