Photomoji: ಹೊಸ ವೈಶಿಷ್ಟ್ಯ ಪಡೆದುಕೊಂಡ ಗೂಗಲ್‌ ಮೆಸ್ಸೇಜಸ್‌; ಫೋಟೋಮೋಜಿ ಕ್ರಿಯೇಟ್‌ ಮಾಡಿ ಸೆಂಡ್‌ ಮಾಡಲು ಇಲ್ಲಿವೆ ವಿಧಾನಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Photomoji: ಹೊಸ ವೈಶಿಷ್ಟ್ಯ ಪಡೆದುಕೊಂಡ ಗೂಗಲ್‌ ಮೆಸ್ಸೇಜಸ್‌; ಫೋಟೋಮೋಜಿ ಕ್ರಿಯೇಟ್‌ ಮಾಡಿ ಸೆಂಡ್‌ ಮಾಡಲು ಇಲ್ಲಿವೆ ವಿಧಾನಗಳು

Photomoji: ಹೊಸ ವೈಶಿಷ್ಟ್ಯ ಪಡೆದುಕೊಂಡ ಗೂಗಲ್‌ ಮೆಸ್ಸೇಜಸ್‌; ಫೋಟೋಮೋಜಿ ಕ್ರಿಯೇಟ್‌ ಮಾಡಿ ಸೆಂಡ್‌ ಮಾಡಲು ಇಲ್ಲಿವೆ ವಿಧಾನಗಳು

Google Messages: ಗೂಗಲ್‌ ಪೋಟೋಮೋಜಿ ಎಂಬ ಹೊಸ ವೈಶಿಷ್ಟ್ಯವೊಂದನ್ನು ತನ್ನ ಮೆಸ್ಸೇಜಸ್‌ ಆಪ್‌ನಲ್ಲಿ ಪರಿಚಯಿಸಿದೆ. ಅದು ಬಳಕೆದಾರರು ತಮ್ಮ ಸ್ವಂತ ಚಿತ್ರಗಳನ್ನೇ ಬಳಸಿಕೊಂಡು ಇಮೋಜಿ ರಚಿಸಬಹುದಾದ ಅವಕಾಶವನ್ನು ನೀಡುತ್ತಿದೆ.

ಗೂಗಲ್‌ ಮೆಸ್ಸೇಜಸ್‌ನ ಹೊಸ ವೈಶಿಷ್ಟ್ಯ ಫೋಟೋಮೋಜಿ (HT Tech File Photo)
ಗೂಗಲ್‌ ಮೆಸ್ಸೇಜಸ್‌ನ ಹೊಸ ವೈಶಿಷ್ಟ್ಯ ಫೋಟೋಮೋಜಿ (HT Tech File Photo)

ಮೆಸ್ಸೇಜ್‌ಗಳನ್ನು ಕಳುಹಿಸುವ ಗೂಗಲ್‌ನ ಅಪ್ಲಿಕೇಶನ್‌ ಆದ ಗೂಗಲ್‌ ಮೆಸ್ಸೇಜಸ್‌ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಅದೇ ಪೋಟೋಮೋಜಿ (Phtotomoji). ಅಂದರೆ ಬಳಕೆದಾರರು ಪ್ರತಿಕ್ರಿಯೆಗಳನ್ನು ನೀಡಲು ತಮ್ಮದೇ ವೈಯಕ್ತಿಕ ಚಿತ್ರಗಳನ್ನು ಬಳಸಿಕೊಂಡು ಕಸ್ಟಮ್‌ ಇಮೋಜಿ ರಚಿಸಲು ಅನುಮತಿ ನೀಡುತ್ತಿದೆ. ಇದು ಸದ್ಯ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಬಳಸಬಹುದಾಗಿದೆ. ಈ ಫೋಟೋಮೋಜಿಯ ಬಳಕೆಯಿಂದ ನಿಮ್ಮ ಸಂದೇಶಗಳಿಗೆ ಇನ್ನೂ ಹೆಚ್ಚಿನ ವೈಯಕ್ತಿಕ ಸ್ಪರ್ಶವನ್ನು ನೀಡಬಹುದಾಗಿದೆ.

ಏನಿದು ಫೋಟೋಮೋಜಿ?

ಗೂಗಲ್‌ ತನ್ನ ಮೆಸ್ಸೇಜಸ್‌ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯವಾದ ಫೋಟೋಮೋಜಿಯನ್ನು ಪರಿಚಯಿಸಿದೆ. ಇದು ಮೆಸ್ಸೇಜ್‌ ಕಳುಹಿಸುವಾಗ ತಮ್ಮದೇ ಸ್ವಂತ ಚಿತ್ರಗಳನ್ನು ಬಳಸಿಕೊಂಡು ಕಸ್ಟಮ್‌ ಇಮೋಜಿಯನ್ನು ರಚಿಸಲು ಮತ್ತು ಕಳುಹಿಸಲು ಅನುಮತಿಸುತ್ತದೆ. ಅಂದರೆ ತಮಾಷೆಯ ಅಭಿವ್ಯಕ್ತಿಯನ್ನು ನೀಡಲು ನಿಮ್ಮ ಮುಖದ ಚಿತ್ರವನ್ನೇ ತೆಗೆದುಕೊಳ್ಳಬಹುದು, ಇಲ್ಲವೇ ನಿಮ್ಮ ಮುದ್ದಿನ ಸಾಕುಪ್ರಾಣಿಗಳ ಫೋಟೋವನ್ನು ಬಳಸಬಹುದು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಹೋಲುವ ವಸ್ತುಗಳ ಸ್ನಾಪ್‌ ಶಾಟ್‌ ಅನ್ನು ಬಳಸಬಹುದು. ಇದರಿಂದಾಗಿ ನೀವು ನೀಡುವ ಪ್ರತಿಕ್ರಿಯೆ ರೂಪದ ಸಂದೇಶಗಳಿಗೆ ಹೆಚ್ಚಿನ ವೈಯಕ್ತಿಕ ಸ್ಪರ್ಶ ನೀಡಬಹುದಾಗಿದೆ. ಪೋಟೋಮೋಜಿ ಎಂಬ ಹೊಸ ವೈಶಿಷ್ಟ್ಯವು ನಿಮ್ಮ ನೈಜ ಜೀವನದ ಚಿತ್ರಗಳನ್ನು ಬಳಸಲು ನಿಮಗೆ ಅವಕಾಶ ನೀಡುವ ಮೂಲಕ ಇದು ವಿಶಿಷ್ಟವಾಗಿದೆ.

ಫೋಟೋಮೋಜಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

– ಫೋಟೋಮೋಜಿ ವೈಶಿಷ್ಟ್ಯವು ಆರ್‌ಸಿಎಸ್‌ (RCS-Rich Communication Services) ಚಾಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ.

– ನೀವು ಏಕಕಾಲದಲ್ಲಿ 30 ಫೋಟೋಮೋಜಿಗಳನ್ನು ಕ್ರಿಯೇಟ್‌ ಮಾಡಿ ಸೇವ್‌ ಮಾಡಿಟ್ಟುಕೊಳ್ಳಬಹುದು.

– ಫೋಟೋಮೋಜಿ ವಿಭಾಗದಿಂದ ನೀವು ಯಾವಾಗ ಬೇಕಾದರೂ ಅದನ್ನು ಎಡಿಟ್‌ ಅಥವಾ ಡಿಲೀಟ್‌ ಮಾಡಬಹುದು.

– ಸದ್ಯ ಈ ವೈಶಿಷ್ಟ್ಯವು ನಿಮ್ಮ ಮೆಸ್ಸೇಜಸ್‌ ಆಪ್‌ನಲ್ಲಿ ಕಾಣಿಸುತ್ತಿಲ್ಲದಿರಬಹುದು.ಅದಕ್ಕಾಗಿ ಅಪ್ಲಿಕೇಶನ್‌ ಅನ್ನು ಅಪ್ಡೇಟ್‌ ಮಾಡಿ ನೋಡಬಹುದು ಇಲ್ಲವೇ ಗೂಗಲ್‌ ಮೆಸ್ಸೇಜಸ್‌ ಬೀಟಾ ಪ್ರೋಗ್ರಾಮ್‌ ಎಂಬ ವಿಶೇಷ ಟೆಸ್ಟಿಂಗ್​ ಗ್ರೂಪ್​​ ಸೇರಲು ಪ್ರಯತ್ನಿಸಬಹುದು.

ಫೋಟೋಮೋಜಿ ರಚಿಸುವುದು ಹೇಗೆ?

ಪೋಟೋಮೋಜಿಯನ್ನು ಎರಡು ವಿಧಾನಗಳ ಮೂಲಕ ರಚಿಸಬಹುದಾಗಿದೆ.

1. ಇಮೋಜಿ ಪಿಕ್ಕರ್‌ ಮೂಲಕ ಹೀಗೆ ರಚಿಸಿ

– ಮೊದಲಿಗೆ ಗೂಗಲ್‌ ಮೆಸ್ಸೇಜಸ್‌ ಆಪ್‌ ತೆರೆದು ಚಾಟ್‌ ಮಾಡಲು ಪ್ರಾರಂಭಿಸಿ.

– ಇಮೋಜಿ ಐಕಾನ್‌ ಮೇಲೆ ಟ್ಯಾಪ್‌ ಮಾಡಿ.

– ಇಮೋಜಿ ಸಜೇಷನ್‌ಗಳ ಪಕ್ಕದಲ್ಲಿರುವ ಪ್ಲಸ್​ (+) ಬಟನ್‌ ಮೇಲೆ ಟ್ಯಾಪ್‌ ಮಾಡಿ

– ಕ್ರಿಯೇಟ್‌ ಒತ್ತಿ.

– ಅದರಲ್ಲಿ ನೀವು ಫೋಟೋವನ್ನು ಕ್ಯಾಮರಾದ ಸಹಾಯದಿಂದ ನೇರವಾಗಿ ತೆಗೆದುಕೊಳ್ಳಬಹುದು ಇಲ್ಲವೇ ಈಗಾಗಲೇ ಪೋಟೋ ಗ್ಯಾಲರಿಯಲ್ಲಿರುವ ಫೋಟೋವನ್ನು ಸಹ ತೆಗೆದುಕೊಳ್ಳಬಹುದು.

– ಪೋಟೋ ಆಯ್ದುಕೊಂಡ ನಂತರ ಅದನ್ನು ಬೇಕಾದರೆ ಕ್ರಾಪ್‌ ಮಾಡಿಕೊಳ್ಳಬಹುದು.

– ನಂತರ ಡನ್‌ ಒತ್ತಿ ಫೋಟೋಮೋಜಿ ಸೇವ್‌ ಮಾಡಿಕೊಳ್ಳಿ.

2. ರಿಯಾಕ್ಷನ್‌ ಬಾರ್‌ (ಟೈಪಿಂಗ್‌ ಬಾರ್‌) ಮೂಲಕವೂ ರಚಿಸಿ

– ಆಪ್‌ ತರೆದ ನಂತರ ಚಾಟ್‌ ಮಾಡಲು ಪ್ರಾರಂಭಿಸಿ. ರಿಯಾಕ್ಷನ್‌ ಬಾರ್‌ ಅಂದರೆ ನೀವು ಮೆಸ್ಸೇಜ್‌ ಟೈಪ್‌ ಮಾಡುವ ಬಾರ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ.

– ಅದು ಇಮೋಜಿ ಆಯ್ಕೆಯನ್ನು ನೀಡುತ್ತದೆ.

– ಅಲ್ಲಿ ಸ್ಕ್ರೋಲ್‌ ಮಾಡಿ ಪ್ಲಸ್​ (+) ಬಟನ್‌ ಟ್ಯಾಪ್‌ ಮಾಡಿ.

– ಕ್ರಿಯೇಟ್‌ ಒತ್ತಿ, ಇಮೋಜಿ ಪಿಕ್ಕರ್‌ನಲ್ಲಿ ತಿಳಿಸಿದ ಹಂತಗಳನ್ನೇ ಪುನರಾವರ್ತಿಸಿ.

ಫೋಟೋಮೋಜಿ ಕಳುಹಿಸುವುದು ಹೇಗೆ?

– ಮೊದಲು ಗೂಗಲ್‌ ಮೆಸ್ಸೇಜಸ್‌ನಲ್ಲಿ ಚಾಟ್‌ಮಾಡಲು ಪ್ರಾರಂಭಿಸಿ.

– ಟೈಪಿಂಗ್‌ ಏರಿಯಾದಲ್ಲಿ ಇಮೋಜಿ ಐಕಾನ್‌ ಮೇಲೆ ಟ್ಯಾಪ್‌ ಮಾಡಿ.

– ಪೋಟೋಮೋಜಿ ಟ್ಯಾಬ್‌ಗೆ ಹೋಗಿ.

– ಅಲ್ಲಿ ನಿಮ್ಮ ಚಾಟ್‌ ಮೆಸ್ಸೇಜ್‌ಗೆ ಸರಿಹೊಂದುವ ಫೋಟೋಮೋಜಿ ಆರಿಸಿ. ಇದು ನೀವು ಕಳುಹಿಸಿದ ಸಂದೇಶದಲ್ಲಿ ಚಿಕ್ಕ ಚಿತ್ರವಾಗಿ ಕಾಣಿಸುತ್ತದೆ.

– ನೀವು ಫೋಟೋಮೋಜಿಯನ್ನು ಸೇರಿಸಿ ಕಳುಹಿಸಿದ ಸಂದೇಶದಲ್ಲಿ ರಿಸಿಪಿಯಂಟ್‌ ಅದನ್ನು ಸಣ್ಣ ಚಿತ್ರವಾಗಿ ಸ್ವೀಕರಿಸುತ್ತಾರೆ.

– ಅದನ್ನು ಪೂರ್ಣವಾಗಿ ನೋಡಲು ಅದರ ಮೇಲೆ ಟ್ಯಾಪ್‌ ಮಾಡಬಹುದು.

– ಹೀಗೆ ನಿಮ್ಮ ಸಂದೇಶಗಳಿಗೆ ವೈಯಕ್ತಿಕ ಸ್ಪರ್ಶ ನೀಡುವುದರ ಮೂಲಕ ಫೋಟೋಮೋಜಿ ಹೆಚ್ಚು ಆಕರ್ಷಕವಾಗಿ ನಿಮ್ಮ ಅಭಿಪ್ರಾಯ ವ್ಯಕ್ತಗೊಳಿಸುತ್ತದೆ.

Whats_app_banner