ಕೀಬೋರ್ಡ್ ಬಟನ್‌ಗಳು ABCD ಕ್ರಮದಲ್ಲಿ ಯಾಕಿಲ್ಲ ಗೊತ್ತೇ? ಇದರ ಹಿಂದಿದೆ ಒಂದು ರಹಸ್ಯ
QWERTY Keyboard: ಕೀಬೋರ್ಡ್ ಬಟನ್‌ಗಳು ಅನುಕ್ರಮವಾಗಿ ಅಂದರೆ ಎಬಿಸಿಡಿಯ ಕ್ರಮದಲ್ಲಿದ್ದರೆ ಟೈಪ್ ಮಾಡುವುದು ತುಂಬಾ ಸುಲಭ ಎಂದು ಜನ ಅಂದುಕೊಂಡಿರಬೇಕು. ಹಾಗಾದರೆ ಇದು ಯಾಕೆ ಆರೀತಿಯಲ್ಲಿಲ್ಲ?. ಈ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. (ಬರಹ: ವಿನಯ್ ಭಟ್)

ಕೀಬೋರ್ಡ್ (Keyboard) ಅನ್ನು ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಎರಡರಲ್ಲೂ ಬಳಸಲಾಗುತ್ತದೆ. ಟೈಪಿಂಗ್ ಅಗತ್ಯವಿದ್ದಾಗ ಇದರ ಬಳಕೆ ಹೆಚ್ಚು. ಕಂಪ್ಯೂಟರ್ ಅನ್ನು ಹೊಸದಾಗಿ ಉಪಯೋಗಿಸುವವರು ಟೈಪ್ ಮಾಡುವಾಗ, ಕೀಬೋರ್ಡ್ (QWERTY Keyboard)ನಲ್ಲಿ ಅಕ್ಷರಗಳನ್ನು ಹುಡುಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ಬಾರಿ ಟೈಪ್ ಮಾಡಬೇಕಾದ ಬಟನ್ ನೋಡಬೇಕು ಆಗ ಮಾತ್ರ ಸರಿಯಾದ ಪದವನ್ನು ಬರೆಯಲು ಸಾಧ್ಯ. ಹೀಗಿರುವಾಗ ಈ ಬಟನ್‌ಗಳು ಅನುಕ್ರಮವಾಗಿ ಅಂದರೆ ಎಬಿಸಿಡಿಯ ಕ್ರಮದಲ್ಲಿದ್ದರೆ ಟೈಪ್ ಮಾಡುವುದು ತುಂಬಾ ಸುಲಭ ಎಂದು ಜನ ಅಂದುಕೊಂಡಿರಬೇಕು. ಹಾಗಾದರೆ ಇದು ಯಾಕೆ ಆರೀತಿಯಲ್ಲಿಲ್ಲ?, A ನಂತರ S ಮತ್ತು Q ನಂತರ W ಎಂದು ಏಕೆ? ಈ ಪ್ರಶ್ನೆಗೆ ಉತ್ತರವನ್ನು ತಿಳಿಯೋಣ.
ಈ ಸ್ವರೂಪ ಎಲ್ಲಿಂದ ಬಂತು?
ಇಂದು ಕೀಬೋರ್ಡ್‌ಗಳಲ್ಲಿ ಬಳಸಲಾಗುವ ಸ್ವರೂಪವನ್ನು QWERTY ಫಾರ್ಮ್ಯಾಟ್ ಎಂದು ಕರೆಯಲಾಗುತ್ತದೆ. ಈ ಸ್ವರೂಪವನ್ನು ಹಲವು ದಶಕಗಳಿಂದ ಬಳಸಲಾಗಿದೆ. ಕೀಬೋರ್ಡ್ ವಿನ್ಯಾಸವು ಟೈಪ್ ರೈಟರ್ ಯುಗದಿಂದ ಬಂದಿದೆ. ಅರ್ಥಾತ್, ಈ ಸ್ವರೂಪವು ಗಣಕಯಂತ್ರಗಳ ಆಗಮನದ ಮುಂಚೆಯೇ ಲಭ್ಯವಿತ್ತು. ಟೈಪ್ ರೈಟರ್ ಅನ್ನು ಕಂಡುಹಿಡಿದ ಕ್ರಿಸ್ಟೋಫರ್ ಲ್ಯಾಥಮ್ ಶೋಲ್ಸ್ ಮೊದಲು ಎಬಿಸಿಡಿ ಸ್ವರೂಪದಲ್ಲಿ ಕೀಬೋರ್ಡ್ ತಯಾರಿಸಿದರು. ಆದರೆ, ಅತಿ ವೇಗವಾಗಿ ಟೈಪ್ ಮಾಡುತ್ತಿದ್ದಾಗ ಮತ್ತು ಒಂದು ಅಕ್ಷರಗಳನ್ನು ನಿರಂತರವಾಗಿ ಟೈಪ್ ಮಾಡುವುದರಿಂದ ಟೈಪ್ ರೈಟರ್ನ ಸೂಜಿಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುತ್ತಿತ್ತು. ಆದ್ದರಿಂದಲೇ ಟೈಪ್ ಮಾಡಲು ತೊಂದರೆಯಾಗುತ್ತಿತ್ತು.
ಬಟನ್‌ಗಳು ಅನುಕ್ರಮ
ಟೈಪಿಂಗ್ ಅನ್ನು ಅನುಕೂಲಕರವಾಗಿ ಮತ್ತು ಸುಲಭವಾಗಿಸಲು, ನಾವು ಅತಿ ಹೆಚ್ಚಾಗಿ ಟೈಪ್ ಮಾಡುವ ಅಕ್ಷರಗಳನ್ನು ದೂರದಲ್ಲಿ ಇಡುವ ರೀತಿಯಲ್ಲಿ ಬಟನ್ಗಳನ್ನು ಜೋಡಿಸಲಾಯಿತು. 'TH' ಮತ್ತು 'SH' ಹೆಚ್ಚಾಗಿ ಒಟ್ಟಿಗೆ ಬರುವುದರಿಂದ, ಈ ಅಕ್ಷರಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಇರಿಸಲಾಗಿತ್ತು. ಆದ್ದರಿಂದ, ಅನೇಕ ವಿಫಲ ಪ್ರಯೋಗಗಳ ನಂತರ, 1870 ರ ದಶಕದಲ್ಲಿ QWERTY ಸ್ವರೂಪವನ್ನು ಆಯ್ಕೆ ಮಾಡಲಾಯಿತು. ಇದು ಟೈಪ್ ರೈಟರ್ನ್ ಸೂಜಿಗಳು ಸಿಕ್ಕಿಹಾಕಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಿತು.
ಡ್ವೊರಾಕ್ ಮಾಡೆಲ್ ಕೂಡ ಇತ್ತು
ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಜೋಡಿಸಲು ಡ್ವೊರಾಕ್ ಮಾದರಿಯನ್ನು ಸಹ ಪರಿಚಯಿಸಲಾಯಿತು. ಈ ಮಾದರಿಯನ್ನು ಆಗಸ್ಟ್ ಡ್ವೊರಾಕ್ ಕಂಡುಹಿಡಿದನು. ಇದಕ್ಕೆ ಅವನ ಹೆಸರನ್ನೇ ಇಡಲಾಯಿತು. ಈ ಮಾದರಿಯು ತುಂಬಾ ಸುಲಭವಾಗಿರಲಿಲ್ಲ. ಆದ್ದರಿಂದ ನಂತರ ಕೀಬೋರ್ಡ್‌ಗಾಗಿ QWERTY ಸ್ವರೂಪವನ್ನು ಮಾತ್ರ ಆಯ್ಕೆ ಮಾಡಲಾಯಿತು.
