ಭಾರತಕ್ಕೆ ಬಂತು ಅತಿ ಕಡಿಮೆ ಬೆಲೆಗೆ HMD ಕಂಪನಿಯ ಚೊಚ್ಚಲ ಸ್ಮಾರ್ಟ್ಫೋನ್: ಹೇಗಿದೆ ನೋಡಿ
HMD Smartphone: ಹೆಚ್ಎಮ್ಡಿ ಕಂಪನಿಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರಲ್ಲಿ ಹೆಚ್ಎಮ್ಡಿ ಕ್ರೆಸ್ಟ್ ಮತ್ತು ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 5G ಎಂಬ ಎರಡು ಫೋನುಗಳಿವೆ. ವಿಶೇಷ ಎಂದರೆ ಈ ಎರಡೂ ಫೋನುಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. (ಬರಹ: ವಿನಯ್ ಭಟ್)
ಪ್ರಸಿದ್ಧ ಹೆಚ್ಎಮ್ಡಿ (HMD Smartphones) ಕಂಪನಿ ಭಾರತಕ್ಕೆ ಸ್ಮಾರ್ಟ್ಫೋನ್ ವಿಭಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದು ಹೊಸದಾಗಿ ಎರಡು ಫೋನುಗಳನ್ನು ಅನಾವರಣ ಮಾಡಿದೆ. ಇದರ ಹೆಸರು ಹೆಚ್ಎಮ್ಡಿ ಕ್ರೆಸ್ಟ್ ಮತ್ತು ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 5G ಈ ಎರಡೂ ಅತಿ ಕಡಿಮೆ ಬೆಲೆಗೆ ಲಭ್ಯವಿದ್ದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. 6.67-ಇಂಚಿನ OLED ಡಿಸ್ಪ್ಲೇಗಳೊಂದಿಗೆ ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತವೆ. 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾಗಳನ್ನು ಹೊಂದಿವೆ. ಹೆಚ್ಎಮ್ಡಿ ಕ್ರೆಸ್ಟ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿಯನ್ನು ಕೂಡ ನೀಡಲಾಗಿದೆ. ಈ ಎರಡೂ ಫೋನುಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಹೆಚ್ಎಮ್ಡಿ ಕ್ರೆಸ್ಟ್, ಕ್ರೆಸ್ಟ್ ಮ್ಯಾಕ್ಸ್ 5G ಬೆಲೆ
ಹೆಚ್ಎಮ್ಡಿ ಕ್ರೆಸ್ಟ್ ಏಕೈಕ 6GB/128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 14,499 ರೂ. ಇದೆ. ಇದು ಮೂರು ಬಣ್ಣಗಳಲ್ಲಿ ಬರುತ್ತದೆ: ನೇರಳೆ, ಕೆಂಪು ಮತ್ತು ನೀಲಿ.
ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 8GB/256GB ಸ್ಟೋರೇಜ್ ಯೂನಿಟ್‌ಗೆ ರೂ. 16,499 ರಿಂದ ಪ್ರಾರಂಭವಾಗುತ್ತದೆ. ಇದು ಹಸಿರು, ಕೆಂಪು ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಬಿಡುಗಡೆ ಕೊಡುಗೆಯ ಭಾಗವಾಗಿ, ಹೆಚ್ಎಮ್ಡಿ ಕ್ರೆಸ್ಟ್ 12,999 ರೂ. ಗಳಿಗೆ ಲಭ್ಯವಿರುತ್ತದೆ ಮತ್ತು ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ ರೂ. 14,999 ಕ್ಕೆ ಲಭ್ಯವಿರುತ್ತದೆ. ಈ ಎರಡೂ ಫೋನ್‌ಗಳು ಅಮೆಜಾನ್ ಮೂಲಕ ಖರೀದಿಸಲು ಲಭ್ಯವಿರುತ್ತವೆ.
ಹೆಚ್ಎಮ್ಡಿ ಕ್ರೆಸ್ಟ್, ಕ್ರೆಸ್ಟ್ ಮ್ಯಾಕ್ಸ್ 5G ಫೀಚರ್ಸ್
ಹೆಚ್ಎಮ್ಡಿ ಕ್ರೆಸ್ಟ್ ಮತ್ತು ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 5G ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತದೆ ಮತ್ತು 6.67-ಇಂಚಿನ ಪೂರ್ಣ-HD+ OLED ಡಿಸ್ಪ್ಲೇಯನ್ನು ಹೊಂದಿದೆ. ಅವುಗಳು ಆಕ್ಟಾ-ಕೋರ್ 6nm ಯುನಿಸಾಕ್ T760 5G ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಹೆಚ್ಎಮ್ಡಿ ಕ್ರೆಸ್ಟ್ 6GB RAM ಮತ್ತು 128GB ಸ್ಟೋರೇಜ್ ಹೊಂದಿದ್ದರೆ, ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ.
ಹೆಚ್ಎಮ್ಡಿ ಕ್ಯಾಮೆರಾ ಮತ್ತು ಇತರೆ ವೈಶಿಷ್ಟ್ಯ
ಕ್ಯಾಮೆರಾ ವಿಚಾರಕ್ಕೆ ಬಂದರೆ, ಹೆಚ್ಎಮ್ಡಿ ಕ್ರೆಸ್ಟ್ AI-ಬೆಂಬಲಿತ 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮತ್ತೊಂದೆಡೆ, ಹೆಚ್ಎಮ್ಡಿ ಕ್ರೆಸ್ಟ್ ಮ್ಯಾಕ್ಸ್ 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಬರುತ್ತದೆ, ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಒಳಗೊಂಡಿದೆ.
ಹೆಚ್ಎಮ್ಡಿ ಕ್ರೆಸ್ಟ್ ಮತ್ತು ಕ್ರೆಸ್ಟ್ ಮ್ಯಾಕ್ಸ್ ಫೋನಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎರಡೂ ಫೋನ್‌ಗಳು 33W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿವೆ. ಬ್ಯಾಟರಿ ಘಟಕಗಳು 800 ಚಾರ್ಜಿಂಗ್ ಸೈಕಲ್‌ಗಳನ್ನು ಬೆಂಬಲಿಸುತ್ತವೆ ಎಂದು ಕಂಪನಿ ಹೇಳಿದೆ.
ಬರಹ: ವಿನಯ್ ಭಟ್