ಎಐ ಏನಿದು ನಿನ್ನ ಲೀಲೆ? ದೈನಂದಿನ ಬದುಕಿನ ಭಾಗವಾಗುತ್ತಿರುವೆ! ಮನರಂಜನೆಯಿಂದ ವೈದ್ಯಕೀಯ ಕ್ಷೇತ್ರದವರೆಗೆ ಇಲ್ಲಿದೆ ಇದರ ಕರಾಮತ್ತು
ಎಐ ಅಂದರೆ ಕೃತಕ ಬುದ್ಧಿಮತ್ತೆ.ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧುನಿಕ ಜೀವನಶೈಲಿಯ ಬಹುತೇಕ ಎಲ್ಲ ಹಂತಗಳಲ್ಲೂ ವ್ಯಾಪಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಎಐ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಎಐ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?ಇಲ್ಲಿದೆ ಮಾಹಿತಿ.
ಎಐ ಅಂದರೆ ಕೃತಕ ಬುದ್ಧಿಮತ್ತೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧುನಿಕ ಜೀವನಶೈಲಿಯ ಬಹುತೇಕ ಎಲ್ಲ ಹಂತಗಳಲ್ಲೂ ವ್ಯಾಪಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ವ್ಯಾಪಾರ, ವಹಿವಾಟು, ಆರೋಗ್ಯ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಎಐ ತನ್ನ ಛಾಪು ಮೂಡಿಸಿದೆ. ಮುಂದಿನ ಜೀವನ ಸುಗಮವಾಗಿಸಲು ಎಐ ತನ್ನ ನೆರವು ನೀಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಎಐ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಎಐ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಈ ಸ್ಟೋರಿ ಓದಿ.
ದೈನಂದಿನ ಬದುಕಿನ ಭಾಗವಾಗುತ್ತಿರುವ ಎಐ
ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್: ಎಐ ಕ್ಷೇತ್ರದ ಕ್ರಾಂತಿಕಾರಿ ಬದಲಾವಣೆಗೆ ಸಾಧ್ಯವಾಗಿದ್ದು, ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್. ಡೇಟಾ ಅನಾಲಿಟಿಕ್ಸ್, ಇಂಟರ್‌ನೆಟ್ ಆಲ್ಗರಿದಂ ಮೂಲಕ ಅತ್ಯಂತ ನಿಖರ ಫಲಿತಾಂಶ, ವಿವರಣೆಯನ್ನು ನೀಡಲು ಮೆಷಿನ್ ಲರ್ನಿಂಗ್ ನೆರವಾಗಿದೆ. ಜತೆಗೆ ಸ್ಪೀಚ್ ರೆಕಗ್ನಿಷನ್, ಕಂಪ್ಯೂಟರ್ ವಿಷನ್ ಮತ್ತು ಭವಿಷ್ಯದ ಹಲವು ಯೋಜನೆಗಳಿಗೆ ಇದು ಅಡಿಪಾಯ ಹಾಕಿಕೊಟ್ಟಿದೆ.
ಆರೋಗ್ಯ ಕ್ಷೇತ್ರದ ಬದಲಾವಣೆ: ದೈನಂದಿನ ಅಗತ್ಯವಾದ ಆರೋಗ್ಯ ಕ್ಷೇತ್ರದಲ್ಲಿ ಎಐ ಪ್ರಭಾವ ಬಹಳಷ್ಟಿದೆ. ಮೆಡಿಕಲ್ ಇಮೇಜಿಂಗ್, ಡ್ರಗ್ ಡಿಸ್ಕವರಿ ಮತ್ತು ರಿಮೋಟ್ ಪೇಶೇಂಟ್ ಮಾನಿಟರಿಂಗ್, ಎಕ್ಸ್-ರೇ, ಎಂಆರ್‌ಐ, ಸಿಟಿ ಸ್ಕ್ಯಾನ್, ವಿವಿಧ ರೋಗ ಪತ್ತೆ, ರೋಗ ಲಕ್ಷಣ ಸಹಿತ ಮೆಡಿಕಲ್ ಕ್ಷೇತ್ರದ ವಿವಿಧ ಅಗತ್ಯತೆಗಳನ್ನು ಎಐ ಪೂರೈಸುತ್ತಿದೆ.
ಚಾಟ್ ಜಿಪಿಟಿ ಮತ್ತು ಭಾಷಾ ಕ್ರಾಂತಿ: ಮನುಷ್ಯನ ಮಾತುಗಳನ್ನೇ ನಕಲು ಮಾಡಿ, ವಿವಿಧ ಸನ್ನಿವೇಶ, ಸೇವೆಗಳಿಗೆ ಸೇವೆ ಒದಗಿಸಲು ಎಐ ನೆರವಾಗುತ್ತಿದೆ. ಚಾಟ್ ಜಿಪಿಟಿಯಂತಹ ವೈಶಿಷ್ಟ್ಯಗಳು ನಮ್ಮ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿದೆ. ಅದೇ ರೀತಿ, ಭಾಷಾಂತರ, ಅನುವಾದ, ವರ್ಚುವಲ್ ಅಸಿಸ್ಟಂಟ್, ಚಾಟ್‌ಬಾಟ್, ಸ್ವಯಂಚಾಲಿ ಕಸ್ಟಮರ್ ಕೇರ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಎಐ ಕಮಾಲ್ ಮಾಡಿದೆ. ಅಮೆಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟಂಟ್, ಆ್ಯಪಲ್ ಸಿರಿ ಇದಕ್ಕೆ ಉದಾಹರಣೆಗಳು.
ಸ್ವಯಂಚಾಲಿತ ಕಾರುಗಳು: ಆಟೋಮೊಬೈಲ್ ಕ್ಷೇತ್ರದಲ್ಲೂ ಎಐ ಬಹಳಷ್ಟು ಸಹಾಯ ಮಾಡುತ್ತಿದೆ. ಸುಲಲಿತ ಚಾಲನೆ, ಡ್ರೈವ್ ಅಸಿಸ್ಟ್, ಅಪಘಾತ ನಿಯಂತ್ರಣ, ರಸ್ತೆ ಮಾರ್ಗದರ್ಶನ, ಮ್ಯಾಪ್ ಹೀಗೆ ಸಾಫ್ಟ್‌ವೇರ್ ಮತ್ತು ಕ್ಯಾಮೆರಾ, ಸೆನ್ಸರ್, ನ್ಯಾವಿಗೇಷನ್‌ನಲ್ಲೂ ಎಐ ನೆರವು ಇದೆ. ಟೆಸ್ಲಾ, ಉಬರ್, ವೇಮೊಗಳಲ್ಲಿ ಎಐ ಅನ್ವಯ ಬಹಳಷ್ಟಿದೆ. ವಾಹನಗಳ ಸ್ವಯಂಚಾಲಿತ ನಿರ್ವಹಣೆ ಮತ್ತು ಚಾಲನೆಯಲ್ಲಿ ಎಐ ಪಾತ್ರ ದೊಡ್ಡದು.
ವಾಣಿಜ್ಯ ಬಳಕೆಯಲ್ಲಿ ಎಐ: ಬ್ಯಾಂಕಿಂಗ್, ಹೂಡಿಕೆ, ರಿಯಲ್ ಎಸ್ಟೇಟ್‌ನಂತಹ ಹಣಕಾಸು ವ್ಯವಹಾರದ ಕ್ಷೇತ್ರಗಳಲ್ಲಿ ಕೂಡ ವಿವಿಧ ಲೆಕ್ಕಾಚಾರಗಳಿಗೆ ಎಐ ಬಳಕೆಯಾಗುತ್ತಿದೆ. ಸುಲಭ ಮತ್ತು ಸರಳ ಪರಿಹಾರೋಪಾಯಗಳನ್ನು ಎಐ ನೀಡುವ ಮೂಲಕ ಮಾನವ ಶ್ರಮವನ್ನು ಕಡಿಮೆ ಮಾಡಿದೆ.
ಪೂರೈಕೆ ಮತ್ತು ಉತ್ಪಾದನೆಯಲ್ಲಿ ಎಐ: ಬಹುತೇಕ ಫ್ಯಾಕ್ಟರಿಗಳಲ್ಲಿ ಇಂದು ಪ್ರತಿಹಂತದ ಕೆಲಸದಲ್ಲೂ ಸ್ವಯಂಚಾಲಿತ ತಂತ್ರಜ್ಞಾನ, ಯಂತ್ರಗಳನ್ನು ಬಳಸಲಾಗುತ್ತಿದೆ. ಉತ್ಪಾದನೆ, ಪೂರೈಕೆ ಸರಣಿಯಲ್ಲಿ ಎಐ ಆಧಾರಿತ ತಾಂತ್ರಿಕ ವೈಶಿಷ್ಟ್ಯ ಬಳಸಿರುವುದರಿಂದ, ಹೆಚ್ಚಿನ ಸರಕು ಉತ್ಪಾದನೆ ಸಾಧ್ಯವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಶೀಘ್ರ ಪೂರೈಕೆ ಒದಗಿಸಲಾಗುತ್ತದೆ.
ಮನರಂಜನೆ ಮತ್ತು ಕಂಟೆಂಟ್‌ನಲ್ಲಿ ಎಐ: ಒಟಿಟಿ ವೇದಿಕೆಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿವೆ. ನೆಟ್‌ಫ್ಲಿಕ್ಸ್, ಯೂಟ್ಯೂಬ್, ಸ್ಪಾಟಿಫೈನಂತಹ ಸೇವೆಗಳಲ್ಲಿ ಎಐ ಆಧಾರಿತ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ ಬೇಕಾದ ರೀತಿಯ ಮನರಂಜನೆ, ಸೇವೆ ನೀಡಲು ಸಾಧ್ಯವಾಗಿದೆ. ಸಿನಿಮಾ, ಮ್ಯೂಸಿಕ್, ಇ ಬುಕ್ಸ್, ಡಿಜಿಟಲ್ ವೇದಿಕೆಗಳ ಮೂಲಕ ಜನರಿಗೆ ಎಲ್ಲ ರೀತಿಯ ಆಡಿಯೋ, ವಿಡಿಯೊ, ಮಲ್ಟಿಮೀಡಿಯಾ ಕಂಟೆಂಟ್ ದೊರೆಯುತ್ತಿದೆ.
ಎಐ ಬಳಕೆಯಲ್ಲಿನ ಸವಾಲು ಮತ್ತು ಸಮಸ್ಯೆಗಳು: ವಿವಿಧ ಕ್ಷೇತ್ರಗಳಲ್ಲಿ ಎಐ ಬಳಕೆಯಿಂದ ಕಳೆದ ಐದು ವರ್ಷಗಳಲ್ಲಿ ಜನಜೀವನ ಸುಲಭವಾಗಿದೆ ನಿಜ. ಆದರೆ ಅದರ ಜತೆಗೇ, ಹೊಸ ಸವಾಲು, ಸಾಧ್ಯತೆಗಳು ಕೂಡ ಸೃಷ್ಟಿಯಾಗಿವೆ. ಒಳಿತಿಗಷ್ಟೇ ಬಳಸಬೇಕಾದ ತಂತ್ರಜ್ಞಾನವನ್ನು ಹಲವರು ದುಷ್ಕೃತ್ಯಕ್ಕೆ ಬಳಸುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನೈತಿಕ ಸಮಸ್ಯೆ ಮತ್ತು ದುರುಪಯೋಗದ ಸವಾಲು ಕೂಡ ನಮ್ಮ ಮುಂದಿದೆ.
ಸೈಬರ್ ಸೆಕ್ಯುರಿಟಿಯಲ್ಲಿ ಎಐ: ಎಐ ಮೂಲಕ ದೊರೆತ ಸೌಕರ್ಯಗಳನ್ನು ದುರುಪಯೋಗಪಡಿಸುವ ಘಟನೆ ನಡೆಯುತ್ತಿರುವಾಗ, ಸೈಬರ್ ಸೆಕ್ಯುರಿಟಿ ಎನ್ನುವುದು ಹೊಸ ಸವಾಲಾಗಿದೆ. ಹೀಗಾಗಿ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು, ಸೈಬರ್ ಬೆದರಿಕೆ ಮತ್ತು ದಾಳಿಗಳನ್ನು ಹಿಮ್ಮೆಟ್ಟಿಸುವುದಕ್ಕೆ ಕೂಡ ಎಐ ನೆರವಾಗುತ್ತಿದೆ.
ಒಳಿತಿಗೆ ಬಳಸೋಣ: ಎಐ ತಂತ್ರಜ್ಞಾನ ಎಷ್ಟು ಮುಂದುವರಿದರೂ, ಹಲವರು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಸಮಾಜಕ್ಕೆ ಅದರಿಂದ ಕೆಡುಕೂ ಇದೆ. ಹಾಗಾಗಿ ಒಳಿತಿನ ಬಗ್ಗೆ ಹೆಚ್ಚು ಜನರಿಗೆ ತಿಳಿಸುವುದು ಮತ್ತು ದುರುಪಯೋಗದ ಬಗ್ಗೆ ಅರಿವು ಮೂಡಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ಜನಾಂಗಕ್ಕೆ ಉತ್ತಮ ಜೀವನ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
kannada.hindustantimes.com/astrology/yearly-horoscope