ಐಫೋನ್‌ನಲ್ಲಿ ನಿಧಾನಗತಿಯ ಬ್ರೌಸಿಂಗ್‌ನಿಂದ ಬೇಸತ್ತಿದ್ದೀರಾ? ಕ್ಯಾಶೆ ತೆರವುಗೊಳಿಸಲು ಹಂತ ಹಂತದ ಮಾಹಿತಿ ಇಲ್ಲಿದೆ
ಐಫೋನ್‌ನಲ್ಲಿ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು ಕ್ಯಾಶೆ ಅನ್ನು ತೆರವುಗೊಳಿಸುವುದು ಪ್ರಮುಖ ವಿಧಾನ. ಇದು ಹೇಗೆ ಎಂಬ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ. ಇದರಿಂದ ನಿಮ್ಮ ಐಫೋನ್ ಬಳಕೆಯ ಅನುಭವ ಸುಧಾರಿಸುತ್ತದೆ.

ನೀವು ಐಫೋನ್ ಬಳಕೆದಾರರಾಗಿ ಅದನ್ನು ಬ್ರೌಸಿಂಗ್‌ಗಾಗಿ ಬಳಸುವವರಾಗಿದ್ದರೆ, ಕೆಲವೊಮ್ಮೆ ಸುದೀರ್ಘ ಲೋಡಿಂಗ್ ಸಮಯ ಅಥವಾ ನಿಧಾನವಾದ ಬ್ರೌಸಿಂಗ್ ಅನುಭವ ನಿಮಗೂ ಆಗಿರಬಹುದು. ಅನೇಕ ಐಫೋನ್ ಬಳಕೆದಾರರು ಸಣ್ಣ ಸಣ್ಣ ಗೊಂದಲಗಳಿಗೆ ಅಥವಾ ಇತರ ಅಗತ್ಯಗಳಿಗೆ ವೆಬ್ ಬ್ರೌಸರ್‌ಗಳನ್ನು ಬಳಸುತ್ತಾರೆ. ಐಫೋನ್‌ನಲ್ಲಿ ಸಫಾರಿ ಸಾಮಾನ್ಯವಾಗಿ ಬಳಸುವ ವೆಬ್ ಬ್ರೌಸರ್. ನೀವು ಕೂಡಾ ಹಲವು ಬಾರಿ ಇಂಥಾ ಸಮಸ್ಯೆಯನ್ನು ಎದುರಿಸಿದ್ದರೆ ಅಥವಾ ಈಗಲೂ ಎದುರಿಸುತ್ತಿದ್ದರೆ, ನಿಮ್ಮ ಬ್ರೌಸಿಂಗ್ ಕ್ಯಾಶೆ (cache) ಅನ್ನು ತೆರವುಗೊಳಿಸಲು ಮತ್ತು ನಿಮ್ಮ ಐಫೋನ್ ಸರಾಗವಾಗಿ ಕೆಲಸ ಮಾಡುವಂತಾಗಲು ಸರಳ ಮಾರ್ಗಗಳಿವೆ.
ಕ್ಯಾಶೆ (cache) ಅನ್ನು ಕ್ಲಿಯರ್ ಮಾಡುವ ಮೂಲಕ ಬ್ರೌಸಿಂಗ್ ಅನುಭವವನ್ನು ವೇಗಗೊಳಿಸಬಹುದು. ಅಲ್ಲದೆ ಲಾಗಿನ್ ವಿವರಗಳು, ಆದ್ಯತೆಗಳು ಸೇರಿದಂತೆ ನಿಮ್ಮ ಬ್ರೌಸರ್‌ನಲ್ಲಿ ಸಂಗ್ರಹಿಸಿದ ಮಾಹಿತಿ ಕೂಡಾ ಸ್ವಚ್ಛವಾಗುತ್ತದೆ. ಕ್ಯಾಶೆ ತೆರವುಗೊಳಿಸುವ ಮೂಲಕ ಸಂಪೂರ್ಣ ಬ್ರೌಸಿಂಗ್ ಅನುಭವ ಹೊಸತರಂತೆ ಆಗಬಹುದು. ನೀವು ಆಗಾಗ ಭೇಟಿ ನೀಡುವ ವೆಬ್‌ಸೈಟ್‌ಗಳು ಸಹ ನಿಮ್ಮ ಕೆಲಸವನ್ನು ವೇಗಗೊಳಿಸುತ್ತದೆ. ನಿಮ್ಮ ಒಟ್ಟಾರೆ ಬ್ರೌಸಿಂಗ್ ಅನುಭವವನ್ನು ಸುಧಾರಿಸುತ್ತದೆ. ಹೀಗಾಗಿ ಐಫೋನ್‌ನಲ್ಲಿ ಕ್ಯಾಶೆ ಅನ್ನು ಹೇಗೆ ತೆರವುಗೊಳಿಸಬಹುದು ಎಂಬುದನ್ನು ತಿಳಿಯಿರಿ.
ಐಫೋನ್‌ನಲ್ಲಿ ಕ್ಯಾಶೆ ತೆರವುಗೊಳಿಸುವುದು ಹೇಗೆ?
- ಹಂತ 1: ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್ ತೆರೆಯಿರಿ.
- ಹಂತ 2: ಇದರಲ್ಲಿ 'Apps' ಅನ್ನು ಹುಡುಕಿ, ಅದರಲ್ಲಿ 'Safari ಆಯ್ಕೆ ಮೇಲೆ ಟ್ಯಾಪ್ ಮಾಡಿ.
- ಹಂತ 3: ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'History and Website Data' ಆಯ್ಕೆಗೆ ಹೋಗಿ.
- ಹಂತ 4: ಇಲ್ಲಿ 'Clear History and Website Data' ಮೇಲೆ ಟ್ಯಾಪ್ ಮಾಡಿ.
- ಹಂತ 5: ಇಲ್ಲಿ ನಿಮ್ಮ ಆಯ್ಕೆಯ ಅನುಸಾರ ಕೊನೆಯ ಗಂಟೆ, ಇಂದು, ನಿನ್ನೆ, ಅಥವಾ all history ಅನ್ನು ಆಯ್ಕೆ ಮಾಡಿ.
ಈಗ ನಿಮ್ಮ ಫೋನ್‌ನಲ್ಲಿ ಬ್ರೌಸಿಂಗ್ ಅನುಭವ ಸುಧಾರಿಸುತ್ತದೆ.
ನೀವೇನಾದರೂ ಬ್ರೌಸಿಂಗ್‌ಗೆ ಸಫಾರಿ ಬದಲಿಗೆ ಗೂಗಲ್ ಕ್ರೋಮ್ ಅನ್ನು ಅವಲಂಬಿಸಿದ್ದರೆ, ಕ್ರೋಮ್ ಅಪ್ಲಿಕೇಶನ್‌ನ ಕ್ಯಾಶೆ ತೆರವುಗೊಳಿಸಲು ಕೆಳಗಿನ ಸಲಹೆ ಅನುಸರಿಸಿ.
- ಹಂತ 1: ನಿಮ್ಮ ಐಫೋಮ್‌ನಲ್ಲಿ ಕ್ರೋಮ್ (Chrome) ಅಪ್ಲಿಕೇಶನ್ ತೆರೆಯಿರಿ
- ಹಂತ 2: ಬಲಭಾಗದಲ್ಲಿ ಕೆಳಗೆ ಇರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಹಂತ 3: 'Settings' ಮೇಲೆ ಟ್ಯಾಪ್ ಮಾಡಿ, ಇಲ್ಲಿ 'Privacy and security' ಮೇಲೆ ಟ್ಯಾಪ್ ಮಾಡಿ.
- ಹಂತ 4: ಇಲ್ಲಿ 'Delete browsing data' ಮೇಲೆ ಟ್ಯಾಪ್ ಮಾಡಿ. ನಿಮ್ಮ ಆಯ್ಕೆಯ ಸಮಯವನ್ನು ಆಯ್ಕೆ ಮಾಡಿ.
- ಹಂತ 5: ನೀವು ‘ಕೊನೆಯ 15 ನಿಮಿಷಗಳು’, ‘ಕೊನೆಯ 7 ದಿನಗಳು’ ಅಥವಾ ಆಲ್ ಟೈಮ್ ಆಯ್ಕೆ ಮಾಡಬಹುದು.
- ಹಂತ 6: ಇಲ್ಲಿ ಇತಿಹಾಸ, ಟ್ಯಾಬ್‌ಗಳು, ಕುಕೀಗಳು ಮತ್ತು ಬ್ರೌಸಿಂಗ್ ಡೇಟಾವನ್ನು ಆಯ್ಕೆ ಮಾಡಿ. ಪಾಸ್ ವರ್ಡ್‌ಗಳನ್ನು ಉಳಿಸುವುದು ಅಥವಾ ಆಟೋ ಫಿಲ್ ಡೇಟಾವನ್ನು ಕ್ಲಿಕ್ ಮಾಡಬೇಡಿ.
ಕ್ಯಾಶೆ ತೆರವುಗೊಳಿಸಿದರೆ ಫೋನ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ?
- ನಿಮ್ಮ ಐಫೋನ್‌ನಲ್ಲಿ ಸ್ಥಳೀಯವಾಗಿ ಸಂಗ್ರಹಿಸಿದ ಬಳಕೆದಾರರ ಡೇಟಾ ಡಿಲೀಟ್ ಆಗುತ್ತದೆ. ಇದು ಸ್ಟೋರೇಜ್ ಮತ್ತು ಲೋಡಿಂಗ್ ವೇಗವನ್ನು ಸುಧಾರಿಸುತ್ತದೆ.
- ನೀವು ಬಳಸುವ ವೆಬ್‌ಸೈಟ್‌ಗಳು ಕಸ್ಟಮೈಸೇಷನ್‌ಗಳು ಮತ್ತು ಬಳಕೆದಾರರ ಆದ್ಯತೆಗಳನ್ನು ಸಂಗ್ರಹಿಸುತ್ತದೆ. ಅವುಗಳು ಸಹ ಡಿಲೀಟ್ ಆಗುತ್ತವೆ.
- ಹಳೆಯ ಅಥವಾ ದೋಷಪೂರಿತ ಫೈಲ್‌ಗಳನ್ನು ತೆಗೆದುಹಾಕಬಹುದು.
- ಒಟ್ಟಾರೆಯಾಗಿ, ಇದು ಬಳಕೆದಾರರ ಗೌಪ್ಯತೆಯನ್ನು ಸುಧಾರಿಸಿ, ಬ್ರೌಸಿಂಗ್ ಅನುಭವವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ | ಹೋಂಡಾ ರೆಬೆಲ್ 500: ಭಾರತದಲ್ಲಿ ಬಿಡುಗಡೆಯಾಯ್ತು 5. 12 ಲಕ್ಷ ರೂ ಬೆಲೆಯ ಪ್ರೀಮಿಯಂ ಕ್ರೂಸರ್ ಬೈಕ್