ಬರೋಬ್ಬರಿ 300W ಫಾಸ್ಟ್ ಚಾರ್ಜರ್, 5 ನಿಮಿಷದಲ್ಲಿ ಫುಲ್ ಚಾರ್ಜ್: ಸಂಚಲನ ಸೃಷ್ಟಿಸಿದ ರಿಯಲ್ ಮಿಯ ಹೊಸ ಚಾರ್ಜರ್, ಮೊಬೈಲ್ ಫೋನ್ ಪ್ರಿಯರು ಖುಷ್-technology news 300w fast charger realme launch new 300w fast charger world fastest charging phone vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬರೋಬ್ಬರಿ 300w ಫಾಸ್ಟ್ ಚಾರ್ಜರ್, 5 ನಿಮಿಷದಲ್ಲಿ ಫುಲ್ ಚಾರ್ಜ್: ಸಂಚಲನ ಸೃಷ್ಟಿಸಿದ ರಿಯಲ್ ಮಿಯ ಹೊಸ ಚಾರ್ಜರ್, ಮೊಬೈಲ್ ಫೋನ್ ಪ್ರಿಯರು ಖುಷ್

ಬರೋಬ್ಬರಿ 300W ಫಾಸ್ಟ್ ಚಾರ್ಜರ್, 5 ನಿಮಿಷದಲ್ಲಿ ಫುಲ್ ಚಾರ್ಜ್: ಸಂಚಲನ ಸೃಷ್ಟಿಸಿದ ರಿಯಲ್ ಮಿಯ ಹೊಸ ಚಾರ್ಜರ್, ಮೊಬೈಲ್ ಫೋನ್ ಪ್ರಿಯರು ಖುಷ್

Technology News: ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ಅನ್ನು ರಿಯಲ್ ಮಿ ಬಿಡುಗಡೆ ಮಾಡಲು ಸಜ್ಜಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.ಇದು ಇತರ ವೇಗದ ಚಾರ್ಜರ್‌ಗಳಿಗಿಂತ ಭಿನ್ನವಾಗಿರುತ್ತದೆ.ಇದು ಬರೋಬ್ಬರಿ300Wವೇಗದ ಚಾರ್ಜರ್ ಆಗಿರುತ್ತದೆ ಎಂದು ಹೇಳಲಾಗಿದೆ. (ವರದಿ:ವಿನಯ್ ಭಟ್)

ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ಅನ್ನು ರಿಯಲ್ ಮಿ ಬಿಡುಗಡೆ ಮಾಡಲು ಸಜ್ಜಾಗಿದೆ.
ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ಅನ್ನು ರಿಯಲ್ ಮಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಮಾರುಕಟ್ಟೆಯಲ್ಲಿಂದು ಫಾಸ್ಟ್ ಚಾರ್ಜರ್​ಗೆ ಭರ್ಜರಿ ಬೇಡಿಕೆ ಇದೆ. ಬಿಡುವಿಲ್ಲದ ಕೆಲಸದ ಮಧ್ಯೆ ಒಂದು-ಎರಡು ಗಂಟೆ ಕಾದು ಕುಳಿತು ಚಾರ್ಜ್ ಮಾಡವಷ್ಟು ತಾಳ್ಮೆ ಯಾರಿಗೂ ಇಲ್ಲ. ಹೀಗಾಗಿ ಟೆಕ್ ಕಂಪನಿಗಳು ಕೂಡ ವೇಗದ ಚಾರ್ಜರ್​ನೊಂದಿಗೆ ಸ್ಮಾರ್ಟ್​ಫೋನ್ ಅನ್ನು ನೀಡುತ್ತಿವೆ. ಆದರೀಗ ದಾಖಲೆ ಎಂಬಂತೆ ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ಅನ್ನು ರಿಯಲ್ ಮಿ ಬಿಡುಗಡೆ ಮಾಡಲು ಸಜ್ಜಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಇತರ ವೇಗದ ಚಾರ್ಜರ್‌ಗಳಿಗಿಂತ ಭಿನ್ನವಾಗಿರುತ್ತದೆ. ಇದು ಬರೋಬ್ಬರಿ 300W ವೇಗದ ಚಾರ್ಜರ್ ಆಗಿರುತ್ತದೆ ಎಂದು ಹೇಳಲಾಗಿದೆ.

300W ವೇಗದ ಚಾರ್ಜರ್ ಮೂಲಕ ಫೋನ್ ಅನ್ನು ಕ್ಷಣಾರ್ಧದಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಚೀನಾದಲ್ಲಿ ನಡೆಯಲಿರುವ ವಾರ್ಷಿಕ 828 ಫನ್ ಫೆಸ್ಟಿವಲ್‌ನಲ್ಲಿ ಇದನ್ನು ಪ್ರಸ್ತುತಪಡಿಸಲಾಗುತ್ತದೆ. ಹೊಸ ವೇಗದ ಚಾರ್ಜಿಂಗ್ ತಂತ್ರಜ್ಞಾನದ ಸಹಾಯದಿಂದ, ಫೋನ್ ಅನ್ನು 3 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಫೋನ್ ಸಂಪೂರ್ಣವಾಗಿ ಚಾರ್ಜ್ ಆಗಲು 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಈ ಹಿಂದೆ, 300W ಫಾಸ್ಟ್ ಚಾರ್ಜರ್ ಅನ್ನು ಕಳೆದ ವರ್ಷ ಶವೋಮಿ ಒಡೆತನದ ರೆಡ್‌ಮಿ ಬಿಡುಗಡೆ ಮಾಡಿತ್ತು. ಇದರ ನಂತರ, 240W ವೇಗದ ಚಾರ್ಜರ್ ಅನ್ನು ರಿಯಲ್ ಮಿ ಪರಿಚಯಿಸಿತು. ಈಗ ಕಂಪನಿಯು 300W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ಪ್ರಸ್ತುತ, ಹೆಚ್ಚಾಗಿ 120W ವೇಗದ ಚಾರ್ಜರ್ ಅನ್ನು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಪರಿಚಯಿಸುತ್ತಿವೆ. ಇದು ಇಂದಿನ ಪ್ರಮಾಣಿತ ಚಾರ್ಜರ್ ಆಗಿ ಮಾರ್ಪಟ್ಟಿದೆ. ರಿಯಲ್ ಮಿ ತನ್ನ ಜನಪ್ರಿಯ ರಿಯಲ್ ಮಿ ಜಿಟಿ ನಿಯೊ 5 ಸ್ಮಾರ್ಟ್‌ಫೋನ್‌ನೊಂದಿಗೆ 240W ವೇಗದ ಚಾರ್ಜರ್ ಅನ್ನು ಒದಗಿಸಿದೆ. ಒನ್​ಪ್ಲಸ್ 10T ಸ್ಮಾರ್ಟ್‌ಫೋನ್‌ನೊಂದಿಗೆ 150W ವೇಗದ ಚಾರ್ಜಿಂಗ್ ಬರುತ್ತದೆ. ಅದೇ ಐಕ್ಯೂ 10 ಪ್ರೊ ಸ್ಮಾರ್ಟ್‌ಫೋನ್ ಖರೀದಿಸಿದರೆ 200W ವೇಗದ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರಿಯಲ್ ಮಿ 300W ವೇಗದ ಚಾರ್ಜಿಂಗ್‌ನೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ.

ವೇಗದ ಚಾರ್ಜಿಂಗ್‌ನಲ್ಲಿ ಹಲವು ಸವಾಲುಗಳು ಕೂಡ ಇವೆ. ಬ್ಯಾಟರಿ ಆರೋಗ್ಯ ಹೇಗೆ ಎಂಬ ಚರ್ಚೆ ಹುಟ್ಟುತ್ತದೆ. ವಾಸ್ತವವಾಗಿ, ಬ್ರ್ಯಾಂಡ್‌ನ ಮುಂದಿರುವ ಸವಾಲು ಎಂದರೆ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡುವಾಗ ಬ್ಯಾಟರಿಗೆ ಹಾನಿಯಾಗದ ರೀತಿಯಲ್ಲಿ ತಯಾರಿಸುವುದು. ವೇಗದ ಚಾರ್ಜರ್ ಫೋನ್‌ನ ಬ್ಯಾಟರಿಯನ್ನು ತ್ವರಿತವಾಗಿ ಕ್ಷೀಣಿಸಲು ಕಾರಣವಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ, ರಿಯಲ್ ಮಿ ಪರಿಚಯಿಸುವ ಫೋನ್‌ನ ಬ್ಯಾಟರಿಯನ್ನು ವೇಗದ ಚಾರ್ಜರ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆಯಂತೆ.