ವಿಮಾನದ ಟಾಯ್ಲೆಟ್‌ ಬಗ್ಗೆ ವಿವರ: ಮಾನವ ತ್ಯಾಜ್ಯ ಆಕಾಶದಿಂದ ನೆಲಕ್ಕೆ ಬೀಳೋದಿಲ್ಲ, ಪೈಲೆಟ್‌ಗಳಿಗೆ ಸುಸ್ಸು ಬಂದ್ರೆ ಏನ್ಮಾಡ್ತಾರೆ?
ಕನ್ನಡ ಸುದ್ದಿ  /  ಜೀವನಶೈಲಿ  /  ವಿಮಾನದ ಟಾಯ್ಲೆಟ್‌ ಬಗ್ಗೆ ವಿವರ: ಮಾನವ ತ್ಯಾಜ್ಯ ಆಕಾಶದಿಂದ ನೆಲಕ್ಕೆ ಬೀಳೋದಿಲ್ಲ, ಪೈಲೆಟ್‌ಗಳಿಗೆ ಸುಸ್ಸು ಬಂದ್ರೆ ಏನ್ಮಾಡ್ತಾರೆ?

ವಿಮಾನದ ಟಾಯ್ಲೆಟ್‌ ಬಗ್ಗೆ ವಿವರ: ಮಾನವ ತ್ಯಾಜ್ಯ ಆಕಾಶದಿಂದ ನೆಲಕ್ಕೆ ಬೀಳೋದಿಲ್ಲ, ಪೈಲೆಟ್‌ಗಳಿಗೆ ಸುಸ್ಸು ಬಂದ್ರೆ ಏನ್ಮಾಡ್ತಾರೆ?

ವಿಮಾನದ ಟಾಯ್ಲೆಟ್‌ ಹೇಗೆ ಕೆಲಸ ಮಾಡುತ್ತದೆ? ಇದು ಭೌತಶಾಸ್ತ್ರ ಮತ್ತು ಎಂಜಿನಿಯರಿಂಗ್‌ ಸಂಯೋಜನೆಯ ಅದ್ಭುತ. ವಿಮಾನದಿಂದ ಮಾನವ ತ್ಯಾಜ್ಯ ಹೊರಕ್ಕೆ ಬೀಳುವುದಿಲ್ಲ. ಅವಸರವಿದ್ದಾಗ ಪೈಲೆಟ್‌ಗಳು ಪ್ರಯಾಣಿಕರ ಕಾಮನ್‌ ಟಾಯ್ಲೆಟ್‌ ಬಳಸಬಹುದು. ಅದಕ್ಕೆ ಸಂಬಂದಪಟ್ಟಂತೆ ಪ್ರೊಟೊಕಾಲ್‌ಗಳು ಇರುತ್ತವೆ.

ಎಂಜಿನಿಯರಿಂಗ್‌ ಮತ್ತು ಭೌತಶಾಸ್ತ್ರದ ಬುದ್ಧಿವಂತ ಸಂಯೋಜನೆಯನ್ನು ಬಳಸಿಕೊಂಡು ವಿಮಾನದ ಶೌಚಾಲಯಗಳು ಕಾರ್ಯನಿರ್ವಹಿಸುತ್ತವೆ.
ಎಂಜಿನಿಯರಿಂಗ್‌ ಮತ್ತು ಭೌತಶಾಸ್ತ್ರದ ಬುದ್ಧಿವಂತ ಸಂಯೋಜನೆಯನ್ನು ಬಳಸಿಕೊಂಡು ವಿಮಾನದ ಶೌಚಾಲಯಗಳು ಕಾರ್ಯನಿರ್ವಹಿಸುತ್ತವೆ. (Wikipedia)

ಭಾರತೀಯ ರೈಲ್ವೆಯಲ್ಲಿ ಟಾಯ್ಲೆಟ್‌ ಬಳಸುವವರಿಗೆ ಮಾನವ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ ಎಂದು ತಿಳಿದಿರುತ್ತದೆ. ಇದೇ ಕಾರಣಕ್ಕೆ ರೈಲ್ವೆ ಹಳಿಯನ್ನು ಜಗತ್ತಿನ ದೊಡ್ಡ ಶೌಚಾಲಯ ಎಂದು ಕರೆಯಲಾಗುತ್ತದೆ. ಈಗಿನ ಕೆಲವು ಬೋಗಿಗಳಲ್ಲಿ ಮಾನವ ತ್ಯಾಜ್ಯವನ್ನು ಸಂಗ್ರಹಿಸಿ ಬಳಿಕ ವಿಲೇವಾರಿ ಮಾಡುವ ವ್ಯವಸ್ಥೆ ಇರಬಹುದು. ಅಂದಹಾಗೆ, ವಿಮಾನದ ಟಾಯ್ಲೆಟ್‌ ಹೇಗೆ ಇರುತ್ತದೆ ಎಂಬ ಕೌತುಕ ಎಲ್ಲರಲ್ಲೂ ಇರುತ್ತದೆ. ಆಕಾಶದಲ್ಲಿ ಭೂಮಿಯಿಂದ ಎಷ್ಟೋ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದಲ್ಲಿ ಟಾಯ್ಲೆಟ್‌ ಬಳಸಿದಾಗ ಕಾಣದಂತೆ ಮಾಯುವಾಗ ಆ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರುತ್ತದೆ. ವಿಮಾನ ಪ್ರಯಾಣ ಮಾಡದವರು ಕೂಡ ಆಕಾಶದಲ್ಲಿ ವಿಮಾನ ಹಾರುತ್ತಿದ್ದರೆ ತಲೆ ಮೇಲೆತ್ತಿ ನೋಡಲು ಹಿಂಜರಿಯಬಹುದು. ಏಕೆಂದರೆ, ವಿಮಾನದ ಮೇಲಿನಿಂದ ಯಾರಾದರೂ ಒಂದೆರಡು ಮಾಡಬಹುದು ಎಂಬ ಮಿಥ್ಯೆ ಇದಕ್ಕೆ ಕಾರಣ. ನೆನಪಿಡಿ, ವಿಮಾನದ ಟಾಯ್ಲೆಟ್‌ ರೈಲಿನ ಟಾಯ್ಲೆಟ್‌ನಂತಲ್ಲ. ವಿಮಾನದ ಟಾಯ್ಲೆಟ್‌ ಎಂಜಿನಿಯರಿಂಗ್‌ ಮತ್ತು ಭೌತಶಾಸ್ತ್ರದ ಸಂಯೋಜನೆಯಿಂದ ಮಾಡಿರುವ ಅದ್ಭುತ ತಂತ್ರಜ್ಞಾನ ಎಂದರೂ ತಪ್ಪಾಗದು.

ವಿಮಾನದ ಟಾಯ್ಲೆಟ್‌ ಹೇಗೆ ಕೆಲಸ ಮಾಡುತ್ತದೆ?

ವಿಮಾನದ ಟಾಯ್ಲೆಟ್‌ ಬಳಸಿದ್ದರೆ ಅದರ ಫ್ಲಶ್‌ ಸೌಂಡ್‌ ಗಮನಿಸಿರಬಹುದು. ಎಂಜಿನಿಯರಿಂಗ್‌ ಮತ್ತು ಭೌತಶಾಸ್ತ್ರದ ಬುದ್ಧಿವಂತ ಸಂಯೋಜನೆಯನ್ನು ಬಳಸಿಕೊಂಡು ವಿಮಾನದ ಶೌಚಾಲಯಗಳು ಕಾರ್ಯನಿರ್ವಹಿಸುತ್ತವೆ. ವಿಮಾನದ ಪ್ರಯಾಣಿಸುತ್ತಿರುವ ಪ್ರಯಾಣಿಕರು ಟಾಯ್ಲೆಟ್‌ ಬಳಸಿ ಫ್ಲಶ್‌ ಮಾಡಿದಾಗ ಅದರಲ್ಲಿರುವ ನಿರ್ವಾತ ವ್ಯವಸ್ಥೆಯು ಆ ತ್ಯಾಜ್ಯವನ್ನು ನಿರ್ದಿಷ್ಟ ಟ್ಯಾಂಕ್‌ಗೆ ಕಳುಹಿಸುತ್ತದೆ. ಈ ನಿರ್ವಾತ ವ್ಯವಸ್ಥೆಯ ಮೂಲಕ ಸ್ಥಳವಕಾಶ ಹೆಚ್ಚುತ್ತದೆ. ವಾಸನೆ ಹೊರಕ್ಕೆ ಬರದಂತೆ ನೋಡಿಕೊಳ್ಳುತ್ತದೆ. ಈ ನಿರ್ವಾತ ವ್ಯವಸ್ಥೆಯನ್ನು ಹೈಸ್ಪೀಡ್‌ ಟರ್ಬೈನ್‌ ಸಂಯೋಜನೆಯಿಂದ ರಚಿಸಲಾಗಿದೆಯಂತೆ. ತ್ಯಾಜ್ಯ ನಿರ್ದಿಷ್ಟ ತೊಟ್ಟಿಗೆ ತಲುಪುವ ಮೊದಲು ಹೈ ಸ್ಪೀಡ್‌ ಟರ್ಬೈನ್‌ನಲ್ಲಿ ತ್ಯಾಜ್ಯವು ಇನ್ನಷ್ಟು ಪುಡಿಪುಡಿಯಾಗುತ್ತದೆ. ಈ ರೀತಿ ಹೋಲ್ಡಿಂಗ್‌ ತ್ಯಾಜ್ಯವನ್ನು ವಿಮಾನ ಇಳಿಯುವ ತನಕ ಸಂಗ್ರಹಿಸಿಡಲಾಗುತ್ತದೆ. ಎಲ್ಲೂ ಬಾನ ದಾರಿಯಲ್ಲಿ ಹೊರಕ್ಕೆ ಬಿಡಲಾಗುವುದಿಲ್ಲ. ಹೀಗಾಗಿ, ತಲೆಮೇಲೆ ಹತ್ತಿರದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದರೆ ಮೇಲೆ ನೋಡಲು ಹಿಂಜರಿಯಬೇಡಿ.

ವಿಮಾನ ಲ್ಯಾಂಡ್‌ ಆದ ಬಳಿಕ ಸಂಬಂಧಪಟ್ಟ ಸಿಬ್ಬಂದಿಗಳು ಟ್ಯಾಂಕ್‌ ಅನ್ನು ಕೆಳಗೆ ಇಳಿಸಿ ವಿಲೇವಾರಿ ಮಾಡುತ್ತಾರೆ. ಸಾಮಾನ್ಯವಾಗಿ ಈ ತ್ಯಾಜ್ಯ ತೊಟ್ಟಿಯು ವಿಮಾನದ ಹಿಂಬದಿಯಲ್ಲಿ ಇರುತ್ತದೆ. ಕೆಲವು ವಿಮಾನಗಳ ಮುಂಭಾಗದಲ್ಲಿಯೂ ಇರುತ್ತದೆ. ವಾಕ್ಯುಂ ಕ್ಲೀನರ್‌ ವ್ಯವಸ್ಥೆಯಂತೆ ತ್ಯಾಜ್ಯವನ್ನು ಸೆಳೆದುಕೊಳ್ಳುವ ಸಾಮರ್ಥ್ಯ ವಿಮಾನದ ಟಾಯ್ಲೆಟ್‌ಗೆ ಇರುತ್ತದೆ. ಅಂದಹಾಗೆ, ವಿಮಾನದ ಟಾಯ್ಲೆಟ್‌ ಟೆಫ್ಲೊನ್‌ ಕೋಟೇಡ್‌ ಆಗಿರುತ್ತದೆ. ಹೀಗಾಗಿ, ಅದರಲ್ಲಿ ಏನೂ ಅಂಟಿಕೊಳ್ಳುವುದಿಲ್ಲ.

ವಿಮಾನದಲ್ಲಿ ಎಷ್ಟು ಟಾಯ್ಲೆಟ್‌ಗಳು ಇರುತ್ತವೆ?

ನಿಯಮಗಳ ಪ್ರಕಾರ ಪ್ರತಿ 50 ಪ್ರಯಾಣಿಕರಿಗೆ 1 ಟಾಯ್ಲೆಟ್‌ ಇರಬೇಕು. ಕೆಲವೊಂದು ವಿಮಾನಗಳಲ್ಲಿ ಕನಿಷ್ಠ ಮಿತಿಗಿಂತ ಹೆಚ್ಚು ಟಾಯ್ಲೆಟ್‌ಗಳು ಇರುತ್ತವೆ. ಫಸ್ಟ್‌ ಕ್ಲಾಸ್‌ ವಿಮಾನ ಪ್ರಯಾಣಿಕರಿಗೆ ಹಲವು ಟಾಯ್ಲೆಟ್‌ಗಳು ಇರಬಹುದು. ಸಣ್ಣ ಮತ್ತು ಪ್ರಾದೇಶಿಕ ಹಾರಾಟದ ವಿಮಾನಗಳಲ್ಲಿ ಟಾಯ್ಲೆಟ್‌ ಇಲ್ಲದೆಯೂ ಇರಬಹುದು.

ವಿಮಾನದ ಟಾಯ್ಲೆಟ್‌ ಎಷ್ಟು ನೀರು ಬಳಸುತ್ತದೆ?

ನಮ್ಮ ಮನೆಗಳಲ್ಲಿ ಬಳಸುವ ಟಾಯ್ಲೆಟ್‌ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ನೀರನ್ನು ವಿಮಾನದ ಟಾಯ್ಲೆಟ್‌ಗಳು ಬಳಸುತ್ತವೆ. ಹೆಚ್ಚೆಂದರೆ ಒಂದೆರಡು ಲೀಟರ್‌ ನೀರು ಬಳಸಬಹುದು.

ವಿಮಾನದ ಟಾಯ್ಲೆಟ್‌ ಎಷ್ಟು ದೊಡ್ಡದಾಗಿರುತ್ತದೆ?

ವಿಮಾನದ ಟಾಯ್ಲೆಟ್‌ಗಳು ಸಾಮಾನ್ಯವಾಗಿ 22.4 ಇಂಚಿನಷ್ಟು ದೊಡ್ಡದಾಗಿರುತ್ತದೆ.

ಆಕಾಶದಲ್ಲಿ ಹಾರಾಡುತ್ತಿರುವಾಗ ವಿಮಾನದ ಟಾಯ್ಲೆಟ್‌ನಿಂದ ಮಾನವ ತ್ಯಾಜ್ಯ ಹೊರಕ್ಕೆ ಬೀಳುತ್ತಾ?

ಇದು ಜನರಲ್ಲಿರುವ ಸಾಮಾನ್ಯ ಮಿಥ್ಯೆಯಾಗಿದೆ. ವಿಮಾನದ ತ್ಯಾಜ್ಯವು ನಿರ್ದಿಷ್ಟ ಟ್ಯಾಂಕ್‌ನಲ್ಲಿ ಸಂಗ್ರಹಗೊಳ್ಳುತ್ತದೆ. ವಿಮಾನ ಲ್ಯಾಂಡ್‌ ಆದ ಬಳಿಕ ಅದನ್ನು ವಿಲೇವಾರಿ ಮಾಡಲಾಗುತ್ತದೆ.

ಟೇಕಾಫ್‌ ಸಮಯದಲ್ಲಿ ಟಾಯ್ಲೆಟ್‌ ಬಳಸಬಹುದಾ?

ವಿಮಾನ ಟೇಕಾಫ್‌ ಅಥವಾ ಇಳಿಯುವ ಸಂದರ್ಭದಲ್ಲಿ ಸೀಟು ಬೆಲ್ಟ್‌ ಹಾಕುವಂತೆ ತಿಳಿಸಲಾಗುತ್ತದೆ. ನಿರ್ದಿಷ್ಟ ಆಲ್ಟಿಟ್ಯೂಡ್‌ಗೆ ವಿಮಾನ ತಲುಪಿದ ಬಳಿಕ ಟಾಯ್ಲೆಟ್‌ ಬಳಸಬಹುದು.

ವಿಮಾನ ಹಾರುತ್ತಿರುವಾಗ ಪೈಲೆಟ್‌ ಟಾಯ್ಲೆಟ್‌ಗೆ ಹೋಗುತ್ತಾರ?

ವಿಮಾನದ ಪೈಲೆಟ್‌ಗಳಿಗೆ ಅವರದ್ದೇ ಆದ ಪ್ರೊಟೊಕಾಲ್‌ಗಳು ಇರುತ್ತವೆ. ಪಿಡಲ್‌ ಪ್ಯಾಕ್ಸ್‌ ಬ್ಯಾಗ್‌ಗಳನ್ನು ಪೈಲೆಟ್‌ಗಳು ಬಳಸುತ್ತಾರೆ. ಕಾಕ್‌ಪಿಟ್‌ನಲ್ಲಿ ಯಾವುದೇ ಟಾಯ್ಲೆಟ್‌ ಇರುವುದಿಲ್ಲ. ತುಂಬಾ ಅರ್ಜೆಂಟಿದ್ರೆ ಪ್ರಯಾಣಿಕರ ಬಾತ್‌ರೂಂ ಅನ್ನೇ ಬಳಸಬಹುದು. ಸಹ ಪೈಲೆಟ್‌ ಇರುವಾಗ ಅಥವಾ ವಿಮಾನ ನಿಯಂತ್ರಣದಲ್ಲಿ ಇದೆ ಎಂದಾಗ ಮಾತ್ರ ಟಾಯ್ಲೆಟ್‌ ಬಳಸಲು ಅವಕಾಶವಿದೆ. ಮತ್ತೊಬ್ಬರು ಪೈಲೆಟ್‌ ವಿಮಾನ ನಿಯಂತ್ರಿಸ್ತಾ ಇದ್ದಾರೆ ಎನ್ನುವ ಸಮಯದಲ್ಲಿ ಇನ್ನೊಬ್ಬ ಪೈಲೆಟ್‌ ಟಾಯ್ಲೆಟ್‌ನತ್ತ ಹೋಗಬಹುದು.

Whats_app_banner