ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌: ಒನ್‌ಪ್ಲಸ್‌ 13, ಗ್ಯಾಲಕ್ಸಿ ಎಸ್‌23 ಅಲ್ಟ್ರಾ 5ಜಿ, ಐಫೋನ್‌ 15ಗೆ ಎಷ್ಟು ದರ ಕಡಿತ? ಇಲ್ಲಿದೆ ಆಫರ್‌ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌: ಒನ್‌ಪ್ಲಸ್‌ 13, ಗ್ಯಾಲಕ್ಸಿ ಎಸ್‌23 ಅಲ್ಟ್ರಾ 5ಜಿ, ಐಫೋನ್‌ 15ಗೆ ಎಷ್ಟು ದರ ಕಡಿತ? ಇಲ್ಲಿದೆ ಆಫರ್‌ ವಿವರ

ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌: ಒನ್‌ಪ್ಲಸ್‌ 13, ಗ್ಯಾಲಕ್ಸಿ ಎಸ್‌23 ಅಲ್ಟ್ರಾ 5ಜಿ, ಐಫೋನ್‌ 15ಗೆ ಎಷ್ಟು ದರ ಕಡಿತ? ಇಲ್ಲಿದೆ ಆಫರ್‌ ವಿವರ

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌: ಒನ್‌ಪ್ಲಸ್‌ 13, ಗ್ಯಾಲಕ್ಸಿ ಎಸ್‌23 ಅಲ್ಟ್ರಾ 5ಜಿ, ಐಫೋನ್‌ 15 ಮುಂತಾದ ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಗಣರಾಜ್ಯೋತ್ಸವ ಮಾರಾಟದಲ್ಲಿ ಎಷ್ಟು ಕಡಿಮೆ ದರಕ್ಕೆ ದೊರಕಲಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌
ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌ (Pexels)

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಇದೇ ಜನವರಿ 13ರಿಂದ ಆರಂಭವಾಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರು ಜನವರಿ 12ರಿಂದಲೇ ಈ ರಿಪಬ್ಲಿಕ್‌ ಸೇಲ್‌ ಪ್ರಯೋಜನ ಪಡೆಯಬಹುದು. ವಿವಿಧ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಗೃಹಬಳಕೆಯ ವಸ್ತುಗಳು ಸೇರಿದಂತೆ ಸಾಕಷ್ಟು ಪ್ರಾಡಕ್ಟ್‌ಗಳಿಗೆ ಈ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಭರ್ಜರಿ ಆಫರ್‌ಗಳು ಇವೆ. ಕೆಲವೊಂದು ಜನಪ್ರಿಯ ಮಾಡೆಲ್‌ಗಳಿಗೆ ಎಷ್ಟು ಡಿಸ್ಕೌಂಟ್‌ ಇರಲಿದೆ ಎಂಬ ಮಾಹಿತಿಯನ್ನೂ ಅಮೆಜಾನ್‌ ನೀಡಿದೆ.

ಒನ್‌ಪ್ಲಸ್‌ 13

ಸಾಮಾನ್ಯವಾಗಿ ಇತರೆ ದಿನಗಳಲ್ಲಿ ಒನ್‌ಪ್ಲಸ್‌ 13 (16ಜಿಬಿ ಮತ್ತು 512ಜಿಬಿ) ದರ 79,999 ರೂಪಾಯಿ ಇರುತ್ತದೆ. ಆದರೆ, ಅಮೆಜಾನ್‌ ಸೇಲ್‌ ಸಮಯದಲ್ಲಿ ಇದರ ದರ 64,999 ರೂಪಾಯಿ ಇರಲಿದೆ. ಇದರೊಂದಿಗೆ ನಿರ್ದಿಷ್ಟ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ದರ ಇನ್ನಷ್ಟು ಕಡಿಮೆಯಾಗಲಿದೆ. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್‌ ಮಾಡಿದರೆ ದರ ಮತ್ತಷ್ಟು ಇಳಿಕೆಯಾಗಲಿದೆ. ಎಕ್ಸ್‌ಚೇಂಜ್‌ ಪ್ರೋಗ್ರಾಂನಲ್ಲಿ 18 ಸಾವಿರ ರೂಪಾಯಿವರೆಗೆ ದರ ಕಡಿತ ಇರಲಿದೆ. ಇದರೊಂದಿಗೆ ಹೆಚ್ಚುವರಿ ಬೋನಸ್‌ 7 ಸಾವಿರ ರೂಪಾಯಿ ಇರಲಿದೆ. ಇಷ್ಟೆಲ್ಲ ಆಫರ್‌ಗಳನ್ನು ಪಡೆದರೆ ಒನ್‌ಪ್ಲಸ್‌ 13 ಬೇಸ್‌ ಮಾಡೆಲ್‌ ದರ 39,999 ರೂಪಾಯಿಗೆ ತಲುಪಲಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌23 5ಜಿ

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌23 5ಜಿ ಸ್ಮಾರ್ಟ್‌ಫೋನ್‌ನ 12ಜಿಬಿ- 256 ಜಿಬಿ ಸ್ಟೋರೇಜ್‌ ಆವೃತ್ತಿಗೆ ಸಾಮಾನ್ಯವಾಗಿ 1,49,999 ರೂಪಾಯಿ ಇರುತ್ತದೆ. ಅಮೆಜಾನ್‌ ಸೇಲ್‌ನಲ್ಲಿ ಇದರ ದರ 71,999 ರೂಪಾಯಿ ಇರುತ್ತದೆ. ಇದರೊಂದಿಗೆ ಬ್ಯಾಂಕ್‌ ಆಫರ್‌ಗಳ ಮೂಲಕ 2 ಸಾವಿರ ರೂಪಾಯಿ ಡಿಸ್ಕೌಂಟ್‌ ದೊರಕಲಿದೆ. ಜತೆಗೆ, ಕೂಪನ್‌ ಕೋಡ್‌ ಕೂಡಿರಲಿವೆ. ಹನ್ನೆರಡು ತಿಂಗಳ ಕಾಲ ನೋ ಕಾಸ್ಟ್‌ ಇಎಂಐ ಆಯ್ಕೆಯೂ ಇರಲಿದೆ. ಹಳೆಯ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಮಾಡುವವರಿಗೆ 22,800 ರೂಪಾಯಿವರೆಗೆ ದರ ಕಡಿತ ದೊರಕಲಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಗುಣಮಟ್ಟದ ಆಧಾರದಲ್ಲಿ ಈ ದರ ವಿನಾಯಿತಿ ದೊರಕಲಿದೆ.

ಒನ್‌ಪ್ಲಸ್‌ ನಾರ್ಡ್‌ ಸಿಇ 4 ಲೈಟ್‌ 5ಜಿ

ಒನ್‌ಪ್ಲಸ್‌ ನಾರ್ಡ್‌ ಸಿಇ 4 ಲೈಟ್‌ 5ಜಿ ಸ್ಮಾರ್ಟ್‌ಫೋನ್‌ ದರ 20,999 ರೂಪಾಯಿ ಇದೆ. ಅಮೆಜಾನ್‌ ಸೇಲ್‌ನಲ್ಲಿ ಇದರ ದರ 17,999 ರೂಗೆ ತಲುಪಿದೆ. ನಿರ್ದಿಷ್ಟ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಸಿ ಖರೀದಿಸಿದವರಿಗೆ ಹೆಚ್ಚುವರಿಯಾಗಿ 1 ಸಾವಿರ ರೂಪಾಯಿ ಡಿಸ್ಕೌಂಟ್‌ ದೊರಕಲಿದೆ. ಎಕ್ಸ್‌ಚೇಂಜ್‌ ಆಫರ್‌ 16,150 ರೂಪಾಯಿವರೆಗೆ ಇರಲಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಗುಣಮಟ್ಟದ ಆಧಾರದಲ್ಲಿ ಎಕ್ಸ್‌ಚೇಂಜ್‌ನ ದರ ನಿಗದಿಯಾಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ35 5ಜಿ

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ35 5ಜಿ ದರ ಸಾಮಾನ್ಯವಾಗಿ 24,499 ರೂಪಾಯಿ ಇರುತ್ತದೆ. ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಇದರ ದರ 14,999 ರೂಗೆ ತಲುಪಿದೆ. ನಿರ್ದಿಷ್ಟ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಸಿ ಖರೀದಿಸಿದವರಿಗೆ ಹೆಚ್ಚುವರಿಯಾಗಿ 1 ಸಾವಿರ ರೂಪಾಯಿ ಡಿಸ್ಕೌಂಟ್‌ ದೊರಕಲಿದೆ. ಎಕ್ಸ್‌ಚೇಂಜ್‌ ಆಫರ್‌ 15,950 ರೂಪಾಯಿವರೆಗೆ ಇರಲಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಗುಣಮಟ್ಟದ ಆಧಾರದಲ್ಲಿ ಎಕ್ಸ್‌ಚೇಂಜ್‌ನ ದರ ನಿಗದಿಯಾಗಲಿದೆ.

ಆ್ಯಪಲ್ ಐಫೋನ್‌ 15

ಸಾಮಾನ್ಯವಾಗಿ ಆ್ಯಪಲ್ ಐಫೋನ್‌ 15 ದರ 60,499 ರೂಪಾಯಿ ಇರುತ್ತದೆ. ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಇದರ ದರ 56,999 ರೂಗೆ ತಲುಪಿದೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದವರಿಗೆ ಹೆಚ್ಚುವರಿಯಾಗಿ 1,500 ರೂಪಾಯಿ ಡಿಸ್ಕೌಂಟ್‌ ದೊರಕಲಿದೆ. ಎಕ್ಸ್‌ಚೇಂಜ್‌ ಆಫರ್‌ 22,800 ರೂಪಾಯಿವರೆಗೆ ಇರಲಿದೆ. ನಿಮ್ಮ ಹಳೆಯ ಫೋನ್‌ನ ಗುಣಮಟ್ಟದ ಆಧಾರದಲ್ಲಿ ಎಕ್ಸ್‌ಚೇಂಜ್‌ನ ದರ ನಿಗದಿಯಾಗಲಿದೆ.

Whats_app_banner