Apple iPhone 16 launch: ಇಂದು ಆಪಲ್‌ ಐಫೋನ್‌ 16 ಬಿಡುಗಡೆ, ಆಪಲ್‌ ಲಾಂಚ್‌ ಇವೆಂಟ್‌ 2024 ನೇರಪ್ರಸಾರ ಯಾವಾಗ, ಎಲ್ಲಿ ನೋಡಬಹುದು?-technology news apple iphone 16 launch today where to watch apple event 2024 live streaming in india timings details pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Apple Iphone 16 Launch: ಇಂದು ಆಪಲ್‌ ಐಫೋನ್‌ 16 ಬಿಡುಗಡೆ, ಆಪಲ್‌ ಲಾಂಚ್‌ ಇವೆಂಟ್‌ 2024 ನೇರಪ್ರಸಾರ ಯಾವಾಗ, ಎಲ್ಲಿ ನೋಡಬಹುದು?

Apple iPhone 16 launch: ಇಂದು ಆಪಲ್‌ ಐಫೋನ್‌ 16 ಬಿಡುಗಡೆ, ಆಪಲ್‌ ಲಾಂಚ್‌ ಇವೆಂಟ್‌ 2024 ನೇರಪ್ರಸಾರ ಯಾವಾಗ, ಎಲ್ಲಿ ನೋಡಬಹುದು?

Apple iPhone 16 launch today: ಆಪಲ್‌ ಇವೆಂಟ್‌ 2024 ಸೆಪ್ಟೆಂಬರ್‌ 9ರಂದು ನಡೆಯಲಿದ್ದು, ಆಪಲ್‌ ಉತ್ಪನ್ನಗಳ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯರು ಈ ಇವೆಂಟ್‌ ಯಾವ ಸಮಯ, ಎಲ್ಲಿ ನೋಡಬಹುದು ಎಂಬ ವಿವರ ಇಲ್ಲಿದೆ.

Apple Event 2024: ಸೆಪ್ಟೆಂಬರ್‌ 9ರಂದುಆಪಲ್‌ ಗ್ಲೋಟೈಮ್‌ ಸ್ಪೆಷಲ್‌ ಇವೆಂಟ್‌ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಪಲ್‌ ಕೂಪರ್ಟಿನೊ ಪಾರ್ಕ್‌ನಲ್ಲಿ ನಡೆಯಲಿದೆ.
Apple Event 2024: ಸೆಪ್ಟೆಂಬರ್‌ 9ರಂದುಆಪಲ್‌ ಗ್ಲೋಟೈಮ್‌ ಸ್ಪೆಷಲ್‌ ಇವೆಂಟ್‌ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಪಲ್‌ ಕೂಪರ್ಟಿನೊ ಪಾರ್ಕ್‌ನಲ್ಲಿ ನಡೆಯಲಿದೆ.

Apple iPhone 16 launch today: ಆಪಲ್‌ ಇವೆಂಟ್‌ 2024 ಸೆಪ್ಟೆಂಬರ್‌ 9ರಂದು ನಡೆಯಲಿದ್ದು, ಆಪಲ್‌ ಉತ್ಪನ್ನಗಳ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಪಲ್‌ ಕಂಪನಿಯು ಹೊಸ ಐಫೋನ್‌ 16 ಸೀರಿಸ್‌ ಮತ್ತು ಆಫಲ್‌ ವಾಚ್‌ ಸೀರಿಸ್‌ 10 ಬಿಡುಗಡೆ ಮಾಡುವ ನಿರೀಕ್ಷೆಇದೆ. ಈ ಕಾರ್ಯಕ್ರದಲ್ಲಿ ಹಲವು ಸಾಫ್ಟ್‌ವೇರ್‌, ಹಾರ್ಡ್‌ವೇರ್‌ಗಳ ಕುರಿತು ಕಂಪನಿ ಘೋಷಣೆ ಮಾಡುವ ಸೂಚನೆಯಿದೆ. ಅಂದರೆ, ಐಒಎಸ್‌ 18, ವಾಚ್‌ಒಎಸ್‌ 11 ಮತ್ತು ಇತರೆ ಅಪ್‌ಡೇಟ್‌ಗಳನ್ನು Apple Event 2024 ನಲ್ಲಿ ಘೊಷಣೆ ಮಾಡುವ ಸೂಚನೆಗಳಿವೆ. ಆಪಲ್‌ ಪ್ರಿಯರು ಈ ಕಾರ್ಯಕ್ರಮವನ್ನು ಎಲ್ಲಿ ಲೈವ್‌ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು? ಯಾವ ಸಮಯದಲ್ಲಿ ನೋಡಬಹುದು? ಭಾರತೀಯರು ಯಾವ ಕಾಲಮಾನದಲ್ಲಿ ಈ ಕಾರ್ಯಕ್ರಮ ನೋಡಬಹುದಾಗಿದೆ. ಭಾರತದಲ್ಲಿ ಹೊಸ ಐಫೋನ್‌ 16 ದರ ಎಷ್ಟಿರಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.

ಆಪಲ್‌ ಇವೆಂಟ್‌ 2024: ಭಾರತದ ಟೈಮಿಂಗ್‌

ಆಪಲ್‌ ಗ್ಲೋಟೈಮ್‌ ಸ್ಪೆಷಲ್‌ ಇವೆಂಟ್‌ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಪಲ್‌ ಕೂಪರ್ಟಿನೊ ಪಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯರು ಈ ಕಾರ್ಯಕ್ರಮದ ಆಪಲ್‌ ಇವೆಂಟ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ಮುಂದಿನ ಸಮಯಗಳಲ್ಲಿ ವೀಕ್ಷಿಸಬಹುದು.

ರಾತ್ರಿ 10.30 (ಭಾರತೀಯ ಕಾಲಮಾನ)
10:00 ಎಎಂ (ಪೆಸಿಫಿಕ್‌ ಕಾಲಮಾನ)
1:00 ಪಿಎಂ (ವೆಸ್ಟರ್ನ್‌ ಕಾಲಮಾನ)

ಅಂದರೆ ಭಾರತೀಯರು ಇಂದು ರಾತ್ರಿ 10.30 ಗಂಟೆಗೆ ಈ ಕಾರ್ಯಕ್ರಮ ವೀಕ್ಷಿಸಬಹುದು.

ಆಪಲ್‌ ಇವೆಂಟ್‌ ನೇರ ಪ್ರಸಾರ: ಎಲ್ಲಿ ವೀಕ್ಷಿಸಬಹುದು?

ಈ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಪಲ್‌ ಅಭಿಮಾನಿಗಳು ಇದರ ಲೈವ್‌ ಸ್ಟ್ರೀಮಿಂಗ್‌ ನೋಡಬಹುದು. ಅಂದರೆ, ಆಪಲ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌, ಆಪಲ್‌ ಕಂಪನಿಯ ಯೂಟ್ಯೂಬ್‌ ಚಾನೆಲ್‌, ಆಪಲ್‌ ಟಿವಿ ಆಪ್‌ ಮೂಲಕ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.

ಏನೆಲ್ಲ ಘೋಷಣೆ ನಿರೀಕ್ಷೆ?

ಈ ಆಪಲ್‌ ಕಾರ್ಯಕ್ರಮದಲ್ಲಿ ಹೊಸ ಐಫೋನ್‌ 16 ಸರಣಿಯ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಂದರೆ, ಐಫೋನ್‌ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ, ಐಫೋನ್‌ 16 ಪ್ರೊ ಮ್ಯಾಕ್ಸ್‌ ಐಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಐಫೋನ್‌ 16 ಗ್ಲೋಸಿಯರ್‌ ಟೈಟಾನಿಯಂ ಫಿನಿಶ್‌ ಹೊಂದಿರುವ ಕುರಿತು ವಂದತಿಗಳಿವೆ.

ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ಗಳು ಎ18 ಬಯೋನಿಕ್‌ ಚಿಪ್‌ಸೆಟ್‌ ಹೊಂದಿರುವ ಸೂಚನೆಯಿದೆ. ಇದೇ ಸಮಯದಲ್ಲಿ ಐಫೋನ್‌ 16 ಪ್ರೊ ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ಗಳು ಶಕ್ತಿಶಾಲಿ ಎ18 ಪ್ರೊ ಪ್ರೊಸೆಸರ್‌ ಹೊಂದಿರುವ ಸೂಚನೆಯಿದೆ.

ಈ ಎಲ್ಲಾ ಮಾಡೆಲ್‌ಗಳು ಐಒಎಸ್‌ 18 ಆಪರೇಟಿಂಗ್‌ ಸಿಸ್ಟಮ್‌ ಹೊಂದಿರಲಿದೆ. ಇದೇ ಸಮಯದಲ್ಲಿ ಕಂಪನಿಯು ವಾಚ್‌ ಸೀರಿಸ್‌ 10 ಮತ್ತು ಆಪಲ್‌ ವಾಚ್‌ ಅಲ್ಟ್ರಾ 3 ಕೂಡ ಬಿಡುಗಡೆ ಮಾಡುವ ಸೂಚನೆಯಿದೆ. ಇದೇ ಸಮಯದಲ್ಲಿ ಕೈಗೆಟುಕುವ ದರದ ಆಪಲ್‌ ವಾಚ್‌ ಎಸ್‌ಇ ಕೂಡ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

mysore-dasara_Entry_Point