Budget Phones: ಆಗಸ್ಟ್ ತಿಂಗಳಲ್ಲಿ 25000 ರೂಗಿಂತ ಕಡಿಮೆ ಬೆಲೆಗೆ ಬೆಸ್ಟ್‌ ಗೇಮಿಂಗ್ ಫೋನ್‌ಗಳಿವು-technology news best gaming phones under rupees 25000 in august 2024 poco x6 pro to oneplus nord ce 4 infinix gt 20 jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Budget Phones: ಆಗಸ್ಟ್ ತಿಂಗಳಲ್ಲಿ 25000 ರೂಗಿಂತ ಕಡಿಮೆ ಬೆಲೆಗೆ ಬೆಸ್ಟ್‌ ಗೇಮಿಂಗ್ ಫೋನ್‌ಗಳಿವು

Budget Phones: ಆಗಸ್ಟ್ ತಿಂಗಳಲ್ಲಿ 25000 ರೂಗಿಂತ ಕಡಿಮೆ ಬೆಲೆಗೆ ಬೆಸ್ಟ್‌ ಗೇಮಿಂಗ್ ಫೋನ್‌ಗಳಿವು

ಪ್ರತಿವಾರವೂ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತವೆ. ಆಗಸ್ಟ್‌ ತಿಂಗಳಲ್ಲಿ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರೀದಿ ಮಾಡಲು ಹಲವು ಆಯ್ಕೆಗಳಿವೆ. 25,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಇಲ್ಲಿದೆ.

ಆಗಸ್ಟ್ ತಿಂಗಳಲ್ಲಿ 25000 ರೂಗಿಂತ ಕಡಿಮೆ ಬೆಲೆಗೆ ಬೆಸ್ಟ್‌ ಗೇಮಿಂಗ್ ಫೋನ್‌ಗಳಿವು
ಆಗಸ್ಟ್ ತಿಂಗಳಲ್ಲಿ 25000 ರೂಗಿಂತ ಕಡಿಮೆ ಬೆಲೆಗೆ ಬೆಸ್ಟ್‌ ಗೇಮಿಂಗ್ ಫೋನ್‌ಗಳಿವು (Mint/Aman Gupta)

ಪ್ರತಿ ವಾರವೂ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬರುತ್ತಿರುತ್ತವೆ. ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಫೋನ್‌ ಅಂತಿಮಗೊಳಿಸಲು ಹಲವು ಆಯ್ಕೆಗಳು ಇವೆ. ಈಗೀಗ ಫೋನ್‌ ಬಳಸುವವರು ಹೆಚ್ಚು ಸಮಯ ಚಾರ್ಜ್‌ ನಿಲ್ಲಬೇಕು, ಸ್ಟೋರೇಜ್‌ ಹೆಚ್ಚಿರಬೇಕು ಜೊತೆಗೆ ಸುರಕ್ಷತೆಯೂ ಇರಬೇಕೆಂದು ಬಯಸುತ್ತಾರೆ. ನಿಮ್ಮ ಬಜೆಟ್‌, ಫೀಚರ್‌ಗಳ ಮಾನದಂಡದ ಮೇಲೆ 25,000 ರೂಪಾಯಿ ಒಳಗೆ ಖರೀದಿಸಲು ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್ ಫೋನ್‌ಗಳ ವಿವರ ಇಲ್ಲಿದೆ.

ಪೋಕೋ ಎಕ್ಸ್ 6 ಪ್ರೊ

ಪೋಕೋ ಎಕ್ಸ್ 6 ಪ್ರೊ, 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು ಗರಿಷ್ಠ 1800 ನಿಟ್ಸ್ ಬ್ರೈಟ್‌ನೆಸ್‌ ಹೊಂದಿದೆ. ಫೋಟೋಗ್ರಫಿ ವಿಷಯಕ್ಕೆ ಬಂದರೆ, ಎಕ್ಸ್ 6 ಪ್ರೊ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಹೊಂದಿರುವ 64 ಎಂಪಿ ಮುಖ್ಯ ಕ್ಯಾಮೆರಾ ಇದೆ. ಇದರ ಜೊತೆಗೆ 8ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2ಎಂಪಿ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 16ಎಂಪಿ ಫ್ರಂಟ್‌ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಈ ಫೋನ್ 5,000 ಎಂಎಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 67 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ವನ್‌ ಪ್ಲಸ್‌ ನಾರ್ಡ್ ಸಿಇ4

ವನ್‌ ಪ್ಲಸ್‌ ನಾರ್ಡ್ ಸಿಇ4 ಫೋನ್‌ 6.7 ಇಂಚಿನ ಫುಲ್ ಎಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 2412 x 1080 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ನಾರ್ಡ್ ಸಿಇ4, 5ಜಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು 8ಎಂಪಿ ಸೋನಿ ಐಎಂಎಕ್ಸ್ 355 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಬೆಂಬಲದೊಂದಿಗೆ 50ಎಂಪಿ ಸೋನಿ ಎಲ್ವೈಟಿ 600 ಪ್ರಾಥಮಿಕ ಸೆನ್ಸಾರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೊ ಕಾಲ್‌ಗಳಿಗಾಗಿ 16ಎಂಪಿ ಫ್ರಂಟ್ ಫೇಸಿಂಗ್ ಶೂಟರ್ ಸಹ ಇದೆ.

ಇನ್ಫಿನಿಕ್ಸ್ ಜಿಟಿ 20 ಪ್ರೊ

24,999 ರೂಗಳಿಂದ ಪ್ರಾರಂಭವಾಗುವ ಇನ್ಫಿನಿಕ್ಸ್ ಜಿಟಿ 20 ಪ್ರೊ, 8ಜಿಬಿ ರಾಮ್ /256ಜಿಬಿ ಸ್ಟೋರೇಜ್ ವೇರಿಯಂಟ್‌ ಅನ್ನು ನೀಡುತ್ತದೆ. 6.78 ಇಂಚಿನ ಫುಲ್ ಎಚ್‌ಡಿ + ಎಲ್‌ಟಿಪಿಎಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಗೇಮಿಂಗ್ ಡಿಸ್ಪ್ಲೇ ಚಿಪ್, ಪಿಕ್ಸೆಲ್ವರ್ಕ್ಸ್ ಎಕ್ಸ್ 5 ಟರ್ಬೊವನ್ನು ಹೊಂದಿದೆ. ಇದು 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, 45 ವ್ಯಾಟ್ ಅಡಾಪ್ಟರ್‌ನೊಂದಿಗೆ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.

ನಥಿಂಗ್ ಫೋನ್ 2ಎ

8ಜಿಬಿ ರಾಮ್ / 128ಜಿಬಿ ಸ್ಟೋರೇಜ್ ರೂಪಾಂತರಕ್ಕೆ 23,999 ರೂ ಬೆಲೆಯ ನಥಿಂಗ್ ಫೋನ್ (2ಎ) 6.7 ಇಂಚಿನ ಅಮೋಲೆಡ್ ಪ್ಯಾನಲ್ ಹೊಂದಿದ್ದು, 1080x2412 ಪಿಕ್ಸೆಲ್ ರೆಸಲ್ಯೂಶನ್, 240 ಹೆರ್ಟ್ಜ್ ಟಚ್ ಸ್ಯಾಂಪ್ಲಿಂಗ್ ದರ ಮತ್ತು 10-ಬಿಟ್ ಕಲರ್ ಡೆಪ್ತ್ ಹೊಂದಿದೆ. ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ. ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಎರಡು ಎಚ್‌ಡಿ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಇದು 50 ಎಂಪಿ + 50 ಎಂಪಿ ಕ್ಯಾಮೆರಾ ಸೆಟಪ್ ಕೂಡಾ ಹೊಂದಿದೆ. 50 ಎಂಪಿ ಪ್ರೈಮರಿ ಸೆನ್ಸಾರ್ ಮತ್ತು 50 ಎಂಪಿ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೊ ಕರೆಗಾಗಿ 32ಎಂಪಿ ಸೆನ್ಸಾರ್ ಅನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 50 ಫ್ಯೂಷನ್

ಮೊಟೊರೊಲಾ ಎಡ್ಜ್ 50 ಫ್ಯೂಷನ್ 6.7 ಇಂಚಿನ ಫುಲ್ ಎಚ್‌ಡಿ + ಪಿಒಎಲ್ಇಡಿ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. 1080 x 2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೋಮೀಟರ್, ಗೈರೋಸ್ಕೋಪ್, ಇ-ದಿಕ್ಸೂಚಿ ಮತ್ತು ಆಂಬಿಯೆಂಟ್ ಲೈಟ್ ಸೆನ್ಸರ್ ಸೇರಿದಂತೆ ಸಂವೇದಕಗಳ ಶ್ರೇಣಿಯನ್ನು ಹೊಂದಿದೆ.

ಇನ್ನಷ್ಟು ಟೆಕ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ