Best Smartphone: ಇವು ರೂ 30,000 ಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ 5G ಫೋನ್‌ಗಳು: ಕೆಲವೇ ನಿಮಿಷಗಳಲ್ಲಿ ಫುಲ್ ಚಾರ್ಜ್, ಸೂಪರ್ ಸ್ಪೀಡ್
ಮಾರುಕಟ್ಟೆಗೆ ಇಂದು ಲೆಕ್ಕವಿಲ್ಲದಷ್ಟು ಸ್ಮಾರ್ಟ್‌ಫೋನ್‌ಗಳು ಲಗ್ಗೆಯಿಡುತ್ತಿವೆ. ಹೀಗಾಗಿ ಜನರಿಗೆ ಯಾವ ಫೋನ್ ಖರೀದಿಸಬೇಕು ಎಂಬ ಗೊಂದಲ ಉಂಟಾಗುವುದು ಸಹಜ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ 30 ಸಾವಿರ ರೂ ಒಳಗೆ ಇದ್ದರೆ ಇಲ್ಲಿದೆ ನೋಡಿ 5G ಸಂಪರ್ಕ ಹೊಂದಿರುವ 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳು. (ಬರಹ: ವಿನಯ್ ಭಟ್)

ಇಂದು ಭಾರತೀಯ ಮಾರುಕಟ್ಟೆಯಲ್ಲಿ ತಿಂಗಳಿಗೆ ಕಡಿಮೆ ಎಂದರೂ 5-7 ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಫೋನುಗಳು ಬಜೆಟ್ ಅಥವಾ ಮಧ್ಯಮ ಬೆಲೆಯಿಂದ ಕೂಡಿರುತ್ತದೆ. ಬಹುಪಾಲು ಜನ 30,000 ರೂಪಾಯಿ ಒಳಗಿನ ಸ್ಮಾರ್ಟ್‌ಫೋನ್‌ಗಳ ಕಡೆ ಹೆಚ್ಚು ಒಲವು ತೋರುತ್ತಾರೆ. ಇದೇ ಕಾರಣಕ್ಕೆ ಈ ವಿಭಾಗದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಇಂದು ನಾವು ನಿಮಗೆ 30,000 ರೂ. ಒಳಗಿನ ಅತ್ಯುತ್ತಮ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುತ್ತೇವೆ. ಈ ಫೋನುಗಳು 5ಜಿ ಸಪೋರ್ಟ್ ಕೂಡ ಮಾಡುತ್ತದೆ.
ರಿಯಲ್ ಮಿ ಜಿಟಿ 6T 5G: ಬೆಲೆ - ರೂ. 24,999
ಈ ಫೋನ್ ಸ್ನಾಪ್‌ಡ್ರಾಗನ್ 7+ Gen 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. 6.78 ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ ನೀಡಲಾಗಿದ್ದು, 8MP ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಇದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಪವರ್ ಬ್ಯಾಕಪ್‌ಗಾಗಿ 5500mAh ಬ್ಯಾಟರಿಯನ್ನು ನೀಡಲಾಗಿದೆ. ಅಲ್ಲದೆ 120W ಸೂಪರ್‌ವೋಕ್ ಚಾರ್ಜ್‌ನೊಂದಿಗೆ ಬರುತ್ತಿದೆ.
ವಿವೋ V30e: ಬೆಲೆ - ರೂ. 27,999
ವಿವೋ V30e ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದು 6.78 ಇಂಚಿನ ಅಲ್ಟ್ರಾ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಈ ಫೋನ್‌ನಲ್ಲಿ 50MP OIS ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ 50MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. 5500mAh ಬ್ಯಾಟರಿ ಅಳವಡಿಸಲಾಗಿದ್ದು, ಇದು 44W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಇದನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಿಂದ ಖರೀದಿಸಬಹುದು.
ರೆಡ್‌ಮಿ ನೋಟ್ 13 Pro+ 5G: ಬೆಲೆ - ರೂ. 27,999
ಇದು ಕೂಡ 5G ಸ್ಮಾರ್ಟ್‌ಫೋನ್ ಆಗಿದ್ದು, 6.67 ಇಂಚಿನ 3D ಕರ್ವ್ಡ್ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 1800nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್ ಇದೆ. 5000mAh ಬ್ಯಾಟರಿ ಮತ್ತು 120W ಹೈಪರ್‌ಚಾರ್ಜ್ ಬೆಂಬಲವನ್ನು ಪಡೆದುಕೊಂಡಿದೆ. ಬರೋಬ್ಬರಿ 200MP ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 8MP ವೈಡ್ ಆಂಗಲ್ ಮತ್ತು 2MP ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. ಇದಲ್ಲದೆ, 16MP ಮುಂಭಾಗದ ಕ್ಯಾಮೆರಾ ಇದೆ.
ಒನ್‌ಪ್ಲಸ್ ನಾರ್ಡ್ CE4 5G: ಬೆಲೆ - 24,999 ರೂ
ಈ ಫೋನ್ 6.7 ಇಂಚಿನ 120Hz AMOLED ಡಿಸ್‌ಪ್ಲೇ ಹೊಂದಿದೆ. ಇದರ ಗರಿಷ್ಠ ಬ್ರೈಟ್‌ನೆಸ್ 1100 ನಿಟ್‌ಗಳು. ಕ್ವಾಲ್ಕಂ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. 5500mAh ಬ್ಯಾಟರಿ ಮತ್ತು 100W SUPERVOOC ಚಾರ್ಜಿಂಗ್ ಬೆಂಬಲವಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು 50MP ಸೋನಿ LYT600 ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಸಂವೇದಕದಿಂಂದ ಕೂಡಿದೆ. ಸೆಲ್ಫಿಗಾಗಿ 16MP ಕ್ಯಾಮೆರಾ ಸಂವೇದಕವನ್ನು ಅಳವಡಿಸಲಾಗಿದೆ.
