ಕನ್ನಡ ಸುದ್ದಿ  /  ಜೀವನಶೈಲಿ  /  15000 ಬಜೆಟ್‌ನಲ್ಲಿ ಒಂದೊಳ್ಳೆ ಫೋನ್‌ ಹುಡುಕ್ತಿದ್ದೀರಾ; ಜೂನ್ ತಿಂಗಳಲ್ಲಿ ಖರೀಸಲು 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು

15000 ಬಜೆಟ್‌ನಲ್ಲಿ ಒಂದೊಳ್ಳೆ ಫೋನ್‌ ಹುಡುಕ್ತಿದ್ದೀರಾ; ಜೂನ್ ತಿಂಗಳಲ್ಲಿ ಖರೀಸಲು 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು

ಮೊಬೈಲ್‌ ಫೋನ್‌ ಖರೀದಿಸುವಾಗ ಇರುವ ಬಜೆಟ್‌ ಆಧಾರದಲ್ಲಿ ಖರೀದಿಸುವುದು ಸಾಮಾನ್ಯ. 2024ರ ಜೂನ್ ತಿಂಗಳಲ್ಲಿ 15000 ರೂಪಾಯಿಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಫೋನ್‌ಗಳು ಯಾವೆಲ್ಲಾ ಇವೆ ಎಂಬುದನ್ನು ನಾವು ತಿಳಿಸುತ್ತೇವೆ. ಇಲ್ಲಿ ಐದು ಉತ್ತಮ ಆಯ್ಕೆಗಳು ಇಮಗಾಗಿ ಇವೆ.

ಜೂನ್ ತಿಂಗಳಲ್ಲಿ ಖರೀಸಲು 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು
ಜೂನ್ ತಿಂಗಳಲ್ಲಿ ಖರೀಸಲು 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು

ಮಾರುಕಟ್ಟೆಗೆ ಪ್ರತಿ ತಿಂಗಳು ಹೊಸ ಹೊಸ ಮೊಬೈಲ್‌ ಫೋನ್‌ಗಳು ಬರುತ್ತಾ ಇರುತ್ತವೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಫೋನ್‌ ಖರೀದಿ ಮಾಡಬಹುದು. ಈಗಾಗಲೇ ಹಲವಾರು ಬಜೆಟ್ ಫೋನ್‌ಗಳು ಬಿಡುಗಡೆಯಾಗುತ್ತಿರುವುದರಿಂದ, ಬಳಕೆದಾರರ ನಿರ್ದಿಷ್ಟ ಅಗತ್ಯಗಳಿಗೆ ಅನುಸಾರವಾಗಿ ಸೂಕ್ತ ಫೋನ್‌ ಯಾವುದು ಎಂಬುದನ್ನು ನಿರ್ಧರಿಸುವುದು ತುಸು ಕಷ್ಟವೇ. ಈ ಸಮಸ್ಯೆಯನ್ನು ಪರಿಹರಿಸಲು, ಜೂನ್ ತಿಂಗಳಲ್ಲಿ ನೀವು 15,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಒಂದೊಳ್ಳೆ ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಉತ್ತಮ ಆಯ್ಕೆಯನ್ನು ನಾವು ನಿಮಗೆ ಕೊಡುತ್ತೇವೆ. ಬೆಸ್ಟ್ ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ.

2024ರ ಜೂನ್ ತಿಂಗಳಲ್ಲಿ 15,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಫೋನ್‌ಗಳು ಇವು

ರಿಯಲ್‌ಮಿ ಪಿ1 (Realme P1)

ರಿಯಲ್‌ಮಿ ಪಿ1 ಮೊಬೈಲ್‌ ಫೋನ್‌ 6.67 ಇಂಚಿನ ಫುಲ್ ಎಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 2400 x 1080 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 8 ಜಿಬಿ ಎಲ್ಪಿಡಿಡಿಆರ್ 4 ಎಕ್ಸ್ RAM ಮತ್ತು 256 ಜಿಬಿ ಯುಎಫ್ಎಸ್ 3.1 ಸ್ಟೋರೇಜ್ ಹೊಂದಿದೆ. ಮುಖ್ಯ ಕ್ಯಾಮರಾ 50 ಎಂಪಿ ಇದ್ದು 2 ಎಂಪಿ ಸೆಕೆಂಡರಿ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 16 ಎಂಪಿ ಫ್ರಂಟ್ ಫೇಸಿಂಗ್ ಶೂಟರ್ ಸಹ ಇದೆ. 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, 45 ವ್ಯಾಟ್ ಸೂಪರ್ ವೂಕ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ವಿವೋ ಟಿ3ಎಕ್ಸ್ (Vivo T3x)

ಇದು 6.72 ಇಂಚಿನ ಫ್ಲಾಟ್ ಫುಲ್ ಎಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಗುಣಮಟ್ಟದ ದೃಶ್ಯಗಳನ್ನು ಖಚಿತಪಡಿಸುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ನೀಡುತ್ತದೆ. ಇದು 128 ಜಿಬಿ ಆಂತರಿಕ ಸಂಗ್ರಹವನ್ನು ಹೆಚ್ಚಿಸುತ್ತದೆ. 44 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 15 5ಜಿ (Samsung Galaxy F15 5G)

4 ಜಿಬಿ RAM/128 ಜಿಬಿ ಸ್ಟೋರೇಜ್ ಇರುವ ಫೋನ್ 12,999 ರೂಪಾಯಿಗಳಿಂದ ಆರಂಭವಾಗುತ್ತದೆ. ಗ್ಯಾಲಕ್ಸಿ ಎಫ್ 15 5ಜಿ ಫೋನ್‌ 6.5 ಇಂಚಿನ ಫುಲ್ ಎಚ್‌ಡಿ + ಸ್ಯಾಮೋಲೆಡ್ ಡಿಸ್‌ಪ್ಲೇ ಹೊಂದಿದೆ. 6 ಜಿಬಿ RAM ಮತ್ತು 128 ಜಿಬಿವರೆಗೆ ಸ್ಟೋರೇಜ್ ಬೆಂಬಲಿಸುತ್ತದೆ.

ಮೊಟೊರೊಲಾ ಜಿ64 ( Motorola G64)

ಮೊಟೊರೊಲಾದ ಬಜೆಟ್ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಮೊದಲನೆಯದ್ದು 8 ಜಿಬಿ RAM / 128 ಜಿಬಿ ಸ್ಟೋರೇಜ್ 14,999 ರೂಪಾಯಿ. ಮತ್ತೊಂದು 12 ಜಿಬಿ RAM / 256 ಜಿಬಿ ಸ್ಟೋರೇಜ್ 16,999 ರೂಪಾಯಿ. ಈ 5ಜಿ ಫೋನ್‌ 6.5 ಇಂಚಿನ ಫುಲ್ ಎಚ್‌ಡಿ + ಐಪಿಸಿ ಎಲ್ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 560 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಬೆಂಬಲ ನೀಡುತ್ತದೆ. ಸ್ಮಾರ್ಟ್‌ಫೋನ್ 6,000 ಎಂಎಎಚ್ ಬ್ಯಾಟರಿ ಬ್ಯಾಕಪ್ ಹೊಂದಿದ್ದು, 33 ವ್ಯಾಟ್ ಫಾಸ್ಟ್ ಚಾರ್ಜರ್ ಜೊತೆಗೆ ಸಿಗುತ್ತದೆ.

ರಿಯಲ್‌ಮಿ 12 ಎಕ್ಸ್ (Realme 12x)

ಈ 4ಜಿಬಿ RAM / 128 ಜಿಬಿ ಸ್ಟೋರೇಜ್ ಇರುವ ಫೋನ್‌ಗೆ 11,999 ರೂಪಾಯಿ ಬೆಲೆ ಇದೆ. ಇದೇ ವೇಳೆ 6 ಜಿಬಿ ರಾಮ್ ಹಾಗೂ 128 ಜಿಬಿ ವೇರಿಯಂಟ್‌ಗೆ 13,499 ರೂಪಾಯಿ ಇದೆ. ಇದೇ ವೇಳೆ 8 ಜಿಬಿ ರಾಮ್ / 128 ಜಿಬಿ ರೂಪಾಂತರಕ್ಕೆ 14,999 ರೂಪಾಯಿ ನಿಗದಿಪಡಿಸಲಾಗಿದೆ. ಇದು 6.72 ಇಂಚಿನ ಫುಲ್ ಎಚ್‌ಡಿ + ಎಲ್ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಇದೆ. ಮುಂಭಾಗದಲ್ಲಿ ಪಾಂಡಾ ಗ್ಲಾಸ್ ರಕ್ಷಣೆ ಮತ್ತು ಸ್ಪ್ಲಾಶ್ ಮತ್ತು ಧೂಳಿನ ಪ್ರತಿರೋಧಕವಿದೆ. ಅಂದರೆ ಈ ಸ್ಮಾರ್ಟ್ ಫೋನ್ ಲಘು ಮಳೆಯನ್ನು ಕೂಡಾ ತಡೆದುಕೊಳ್ಳಬಲ್ಲದು.