Gmail Alternatives: ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು, ಇವುಗಳಲ್ಲಿ ಬಹುತೇಕ ಸಂಪೂರ್ಣ ಉಚಿತ
ಕನ್ನಡ ಸುದ್ದಿ  /  ಜೀವನಶೈಲಿ  /  Gmail Alternatives: ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು, ಇವುಗಳಲ್ಲಿ ಬಹುತೇಕ ಸಂಪೂರ್ಣ ಉಚಿತ

Gmail Alternatives: ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು, ಇವುಗಳಲ್ಲಿ ಬಹುತೇಕ ಸಂಪೂರ್ಣ ಉಚಿತ

Gmail Alternative Email list: ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಝಹೊ, ಔಟ್‌ಲುಕ್‌ ಇತ್ಯಾದಿ ಹಲವು ಇಮೇಲ್‌ಗಳನ್ನು ಬಳಸಬಹುದು. ಜಿಮೇಲ್‌ ಪರ್ಯಾಯ ಇಮೇಲ್‌ಗಳನ್ನು ಹುಡುಕುವವರಿಗೆ ಇಲ್ಲಿ ಒಂದಿಷ್ಟು ಇಮೇಲ್‌ ಆಯ್ಕೆಗಳ ಕುರಿತು ಮಾಹಿತಿ ನೀಡಲಾಗಿದೆ.

 ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು
ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು

ಗೂಗಲ್‌ ಜಿಮೇಲ್‌ ಬಹುಜನಪ್ರಿಯ ಇಮೇಲ್‌. ಇದರಲ್ಲಿ 15 ಜಿಬಿವರೆಗೆ ಉಚಿತ ಸ್ಟೋರೇಜ್‌ ಇರುತ್ತದೆ. ಗೂಗಲ್‌ ಡ್ರೈವ್‌, ಫೋಟೋ ಇತ್ಯಾದಿಗಳನ್ನು ಬಳಸಿದಾಗ ಜಿಮೇಲ್‌ ಸ್ಥಳಾವಕಾಶ ಸಾಕಾಗುವುದಿಲ್ಲ. ಕೆಲವರಿಗೆ ಜಿಮೇಲ್‌ ಬಳಸಲು ಇಷ್ಟವಿಲ್ಲದೆಯೂ ಇರಬಹುದು. ಇಂತಹ ಕಾರಣಕ್ಕಾಗಿ ಜಿಮೇಲ್‌ಗೆ ಪರ್ಯಾಯವಾಗಿ ಯಾವೆಲ್ಲ ಇಮೇಲ್‌ ಸೇವಾ ಕಂಪನಿಗಳಿವೆ ಎಂದು ಹುಡುಕುತ್ತಿರುತ್ತಾರೆ. ನೀವು ಕೂಡ ಜಿಮೇಲ್‌ಗೆ ಪರ್ಯಾಯವಾದ ಇಮೇಲ್‌ ಹುಡುಕುತ್ತಿದ್ದರೆ ಇಲ್ಲಿ 6 ಇಮೇಲ್‌ಗಳ ಕುರಿತು ತಿಳಿಸಲಾಗಿದೆ.

ಝುಹೊ ಮೇಲ್‌ (Zoho Mail)

ಇದು ಉಚಿತ ಮತ್ತು ಪಾವತಿ ಆಯ್ಕೆಗಳಲ್ಲಿ ದೊರಕುತ್ತದೆ. ಸಣ್ಣ ಬಿಸ್ನೆಸ್‌ಗಳಿಗೆ ಅಥವಾ ವೈಯಕ್ತಿಕ ಬಳಕೆಗೆ ಈ ಇಮೇಲ್‌ ಸೂಕ್ತವಾಗಬಹುದು. ಕ್ಯಾಲೆಂಡರ್‌ , ಸ್ಟೋರೇಜ್‌ ಡ್ರೈವ್‌, ಟಾಸ್ಕ್‌, ಕಾಂಟ್ಯಾಕ್ಟ್‌ ಇತ್ಯಾದಿಗಳು ಇದರಲ್ಲಿವೆ. ಉಚಿತ ಆಯ್ಕೆಯಲ್ಲಿ 5 ಜಿಬಿವರೆಗೆ ಸ್ಥಳಾವಕಾಶ ದೊರಕುತ್ತದೆ.

ಮೈಲ್‌.ಕಾಂ

ಜಿಮೇಲ್‌ ಪರ್ಯಾವಾಗಿ ಮೈಲ್‌.ಕಾಂ ಕೂಡ ಬಳಸಬಹುದು. ನೀವು ಕಸ್ಟಮ್‌ ಡೊಮೈನ್‌ ಹೆಸರಿಗೆ ಹಣ ನೀಡುವ ಬದಲು ಇದರಲ್ಲಿ ಪರ್ಯಾಯ ಡೊಮೈನ್‌ ಆಯ್ಕೆಗಳು ದೊರಕುತ್ತವೆ. ನೀವು ಅಕೌಂಟೆಂಟ್‌ ಆಗಿದ್ದರೆ @ಅಕೌಂಟೆಂಟ್‌.ಕಾಂ, ಎಂಜಿನಿಯರ್‌ ಆಗಿದ್ದರೆ @ಎಂಜಿನಿಯರ್‌.ಕಾಂ ಇತ್ಯಾದಿ ಆಯ್ಕೆಗಳನ್ನು ಆಯ್ದುಕೊಳ್ಳಬಹುದು. ಸುರಕ್ಷತೆಯ ದೃಷ್ಟಿಯಿಂದಲೂ ಹಲವು ಆಂಟಿ ವೈರಸ್‌ ಟೂಲ್ಸ್‌ ಅನ್ನು ಈ ಮೈಲ್‌.ಕಾಂ ಹೊಂದಿದೆ. ಜನರಲ್‌ ಸ್ಟೋರೇಜ್‌ 65 ಜಿಬಿ ಮತ್ತು ಇಮೇಲ್‌ ಸ್ಟೋರೇಜ್‌ 65 ಜಿಬಿ ಉಚಿತವಾಗಿ ದೊರಕುತ್ತದೆ.

ಪ್ರೊಟೊನ್‌ ಮೇಲ್‌ (ProtonMail)

ಎನ್‌ಎಸ್‌ಎ ಹ್ಯಾಕ್‌ ಮಾಡಲಾಗದ ಇಮೇಲ್‌ ಎಂದೇ ಖ್ಯಾತಿ ಪಡೆದ ಈ ಇಮೇಲ್‌ನಲ್ಲಿ ಉಚಿತವಾಗಿ 1 ಜಿಬಿ ಸ್ಟೋರೇಜ್‌ ದೊರಕುತ್ತದೆ. ದಿನಕ್ಕೆ 150 ಇಮೇಲ್‌ ಕಳುಹಿಸಲು ಅವಕಾಶವಿದೆ.

ಟ್ಯೂಟನೊಟಾ (Tutanota)

ಲ್ಯಾಟಿನ್‌ ಪದ ಟ್ಯೂಟನೊಟ ಎಂದರೆ ಸಂದೇಶದ ಭದ್ರತೆ ಎಂದರ್ಥ. ಪ್ರೈವೇಸಿ ಕುರಿತು ಆಲೋಚಿಸುವವರು ಈ ಇಮೇಲ್‌ ಬಳಸಬಹುದು. ಇದು ಉಚಿತ ಮತ್ತು ಪಾವತಿ ಆಯ್ಕೆಗಳಲ್ಲಿ ದೊರಕುತ್ತದೆ. ಇದರ ಪ್ರಧಾನ ಕಚೇರಿ ಜರ್ಮನಿಯಲ್ಲಿದೆ. ಅನಾಮಿಕ ಇಮೇಲ್‌ ಕಳುಹಿಸುವ ಫೀಚರ್‌ ಕೂಡ ಇದರಲ್ಲಿದೆ. ಉಚಿತವಾಗಿ ಒಂದು ಜಿಬಿ ಮತ್ತು ಬಳಿಕ ತುಸು ಮೊತ್ತ ಪಾವತಿಸಿ ಜಿಬಿ ಹೆಚ್ಚಿಸಿಕೊಳ್ಳಬಹುದು.

ರನ್‌ ಬಾಕ್ಸ್‌ (Runbox)

ಇದು ಕೂಡ ಅತ್ಯುತ್ತಮ ಪ್ರೈವೇಸಿ ಫೀಚರ್‌ ಇರುವ ಇಮೇಲ್‌. ನಾರ್ವೆ ಮೂಲದ ಈ ಕಂಪನಿಯು ಆ ದೇಶದ ಕಠಿಣ ಪ್ರೈವೇಸಿ ಕಾನೂನನ್ನು ಗಮನದಲ್ಲಿಟ್ಟುಕೊಂಡು ಈ ಇಮೇಲ್‌ ಸೇವೆ ನೀಡುತ್ತಿದೆ. ಆದರೆ, ಇದು ಉಚಿತ ಇಮೇಲ್‌ ಅಲ್ಲ. ತಿಂಗಳಿಗೆ 19.95 ಡಾಲರ್‌ ನೀಡಬೇಕು.

ಔಟ್‌ಲುಕ್‌ (Outlook)

ಜಿಮೇಲ್‌ ಖ್ಯಾತಿಗೆ ಬರುವ ಮೊದಲು ಔಟ್‌ಲುಕ್‌ ಇಮೇಲ್‌ ಫೇಮಸ್‌ ಆಗಿತ್ತು. ಈಗಲೂ ಔಟ್‌ಲುಕ್‌ ಇಮೇಲ್‌ ಬಳಕೆಯಲ್ಲಿದೆ. ವಿಶೇಷವಾಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಔಟ್‌ಲು ಇಮೇಲ್‌ ಬಳಸುತ್ತಾರೆ. ಇದು ಮೈಕ್ರೊಸಾಫ್ಟ್‌ನ ಇಮೇಲ್‌ ಸೇವೆ. ನಿಮ್ಮ ಡೊಮೈನ್‌ ಹೆಸರಿಗೆ ಇದನ್ನು ಕನೆಕ್ಟ್‌ ಮಾಡಬಹುದು.

ಇಷ್ಟು ಮಾತ್ರವಲ್ಲದೆ ಐಕ್ಲೌಡ್‌ ಇಮೇಲ್‌, ಮೇಲ್‌ಫೆನ್ಸ್‌, ಯಾಹೂಮೇಲ್‌ ಸೇರಿದಂತೆ ಹತ್ತು ಹಲವು ಇಮೇಲ್‌ ಸೇವೆಗಳು ದೊರಕುತ್ತವೆ.

Whats_app_banner