Budget Smartphones: ರೆಡ್ಮಿಯಿಂದ ರಿಯಲ್‍ಮಿ ವರೆಗೆ: ರೂ. 15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ ಬಜೆಟ್ ಫೋನ್‌ಗಳಿವು
ದೇಶದ ಹೆಚ್ಚಿನ ಭಾಗಗಳಲ್ಲಿ ಈಗ 5ಜಿ ಲಭ್ಯವಾಗುತ್ತಿರುವುದರಿಂದ ಕಡಿಮೆ ಬೆಲೆಗೆ 5ಜಿ ಫೋನುಗಳು ಕೂಡ ರಿಲೀಸ್ ಆಗುತ್ತಿದೆ. ಅದರಂತೆ ಸದ್ಯ 15,000 ರೂ. ಒಳಗೆ ಲಭ್ಯವಿರುವ ಟ್ರೆಂಡಿಂಗ್ ಸ್ಮಾರ್ಟ್ಫೋನ್ಗಳು ಯಾವುವು ನೋಡೋಣ.(ಬರಹ: ವಿನಯ್ ಭಟ್)
ಇಂದು ಮಾರುಕಟ್ಟೆಯಲ್ಲಿ ತಿಂಗಳಿಗೆ ಕಡಿಮೆ ಎಂದರೂ ನಾಲ್ಕರಿಂದ ಐದು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತವೆ. ಇದರಲ್ಲಿ ಹೆಚ್ಚಿನವು ಬಜೆಟ್ ಬೆಲೆಯದ್ದೇ ಆಗಿದೆ. ಭಾರತದ ಜನರು ಬಜೆಟ್ ಸ್ನೇಹಿ ಫೋನುಗಳನ್ನು ಹೆಚ್ಚು ಇಷ್ಟಪಡುವುದರಿಂದ ಕಂಪನಿಗಳು ಕೂಡ ಇದನ್ನೇ ಅನಾವರಣ ಮಾಡುತ್ತಿದೆ. ಅಲ್ಲದೆ ದೇಶದ ಹೆಚ್ಚಿನ ಭಾಗಗಳಲ್ಲಿ ಈಗ 5ಜಿ ಲಭ್ಯವಾಗುತ್ತಿರುವುದರಿಂದ ಕಡಿಮೆ ಬೆಲೆಗೆ 5ಜಿ ಫೋನುಗಳು ಕೂಡ ರಿಲೀಸ್ ಆಗುತ್ತಿದೆ. ಅದರಂತೆ ಸದ್ಯ 15,000 ರೂ. ಒಳಗೆ ಲಭ್ಯವಿರುವ ಟ್ರೆಂಡಿಂಗ್ ಸ್ಮಾರ್ಟ್ಫೋನ್ಗಳು ಯಾವುವು ನೋಡೋಣ.
ರಿಯಲ್ ಮಿ 12 5G: ರಿಯಲ್ ಮಿ 12 5G ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಸಾಮಾಜಿಕ ಮಾಧ್ಯಮವನ್ನು ಬಳಸುವುದು ಸೇರಿದಂತೆ ದೈನಂದಿನ ಬಳಕೆಗೆ ಇದು ತುಂಬಾ ಉಪಯುಕ್ತವಾಗಿದೆ. 5,000 mAh ಬ್ಯಾಟರಿಯನ್ನು ಹೊಂದಿರುವ ಇದು ದೀರ್ಘಾವಧಿಯ ಚಾರ್ಜ್ ಅನ್ನು ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ರೂ. 12,214ಕ್ಕೆ ಮಾರಾಟವಾಗುತ್ತಿದೆ.
ಮೊಟೊ G45 5G: ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್ ಹೊಂದಿರುವ ಕೆಲವೇ ಕೆಲವು ಫೋನುಗಳಲ್ಲಿ ಮೊಟೊ G45 5G ಕೂಡ ಒಂದು. ಇದು ಕ್ವಾಲ್ಕಂನ ಸ್ನಾಪ್‌ಡ್ರಾಗನ್ 6s Gen 3 ಚಿಪ್‌ಸೆಟ್ ಶಕ್ತಿ ಹೊಂದಿದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. 20W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರ ಬೇಸ್ ಮಾಡೆಲ್ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 10,999 ರೂ. ನಿಗದಿ ಮಾಡಲಾಗಿದೆ. ಇತ್ತೀಚೆಗಷ್ಟೆ ಬಿಡುಗಡೆ ಆಗಿರುವ ಈ ಫೋನ್ ಆಗಸ್ಟ್ 28 ರಿಂದ ಮಾರಾಟವಾಗಲಿದೆ.
ರೆಡ್ಮಿ 13 5G: ಈ ಸ್ಮಾರ್ಟ್‌ಫೋನ್ ಜನಪ್ರಿಯ ರೆಡ್ಮಿ 12 5G ಯ ಉತ್ತರಾಧಿಕಾರಿಯಾಗಿದೆ. ಇದು ಬರೋಬ್ಬರಿ 108MP ಪ್ರಾಥಮಿಕ ಸಂವೇದಕ ಕ್ಯಾಮೆರಾವನ್ನು ಹೊಂದಿದೆ. ಇದು ರೆಡ್ಮಿ 12 5G ಯಂತೆಯೇ ಅದೇ ಬ್ಯಾಟರಿ ವೈಶಿಷ್ಟ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ರೂ. 14,295 ಆಗಿದೆ.
ಮೊಟೊರೊಲ G64 5G: ಇದು ಲಭ್ಯವಿರುವ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮನ್ಸಿಟಿ 025 Soc ನಿಂದ ಚಾಲಿತವಾಗಿದೆ. ಇದು ದೈನಂದಿನ ಬಳಕೆ ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಇದು 8GB RAM ಜೊತೆಗೆ 128GB ಅಥವಾ 12GB RAM ಜೊತೆಗೆ 256GB ವೈಶಿಷ್ಟ್ಯವನ್ನು ಹೊಂದಿದೆ. ಈ ಫೋನ್ 6,000 mAh ಬ್ಯಾಟರಿಯನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ. 12,999.
ಲಾವಾ ಸ್ಟೋರ್ಮ್ 5G: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ ಪ್ಯಾಕ್ ಮಾಡಲಾದ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಒಂದಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ಅನ್ನು ಹೊಂದಿದೆ. ಇದು ದೈನಂದಿನ ಬಳಕೆ ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಈ ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿಯನ್ನು ಹೊಂದಿದೆ. ರೂ. 12,498ಕ್ಕೆ ಮಾರಾಟವಾಗುತ್ತಿದೆ.