WhatsApp new Feature: ವಾಟ್ಸಾಪ್‌ಗೆ ಬರಲಿದೆ ಹೊಸ ಸೌಲಭ್ಯ; ಫೇವರೆಟ್ ಕಾಂಟ್ಯಾಕ್ಟ್‌ನಲ್ಲಿ ಈ ಕೆಲಸ ಮತ್ತಷ್ಟು ಸುಲುಭ-technology news favourite contacts feature for quick calls and posts in whatsapp rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Whatsapp New Feature: ವಾಟ್ಸಾಪ್‌ಗೆ ಬರಲಿದೆ ಹೊಸ ಸೌಲಭ್ಯ; ಫೇವರೆಟ್ ಕಾಂಟ್ಯಾಕ್ಟ್‌ನಲ್ಲಿ ಈ ಕೆಲಸ ಮತ್ತಷ್ಟು ಸುಲುಭ

WhatsApp new Feature: ವಾಟ್ಸಾಪ್‌ಗೆ ಬರಲಿದೆ ಹೊಸ ಸೌಲಭ್ಯ; ಫೇವರೆಟ್ ಕಾಂಟ್ಯಾಕ್ಟ್‌ನಲ್ಲಿ ಈ ಕೆಲಸ ಮತ್ತಷ್ಟು ಸುಲುಭ

WhatsApp new Feature: ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಬರಲಿದೆ. ಇದರ ಹೆಸರು ವಾಟ್ಸಪ್ ಫೇವರಿಟ್ ಕಾಂಟ್ಯಾಕ್ಟ್ಸ್‌. ಇದರ ವಿವರಗಳನ್ನು ಇಲ್ಲಿ ತಿಳಿಯೋಣ.

ವಾಟ್ಸಾಪ್‌ನಲ್ಲಿ ಬರಲಿದೆ ಫೇವರೆಟ್ ಕಾಂಟ್ಯಾಕ್ಟ್ಸ್ ಹೊಸ ವೈಶಿಷ್ಟ್ಯ
ವಾಟ್ಸಾಪ್‌ನಲ್ಲಿ ಬರಲಿದೆ ಫೇವರೆಟ್ ಕಾಂಟ್ಯಾಕ್ಟ್ಸ್ ಹೊಸ ವೈಶಿಷ್ಟ್ಯ

ಬೆಂಗಳೂರು: ತನ್ನ ಬಳಕೆದಾರರಿಗೆ ಯಾವಾಗಲೂ ಹೊಸ ಅನುಭವಗಳನ್ನು ನೀಡಲು ನಿತ್ಯ ಕೃಷಿ ಮಾಡುತ್ತಿರುವ ಸಾಮಾಜಿಕ ಜಾಲತಾಣ ಸಂಸ್ಥೆ ವಾಟ್ಸಾಪ್ (WhatsApp new Feature) ಕಳೆದ ವರ್ಷ ಹಲವು ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲಿ ಒಂದು ಚಾನೆಲ್ ಕೂಡ ಒಂದು. ಈ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾ ಇಷ್ಟವಾಗಿದೆ. ಇದೀಗ ಮೆಟಾ 2024 ರಲ್ಲೂ ವಾಟ್ಸಾಪ್‌ನಲ್ಲಿ ಹೊಸ ಪೀಚರ್‌ಗಳನ್ನು ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಸದ್ಯದಲ್ಲೇ ಹೊಸ ಫೀಚರ್ ಬಿಡುಗಡೆಯಾಗಿದೆ ಎಂದು ವರದಿಯಾಗಿದೆ. ಆ ವೈಶಿಷ್ಟ್ಯದ ಹೆಸರು ಫೇವರೆಟ್ ಕ್ಯಾಂಟಾಕ್ಟ್ಸ್. ಇದು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ.

ವಾಟ್ಸಾಪ್‌ನಲ್ಲಿ ಫೇವರೆಟ್ ಕಾಂಟ್ಯಾಕ್ಟ್ ಸೌಲಭ್ಯ

ಫೇವರೆಟ್ ಕಾಂಕ್ಯಾಕ್ಟ್ಸ್ ವೈಶಿಷ್ಟ್ಯದ ಅರ್ಥವು ಇದರ ಹೆಸರಿನಲ್ಲೇ ಇದೆ. ಸಾಮಾನ್ಯವಾಗಿ ಫೋನ್ ಕಾಂಟ್ಯಾಕ್ಟ್ಸ್‌ನಲ್ಲಿ ಫೇವರೆಟ್ಸ್, ಸ್ಪೀಡ್ ಡಯಲ್‌ಗಳನ್ನು ಒಳಗೊಂಡಿರುತ್ತವೆ. ಅದೇ ರೀತಿ ಹೊಸ ಫೀಚರ್‌ನೊಂದಿಗೆ ನಾವು ವಾಟ್ಸಾಪ್‌ನಲ್ಲೂ ನಮ್ಮ ನೆಚ್ಚಿನ ಕ್ಯಾಂಟ್ಯಾಕ್ಟ್ಸ್‌ ಪಟ್ಟಿಯನ್ನು ಮಾಡಿಕೊಳ್ಳಬಹುದು. ವಾಟ್ಸಾಪ್‌ನಲ್ಲಿ ಬರಲಿರುವ ಈ ಸೌಲಭ್ಯವು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ.

ವಾಟ್ಸಾಪ್‌ನಲ್ಲಿ ಬರಲಿರುವ ಫೇವರೆಟ್ ಕಾಂಟ್ಯಾಕ್ಟ್ಸ್ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಜನರಿಗೆ ಸುಲಭವಾಗಿ ವಿಡಿಯೊ ಮತ್ತು ಆಡಿಯೊ ಕರೆಗಳನ್ನು ಮಾಡಬಹುದು. ಇದು ಕರೆ ಮಾಡುವ ಅನುಭವವನ್ನು ಸುಧಾರಿಸುತ್ತದೆ. ವಾಟ್ಸಾಪ್ ಹೊಸ ವೈಶಿಷ್ಟ್ಯದಲ್ಲಿ ಬಳಕೆದಾರರರು ತಮ್ಮ ಫೇವರೆಟ್ ಕಾಂಟ್ಯಾಕ್ಟ್‌ಗಳನ್ನು ಹೇಗೆ ರಚಿಸಿಕೊಳ್ಳುತ್ತಾರೆ ಎಂಬ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಆದರೆ ನೀವು ಸಂಬಂಧಿತ ಕಾಂಟ್ಯಾಕ್ಟ್‌ಗಳನ್ನು ಹೆಚ್ಚು ಬಳಸಿದರೆ, ಅದರ ಪಕ್ಕದಲ್ಲಿ ನೆಚ್ಚಿನ ಆಯ್ಕೆಯು ಬರಬಹುದು ಎಂದು ಟೆಕ್ ಮೂಲಗಳು ತಿಳಿಸಿವೆ. ಈ ಫೇವರೆಟ್ ಕಾಂಟ್ಯಾಕ್ಟ್‌ಗಳನ್ನು ಹೇಗೆ ರಚಿಸುವುದು ಅನ್ನೋದರ ಬಗ್ಗೆ ವಾಟ್ಸಾಪ್‌ ಕಂಪನಿಯೇ ವಿಡಿಯೊ ಮೂಲಕ ಶೀಘ್ರದಲ್ಲೇ ತಿಳಿಸುವ ಸಾಧ್ಯತೆ ಇದೆ.

ವಾಟ್ಸಾಪ್‌ ಫೇವರೆಟ್ ಕಾಂಟ್ಯಾಕ್ಟ್ಸ್‌ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ. ಅದಕ್ಕಿಂತ ಮುಖ್ಯವಾಗಿ ನೂರಾರು ಕಾಂಟ್ಯಾಕ್ಟ್ ಇರುವವರು ತಮ್ಮ ಇಷ್ಟದ ನಂಬರ್‌ಗಳನ್ನು ಈ ರೀತಿ ಗ್ರೂಪ್‌ನಲ್ಲಿ ಹಾಕಿಕೊಂಡರೆ ತಕ್ಷಣವೇ ವಿಡಿಯೊ ಮತ್ತು ಆಡಿಯೊ ಕಾಲ್ ಮಾಡಲು ಸುಲಭವಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ವಾಟ್ಸಾಪ್‌ ವಿವರಿಸಬೇಕಿದೆ. ಸದ್ಯದಲ್ಲೇ ಅಪ್‌ಡೇಟ್ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಕಮ್ಯೂನಿಟಿ ಯೂಸರ್‌ಗೆ ಪಿನ್ಡ್ ಈವೆಂಟ್ ಎಂಬ ವೈಶಿಷ್ಟ್ಯವನ್ನು ತರಲು ವಾಟ್ಸಾಪ್‌ ವ್ಯವಸ್ಥೆ ಮಾಡುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯದ ಮೂಲಕ ಪ್ರಮುಖ ಘಟನೆಗಳನ್ನು ಗುರುತಿಸಬಹುದು ಎಂದು ಹೇಳಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.

ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಹಾನರ್ 9 ಟ್ಯಾಬ್ಲೆಟ್

ಹಾನರ್ 9 ಟ್ಯಾಬ್ಲೆಟ್ ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಗ್ಯಾಜೆಟ್ ಅನ್ನು ಕಳೆದು ವರ್ಷದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಹಾನರ್ ಈ ಪ್ಯಾಡ್ 9 ಅವನ್ನು ಹೊರ ತಂದಿದೆ. ಇದೀಗ ಹಾನರ್ ಪ್ಯಾಡ್ 9 ಭಾರತದಲ್ಲಿ ಲಾಂಚ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಈ ಟ್ಯಾಬ್ಲೆಟ್ ಇತ್ತೀಚೆಗೆ ಬಿಐಎಸ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಬಿಐಎಸ್ ಸರ್ಟಿಫಿಕೇಟ್ ಪಡೆದುಕೊಂಡಿದೆ ಎಂದರೆ ಸ್ವಲ್ಪ ಸಮಯದ ಬಳಿಕ ಈ ಗ್ಯಾಜೆಟ್ ಮಾರುಕಟ್ಟೆಗೆ ಬರುತ್ತದೆ. ಈ ಲೆಕ್ಕಾಚಾರದಲ್ಲಿ ಹಾನರ್ ಪ್ಯಾಡ್ 9 ಕೂಡ ಶೀಘ್ರವೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸೋದು ಖಚಿತವಾಗಿದೆ. ಬಿಐಎಸ್ ಸರ್ಟಿಫಿಕೇಟ್‌ನ ಮಾಡೆಲ್ ಸಂಖ್ಯೆ HE2-W09. ಸಿಂಗಾಪುರದಲ್ಲೂ ಇದೇ ಮಾದರಿಯ ಸಂಖ್ಯೆಯನ್ನು ಆ ಸಂಸ್ಥೆ ಪಡೆದುಕೊಂಡಿದೆ. (This copy first appeared in Hindustan Times Kannada website. To read more like this please logon to kannada.hindustantime.com).

mysore-dasara_Entry_Point