Google AI: ಕೆಮ್ಮು ಸದ್ದಿನಲ್ಲೇ ರೋಗ ಏನೆಂದು ಹೇಳುವ ಕೃತಕ ಬುದ್ಧಿಮತ್ತೆ- ಗೂಗಲ್​ನ ವಿಚಿತ್ರ ಆವಿಷ್ಕಾರ-technology news google artificial intelligence google helps to find out the disease google ai vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Google Ai: ಕೆಮ್ಮು ಸದ್ದಿನಲ್ಲೇ ರೋಗ ಏನೆಂದು ಹೇಳುವ ಕೃತಕ ಬುದ್ಧಿಮತ್ತೆ- ಗೂಗಲ್​ನ ವಿಚಿತ್ರ ಆವಿಷ್ಕಾರ

Google AI: ಕೆಮ್ಮು ಸದ್ದಿನಲ್ಲೇ ರೋಗ ಏನೆಂದು ಹೇಳುವ ಕೃತಕ ಬುದ್ಧಿಮತ್ತೆ- ಗೂಗಲ್​ನ ವಿಚಿತ್ರ ಆವಿಷ್ಕಾರ

ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಕೃತಕ ಬುದ್ಧಿಮತ್ತೆ ಎಂದು ಕರೆಯಲ್ಪಡುವ AI ತಂತ್ರಜ್ಞಾನದ ಮೇಲೆ ಗೂಗಲ್ ಗಮನವನ್ನು ಕೇಂದ್ರೀಕರಿಸಿದ್ದು, ಕೆಮ್ಮಿನ ಶಬ್ಧದ ಆಧಾರದ ಮೇಲೆ ರೋಗವನ್ನು ಪತ್ತೆಹಚ್ಚಲು ವೈಶಿಷ್ಟ್ಯವನ್ನು ಪರಿಚಯಿಸಿದೆ. (ಬರಹ: ವಿನಯ್ ಭಟ್)

ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.
ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. (Thinkstock)

ಗೂಗಲ್ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ. ಗೂಗಲ್ ನೀಡುವ ವಿವಿಧ ಸೇವೆಗಳನ್ನು ಜಗತ್ತಿನಾದ್ಯಂತ ಶತಕೋಟಿ ಜನರು ಬಳಸುತ್ತಾರೆ. ಗೂಗಲ್ ಸರ್ಚ್, ಇ-ಮೇಲ್, ಜಿಮೇಲ್, ಗೂಗಲ್ ಫೋಟೋಸ್, ಗೂಗಲ್ ಮ್ಯಾಪ್ಸ್ ಹೀಗೆ ಗೂಗಲ್​ನ ಸೇವೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿ ಎಲ್ಲ ವಿಚಾರಗಳಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಆ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ ಎಂದು ಕರೆಯಲ್ಪಡುವ AI ತಂತ್ರಜ್ಞಾನದ ಮೇಲೆ ಗೂಗಲ್ ಗಮನವನ್ನು ಕೇಂದ್ರೀಕರಿಸಿದೆ.

ಅಚ್ಚರಿ ಎಂದರೆ ಕೆಮ್ಮಿನ ಶಬ್ಧದ ಆಧಾರದ ಮೇಲೆ ರೋಗವನ್ನು ಪತ್ತೆಹಚ್ಚಲು ಗೂಗಲ್ ಹೊಸ AI ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದರ ವೈಶಿಷ್ಟ್ಯಗಳು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರವಾಗಿ ನೋಡೋಣ.

ಗೂಗಲ್ ಎಐ ಕೆಮ್ಮಿನ ಶಬ್ದದಿಂದ ಯಾವ ರೋಗ ಎಂದು ಹೇಳುತ್ತದೆ

TB ಸೇರಿದಂತೆ ಉಸಿರಾಟ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪತ್ತೆಹಚ್ಚಲು ಗೂಗಲ್​ನ ಹೊಸ AI ವೈಶಿಷ್ಟ್ಯವನ್ನು ಬಳಸಲಾಗುತ್ತದೆ. ಉಸಿರು ಮತ್ತು ಕೆಮ್ಮಿನ ಶಬ್ಧದ ಮೂಲಕ ರೋಗ ಯಾವುದೆಂದು ಹೇಳಬಹುದು. ಈ ಹೊಸ ವೈಶಿಷ್ಟ್ಯವನ್ನು ಸುಮಾರು 300 ಮಿಲಿಯನ್ ಕೆಮ್ಮು, ವಿಭಿನ್ನವಾಗಿ ಉಸಿರಾಡುವ ಆಡಿಯೋ ಮಾದರಿಗಳೊಂದಿಗೆ ಪರೀಕ್ಷಿಸಲಾಗಿದೆ.

ಭಾರತದ ಉಸಿರಾಟದ ಆರೋಗ್ಯ AI ಕಂಪನಿಯಾದ ಚಾಲ್ಸಿಡ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಗೂಗಲ್ ಈ ಸಂಶೋಧನೆಯನ್ನು ನಡೆಸಿದೆ. ಶೀಘ್ರದಲ್ಲೇ ಇದನ್ನು ಆರೋಗ್ಯ ರಕ್ಷಣೆ ಇಲ್ಲದ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯಿರುವ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಲು ಯೋಜಿಸಿದೆ.

ಆರಂಭಿಕ ಹಂತದ ಸಮಸ್ಯೆ ಪತ್ತೆಹಚ್ಚಲು ಉಪಯುಕ್ತವಾಗಿದೆ

ಈ AI, ವ್ಯಕ್ತಿಯು ತನ್ನ ಕೆಮ್ಮಿನ ಶಬ್ಧದಿಂದ ಯಾವ ರೀತಿಯ ಸಮಸ್ಯೆಯನ್ನು ಹೊಂದಿದ್ದಾನೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡುತ್ತದೆ. ಇದಲ್ಲದೆ, ಆರಂಭದಲ್ಲಿ ಇದನ್ನು ನೋಡುವ ಮೂಲಕ ಮುಂಬರುವ ದೊಡ್ಡ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಲಾಗುತ್ತದೆ. ಗೂಗಲ್‌ನ ಈ ಉಪಕ್ರಮವು ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದ ಆರ್ಥಿಕವಾಗಿ ಹಿಂದುಳಿದ ಜನರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ರೋಗಿಯ ಕೆಮ್ಮಿನ ಶಬ್ಧವನ್ನು ಕೇಳುವ ಮೂಲಕ ಕೊರೊನಾ ಇದೆಯೆ ಅಥವಾ ಇಲ್ಲವೆ ಎಂದು ಹೇಳಬಹುದೆಂದು ವೈದ್ಯರು ತಿಳಿಸಿದ್ದರು. ಇದರಿಂದ ಪ್ರೇರಿತರಾದ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಯೂಟ್ಯೂಬ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಕೆಮ್ಮಿನ ಶಬ್ಧಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಯಾವ ರೀತಿಯ ಕೆಮ್ಮು ಯಾವ ರೋಗವನ್ನು ಸೂಚಿಸುತ್ತದೆ ಎಂಬುದನ್ನು ತಮ್ಮ ಯಂತ್ರಕ್ಕೆ ಅಳವಡಿಸಿದ್ದಾರೆ.