Gmail News: ಸರಳ ಜಿಮೇಲ್‌ಗೆ ಟಾಟಾ ಹೇಳಲಿದೆ ಗೂಗಲ್‌; ಜನವರಿ 2024ರ ಬಳಿಕ ಗೂಗಲ್‌ ಇಮೇಲ್‌ನಲ್ಲಿ ಈ ಬದಲಾವಣೆ
ಕನ್ನಡ ಸುದ್ದಿ  /  ಜೀವನಶೈಲಿ  /  Gmail News: ಸರಳ ಜಿಮೇಲ್‌ಗೆ ಟಾಟಾ ಹೇಳಲಿದೆ ಗೂಗಲ್‌; ಜನವರಿ 2024ರ ಬಳಿಕ ಗೂಗಲ್‌ ಇಮೇಲ್‌ನಲ್ಲಿ ಈ ಬದಲಾವಣೆ

Gmail News: ಸರಳ ಜಿಮೇಲ್‌ಗೆ ಟಾಟಾ ಹೇಳಲಿದೆ ಗೂಗಲ್‌; ಜನವರಿ 2024ರ ಬಳಿಕ ಗೂಗಲ್‌ ಇಮೇಲ್‌ನಲ್ಲಿ ಈ ಬದಲಾವಣೆ

2024ರ ಜನವರಿಯಿಂದ ಗೂಗಲ್‌ ಜೀಮೇಲ್‌ನ ಬೇಸಿಕ್‌ ಎಚ್‌ಟಿಎಂಎಲ್‌ ಆವೃತ್ತಿಗೆ ಗುಡ್‌ ಬಾಯ್‌ ಹೇಳಲಿದೆ. 10 ವರ್ಷಗಳ ಹಿಂದಿನ ಈ ಫೀಚರ್‌ ತನ್ನ ಗ್ರಾಹಕರಿಗೆ ಇಮೇಲ್‌ಗಳನ್ನು ಸುಲಭವಾದ ಫಾರ್ಮ್ಯಾಟ್‌ನಲ್ಲಿ ನೋಡಲು ಅನುವು ಮಾಡಿಕೊಡುತ್ತಿತ್ತು.

ಸರಳ ಜಿಮೇಲ್‌ಗೆ ಟಾಟಾ ಹೇಳಲಿದೆ ಗೂಗಲ್‌; ಜನವರಿ 2024ರ ಬಳಿಕ ಗೂಗಲ್‌ ಇಮೇಲ್‌ನಲ್ಲಿ ಈ ಬದಲಾವಣೆ
ಸರಳ ಜಿಮೇಲ್‌ಗೆ ಟಾಟಾ ಹೇಳಲಿದೆ ಗೂಗಲ್‌; ಜನವರಿ 2024ರ ಬಳಿಕ ಗೂಗಲ್‌ ಇಮೇಲ್‌ನಲ್ಲಿ ಈ ಬದಲಾವಣೆ

ಈಗಾಗಲೇ ತನ್ನ ಒಂದಿಷ್ಟು ಆವೃತ್ತಿಗಳಿಗೆ ಗುಡ್‌ಬಾಯ್‌ ಹೇಳಿರುವ ಗೂಗಲ್‌ ಇದೀಗ ಇನ್ನೊಂದು ಆವೃತ್ತಿಯನ್ನು ನಿಲ್ಲಿಸಲು ಹೊರಟಿದೆ. 2024ರ ಜನವರಿಯಿಂದ ಜೀಮೇಲ್‌ ಮೂಲ ಆವೃತ್ತಿ ಅಥವಾ ಸರಳ ಆವೃತ್ತಿ ತನ್ನ ಕಾರ್ಯಾ ನಿಲ್ಲಿಸಲಿದೆ. ಈಗ ಇಮೇಲ್‌ ಸ್ಟ್ಯಾಂಡರ್ಡ್‌ ಆವೃತ್ತಿಯೇ ಹೆಚ್ಚು ಬಳಕೆಯಲಿದ್ದು, ಇಮೇಲ್‌ ಬೇಸಿಕ್‌ ಆವೃತ್ತಿಯು 10 ವರ್ಷಗಳ ಹಿಂದಿನ ಫೀಚರ್‌ ಆಗಿದೆ.

ಗಡುವಿನ ದಿನಾಂಕದ ನಂತರ ಜಿಮೇಲ್‌ ಸ್ವಯಂಚಾಲಿತವಾಗಿ ತನ್ನ ಬೇಸಿಕ್‌ ಆವೃತ್ತಿಯಿಂದ ಸ್ಟ್ಯಾಂಡರ್ಡ್‌ ಆವೃತ್ತಿಗೆ ತೆರೆದುಕೊಳ್ಳಲಿದೆ. ಇದನ್ನು ಗ್ರಾಹಕರು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಗೂಗಲ್‌ ತಮ್ಮ ಪುಟವನ್ನು ನವೀಕರಿಸಿದೆ. ಅಲ್ಲದೆ ಕಂಪನಿಯು ಜಿಮೇಲ್‌ ಬಳಕೆದಾರರಿಗೆ ಈ ಬಗ್ಗೆ ತಿಳಿಸುವ ಇಮೇಲ್‌ ಸಂದೇಶವನ್ನು ಕೂಡ ಕಳುಹಿಸಿದೆ.

ಇಮೇಲ್‌ ಬಳಕೆದಾರರಿಗೆ ಗೂಗಲ್‌ ಸಂದೇಶ ಹೀಗಿದೆ

2024ರ ಜನವರಿಯಿಂದ ಮೊಬೈಲ್‌ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಜಿಮೇಲ್‌ನ ಹಳೆಯ ಸರಳ ಆವೃತ್ತಿ ಡಿಸೇಬಲ್‌ ಆಗಲಿದೆ. ಜಿಮೇಲ್‌ನ ಈ ಸರಳ ಆವೃತ್ತಿಯು 10 ವರ್ಷಗಳ ಹಿಂದಿನದ್ದಾಗಿದ್ದು, ಇದನ್ನು ಸ್ಟ್ಯಾಂಡರ್ಡ್‌ ಆವೃತ್ತಿಗೆ ಬದಲಿಸಲಾಗಿದೆ. ಇನ್ನು ಮುಂದೆ ಸ್ಟ್ಯಾಂಡರ್ಡ್‌ ಆವೃತ್ತಿ ಮಾತ್ರ ಬಳಕೆಯಲ್ಲಿರಲಿದೆʼ ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ.

ಬಳಕೆದಾರರು ಹಳೆಯ ಬೇಸಿಕ್‌ ಆವೃತ್ತಿಗೆ ಪ್ರವೇಶಿಸಲು ಪ್ರಯತ್ನಿಸಿದರೆ ಗೂಗಲ್‌ ಆವೃತ್ತಿಯು ʼಸ್ಲೋ ಕನೆಕ್ಷನ್‌ ಮತ್ತು ಲೆಗಸಿ ಬ್ರೌಸರ್‌ʼ ಎಂದು ಸಂದೇಶವನ್ನು ತೋರಿಸುತ್ತದೆ. ಅಲ್ಲದೆ ಸ್ಟ್ಯಾಂಡರ್ಡ್‌ ಆವೃತ್ತಿ ಬಳಸಲು ನಿಮಗೆ ಇಷ್ಟವಿಲ್ಲವೇ ಎಂದು ಪ್ರಶ್ನೆ ಮಾಡುತ್ತದೆ.

ಜಿಮೇಲ್‌ ಬೇಸಿಕ ಆವೃತ್ತಿಯಲ್ಲಿ ಚಾಟ್‌, ಸ್ಪೆಲ್‌ ಚಕರ್‌, ಸರ್ಚ್‌ ಫಿಲ್ಟರ್‌, ಕಿಬೋರ್ಡ್‌ ಶಾರ್ಟ್‌ಕರ್ಟ್‌ ಹಾಗೂ ರಿಚ್‌ ಫಾರ್ಮ್ಯಾಟಿಂಗ್‌ನಂತಹ ಹಲವು ಫೀಚರ್‌ಗಳಿದ್ದವು.

ಕಡಿಮೆ ಕನೆಕ್ಟಿವಿಟಿ ಹೊಂದಿರುವ ಪ್ರದೇಶದಲ್ಲೂ ಇದು ಬಳಕೆ ಯೋಗ್ಯವಾಗಿತ್ತು. ಅಲ್ಲದೆ ಯಾವುದೇ ಎಕ್ಸ್ಟ್ರಾ ಫೀಚರ್‌ಗಳಿಲ್ಲದೆ ಮೇಲ್‌ಗಳನ್ನು ಪರಿಶೀಲನೆ ಮಾಡಲು ಸಾಧ್ಯವಾಗುತ್ತಿತ್ತು. ಕಡಿಮೆ ಕನೆಕ್ಟಿವಿಟಿಗಾಗಿ ಮತ್ತೊಂದು ಮೋಡ್‌ ಅನ್ನು ಸೇರಿಸಲು ಗೋಗಲ್‌ ಯೋಜಿಸುತ್ತಿದೆಯೇ ಎಂಬುದು ಇಲ್ಲಿಯವರೆಗೆ ಸಷ್ಟವಾಗಿಲ್ಲ.

ಗೂಗಲ್‌ ಇತ್ತೀಚೆಗೆ ಗೂಗಲ್‌ ಪಾಡ್‌ಕಾಸ್ಟ್‌ ಫೀಚರ್‌ ಅನ್ನು ಕೂಡ ನಿಲ್ಲಿಸಿತ್ತು. 2024ರ ವೇಳೆಗೆ ವೈಟ್‌ ಬೋರ್ಡಿಂಗ್‌ ಆಪ್‌ ಹಾಗೂ ಜಾಮ್‌ಬೋರ್ಡ್‌ಗಳನ್ನು ನಿಲ್ಲಿಸುವುದಾಗಿ ಗೂಗಲ್‌ ಇತ್ತೀಚೆಗೆ ತಿಳಿಸಿತ್ತು.

ಇದನ್ನೂ ಓದಿ

Gmail Alternatives: ಗೂಗಲ್‌ ಜಿಮೇಲ್‌ಗೆ ಪರ್ಯಾಯವಾಗಿ ಬಳಸಬಹುದಾದ 6 ಇಮೇಲ್‌ಗಳು, ಇವುಗಳಲ್ಲಿ ಬಹುತೇಕ ಸಂಪೂರ್ಣ ಉಚಿತ

ಗೂಗಲ್‌ ಜಿಮೇಲ್‌ ಬಹುಜನಪ್ರಿಯ ಇಮೇಲ್‌. ಇದರಲ್ಲಿ 15 ಜಿಬಿವರೆಗೆ ಉಚಿತ ಸ್ಟೋರೇಜ್‌ ಇರುತ್ತದೆ. ಗೂಗಲ್‌ ಡ್ರೈವ್‌, ಫೋಟೋ ಇತ್ಯಾದಿಗಳನ್ನು ಬಳಸಿದಾಗ ಜಿಮೇಲ್‌ ಸ್ಥಳಾವಕಾಶ ಸಾಕಾಗುವುದಿಲ್ಲ. ಕೆಲವರಿಗೆ ಜಿಮೇಲ್‌ ಬಳಸಲು ಇಷ್ಟವಿಲ್ಲದೆಯೂ ಇರಬಹುದು. ಇಂತಹ ಕಾರಣಕ್ಕಾಗಿ ಜಿಮೇಲ್‌ಗೆ ಪರ್ಯಾಯವಾಗಿ ಯಾವೆಲ್ಲ ಇಮೇಲ್‌ ಸೇವಾ ಕಂಪನಿಗಳಿವೆ ಎಂದು ಹುಡುಕುತ್ತಿರುತ್ತಾರೆ. ನೀವು ಕೂಡ ಜಿಮೇಲ್‌ಗೆ ಪರ್ಯಾಯವಾದ ಇಮೇಲ್‌ ಹುಡುಕುತ್ತಿದ್ದರೆ ಇಲ್ಲಿ 6 ಇಮೇಲ್‌ಗಳ ಕುರಿತು ತಿಳಿಸಲಾಗಿದೆ.

Whats_app_banner