ಆಹಾ ಅದ್ಭುತ, ಆಂಡ್ರಾಯ್ಡ್ ಆಟೋ ಗೂಗಲ್ ಮ್ಯಾಪ್‌ಗೆ ಹೊಸ ಫೀಚರ್; ಇನ್ಸಿಡೆಂಟ್ ರಿಪೋರ್ಟಿಂಗ್ ಹೇಗೆ ಕೆಲಸ ಮಾಡುತ್ತೆ?
Google Maps New Feature: ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮೂಲಕ ಗೂಗಲ್ ಮ್ಯಾಪ್ ಬಳಸುವವರಿಗೆ ರಸ್ತೆ ಪ್ರಯಾಣ ಇನ್ನಷ್ಟು ಉತ್ತಮವಾಗುವಂತೆ ಹೊಸ ಫೀಚರ್ ದೊರಕಿದೆ. ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕವೇ ಚಾಲಕರು ರಸ್ತೆಯಲ್ಲಿ ಕಾಣಿಸಿದ ಅಪಘಾತಗಳು, ಪ್ರಯಾಣಕ್ಕೆ ಇರುವ ಅಡೆತಡೆಗಳ ವಿವರವನ್ನು ನೀಡಬಹುದಾಗಿದೆ.
ಗೂಗಲ್ ಕಂಪನಿಯು ಆಂಡ್ರಾಯ್ಡ್ ಆಟೋಗೆ ಇನ್ಸಿಡೆಂಟ್ ರಿಪೋರ್ಟಿಂಗ್ (ಪ್ರಯಾಣದ ಸಂದರ್ಭದಲ್ಲಿ ಕಾಣಿಸುವ ಘಟನೆಗಳ ಮಾಹಿತಿ ನೀಡುವುದು) ಫೀಚರ್ ಅನ್ನು ಪರಿಚಯಿಸಿದೆ. ವಾಹನದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕವೇ ರಸ್ತೆ ಅಪಘಾತ, ರಸ್ತೆ ತಡೆಗಳು, ಅಪಾಯಗಳು, ರಸ್ತೆಯ ಪರಿಸ್ಥಿತಿ ಕುರಿತು ಅಪ್‌ಡೇಟ್ ನೀಡುವ ವ್ಯವಸ್ಥೆ ಇದಾಗಿದೆ. ಈ ಮೂಲಕ ಇತರರಿಗೆ ಈ ರಸ್ತೆಯಲ್ಲಿ ತೊಂದರೆಯಿದೆ, ಬರಬೇಡಿ ಎಂಬ ಸೂಚನೆ ದೊರಕಲಿದೆ. ಗೂಗಲ್ ಮ್ಯಾಪ್‌ನಲ್ಲಿ ರಿಯಲ್ ಟೈಮ್ ಮಾಹಿತಿ ದೊರಕಲು ಈ ಫೀಚರ್ ನೆರವಾಗಲಿದೆ.
ಆಂಡ್ರಾಯ್ಡ್ ಆಟೋದಲ್ಲಿ ಚಾಲಕರು ರಸ್ತೆ ಅಪಘಾತಗಳು, ಟ್ರಾಫಿಕ್ ಜಾಮ್, ನಿರ್ಮಾಣ ಕೆಲಸ ಕಾರ್ಯಗಳಿಂದ ಪ್ರಯಾಣಕ್ಕೆ ಕಷ್ಟವಾಗಿರುವುದು, ರಸ್ತೆಯಲ್ಲಿ ಇರುವ ಇತರೆ ಅಡೆತಡೆಗಳ ವಿವರವನ್ನು ನೀಡಬಹುದು. ಇದರಿಂದ ಇದೇ ರಸ್ತೆಯಲ್ಲಿ ಬರಲಿರುವ ಚಾಲಕರಿಗೆ ಸೂಕ್ತ ಮಾಹಿತಿ ದೊರಕಲಿದೆ. ಈ ಮಾಹಿತಿಗೆ ತಕ್ಕಂತೆ ತಮ್ಮ ಪ್ರಯಾಣ ಮಾರ್ಗವನ್ನು ಬದಲಿಸಿಕೊಳ್ಳಬಹುದು.
ಇನ್ಸಿಡೆಂಟ್ ರಿಪೋರ್ಟಿಂಗ್ ಫೀಚರ್ ಬಳಕೆ ಹೇಗೆ?
ಈಗ ಬಹುತೇಕ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಎಂಬ ಗೂಗಲ್ ಮ್ಯಾಪ್ ನ್ಯಾವಿಗೇಷನ್ ಫೀಚರ್ ಇರುತ್ತದೆ. ಇದನ್ನು ಬಳಸುವಾಗ ಚಾಲಕರಿಗೆ ರಿಪೋರ್ಟ್ ಇನ್ಸಿಡೆಂಟ್ ಎಂಬ ವಿಭಾಗ ಕಾಣಿಸುತ್ತದೆ. ಗೂಗಲ್ ಮ್ಯಾಪ್‌ನಲ್ಲಿ ಈ ಬಟನ್ ಕ್ಲಿಕ್ ಮಾಡಿದಾಗ ಘಟನೆಯ ವಿಭಾಗ ಆಯ್ಕೆ ಮಾಡಬೇಕು. ಹೆಚ್ಚುವರಿ ಮಾಹಿತಿ ಅಪ್ಡೇಟ್ ಮಾಡಲು ಅವಕಾಶವಿದೆ. ನಿರ್ದಿಷ್ಟ ಸ್ಥಳದ ಕುರಿತು ವಿವರ ನೀಡಲು ಸಾಧ್ಯವಾಗುತ್ತದೆ. ಇದು ಚಾಲಕರೇ ನೀಡುವ ಮಾಹಿತಿ ಆಗಿರುವ ಕಾರಣ ಇತರೆ ಚಾಲಕರಿಗೆ ನಿರ್ದಿಷ್ಟ ಸ್ಥಳ ಮತ್ತು ನಿರ್ದಿಷ್ಟ ಸಮಯದಲ್ಲೇ ಸರಿಯಾದ ಮಾಹಿತಿ ದೊರಕಲಿದೆ.
ವರದಿಗಳ ಪ್ರಕಾರ ಗೂಗಲ್ ಕಂಪನಿಯು ವಾರ್ನಿಂಗ್ ಕಾರ್ಡ್ ಸಿಸ್ಟಮ್ ಅನ್ನು ಗೂಗಲ್ ಮ್ಯಾಪ್‌ನಲ್ಲಿ ಅಳವಡಿಸಲಿಯಂತೆ. ಗೂಗಲ್ ಲಿಸ್ಟಿಂಗ್‌ನಲ್ಲಿ ಬಳಕೆದಾರರು ಒಂದು ಅಥವಾ ಹೆಚ್ಚು ಫೇಕ್ ರಿವ್ಯೂವನ್ನು ತೆಗೆದುಹಾಕಿದರೆ ನೋಟಿಫಿಕೇಷನ್ ಬರಲಿದೆ. ಇದು ಸದ್ಯ ಇಂಗ್ಲೆಂಡ್‌ನಲ್ಲಿ ಪರಿಚಯಿಸಲಾಗಿದೆ. ಅಮೆರಿಕದಲ್ಲೂ ಸದ್ಯದಲ್ಲಿ ಬಿಡುಗಡೆಯಾಗಲಿದೆ. ಭಾರತದ ಬಿಸ್ನೆಸ್ ಲಿಸ್ಟಿಂಗ್‌ಗೂ ಈ ಫೀಚರ್ ಬರಲಿದೆ. ಸದ್ಯ ಗೂಗಲ ಮ್ಯಾಪ್‌ನ ಇನ್ಸಿಡೆಮಟ್ ರಿಪೋರ್ಟಿಂಗ್ ಕುರಿತು ಇನ್ನಷ್ಟು ವಿವರ ಪಡೆಯೋಣ.
ಗೂಗಲ್ ಮ್ಯಾಪ್‌ನಲ್ಲಿ ಇನ್ಸಿಡೆಂಟ್ ರಿಪೋರ್ಟ್ ಮಾಡುವುದು ಹೇಗೆ?
- ಆಂಡ್ರಾಯ್ಡ್ ಆಟೋ ಅಥವಾ ಮೊಬೈಲ್ ಫೋನ್‌ನಲ್ಲಿ ಗೂಗಲ್ ಮ್ಯಾಪ್ ಆಪ್ ತೆರೆಯಿರಿ.
- ಪ್ರಯಾಣ ಮಾಡಲಿರುವ ಸ್ಥಳವನ್ನು ನಮೂದಿಸಿ ನ್ಯಾವಿಗೇಷನ್ ಆನ್ ಮಾಡಿ.
- ಆಂಡ್ರಾಯ್ಡ್‌ನಲ್ಲಿ ಕೆಳಭಾಗದ ಬಲಭಾಗದಲ್ಲಿರುವ ಪ್ಲಸ್ ಬಟನ್ (add) ಕ್ಲಿಕ್ ಮಾಡಿ.
- ಐಫೋನ್‌ನಲ್ಲಿ ಮ್ಯಾಪ್ ಬಳಸುವವರು ಬಾಟಮ್‌ನಲ್ಲಿರುವ ರಿಪೋರ್ಟ್ ಬಟನ್ ಕ್ಲಿಕ್ ಮಾಡಬಹುದು.
- ಆಕ್ಸಿಡೆಂಟ್, ಸ್ಪೀಡ್ ಟ್ರ್ಯಾಪ್, ರೋಡ್ ಕ್ಲೋಸ್, ಟ್ರಾಫಿಕ್ ಜಾಮ್ ಅಥವಾ ಇತರೆ ಘಟನೆಗಳಲ್ಲಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿ.
- ವರದಿಯನ್ನು ಖಚಿತಪಡಿಸಿ. ಇತರೆ ಬಳಕೆದಾರರ ಜತೆ ಮಾಹಿತಿ ಹಂಚಿಕೊಳ್ಳಿ.
- ಸಬ್‌ಮಿಟ್ ಬಟನ ಕ್ಲಿಕ್ ಮಾಡಿದ ಬಳಿಕ ಮಾಹಿತಿಯು ಮ್ಯಾಪ್‌ನಲ್ಲಿ ಕಾಣಿಸುತ್ತದೆ.