ಕನ್ನಡ ಸುದ್ದಿ  /  Lifestyle  /  Technology News Google Pay App Discontinued In Us No Tension For Indian Users Rmy

Google Pay App: ಈ ದೇಶದಲ್ಲಿ ಮುಂದಿನ ಕೆಲ ತಿಂಗಳ ಬಳಿಕ ಗೂಗಲ್ ಪೇ ಸ್ಥಗಿತ; ಭಾರತೀಯರಿಗಿಲ್ಲ ಆತಂಕ

Google Pay App: ಪೇಮೆಂಟ್ ಆ್ಯಪ್ ಗೂಗಲ್ ಪೇ ಅತಿ ಶೀಘ್ರದಲ್ಲೇ ಅಮೆರಿಕದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ ತಿಳಿಸಿದೆ. ಆದರೆ ಇದು ಭಾರತಕ್ಕೆ ಅನ್ವಿಯಿಸುವುದಿಲ್ಲ.

2024ರ ಜೂನ್ 4 ರಿಂದ ಅಮೆರಿಕದಲ್ಲಿ ಗೂಗಲ್ ಪೇ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.
2024ರ ಜೂನ್ 4 ರಿಂದ ಅಮೆರಿಕದಲ್ಲಿ ಗೂಗಲ್ ಪೇ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.

ಟೆಕ್ ದೈತ್ಯ ಸಂಸ್ಥೆ ಗೂಗಲ್ ಅಮೆರಿಕದ ಜನರಿಗೆ ಮುಂಜಾಗ್ರತಾ ಸೂಚನೆಗಳನ್ನು ನೀಡಿದ್ದು, 2024ರ ಜೂನ್ 4 ರಿಂದ ಗೂಗಲ್ ಪೇ ಆ್ಯಪ್ ಬಳಕೆ ಲಭ್ಯ ಇರುವುದಿಲ್ಲ, ಸ್ಥಗಿತಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಗೂಗಲ್ ಪೇ ಬದಲಿಗೆ ಗೂಗಲ್ ವಾಲೆಟ್‌ಗೆ ಬದಲಾಗುವಂತೆ ಸೂಚಿಸಿದೆ. ಇನ್ನು ಮುಂದೆ ಡಿಜಿಟಲ್ ಪಾವತಿ ಮತ್ತು ವಹಿವಾಟುಗಳಿಗೆ ಗೂಗಲ್ ವಾಲೆಟ್ ಆಪ್ ತಮ್ಮ ಪ್ರಾಥಮಿಕ ವೇದಿಕೆಯಾಗಲಿದೆ ಎಂದು ಹೇಳಿದೆ.

ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆಗಳು ಲಭ್ಯವಿದೆ. ಅಮೆರಿಕದಲ್ಲಿಯೂ ಅನೇಕರು ಈ ಆ್ಯಪ್‌ ದಾಸರಾಗಿದ್ದಾರೆ. ಗೂಗಲ್‌ನ ಇತ್ತೀಚಿನ ಈ ನಿರ್ಧಾರವು ಯುಎಸ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಜೂನ್ 4 ರ ನಂತರ ಗೂಗಲ್ ಪೇ ಆ್ಯಪ್ ಅನ್ನ ತೆಗೆದುಹಾಕಿದರೆ, ಪೀರ್-ಟು-ಪೀರ್ ಪಾವತಿಗಳು, ಆಫರ್ ಡಿಸ್ಕವರಿ, ಬ್ಯಾಲೆನ್ಸ್ ನಿರ್ವಹಣೆಯಂತಹ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ.

ಅಮೆರಿಕದಲ್ಲಿ ಮಾತ್ರ ಗೂಗಲ್ ಪೇ ಕಾರ್ಯನಿರ್ವಹಿಸುವುದಿಲ್ಲ. ಕಂಪನಿಯ ಈ ನಿರ್ಧಾರದಿಂದ ನಿರ್ಧಾರವು ಭಾರತ, ಸಿಂಗಾಪುರ್ ಹಾಗೂ ಇತರ ದೇಶಗಳಲ್ಲಿನ ಗೂಗಲ್ ಬಳಕೆದಾರರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.

ಗೂಗಲ್ ಪ್ಲೇಗಿಂತ ಗೂಗಲ್ ವ್ಯಾಲೆಟ್‌ನಲ್ಲಿ ಹೆಚ್ಚು ಭದ್ರತಾ ವೈಶಿಷ್ಟ್ಯಗಳಿವೆ

ಗೂಗಲ್‌ನ ಪ್ರಮುಖ ಸೇವೆಗಳಲ್ಲಿ ಒಂದಾಗಿರುವ ಗೂಗಲ್ ವಾಲೆಟ್ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಪಾವತಿ ಕಾರ್ಡ್‌ಗಳು, ಟ್ರಾನ್ಸಿಟ್ ಪಾಸ್‌ಗಳು, ಐಡಿ-ಡ್ರೈವಿಂಗ್ ಲೆನ್ಸ್‌ಗಳಂತಹ ಗುರುತಿನ ದಾಖಲೆಗಳಿಗೆ ಸುರಕ್ಷಿತ ರೆಪೊಸಿಟರಿಯಾಗಿ ಕಾರ್ಯನಿರ್ವಹಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಗೂಗಲ್ ವಾಲೆಟ್ ಅನ್ನು ಬಳಸುವ ಜನರು ಅಮೆರಿಕಾದಲ್ಲಿ ಗೂಗಲ್ ಪೇಗಿಂತ 5 ಪಟ್ಟು ಹೆಚ್ಚು ಇದ್ದಾರೆ. ಕಂಪನಿಯ ಪೇಮೆಂಟ್ ಸಿಸ್ಟಮ್ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಗೂಗಲ್ ಪೇ ಖಾತೆಗಳಲ್ಲಿ ಹಣ ಉಳಿದಿದ್ದರೆ ಜೂನ್ 4 ರೊಳಗೆ ಅವುಗಳನ್ನು ಮತ್ತೆ ಬ್ಯಾಂಕ್‌ಗಳಿಗೆ ವರ್ಗಾಯಿಸಬೇಕು ಎಂದು ಕಂಪನಿ ಆ್ಯಪ್ ಬಳಕೆದಾರರಿಗೆ ಹೇಳಿದೆ. ಗೂಗಲ್ ಪೇನಲ್ಲಿ ಕಂಡುಬರುವ ರಿಯಾಯಿತಿಗಳು, ಡೀಲ್‌ಗಳು ಹಾಗೂ ಕೊಡುಗೆಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಇದೇ ವೇಳೆ ಟೆಕ್ ದೈತ್ಯ ಸ್ಪಷ್ಟಪಡಿಸಿದ್ದಾರೆ.

ಗೂಗಲೇ ಪೇ ಸೇವೆಗಳು ಸ್ಥಗಿತಗೊಂಡರೆ, ಕೆಲವು ಬಳಕೆದಾರರು ಅಲ್ಪಾವಧಿಯಲ್ಲಿ ತೊಂದರೆಗಳನ್ನು ಎದುರಿಸಬಹುದು. ಆದರೆ ನೀವು ಗೂಗಲ್ ವಾಲೆಟ್‌ಗೆ ಬದಲಾಯಿಸಿದರೆ ನಿಮಗೆ ಉತ್ತಮ ಭದ್ರತೆ ಸಿಗುತ್ತದೆ. ಡಿಜಿಟಲ್ ವಹಿವಾಟು ಸೇವೆಗಳು ಸುಧಾರಣೆಯಾಗುತ್ತಲೇ ಇರುತ್ತವೆ. ಪಾವತಿಗಳನ್ನು ಹೆಚ್ಚು ಅನುಕೂಲಕರವಾಗಿಸಲು, ಗೂಗಲ್ ಕಂಪನಿ ಭವಿಷ್ಯದಲ್ಲಿ ಗೂಗಲ್ ವಾಲೆೆಟ್‌ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ತರಲು ಅವಕಾಶಗಳಿವೆ. ಈ ಹಿನ್ನಲೆಯಲ್ಲಿ ಅಮೆರಿಕದ ಜನರುರ ಗೂಗಲ್ ಪೇ ವ್ಯಾಲೆಟ್ ನಲ್ಲಿ ಹಣ ಇಟ್ಟಿದ್ದರೆ ಅದನ್ನು ವರ್ಗಾಯಿಸಲು ಜೂನ್ 4ರ ಗಡುವು ಇದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

2024ರ ಜೂನ್ 4 ನಂತರ ಯುಎಸ್ ಮಂದಿ ಗೂಗಲ್ ಪೇ ಮೂಲಕ ಹಣವನ್ನು ಸ್ವೀಕರಿಸಲು ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ. ಇದು ಗೂಗಲ್ ಪೇನ ಯುಎಸ್ ಆವೃತ್ತಿಗೆ ಮಾತ್ರ ಅನ್ವಯಿಸುತ್ತದೆ ಗೂಗಲ್ ತನ್ನ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ಗೂಗಲ್ ವಾಲೆಟ್ ಆಪ್ ಅನ್ನು ಗೂಗಲ್ ಪ್ಲೇನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )