ನೀವು ಗೂಗಲ್ ಪೇ, ಫೋನ್ ಪೇ ಬಳಸುತ್ತಿದ್ದರೆ ಕೂಡಲೇ ಈ ಸ್ಟೋರಿ ಓದಿ: ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ-technology news google pay phone pe upi users alert warning from cybercrime police vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಗೂಗಲ್ ಪೇ, ಫೋನ್ ಪೇ ಬಳಸುತ್ತಿದ್ದರೆ ಕೂಡಲೇ ಈ ಸ್ಟೋರಿ ಓದಿ: ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ

ನೀವು ಗೂಗಲ್ ಪೇ, ಫೋನ್ ಪೇ ಬಳಸುತ್ತಿದ್ದರೆ ಕೂಡಲೇ ಈ ಸ್ಟೋರಿ ಓದಿ: ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ

ಜನರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವ ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅಪ್ಲಿಕೇಶನ್‌ಗಳಲ್ಲಿ ಹೊಸ ರೀತಿಯ ವಂಚನೆ ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ. (ಬರಹ: ವಿನಯ್ ಭಟ್)

ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅಪ್ಲಿಕೇಶನ್‌ಗಳಲ್ಲಿ ಹೊಸ ರೀತಿಯ ವಂಚನೆ ಕಂಡುಬಂದಿದೆ.
ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅಪ್ಲಿಕೇಶನ್‌ಗಳಲ್ಲಿ ಹೊಸ ರೀತಿಯ ವಂಚನೆ ಕಂಡುಬಂದಿದೆ.

ಭಾರತದಲ್ಲಿ ಇಂದು ಯುಪಿಐ ಪೇಮೆಂಟ್ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದು ಅನೇಕ ಜನರು ಸ್ಮಾರ್ಟ್​ಫೋನ್ ಮೂಲಕವೇ ಹಣವನ್ನು ಪಾವತಿ ಮಾಡುತ್ತಿದ್ದಾರೆ. ಇದಕ್ಕಾಗಿ ಹೆಚ್ಚಿನವರು ಉಪಯೋಗಿಸುವ ಆ್ಯಪ್ ಗೂಗಲ್ ಪೇ ಮತ್ತು ಫೋನ್ ಪೇ. ಆದರೆ, ಇದೀಗ ಜನರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವ ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅಪ್ಲಿಕೇಶನ್‌ಗಳಲ್ಲಿ ಹೊಸ ರೀತಿಯ ವಂಚನೆ ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ.

ಗೂಗಲ್ ಪೇ ವಂಚನೆ ಏನು?

ನಿಮಗೆ ಮೊದಲು ತಿಳಿದಿಲ್ಲದ ಅನೌನ್ ಪರ್ಸನ್ ಯಾರಾದರೂ ಗೂಗಲ್ ಪೇ ಮತ್ತು ಫೋನ್ ಪೇನಂತಹ UPI ಅಪ್ಲಿಕೇಶನ್‌ಗಳ ಮೂಲಕ ಉದ್ದೇಶಪೂರ್ವಕವಾಗಿ ಹಣವನ್ನು ಕಳುಹಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದ ನಂತರ, ನಿಮ್ಮನ್ನು ಅವರು ಸಂಪರ್ಕಿಸಿ ಆಕಸ್ಮಿಕವಾಗಿ ನಿಮಗೆ ಹಣವನ್ನು ಕಳುಹಿಸಿದ್ದೇನೆ, ಬೇರೆಯವರಿಗೆ ಕಳುಹಿಸುವ ಬದಲು ಆತುರದಲ್ಲಿ ನಿಮಗೆ ಕಳುಹಿಸಿದ್ದೇನೆ ಎಂದು ತಿಳಿಸುತ್ತಾರೆ. ಹೀಗಾಗಿ ನಾನು ತಪ್ಪಾಗಿ ಕಳುಹಿಸಿದ ಹಣವನ್ನು ಅದೇ ನಂಬರ್‌ಗೆ ಕಳುಹಿಸುವಂತೆಯೂ ಕೇಳುತ್ತಾರೆ. ನೀವು ಸಹಾನುಭೂತಿ ತೋರಿಸಿ ಹಣ ಕಳುಹಿಸಿದರೆ ಅವರು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ.

ಸದ್ಯ ಈ ರೀತಿಯ ವಂಚನೆಗಳು ಅನೇಕ ಕಡೆಗಳಲ್ಲಿ ನಡೆಯುತ್ತಿದ್ದು, ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಸುರಕ್ಷಿತವಾಗಿರಲು ಏನು ಮಾಡಬೇಕು?

ನಿಮಗೆ ಪರಿಚಯವಿಲ್ಲದ ಯಾರಾದರೂ ಗೂಗಲ್ ಪೇ ಸೇರಿದಂತೆ UPI ಅಪ್ಲಿಕೇಶನ್‌ಗಳಲ್ಲಿ ಈ ರೀತಿ ಹಣವನ್ನು ಕಳುಹಿಸಿದರೆ ಮತ್ತು ಅದನ್ನು ಮರಳಿ ಕಳುಹಿಸುವಂತೆ ಕೇಳಿದರೆ, ತಕ್ಷಣವೇ ಹಣವನ್ನು ಕಳುಹಿಸಬೇಡಿ.

ಹಣವನ್ನು ಕಳುಹಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ಮತ್ತು ಅವರ ಗುರುತಿನ ಪುರಾವೆಗಳೊಂದಿಗೆ ಹತ್ತಿರದ ಪೊಲೀಸ್ ಠಾಣೆಗೆ ಬಂದು ನಗದು ಪಡೆದುಕೊಳ್ಳಲು ಹೇಳಿ.

ಯಾರಾದರೂ ಗೂಗಲ್ ಪೇನಲ್ಲಿ ನಿಮಗೆ ಹಣವನ್ನು ಕಳುಹಿಸಿದರೆ ಮತ್ತು ಅದನ್ನು ಮರಳಿ ಕಳುಹಿಸಲು ಲಿಂಕ್‌ನೊಂದಿಗೆ ಟೆಕ್ಸ್ಟ್​ ಮೆಸೇಜ್ ಕಳುಹಿಸಿದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ. ಇದು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಲಿಂಕ್ ಆಗಿರಬಹುದು.

ಆದ್ದರಿಂದ ನೀವು ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ತುಂಬಾ ಹೆಚ್ಚು.

SMS ಮೂಲಕ ನಿಮಗೆ ಕಳುಹಿಸಲಾದ ಲಿಂಕ್‌ಗಳು ಸಂಪೂರ್ಣವಾಗಿ ನಕಲಿ ಮತ್ತು ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಿ.

ನಿಮ್ಮ ಮೊಬೈಲ್ ಕಳೆದು ಹೋದರೆ, ಮೊಬೈಲ್ ಫೋನ್‌ನಲ್ಲಿರುವ ಯುಪಿಐ ಆ್ಯಪ್ ಮೂಲಕ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯುವ ಸಾಧ್ಯತೆಯಿದೆ. ಹಾಗಾಗಿ ಮೊಬೈಲ್ ಫೋನ್ ಕಳೆದು ಹೋದರೆ ತಕ್ಷಣವೇ ಯುಪಿಐ ಐಡಿಯನ್ನು ಬ್ಲಾಕ್ ಮಾಡುವುದು ಅಗತ್ಯ.

ಮೇಲಿನ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಗೂಗಲ್ ಪೇ ಸೇರಿದಂತೆ UPI ಅಪ್ಲಿಕೇಶನ್‌ಗಳ ಮೂಲಕ ವಂಚನೆಗಳಿಂದ ಸುರಕ್ಷಿತವಾಗಿರಬಹುದು.

ವಂಚನೆ ಪ್ರಕರಣ ಏರಿಕೆ

ಭಾರತದಲ್ಲಿ, ತಂತ್ರಜ್ಞಾನದ ಅನುಕೂಲವು ಪ್ರತಿಯೊಬ್ಬರ ಜೀವನದಲ್ಲಿ ಅನಿವಾರ್ಯವಾಗಿದೆ. ಈ ರೀತಿಯಾಗಿ, ಯುಪಿಐ ಸೌಲಭ್ಯವು ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್​ಫೋನ್ ಬಂದ ನಂತರ ಇದು ಘಾತೀಯವಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ವಿವಿಧ ಆ್ಯಪ್‌ಗಳು ಲಭ್ಯವಿವೆ. ರಸ್ತೆ ಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳವರೆಗೆ UPI ಲಭ್ಯವಿದೆ. ಅನೇಕ ಜನರು ಇದನ್ನು ಬಳಸುವುದರಿಂದ ಇಂದು ಯುಪಿಐ ಅಪ್ಲಿಕೇಷನ್​ಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ.

mysore-dasara_Entry_Point