Google Photos: ವಾರೇ ವ್ಹಾ, ಗೂಗಲ್‌ ಫೋಟೋಸ್‌ ಅಪ್‌ಗ್ರೇಡ್‌ ಆಯ್ತು, ಸಂವಾದನಾತ್ಮಕ ಎಐ ನೆರವಿನಿಂದ ಸುಲಭವಾಯ್ತು ಚಿತ್ರಗಳ ಹುಡುಕಾಟ-technology news google photos upgrades search with conversational ai enhanced query capabilities pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Google Photos: ವಾರೇ ವ್ಹಾ, ಗೂಗಲ್‌ ಫೋಟೋಸ್‌ ಅಪ್‌ಗ್ರೇಡ್‌ ಆಯ್ತು, ಸಂವಾದನಾತ್ಮಕ ಎಐ ನೆರವಿನಿಂದ ಸುಲಭವಾಯ್ತು ಚಿತ್ರಗಳ ಹುಡುಕಾಟ

Google Photos: ವಾರೇ ವ್ಹಾ, ಗೂಗಲ್‌ ಫೋಟೋಸ್‌ ಅಪ್‌ಗ್ರೇಡ್‌ ಆಯ್ತು, ಸಂವಾದನಾತ್ಮಕ ಎಐ ನೆರವಿನಿಂದ ಸುಲಭವಾಯ್ತು ಚಿತ್ರಗಳ ಹುಡುಕಾಟ

Google Photos upgrades: ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಸೇರಿದಂತೆ ವಿವಿಧೆಡೆ ನಾವೆಲ್ಲ ಬಳಸುವ ಗೂಗಲ್‌ ಫೋಟೋಸ್‌ ಎಂಬ ಛಾಯಾಚಿತ್ರಗಳ ಕ್ಲೌಡ್‌ ಸಂಗ್ರಹಗಾರವನ್ನು ಗೂಗಲ್‌ ಅಪ್‌ಗ್ರೇಡ್‌ ಮಾಡಿದೆ. ಇದರಿಂದ ನೀವು "Gigi Hadid playing with daughter" ಎಂದೆಲ್ಲ ಫೋಟೋಗಳನ್ನು ಹುಡುಕಾಟ ನಡೆಸಬಹುದು.

ಗೂಗಲ್‌ ಫೋಟೋಸ್‌ ಅಪ್‌ಗ್ರೇಡ್‌ ಫೀಚರ್‌ಗಳು
ಗೂಗಲ್‌ ಫೋಟೋಸ್‌ ಅಪ್‌ಗ್ರೇಡ್‌ ಫೀಚರ್‌ಗಳು

Google Photos upgrades: ಗೂಗಲ್‌ ಕಂಪನಿಯು ತನ್ನ ಗೂಗಲ್‌ ಫೋಟೋಸ್‌ ಎಂಬ ಛಾಯಾಚಿತ್ರಗಳ ಸಂಗ್ರಹಗಾರವನ್ನು ಅಪ್‌ಗ್ರೇಡ್‌ ಮಾಡಿದೆ. ಇದರಿಂದ ಗೂಗಲ್‌ ಫೋಟೋಸ್‌ ಹುಡುಕಾಟ ಇನ್ನಷ್ಟು ಸುಲಭವಾಗಲಿದೆ. ಬಳಕೆದಾರರು ತಮ್ಮ ಗೂಗಲ್‌ ಫೋಟೋಸ್‌ನಲ್ಲಿ ನಿರ್ದಿಷ್ಟ ಫೋಟೋವನ್ನು ಹೆಚ್ಚು ಸಹಜವಾಗಿ, ಸುಲಭವಾಗಿ ಹುಡುಕಾಟ ನಡೆಸಲು ಸಾಧ್ಯವಾಗಲಿದೆ ಎಂದು ಜಿಎಸ್‌ಎಂ ಅರೆನಾ ವರದಿ ಮಾಡಿದೆ.

ನೂತನ ಅಪ್‌ಗ್ರೇಡ್‌ನಿಂದಾಗಿ ಗೂಗಲ್‌ ಫೋಟೋಸ್‌ ಬಳಕೆದಾರರು ತಮ್ಮ ಗೂಗಲ್‌ ಫೋಟೋಸ್‌ನಲ್ಲಿರುವ ರಾಶಿರಾಶಿ ಫೋಟೋಗಳ ನಡುವೆ ನಿರ್ದಿಷ್ಟ ಫೋಟೋವನ್ನು ಸುಲಭವಾಗಿ ಹುಡುಕಾಟ ನಡೆಸಬಹುದು. ಜಿಎಸ್‌ಎಂ ಅರೆನಾ ಪ್ರಕಾರ "ಗಿಗಿ ಹದಿದ್‌ ಪ್ಲೇಯಿಂಗ್‌ ವಿದ್‌ ಡಾಕ್ಟರ್"ಎಂದು ಹುಡುಕಾಟ ನಡೆಸಬಹುದು. "ಪ್ರವೀಣ್‌ ಪ್ಲೇಯಿಂಗ್‌ ವಿದ್‌ ಸನ್‌" ಎಂದು ಹುಡುಕಾಟ ನಡೆಸಬಹುದು. ನೀವು ನಿಮ್ಮ ಹೆಸರನ್ನು ಹಾಕಿ ಇದೇ ರೀತಿ ಹುಡುಕಾಟ ನಡೆಸಬಹುದು. ಇದೇ ರೀತಿ ಐಸ್‌ಕ್ರೀಮ್‌ ಈಟಿಂಗ್‌ ಫೋಟೋ, ಊಟಿ ಟ್ರಾವೆಲ್‌ ಫೋಟೋ, ಕಾರ್‌ ಡ್ರೈವಿಂಗ್‌ ಫೋಟ್‌, ವಿಯರಿಂಗ್‌ ಸನ್‌ಗ್ಲಾಸ್‌ ಫೋಟೋ ಎಂದೆಲ್ಲ ನೀವು ಸರ್ಚ್‌ ಆಯ್ಕೆಯಲ್ಲಿ ಬರೆದರೆ ಇರುವ ನೂರಾರು ಸಾವಿರಾರು ಫೋಟೋಗಳ ನಡುವೆ ಇಂತಹ ಲಕ್ಷಣಗಳಿರುವ ಫೋಟೋಗಳನ್ನು ಹುಡುಕಿ ನೀಡಲಿದೆ.

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಥವಾ ಎಐ ಸಾಮರ್ಥ್ಯದಿಂದ ಈ ರೀತಿ ಹುಡುಕಾಟ ನಡೆಯುತ್ತದೆ. ನಿಮ್ಮ ಗೂಗಲ್‌ ಫೋಟೋಗಳಲ್ಲಿ ನೀವು ನಿಮ್ಮ ಹೆಸರನ್ನು ಹಾಕಿ ಹುಡುಕಿದರೆ ನಿಮ್ಮ ಫೋಟೋ ಹುಡುಕಿ ನೀಡಲಿದೆ. ಎಐ ನೆರವಿನಿಂದ ಫೋಟೋದಲ್ಲಿರುವ ವ್ಯಕ್ತಿಗಳ ಗುರುತು ಹಿಡಿಯುವ ಸಾಮರ್ಥ್ಯ ಅದಕ್ಕಿರಲಿದೆ. ನಿಮ್ಮ ಮೊಬೈಲ್‌ ಫೋನ್‌ನಲ್ಲಿರುವ ಗೂಗಲ್‌ ಫೋಟೋಸ್‌ನಲ್ಲಿ ನೀವು ಯಾರೆಂದು ಸ್ಮಾರ್ಟ್‌ಫೋನ್‌ಗೆ ತಿಳಿದಿರುತ್ತದೆ.

ಗೂಗಲ್‌ ಫೋಟೋಸ್‌ನ ಈ ಅಪ್‌ಗ್ರೇಡ್‌ ಫೀಚರ್‌ನಿಂದ ಹುಡುಕಾಟ ಸುಲಭವಾಗಲಿದೆ. ಇದೇ ರೀತಿ ದಿನಾಂಕ ಆಧಾರದಲ್ಲಿಯೂ ಹುಡುಕಾಟ ನಡೆಸಬಹುದು. ಸೆಪ್ಟೆಂಬರ್‌ ತಿಂಗಳ ಫೋಟೋಗಳು, ಸೆಪ್ಟೆಂಬರ್‌ 6ರ ಫೋಟೋಗಳು ಎಂದೂ ಹುಡುಕಾಟ ನಡೆಸಬಹುದು. ಫೋಟೋ ಹುಡುಕಾಟ ಸ್ಪೀಡ್‌ ಆಗಿರಲಿದೆ ಮತ್ತು ನಿಖರವಾಗಿರಲಿದೆ ಎಂದು ಜಿಎಸ್‌ಎಂ ಅರೆನಾ ತಿಳಿಸಿದೆ.

ಈಗಾಗಲೇ ಈ ಫೀಚರ್‌ ಅನ್ನು ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ. ಸದ್ಯ ಇಂಗ್ಲಿಷ್‌ ಭಾಷೆಯಲ್ಲಿ ನಡೆಸುವ ಹುಡುಕಾಟ ಮಾತ್ರ ವರ್ಕ್‌ ಆಗಲಿದೆ. ಕನ್ನಡದಲ್ಲಿ "ಬೆಂಗಳೂರು ಪ್ರವಾಸದ ಫೋಟೋ" ಎಂದು ಹುಡುಕಿದರೆ ಸಿಗದು. ಇದರ ಬದಲು "ಮೈ ಬೆಂಗಳೂರು ಟ್ರಾವೆಲ್‌ ಫೋಟೋಸ್‌" ಎಂದು ನಿರ್ದಿಷ್ಟವಾಗಿ ಇಂಗ್ಲಿಷ್‌ನಲ್ಲಿ ಟೈಪಿಸಿ ತಿಳಿಸಬೇಕು.

ಇಷ್ಟು ಮಾತ್ರವಲ್ಲದೆ ಅಮೆರಿಕದ ಆಯ್ದ ಬಳಕೆದಾರರಿಗೆ "ಆಸ್ಕ್‌ ಫೋಟೋಸ್‌" ಎಂಬ ಫೀಚರ್‌ ಬಳಸಿ ನೋಡಲು ಗೂಗಲ್‌ ಅನುವು ಮಾಡಿಕೊಟ್ಟಿದೆ. ಸದ್ಯ ಇದು ಗೂಗಲ್‌ ಲ್ಯಾಬ್ಸ್‌ನಲ್ಲಿದೆ. ಭವಿಷ್ಯದಲ್ಲಿ ಎಲ್ಲರಿಗೂ ಈ ಫೀಚರ್‌ ದೊರಕಲಿದೆ.

ಬಳಕೆದಾರರ ಫೋಟೋ ಗ್ಯಾಲರಿಯನ್ನು ಜೆಮಿನಿ ಎಐ ಅವಲೋಕಿಸಿ ಫಲಿತಾಂಶವನ್ನು ನೀಡಲಿದೆ. ಇದು ಜೆಮಿನಿ ಎಐಯ ಸುಧಾರಿತ ಫೀಚರ್‌ ಆಗಿರಲಿದೆ. ಉದಾಹರಣೆಗೆ ನೀವು "Ask Photos" ಫೀಚರ್‌ ಬಳಸುವಾಗ "ವೆನ್‌ ಡಿಡ್‌ ವಿ ಈಟ್‌ ಅಟ್‌ ದಿ ಬೆಂಗಳೂರು ಏರ್‌ಪೋರ್ಟ್‌? ಎಂದು ಪ್ರಶ್ನಿಸಬಹುದು. ಆಗ ನೀವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಿಂಡಿತಿನಿಸು ಸೇವಿಸಿದ್ದಂತಹ ಫೋಟೋಗಳು ನಿಮ್ಮ ಗ್ಯಾಲರಿಯಲ್ಲಿದ್ದರೆ ಹುಡುಕಿ ನೀಡಲಿದೆ. ಇದೇ ಸಮಯದಲ್ಲಿ ಫೋಟೋಗಳ ಜತೆಗೆ ಇತರೆ ವಿವರಗಳನ್ನೂ ನೀಡಲಿದೆ.

mysore-dasara_Entry_Point