ಅತಿ ದೊಡ್ಡ ಕ್ರಮಕ್ಕೆ ಮುಂದಾದ ಗೂಗಲ್: ನಿಷ್ಕ್ರಿಯ ಜಿಮೇಲ್ ಖಾತೆ ಇಂದಿನಿಂದ ಡಿಲೀಟ್, ನಿಮ್ಮದೂ ಇದೆಯಾ ನೋಡಿ-technology news google to shut down inactive gmail accounts from today here s why vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿ ದೊಡ್ಡ ಕ್ರಮಕ್ಕೆ ಮುಂದಾದ ಗೂಗಲ್: ನಿಷ್ಕ್ರಿಯ ಜಿಮೇಲ್ ಖಾತೆ ಇಂದಿನಿಂದ ಡಿಲೀಟ್, ನಿಮ್ಮದೂ ಇದೆಯಾ ನೋಡಿ

ಅತಿ ದೊಡ್ಡ ಕ್ರಮಕ್ಕೆ ಮುಂದಾದ ಗೂಗಲ್: ನಿಷ್ಕ್ರಿಯ ಜಿಮೇಲ್ ಖಾತೆ ಇಂದಿನಿಂದ ಡಿಲೀಟ್, ನಿಮ್ಮದೂ ಇದೆಯಾ ನೋಡಿ

ಇತ್ತೀಚಿನ ದಿನಗಳಲ್ಲಿ ಅನೇಕರ ಹೆಸರಲ್ಲಿ ಬಹು ಖಾತೆಗಳು ಇರುತ್ತವೆ. ಇದು ಸರ್ವರ್ ಸಂಗ್ರಹಣೆಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೆಚ್ಚುತ್ತಿರುವ ಕಾಳಜಿಯನ್ನು ನಿರ್ವಹಿಸಲು, ಸಕ್ರಿಯ ಖಾತೆಗಳನ್ನು ಮಾತ್ರ ಇರಿಸಿಕೊಳ್ಳುವುದರ ಮೇಲೆ ಗೂಗಲ್ ಗಮನಹರಿಸುತ್ತದೆ. (ಬರಹ: ವಿನಯ್ ಭಟ್)

ಗೂಗಲ್ ಸೆಪ್ಟೆಂಬರ್ 20 ರಿಂದ ಲಕ್ಷಾಂತರ ನಿಷ್ಕ್ರಿಯ ಜಿಮೇಲ್ ಖಾತೆಗಳನ್ನು ಮುಚ್ಚುತ್ತಿದೆ.
ಗೂಗಲ್ ಸೆಪ್ಟೆಂಬರ್ 20 ರಿಂದ ಲಕ್ಷಾಂತರ ನಿಷ್ಕ್ರಿಯ ಜಿಮೇಲ್ ಖಾತೆಗಳನ್ನು ಮುಚ್ಚುತ್ತಿದೆ. (Unsplash)

ಇಂದಿನಿಂದ ಗೂಗಲ್ ದೊಡ್ಡ ಕ್ರಮವನ್ನು ತೆಗೆದುಕೊಳ್ಳಲಿದೆ, ಇದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಗೂಗಲ್ ಸೆಪ್ಟೆಂಬರ್ 20 ರಿಂದ ಲಕ್ಷಾಂತರ ನಿಷ್ಕ್ರಿಯ ಜಿಮೇಲ್ ಖಾತೆಗಳನ್ನು ಮುಚ್ಚುತ್ತಿದೆ. ಹೀಗಾಗಿ ನೀವು ನಿಮ್ಮ ಜಿಮೇಲ್ ಖಾತೆಯನ್ನು ಕೆಲ ಸಮಯದಿಂದ ಬಳಸದಿದ್ದರೆ ನಿಮ್ಮ ಖಾತೆ ಕೂಡ ಕ್ಲೋಸ್ ಆಗುತ್ತವೆ. ಗೂಗಲ್, ಜಿಮೇಲ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಈ ಮೂಲಕ ತನ್ನ ಸರ್ವರ್‌ಗಳನ್ನು ಜಾಗ ಮುಕ್ತಗೊಳಿಸಲು ನೋಡುತ್ತಿದೆ.

ಎರಡು ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಜಿಮೇಲ್ ಖಾತೆಗಳನ್ನು ಮುಚ್ಚಲು ಗೂಗಲ್ ಕ್ರಮ ಕೈಗೊಳ್ಳುತ್ತಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕರ ಹೆಸರಲ್ಲಿ ಬಹು ಖಾತೆಗಳು ಇರುತ್ತವೆ. ಆದರೆ ಅವುಗಳನ್ನು ತೆರೆದು ಹಾಗೆಯೇ ಬಿಡಲಾಗುತ್ತದೆ. ಇದು ಸರ್ವರ್ ಸಂಗ್ರಹಣೆಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೆಚ್ಚುತ್ತಿರುವ ಕಾಳಜಿಯನ್ನು ನಿರ್ವಹಿಸಲು, ಸಕ್ರಿಯ ಖಾತೆಗಳನ್ನು ಮಾತ್ರ ಇರಿಸಿಕೊಳ್ಳುವುದರ ಮೇಲೆ ಗೂಗಲ್ ಗಮನಹರಿಸುತ್ತದೆ.

ಗೂಗಲ್​ನ ನೀತಿ ಏನು?

ಗೂಗಲ್​ನ ನಿಯಮಗಳ ಪ್ರಕಾರ, ನೀವು ನಿಮ್ಮ ಜಿಮೇಲ್ ಖಾತೆಯನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಳಸದಿದ್ದರೆ, ಅದನ್ನು ಮುಚ್ಚಲಾಗುತ್ತದೆ. ನಿಮ್ಮ ಖಾತೆಯನ್ನು ನೀವು ಸಕ್ರಿಯವಾಗಿರಿಸಿಕೊಳ್ಳಬೇಕೆಂದು ಗೂಗಲ್ ನಿಮಗೆ ಅಧಿಸೂಚನೆಯನ್ನು ಕಳುಹಿಸುತ್ತದೆ. ಇದರ ಹೊರತಾಗಿಯು ಜನರು ಇನ್ನೂ ತಮ್ಮ ಖಾತೆಗಳನ್ನು ಬಳಸಿಲ್ಲ ಎಂದಾದರೆ ಗೂಗಲ್ ಈ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ನಿಮ್ಮ ಖಾತೆಯನ್ನು ಹೇಗೆ ಉಳಿಸುವುದು?

ಕಳೆದ ಎರಡು ವರ್ಷಗಳಿಂದ ನೀವು ನಿಮ್ಮ ಗೂಗಲ್ ಖಾತೆಗೆ ಲಾಗ್ ಇನ್ ಆಗದಿದ್ದರೆ, ಅದನ್ನು ಕ್ಲೋಸ್ ಮಾಡಲಾಗುತ್ತದೆ. ಅಳಿಸುವಿಕೆಯಿಂದ ನಿಮ್ಮ ಖಾತೆಯನ್ನು ರಕ್ಷಿಸಲು, ನೀವು ಈ ವಿಧಾನಗಳನ್ನು ಬಳಸಬಹುದು:

ಜಿಮೇಲ್ ಬಳಸಿ: ನಿಮ್ಮ ಜಿಮೇಲ್​ಗೆ ಲಾಗ್ ಇನ್ ಮಾಡಿ ಮತ್ತು ಇಮೇಲ್ ಕಳುಹಿಸಿ ಅಥವಾ ನಿಮ್ಮ ಇನ್‌ಬಾಕ್ಸ್‌ನಲ್ಲಿ ಇಮೇಲ್‌ಗಳನ್ನು ಓದಿ.

ಗೂಗಲ್ ಫೋಟೋಗಳಲ್ಲಿ ಫೋಟೋವನ್ನು ಹಂಚಿಕೊಳ್ಳಿ: ಫೋಟೋವನ್ನು ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ಗೂಗಲ್ ಫೋಟೋಗಳಿಗೆ ಸೈನ್ ಇನ್ ಮಾಡಿ.

ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿ: ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗ್ ಇನ್ ಮಾಡುವ ಮೂಲಕ ಯೂಟ್ಯೂಬ್​ನಲ್ಲಿ ವೀಡಿಯೊವನ್ನು ವೀಕ್ಷಿಸಿ.

ಗೂಗಲ್ ಡ್ರೈವ್ ಬಳಸಿ: ಗೂಗಲ್ ಡ್ರೈವ್‌ಗೆ ಲಾಗಿನ್ ಮಾಡಿ ಮತ್ತು ಅದರಲ್ಲಿ ಯಾವುದೇ ಫೈಲ್ ಅನ್ನು ಅಪ್‌ಲೋಡ್ ಮಾಡಿ ಅಥವಾ ಡೌನ್‌ಲೋಡ್ ಮಾಡಿ.

ಗೂಗಲ್ ಸರ್ಚ್ ಬಳಸಿ: ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ ಮತ್ತು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಏನನ್ನಾದರೂ ಹುಡುಕಿ.

ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸಿಕೊಳ್ಳಬಹುದು. ನೀವು ಎರಡು ವರ್ಷಗಳ ಕಾಲ ನಿಮ್ಮ ಗೂಗಲ್ ಅಥವಾ ಜಿಮೇಲ್ ಖಾತೆಗೆ ಲಾಗಿನ್ ಆಗದಿದ್ದರೆ, ಕಂಪನಿಯು ಅಂತಹ ಖಾತೆಯನ್ನು ಅಳಿಸಬಹುದು ಎಂಬುದನ್ನು ನೆನಪಿಡಿ. ಅಂತಹ ಖಾತೆಯ ಡೇಟಾ ಕೂಡ ಕಳೆದುಹೋಗುತ್ತದೆ. ಇಂದಿನಿಂದಲೇ ಗೂಗಲ್ ಈ ಕೆಲಸ ಶುರುಮಾಡಲಿದೆ.

mysore-dasara_Entry_Point