Google Chrome: ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ ಸಂದೇಶ, ಸುರಕ್ಷತೆಗಾಗಿ ತಪ್ಪದೇ ಈ ಕೆಲಸ ಮಾಡಿ
ಗೂಗಲ್ ಕ್ರೋಮ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದುCERT-Inಹೇಳಿದೆ.ಅದರ ಲಾಭವನ್ನು ಪಡೆದುಕೊಳ್ಳುವ ಮೂಲಕ ಹ್ಯಾಕರ್ ನಿಮ್ಮ ಅನುಮತಿಯಿಲ್ಲದೆ ಕಂಪ್ಯೂಟರ್ ಅನ್ನು ಪ್ರವೇಶಿಸಬಹುದು.ಈ ಬಗ್ಗೆ ನಿಮಗೆ ಸುಳಿವು ಕೂಡ ಸಿಗುವುದಿಲ್ಲ. (ವರದಿ:ವಿನಯ್ ಭಟ್)
ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್ಟಿ-ಇನ್ ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಹೇಳಿದೆ. ಇವುಗಳಲ್ಲಿ ಕೆಲವು ಗಂಭೀರ ಸಮಸ್ಯೆಗಳನ್ನು ಕಂಡುಕೊಂಡಿದ್ದಾರೆ. ಹ್ಯಾಕರ್ ನಿಮ್ಮ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಬಹುದು ಮತ್ತು ನಿಮ್ಮ ಪ್ರಮುಖ ಡೇಟಾವನ್ನು ಕದಿಯಬಹುದು ಅಥವಾ ಹಾನಿಗೊಳಿಸಬಹುದು ಎಂದು ಹೇಳಿದೆ. ಆದ್ದರಿಂದ, ನೀವು ಕೂಡಲೇ ಗೂಗಲ್ ಕ್ರೂಮ್ ಅಪ್ಡೇಟ್ ಮಾಡಿ ಎಂಬ ಸಂದೇಶ ನೀಡಿದೆ.
ಸಮಸ್ಯೆ ಏನು?
ಗೂಗಲ್ ಕ್ರೋಮ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು CERT-In ಹೇಳಿದೆ. ಅದರ ಲಾಭವನ್ನು ಪಡೆದುಕೊಳ್ಳುವ ಮೂಲಕ ಹ್ಯಾಕರ್ ನಿಮ್ಮ ಅನುಮತಿಯಿಲ್ಲದೆ ಕಂಪ್ಯೂಟರ್ ಅನ್ನು ಪ್ರವೇಶಿಸಬಹುದು. ಈ ಬಗ್ಗೆ ನಿಮಗೆ ಸುಳಿವು ಕೂಡ ಸಿಗುವುದಿಲ್ಲ. ಇದು ನಿಮ್ಮ ಗೌಪ್ಯತೆಗೆ ಧಕ್ಕೆ ತರಬಹುದು.
ಪಾರಾಗಲು ಏನು ಮಾಡಬೇಕು?
ಈ ಅಪಾಯವನ್ನು ತಪ್ಪಿಸಲು ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್ ನವೀಕರಿಸುವುದು ಉತ್ತಮ ಮಾರ್ಗವಾಗಿದೆ. ಕ್ರೋಮ್ ಹೊಸ ಆವೃತ್ತಿಯಲ್ಲಿ ಭದ್ರತಾ ನವೀಕರಣಗಳನ್ನು ನೀಡಲಾಗಿದೆ. ಇದು ಹ್ಯಾಕ್ ಆಗುವುದರಿಂದ ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಗೂಗಲ್ ಕ್ರೋಮ್ ಅನ್ನು ನವೀಕರಿಸಲು, ಬ್ರೌಸರ್‌ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅಪ್ಡೇಟ್ ಪರಿಶೀಲಿಸಿ. ನೀವು ಕ್ರೋಮ್ ಅನ್ನು ನವೀಕರಿಸುವವರೆಗೆ ಅನುಮಾನಾಸ್ಪದ ಲಿಂಕ್‌ಗಳು ಅಥವಾ ಫೈಲ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಈ ಲಿಂಕ್‌ಗಳು ಮಾಲ್‌ವೇರ್ ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ.
ಆ್ಯಪಲ್ ಮತ್ತು ಗೂಗಲ್ನ ಬ್ರೌಸರ್‌ಗಳಲ್ಲಿ ದೊಡ್ಡ ಅಪಾಯ
ಆ್ಯಪಲ್ ಮತ್ತು ಗೂಗಲ್ ಎರಡು ಜನಪ್ರಿಯ ಬ್ರೌಸರ್‌ಗಳನ್ನು ಹೊಂದಿವೆ, ಅವುಗಳೆಂದರೆ ಸಫಾರಿ ಮತ್ತು ಕ್ರೋಮ್. ಈ ವೆಬ್ ಬ್ರೌಸರ್‌ಗಳಲ್ಲಿ ಕೂಡ ಭಾರಿ ಭದ್ರತಾ ಸಮಸ್ಯೆ ಕಂಡುಬಂದಿದೆ. ಈ ಸಮಸ್ಯೆ ಹಲವು ವರ್ಷಗಳಿಂದ ಇತ್ತು. ಆದರೆ, ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ದೌರ್ಬಲ್ಯದಿಂದಾಗಿ, ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಪ್ರವೇಶಿಸಿ ನಿಮ್ಮ ಪ್ರಮುಖ ಡೇಟಾವನ್ನು ಕದಿಯಬಹುದು. ಹ್ಯಾಕರ್‌ಗಳು ನೀವು ನಂಬುವಂತಹ ವಿಶೇಷ ಲಿಂಕ್‌ಗಳನ್ನು ಕಳುಹಿಸುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಈಗಾಗಲೇ ಆ್ಯಪಲ್ ಮತ್ತು ಗೂಗಲ್ ಈ ಸಮಸ್ಯೆಯನ್ನು ಅರಿತು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ.
ವಿಭಾಗ