Passport Seva: ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಬಳಸಲು ಇಲ್ಲಿದೆ ಮಾರ್ಗದರ್ಶಿ
How to apply Passport online: ಈಗ ಪಾಸ್‌ಪೋರ್ಟ್‌ಗೆ ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಈಗ ಪಾಸ್‌ಪೋರ್ಟ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ದಿನದಂದು ಪಾಸ್‌ಪೋರ್ಟ್ ಕಚೇರಿಗೆ ಹೋಗಿ ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಪೂರೈಸಬಹುದು. ಕೇಂದ್ರ ಸರಕಾರದ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್ ಮೂಲಕ ಈ ರೀತಿ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಕೆಲವೊಂದು ದಾಖಲೆಗಳು, ಪೊಲೀಸ್ ದೃಢೀಕರಣ, ಇತ್ಯಾದಿ ಪ್ರಕ್ರಿಯೆಗಳ ಅಗತ್ಯವಿರುತ್ತದೆ. ಆದರೆ, ಪಾಸ್‌ಪೋರ್ಟ್ ಪಡೆಯುವುದು ಈಗ ಕೆಲವು ವರ್ಷಗಳ ಹಿಂದಿನಷ್ಟು ಕಷ್ಟವಲ್ಲ. ತುಂಬಾ ಸರಳವಾಗಿ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿದೆ. ದಿನದ ಕೆಲವು ಗಂಟೆಗಳನ್ನು ಇದಕ್ಕೆ ಮೀಸಲಿಟ್ಟರೆ ಸಾಕು.
ಪಾಸ್‌ಪೋರ್ಟ್ ಎಂದರೇನು?
ವಿದೇಶಕ್ಕೆ ತೆರಳುವಾಗ ನಮ್ಮ ಜತೆಗೆ ಇರಬೇಕಾದ ಅಗತ್ಯ ಪ್ರಯಾಣ ದಾಖಲೆ ಇದಾಗಿದೆ. ಶಿಕ್ಷಣ, ಪ್ರವಾಸ, ತೀರ್ಥಯಾತ್ರೆ, ವೈದ್ಯಕೀಯ ಉದ್ದೇಶ, ವ್ಯವಹಾರ ಉದ್ದೇಶ, ಕೌಟುಂಬಿಕ ಭೇಟಿ ಇತ್ಯಾದಿ ಹಲವು ಕಾರಣಗಳಿಂದ ಬೇರೆ ದೇಶಕ್ಕೆ ಹೋಗುವಾಗ ಸರಕಾರ ನೀಡಿದ ಈ ಗುರುತಿನ ಪತ್ರ ನಮ್ಮಲ್ಲಿ ಇರಬೇಕು. ಪಾಸ್‌ಪೋರ್ಟ್‌ನಲ್ಲಿ ವ್ಯಕ್ತಿಯ ಹೆಸರು, ಜನ್ಮ ದಿನಾಂಕ, ಜನ್ಮ ಸ್ಥಳ, ರಾಷ್ಟ್ರೀಯತೆ, ಪಾಸ್‌ಪೋರ್ಟ್ ಎಕ್ಸ್‌ಪಯರಿ ದಿನಾಂಕ, ಪಾಸ್‌ಪೋರ್ಟ್ ಸಂಖ್ಯೆ, ವ್ಯಕ್ತಿಯ ಭಾವಚಿತ್ರ, ಸಹಿ ಇತ್ಯಾದಿ ಅಂಶಗಳು ಇರುತ್ತವೆ.
ಪಾಸ್‌ಪೋರ್ಟ್ ಪಡೆಯಲು ಬೇಕಾದ ದಾಖಲೆಗಳು
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವು ದಾಖಲೆಗಳು ಅಗತ್ಯವಿರುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜನನ ಪ್ರಮಾಣ ಪತ್ರ, ಈಗಿನ ವಿಳಾಸದ ದಾಖಲೆ ಇತ್ಯಾದಿ ದಾಖಲೆಗಳ ಅಗತ್ಯವಿರುತ್ತದೆ.
ಪಾಸ್‌ಪೋರ್ಟ್ ಬಗೆಗಳು
ಭಾರತದ ಪ್ರಜೆಗಳು ಭಾರತದಿಂದ ಬೇರೆ ದೇಶಕ್ಕೆ ಹೋಗುವಾಗ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆ ಹೊಂದಿರಬೇಕಾಗುತ್ತದೆ. 1967ರ ಪಾಸ್‌ಪೋರ್ಟ್ ಕಾಯಿದೆ ಪ್ರಕಾರ ಭಾರತ ಸರಕಾರವು ವಿವಿಧ ಬಗೆಯ ಪಾಸ್‌ಪೋರ್ಟ್‌ಗಳನ್ನು ನೀಡುತ್ತದೆ. ಬ್ಲೂ ಪಾಸ್‌ಪೋರ್ಟ್ (ಸಾಮಾನ್ಯ ಪಾಸ್‌ಪೋರ್ಟ್), ವೈಟ್ ಪಾಸ್‌ಪೋರ್ಟ್ (ಅಫಿಶಿಯಲ್ ಪಾಸ್‌ಪೋರ್ಟ್), ಮರೂನ್ ಪಾಸ್‌ಪೋರ್ಟ್ (ಡಿಪ್ಲೊಮೆಟಿಕ್ ಪಾಸ್‌ಪೋರ್ಟ್) ಮತ್ತು ಆರೇಂಜ್ ಪಾಸ್‌ಪೋರ್ಟ್ ನೀಡುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟ್‌ಗೆ ಭೇಟಿ ನೀಡಿ. ಪಾಸ್‌ಪೋರ್ಟ್ ಸೇವಾ ಪೋರ್ಟಲ್ ವೆಬ್ ವಿಳಾಸ: www.passportindia.gov.in
- ಮುಖಪುಟದಲ್ಲಿ ರಿಜಿಸ್ಟ್ರಾರ್ ನೌ ಕ್ಲಿಕ್ ಮಾಡಿ.
- ಲಾಗಿನ್ ಐಡಿ ಮೂಲಕ ಲಾಕಿಗ್ ಆಗಿ.
- Apply for Fresh Passport/Re-issue of Passport ಲಿಂಕ್ ಕ್ಲಿಕ್ ಮಾಡಿ.
- ಸಂಬಂಧಪಟ್ಟ ವಿವರಗಳನ್ನು ಭರ್ತಿ ಮಾಡಿ. ಅಬ್‌ಮಿಟ್ ಮಾಡಿ.
- View Saved/Submitted Applications ವಿಭಾಗಕ್ಕೆ ಹೋಗಿ Pay and Schedule Appointment ಕ್ಲಿಕ್ ಮಾಡಿ ಶುಲ್ಕ ಪಾವತಿಸಿ.
- ಎಲ್ಲಾ PSK/POPSK/POಗಳಲ್ಲಿ ಅಪಾಯಿಂಟ್‌ಮೆಂಟ್ ಪಡೆಯಲು ಆನ್‌ಲೈನ್ ಪಾವತಿ ಮಾಡುವುದು ಕಡ್ಡಾಯ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (ಮಾಸ್ಟರ್ ಕಾರ್ಡ್, ವಿಸಾ) , ಇಂಟರ್‌ನೆಟ್ ಬ್ಯಾಂಕಿಂಗ್ (ಎಸ್‌ಬಿ ಅಥವಾ ಇತರೆ ಬ್ಯಾಂಕ್) ಅಥವಾ ಎಸ್‌ಬಿಐ ಬ್ಯಾಂಕ್ ಚಲನ್ ಮೂಲಕ ಶುಲ್ಕ ಪಾವತಿಸಬಹುದು.
- ಬಳಿಕ ಅರ್ಜಿ ರಸೀದಿಯ ಪ್ರಿಂಟೌಟ್ ತೆಗೆದುಕೊಳ್ಳಿ. ಅಂದಹಾಗೆ, ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವಾಗ ಪ್ರಿಂಟೌಟ್ ತರುವುದು ಕಡ್ಡಾಯವಲ್ಲ. ಎಸ್‌ಎಂಎಸ್ ತೋರಿಸಿದರೂ ಸಾಕಾಗುತ್ತದೆ.
- ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿ. ಅಂದರೆ, ಪಾಸ್‌ಪೋರ್ಟ್ ಸೇವಾ ಕೇಂದ್ರ, ರೀಜನಲ್ ಪಾಸ್‌ಪೋರ್ಟ್ ಆಫೀಸ್‌ಗೆ ಭೇಟಿ ನೀಡಿ. ಅಲ್ಲಿಗೆ ಹೋಗುವಾಗ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
ಗಮನಿಸಿ: https://www.passportindia.gov.in ಮಾತ್ರ ಅಧಿಕೃತ ವೆಬ್‌ಸೈಟ್. ಇತರೆ ನಕಲಿ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಬೇಡಿ.