ಕನ್ನಡ ಸುದ್ದಿ  /  ಜೀವನಶೈಲಿ  /  Sanchar Saathi: ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ? ಒಂದೇ ನಿಮಿಷದಲ್ಲಿ ನಿಮ್ಮದಲ್ಲದ ಸಿಮ್‌ಗಳನ್ನು ಹೀಗೆ ನಿಷ್ಕ್ರೀಯಗೊಳಿಸಿ

Sanchar Saathi: ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ? ಒಂದೇ ನಿಮಿಷದಲ್ಲಿ ನಿಮ್ಮದಲ್ಲದ ಸಿಮ್‌ಗಳನ್ನು ಹೀಗೆ ನಿಷ್ಕ್ರೀಯಗೊಳಿಸಿ

How many SIMs are at my name?: ನಿಮ್ಮ ಹೆಸರಲ್ಲಿ ಒಟ್ಟು ಎಷ್ಟು ಮೊಬೈಲ್‌ ಸಂಖ್ಯೆಗಳು ಆಕ್ಟಿವ್‌ ಆಗಿದೆ ಎಂದು ಒಂದೇ ನಿಮಿಷದಲ್ಲಿ ತಿಳಿಯಲು ಸಂಚಾರ್‌ ಸಾಥಿ ವೆಬ್‌ಸೈಟ್‌ಗೆ (Details Sanchar Saathi TAFCOP website) ಹೋಗಬಹುದು. ಇದು ಹೇಗೆ ಎಂದು ಇಲ್ಲಿ ವಿಡಿಯೋ ಮೂಲಕ ಹುಬ್ಬಳ್ಳಿ-ಧಾರವಾಡ ಸಿಟಿ ಪೊಲೀಸ್‌ ಟೀಮ್‌ ತಿಳಿಸಿದೆ.

Sanchar Saathi: ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ? ಹೀಗೆ ತಿಳಿದುಕೊಳ್ಳಿ
Sanchar Saathi: ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ? ಹೀಗೆ ತಿಳಿದುಕೊಳ್ಳಿ

ನಿಮ್ಮ ಒಂದು ಆಧಾರ್‌ ಸಂಖ್ಯೆಯನ್ನು ಬಳಸಿಕೊಂಡು ಎಷ್ಟು ಸಿಮ್‌ ಖರೀದಿಸಲಾಗಿದೆ? ನೀವು ಬಳಸದೆ ಇರುವ ಸಿಮ್‌ಗಳನ್ನು ಸುಲಭವಾಗಿ ನಿಷ್ಕ್ರೀಯಗೊಳಿಸುವುದು ಹೇಗೆ? ಬೇರೆ ಯಾರಾದರೂ ನಿಮ್ಮ ಹೆಸರಿನಲ್ಲಿ ಖರೀದಿಸಿದ ಮೊಬೈಲ್‌ ನಂಬರ್‌ ಬಳಸುತ್ತಿದ್ದಾರ? ಇಂತಹ ಎಲ್ಲಾ ಪ್ರಶ್ನೆಗಳಿಗೆ ಸಂಚಾರ್‌ಸಾಥ್‌ ಉತ್ತರ ನೀಡುತ್ತದೆ. ಜತೆಗೆ, ನೀವು ಬಳಸದ ಸಿಮ್‌ಗಳನ್ನು ಒಂದೇ ಕ್ಲಿಕ್‌ಗೆ ಡಿಆಕ್ಟಿವೇಟ್‌ ಮಾಡಲು ನೆರವು ನೀಡುತ್ತದೆ. ನಿಮ್ಮ ಹೆಸರಿನಲ್ಲಿ ಯಾರಾದರೂ ಮೊಬೈಲ್‌ ಸಿಮ್‌ ಖರೀದಿಸಿ ಅದನ್ನು ದುರುದ್ದೇಶದಿಂದ ಬಳಸುತ್ತ ಇರಬಹುದು. ಯಾವುದಾದರೂ ಕಾನೂನು ವಿರೋಧಿ ಚಟುವಟಿಕೆಗಳಿಗೆ ನಿಮ್ಮ ಸಿಮ್‌ ಬಳಕೆಯಾಗುತ್ತಿರಬಹುದು. ಇಂತಹ ಸಮಯದಲ್ಲಿ ನೀವು ಬಳಸದೆ ಇರುವ ನಿಮ್ಮ ಹೆಸರಿನಲ್ಲಿರುವ ಸಿಮ್‌ಗಳನ್ನು ನಿಷ್ಕ್ರೀಯಗೊಳಿಸುವುದು ಅಗತ್ಯವಾಗಿದೆ.

ನಾನು ಒಂದು ಅಥವಾ ಎರಡು ಸಿಮ್‌ ಮಾತ್ರ ಖರೀದಿಸಿದ್ದೇನೆ. ನನ್ನಲ್ಲಿ ಬೇರೆ ಯಾವುದೇ ಮೊಬೈಲ್‌ ನಂಬರ್‌ ಇಲ್ಲ ಎಂದು ನೀವು ಅಂದುಕೊಂಡಿರಬಹುದು. ಆದರೆ, ಯಾರೋ ಅಪರಿಚಿತ ಮೊಬೈಲ್‌ ಅಂಗಡಿಯಲ್ಲಿ ನೀವು ಸಿಮ್‌ ಖರೀದಿಸಲು ಹೋದಾಗ ನೀವು ನೀಡಿರುವ ದಾಖಲೆಯನ್ನು ಬಳಸಿ ಆ ಅಂಗಡಿಯಾತ ಇನ್ನೆರಡು ಸಿಮ್‌ಗಳನ್ನು ನಿಮ್ಮ ಹೆಸರಲ್ಲಿ ಖರೀದಿಸಿಟ್ಟರಬಹುದು. ಇನ್ಯಾರೋ ದಾಖಲೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಆ ಸಿಮ್‌ಗಳನ್ನು ಹೆಚ್ಚು ದರಕ್ಕೆ ಮಾರಾಟ ಮಾಡಿರಬಹುದು. ಈ ರೀತಿ ಖರೀದಿಸಿದವ ಯಾವುದೋ ಕೆಟ್ಟ ಉದ್ದೇಶಕ್ಕೆ ದಾಖಲೆ ಇಲ್ಲದೆ ಸಿಮ್‌ ಖರೀದಿಸಲು ಉದ್ದೇಶಿಸಿರಬಹುದು.

ಟ್ರೆಂಡಿಂಗ್​ ಸುದ್ದಿ

ಈಗ ನಿಮಗೂ "ನನ್ನ ಹೆಸರಲ್ಲಿ ಬೇರೆ ಯಾರಾದರೂ ಸಿಮ್‌ ಖರೀದಿಸಿರಬಹುದೇ?" "ನನ್ನ ದಾಖಲೆಗಳನ್ನು ಬಳಸಿ ಬೇರೆ ಸಿಮ್‌ಗಳು ಆಕ್ಟಿವ್‌ ಆಗಿರಬಹುದೇ?" "ಯಾರಾದರೂ ದುಷ್ಕರ್ಮಿಯ ಬಳಿ ನನ್ನ ಹೆಸರಿನ ಸಿಮ್‌ ಇರಬಹುದೇ?" "ಯಾರಾದರೂ ಉಗ್ರ ಚಟುವಟಿಕೆಗೆ ನನ್ನ ಹೆಸರಿನ ಸಿಮ್‌ ಖರೀದಿಸರಬಹುದೇ?" ಇತ್ಯಾದಿ ಸಂದೇಹಗಳು ಬರಬಹುದು. ಇಂತಹ ಸಂದೇಹಗಳನ್ನು ಸರಿಪಡಿಸಿಕೊಳ್ಳಲು ಸಂಚಾರ್‌ಸಾಥಿ ವೆಬ್‌ಸೈಟ್‌ ನೆರವಾಗುತ್ತದೆ.

ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಸಿಟಿ ಪೊಲೀಸ್‌ ಟ್ವಿಟ್ಟರ್‌ (ಎಕ್ಸ್‌) ಖಾತೆಯಿಂದ ಉಪಯುಕ್ತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ನಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ ಕಾರ್ಡ್‌ ಆಕ್ಟಿವ್‌ ಆಗಿದೆ ಎಂದು ಹೇಗೆ ಸುಲಭವಾಗಿ ತಿಳಿದುಕೊಳ್ಳಬಹುದೆಂದು ಹೇಳಿಕೊಡಲಾಗಿದೆ. "ನಿಮ್ಮ ಹೆಸರಿನ್ಯಾಗ "ಎಷ್ಟ ಮೊಬೈಲ್ ನಂಬರ್ Active ಅದಾವ" ಅಂತ ನಿಮಗ ಗೊತ್ತೈತೇನ್ರೀ? ಗೊತ್ತಿಲ್ಲಂದ್ರ ಬರೇ ಒಂದ ನಿಮಿಷದಾಗ ಚೆಕ್ ಮಾಡಬಹುದ್ರೀ.! ಹೆಂಗ ಚೆಕ್ ಮಾಡುದು? ಅಕಸ್ಮಾತ್ ನಿಮ್ಮ ಹೆಸರನ್ಯಾಗ ಬ್ಯಾರೆ ನಂಬರ್ active ಇದ್ರ ಮುಂದೇನ ಮಾಡಬೇಕ? ಹೇಳೇವಿ ನೋಡ್ರಿ ಇಲ್ಲೇ" ಎಂದು ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸರು ವಿಡಿಯೋ ಹಂಚಿಕೊಂಡಿದ್ದಾರೆ.

ನಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ ಆಕ್ಟಿವ್‌ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?

  • ಮೊದಲಿಗೆ sancharsaathi.gov.in ಅಥವಾ ನೇರವಾಗ tafcop.sancharsaathi.gov.in ವೆಬ್‌ ಪುಟಕ್ಕೆ ಭೇಟಿ ನೀಡಿ.
  • ಬಳಿಕ ಅಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಒಂದು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ.
  • ಅಲ್ಲಿ ನೀಡಲಾದ ಕ್ಯಾಪ್ಚಿಕಾ ವೇರಿಫಿಕೇಷನ್‌ ನಮೂದಿಸಿ.
  • ಇದಾದ ಬಳಿಕ ನಿಮ್ಮ ಮೊಬೈಲ್‌ಗೆ ವೆರಿಫಿಕೇಷನ್‌ ಕೋಡ್‌ ಬರುತ್ತದೆ.
  • ಆ ವೆರಿಫಿಕೇಷನ್‌ ಕೋಡ್‌ ಬರೆದು ಮುಂದುವರೆಯಿರಿ.
  • ನಿಮ್ಮ ಹೆಸರಿನಲ್ಲಿರುವ ಮೊಬೈಲ್‌ ಸಂಖ್ಯೆಗಳ ಪಟ್ಟಿ ಕಾಣಿಸುತ್ತದೆ.
  • ಇವುಗಳಲ್ಲಿ ನೀವು ಬಳಸದೆ ಇರುವ ಅಥವಾ ನಿಮಗೆ ಗೊತ್ತೇ ಇಲ್ಲದ ಮೊಬೈಲ್‌ ಸಂಖ್ಯೆಗಳಿದ್ದರೆ "ನಾಟ್‌ ರಿಕ್ವಾಯರ್ಡ್‌" ಎಂದು ನಮೂದಿಸಿ ರಿಪೋರ್ಟ್‌ ಮಾಡಿ.
  • ದೂರ ಸಂಪರ್ಕ ಇಲಾಖೆಯು ನಿಮ್ಮದಲ್ಲದ ನಿಮ್ಮ ಹೆಸರಿನಲ್ಲಿರುವ ಮೊಬೈಲ್‌ ಸಂಖ್ಯೆಯನ್ನು ನಿಷ್ಕ್ರೀಯಗೊಳಿಸಲು ಕ್ರಮಕೈಗೊಳ್ಳುತ್ತದೆ.

ಇದನ್ನೂ ಓದಿ: Youtube Channel: ಸ್ವಂತ ಯೂಟ್ಯೂಬ್‌ ಚಾನೆಲ್‌ ರಚಿಸುವುದು ಹೇಗೆ? ಆರಂಭಿಕರಿಗೆ ಕನ್ನಡ ಮಾರ್ಗದರ್ಶಿ