Laptop Battery: ಪವರ್‌ ಕಟ್‌ ಇದ್ದರೂ ಚಿಂತೆಯಿಲ್ಲ, ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು ಈ 10 ಅಮೂಲ್ಯ ಸಲಹೆಗಳನ್ನು ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Laptop Battery: ಪವರ್‌ ಕಟ್‌ ಇದ್ದರೂ ಚಿಂತೆಯಿಲ್ಲ, ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು ಈ 10 ಅಮೂಲ್ಯ ಸಲಹೆಗಳನ್ನು ಪಾಲಿಸಿ

Laptop Battery: ಪವರ್‌ ಕಟ್‌ ಇದ್ದರೂ ಚಿಂತೆಯಿಲ್ಲ, ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು ಈ 10 ಅಮೂಲ್ಯ ಸಲಹೆಗಳನ್ನು ಪಾಲಿಸಿ

How to Increase Laptop Battery Life: ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸುವುದು ಹೇಗೆ ಎನ್ನುವುದು ಬಹುತೇಕರ ಪ್ರಶ್ನೆ. ಲ್ಯಾಪ್‌ಟಾಪ್‌ ಬ್ಯಾಟರಿ ಜೀವಿತಾವಧಿ ಹೆಚ್ಚಿಸಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಅತ್ಯುತ್ತಮ 10 ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು 10 ಅಮೂಲ್ಯ ಸಲಹೆಗಳು
ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು 10 ಅಮೂಲ್ಯ ಸಲಹೆಗಳು

ಮನೆಯಲ್ಲಿ ಅಥವಾ ಹೊರ ಪ್ರದೇಶಗಳಲ್ಲಿ ವರ್ಕ್‌ ಫ್ರಮ್‌ ಹೋಮ್‌, ಶಾಲೆ ಕಾಲೇಜುಗಳ ಅವಶ್ಯಕತೆ, ಸ್ವಯಂ ಉದ್ಯೋಗಕ್ಕಾಗಿ ಲ್ಯಾಪ್‌ಟಾಪ್‌ ಬಳಸುವವರಿಗೆ ಕೆಲವೊಮ್ಮೆ ಮೊಬೈಲ್‌ ಬ್ಯಾಟರಿ ಬ್ಯಾಕಪ್‌ನದ್ದೇ ತೊಂದರೆಯಾಗುತ್ತದೆ. ಕರ್ನಾಟಕದಲ್ಲಿ ಲೋಡ್‌ ಶೆಡ್ಡಿಂಗ್‌ ಆತಂಕವಿದ್ದು, ಯಾವಾಗ ಕರೆಂಟ್‌ ಹೋಗುತ್ತೆ, ಎಷ್ಟು ಗಂಟೆ ಕಳೆದ ಮೇಲೆ ಬಳಿಕ ಬರುತ್ತೆ ಎಂಬ ಆತಂಕವೂ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಪವರ್‌ ಬ್ಯಾಕಪ್‌ ವ್ಯವಸ್ಥೆ ಇಲ್ಲದೆ ಇರುವವರು ತೊಂದರೆ ಅನುಭವಿಸಬೇಕಾಗುತ್ತದೆ. ಕರೆಂಟ್‌ ಇರಲಿ, ಇಲ್ಲದೆ ಇರಲಿ, ಲ್ಯಾಪ್‌ಟಾಪ್‌ ಹೆಚ್ಚು ಸಮಯ ಬ್ಯಾಟರಿ ಬಾಳ್ವಿಕೆ ಹೊಂದಿದ್ದರೆ ಏನೋ ಸಮಧಾನ.

ಲ್ಯಾಪ್‌ಟಾಪ್‌ ಕಂಪನಿಗಳು ಹೇಳಿದ್ದಷ್ಟು ಸಮಯ ನಿಮ್ಮ ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಬರುವುದಿಲ್ಲ. ಲ್ಯಾಪ್‌ಟಾಪ್‌ನಲ್ಲಿ ಇನ್ನೂ ಆರೂ ಗಂಟೆ ಚಾರ್ಜ್‌ ಸಾಕಾಗಬಹುದು ಎಂಬ ಸೂಚನೆ ಇದ್ದರೂ ಮೂರೇ ಗಂಟೆಗೆ ಲ್ಯಾಪ್‌ಟಾಪ್‌ ಬ್ಯಾಟರಿ ಖಾಲಿಯಾಗಬಹುದು. ನೀವು ಲ್ಯಾಪ್‌ಟಾಪ್‌ನಲ್ಲಿ ಬಳಸುವ ಆಪ್‌ಗಳು, ಬ್ರೈಟ್‌ನೆಸ್‌, ನಿಮ್ಮ ಕೆಲಸದ ವಿಧಾನ ಇವೆಲ್ಲ ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಮೇಲೆ ಪರಿಣಾಮ ಬೀರುತ್ತದೆ. ಲ್ಯಾಪ್‌ಟಾಪ್‌ನಲ್ಲಿ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳಿವೆ.

ಲ್ಯಾಪ್‌ಟಾಪ್‌ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಲು 10 ಸಲಹೆಗಳು

  1. ಪಿಸಿಮ್ಯಾಗ್‌ ನೀಡಿದ ಸಲಹೆಯ ಪ್ರಕಾರ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿರುವ ಪರ್ಫಾಮೆನ್ಸ್‌ ಮ್ಯಾನೇಜ್‌ಮೆಂಟ್‌ ಟೂಲ್‌ (performance management tool) ಬಳಸಿ. ಟಾಸ್ಕ್‌ ಬಾರ್‌ ಪಕ್ಕ ಇರುವ ಬ್ಯಾಟರಿ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ನೀವು ಇಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬ್ಯಾಟರಿ ಹೆಚ್ಚು ಬಳಸುವ ವಿವಿಧ ವಿಷಯಗಳನ್ನು ಪರಿಶೀಲಿಸಿ, ಅಲ್ಲಿ ವಿವಿಧ ಬ್ಯಾಟರಿ ಮೋಡ್‌ ಆಯ್ಕೆಗಳು ಇರುತ್ತವೆ. ನಿಮ್ಮ ಅಗತ್ಯ, ಬ್ಯಾಟರಿ ಬಾಳ್ವಿಕೆ ಬಯಕೆಗೆ ತಕ್ಕಂತೆ ಸೂಕ್ತ ಮೋಡ್‌ ಆಯ್ಕೆ ಮಾಡಿ.
  2. ಆಪಲ್‌ ಕಂಪನಿಯ ಮ್ಯಾಕ್‌ ಬಳಸುತ್ತಿದ್ದರೆ ಮ್ಯಾಕ್‌ಓಎಸ್‌ ಬ್ಯಾಟರಿ ಸೆಟ್ಟಿಂಗ್‌ ಕ್ಲಿಕ್‌ ಮಾಡಿ. ಅಲ್ಲಿ Slightly dim the display while on battery power ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ. "Enable Power Nap while on battery power" ಎಂಬ ಆಯ್ಕೆಯನ್ನು ಟಿಕ್‌ ಮಾಡಬೇಡಿ. ಅದು ಅನ್‌ಟಿಕ್‌ ಆಗಿರಲಿ.
  3. ಲ್ಯಾಪ್‌ಟಾಪ್‌ ಬಳಕೆಯ ಮೇಲೆ ಗಮನವಿರಲಿ. ಅಗತ್ಯವಿದೆಯೋ ಇಲ್ಲವೋ ಹತ್ತಿಪ್ಪತ್ತು ಬ್ರೌಸರ್‌ ಟ್ಯಾಬ್‌ಗಳನ್ನು ತೆರೆದು ಇಡಬೇಡಿ. ಏನು ಕೆಲಸ ಮಾಡುವಿರೋ ಆ ಒಂದು ಪ್ರೋಗ್ರಾಂ ಮಾತ್ರ ತೆರೆದಿರಲಿ. ಉಳಿದ ಆಪ್‌ಗಳೆಲ್ಲವನ್ನೂ ಕ್ಲೋಸ್‌ ಮಾಡಿ. ಇದರಿಂದ ಸಾಕಷ್ಟು ಬ್ಯಾಟರಿ ಉಳಿತಾಯವಾಗುತ್ತದೆ.
  4. ಪಿಸಿ ಮ್ಯಾಗ್‌ ನೀಡಿದ ಸಲಹೆಯ ಪ್ರಕಾರ ಗ್ರಾಫಿಕ್ಸ್‌ ಮತ್ತು ಡಿಸ್‌ಪ್ಲೇ ಸೆಟ್ಟಿಂಗ್‌ ಹೊಂದಾಣಿಕೆಯ ಮೂಲಕವೂ ಲ್ಯಾಪ್‌ಟಾಪ್‌ನಲ್ಲಿ ವಿದ್ಯುತ್‌ ಉಳಿತಾಯ ಮಾಡಬಹುದು. ವಿಂಡೋಸ್‌ 11 ಬಳಸುತ್ತಿದ್ದರೆ Settings > System > Display > Graphicsಗೆ ಪ್ರವೇಶಿಸಿ. ಅಲ್ಲಿ ಪ್ರತಿಯೊಂದು ಆಪ್‌ಗೂ ಗ್ರಾಫಿಕ್‌ ಪ್ರೊಸೆಸರ್‌ ಹೊಂದಾಣಿಕೆ ಮಾಡಬಹುದು. ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ವಿಂಡೋಸ್‌ ವರ್ಷನ್‌ನಲ್ಲಿ ಈ ಆಯ್ಕೆ ದೊರಕದೆ ಇರಬಹುದು.
  5. ಹೆಚ್ಚು ಪವರ್‌ ಬಳಸುವ ನಿರ್ದಿಷ್ಟ ಆಪ್‌ ಅನ್ನು ಡಿಲೀಟ್‌ ಅಥವಾ ಕ್ಲೋಸ್‌ ಮಾಡಿ. ಕೆಲವೊಂದು ಅನಗತ್ಯ ಆಪ್‌ಗಳು ಹೆಚ್ಚು ಬ್ಯಾಟರಿ ಬಳಸಬಹುದು. ಇಂಟರ್‌ನೆಟ್‌ ಕೆಲಸ ಮಾಡುತ್ತಿರುವಾಗ ಏರೋಪ್ಲೇನ್‌ ಮೋಡ್‌ನಲ್ಲಿಟ್ಟು ಕೆಲಸ ಮಾಡಬಹುದು.
  6. ಲ್ಯಾಪ್‌ಟಾಪ್‌ಗೆ ಸರಿಯಾಗಿ ಗಾಳಿ ಪ್ರವೇಶಿಸಲಿ. ಈಗ ಹೆಚ್ಚಿನ ಲ್ಯಾಪ್‌ಟಾಪ್‌ಗಳು ಲೀಥಿಯಂ ಪಾಲಿಮಾರ್‌ ಬ್ಯಾಟರಿಗಳನ್ನು ಹೊಂದಿರುತ್ತವೆ. ಹೀಗಾಗ, ಮೇಂಟೆನ್ಸ್‌ ಮೊದಲಿನಷ್ಟು ಕಷ್ಟವಿಲ್ಲ. ಕೆಲವೊಮ್ಮೆ ಲ್ಯಾಪ್‌ಟಾಪ್‌ ಬಿಸಿಯಾಗುವ ಅನುಭವವಾಗಬಹುದು. ಲ್ಯಾಪ್‌ಟಾಪ್‌ಗೆ ಸರಿಯಾಗಿ ಗಾಳಿಯಾಡುತ್ತಿಲ್ಲ ಎಂದರ್ಥ. ದಿಂಬಿನ ಮೇಲೆ, ಹಾಸಿಗೆ ಮೇಲೆ ಲ್ಯಾಪ್‌ಟಾಪ್‌ ಇಟ್ಟು ಕೆಲಸ ಮಾಡಿದರೆ ಏರ್‌ ಫ್ಲೋ ಆಗುವುದಿಲ್ಲ.
  7. ಬ್ಯಾಟರಿ ಆರೋಗ್ಯ ಪರಿಶೀಲನೆ: ಎಲ್ಲಾ ಬ್ಯಾಟರಿಗಳಿಗೂ ನಿರ್ದಿಷ್ಟ ಆಯಸ್ಸು ಇರುತ್ತದೆ. ಅದರ ಬ್ಯಾಟರಿ ಚಾರ್ಜಿಂಗ್‌ ಸಾಮರ್ಥ್ಯ ಕಡಿಮೆಯಾಗಬಹುದು. ಇದಕ್ಕಾಗಿ ಬ್ಯಾಟರಿ ಹೆಲ್ತ್‌ ಚೆಕ್‌ ಅಪ್‌ ಅನ್ನು ಆಪರೇಟಿಂಗ್‌ ಸಿಸ್ಟಮ್‌ ಮೂಲಕವೇ ಮಾಡಬಹುದು. ಆಪಲ್‌ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಆಯಸ್ಸು ತಿಳಿಯುತ್ತದೆ. ರಿಪ್ಲೇಸ್‌ ನೌ, ಸರ್ವೀಸ್‌ ಬ್ಯಾಟರಿ ಇತ್ಯಾದಿ ಸಂದೇಶಗಳು ಬರುತ್ತವೆ. ವಿಂಡೋಸ್‌ ಲ್ಯಾಪ್‌ಟಾಪ್‌ಗಳಲ್ಲಿ ವಿವಿಧ ಕಮಾಂಡ್‌ ಪ್ರಾಂಪ್ಟ್‌ ಮೂಲಕ ಬ್ಯಾಟರಿ ಆಯಸ್ಸು ತಿಳಿದುಕೊಳ್ಳಬಹುದು. ಆ ತಾಂತ್ರಿಕ ಜ್ಞಾನ ಇದ್ದರೆ ಪರಿಶೀಲಿಸಿ.
  8. ಬ್ಯಾಟರಿ ಮ್ಯಾನೇಜ್‌ಮೆಂಟ್‌ ಸೆಟ್ಟಿಂಗ್‌ ಪರಿಶೀಲಿಸಿ. ಈಗಿನ ಲ್ಯಾಪ್‌ಟಾಪ್‌ಗಳು ಲ್ಯಾಪ್‌ಟಾಪ್‌ನ ಟೆಂಪರೇಚರ್‌ ಇತಿಹಾಸ, ಚಾರ್ಜಿಂಗ್‌ ಪ್ಯಾಟರ್ನ್‌ ಇತ್ಯಾದಿಗಳನ್ನು ಹೊಂದಿರುತ್ತವೆ. ದಿನವಿಡೀ ಲ್ಯಾಪ್‌ಟಾಪ್‌ಗೆ ಪ್ಲಗ್‌ ಹಾಕಿರುವುದು ಒಳ್ಳೆಯದಲ್ಲ. ಮೊಬೈಲ್‌ ಚಾರ್ಜಿಂಗ್‌ ಯಾವ ರೀತಿ ಮಾಡುವಿರೋ ಅದೇ ರೀತಿ ಚಾರ್ಜ್‌ ಮಾಡುವುದು ಉತ್ತಮ.
  9. ಎನರ್ಜಿ ರೆಕೊಮೊಡೇಷನ್‌ ಫೀಚರ್‌ ಬಳಸಿ. ಈ ಫೀಚರ್‌ ವಿಂಡೋಸ್‌ 11 ಲ್ಯಾಪ್‌ಟಾಆಪ್‌ನಲ್ಲಿದೆ. ಸೆಟ್ಟಿಂಗ್‌ಗೆ ಹೋಗಿ ಎನರ್ಜಿ ರೆಕೊಮೊಡೇಷನ್‌ಗೆ ಹೋಗಬಹುದು. System > Power & battery > Energy recommendations ಎಂಬ ಆಯ್ಕೆಯನ್ನು ಪರಿಶೀಲಿಸಿ.
  10. ಈ ಮೇಲಿನ ಎಲ್ಲಾ ಸಲಹೆಗಳ ಹೊರತಾಗಿಯೂ ನಿಮ್ಮ ಜತೆ ಬ್ಯಾಟರಿ ಬ್ಯಾಕಪ್‌ ಇರಲಿ. ಮೊಬೈಲ್‌ ಪವರ್‌ ಬ್ಯಾಂಕ್‌ ರೀತಿ ಲ್ಯಾಪ್‌ಟಾಪ್‌ಗೂ ಪವರ್‌ ಬ್ಯಾಕಪ್‌ ದೊರಕುತ್ತದೆ. ಇಂತಹ ಒಂದು ಸಾಧನ ನಿಮ್ಮ ಜತೆಗಿರಲಿ. ಕರೆಂಟ್‌ ಹೋದರೂ, ಬ್ಯಾಟರಿ ಖಾಲಿಯಾದರೂ ಚಿಂತೆ ಮಾಡದೆ ಕೆಲಸ ಮಾಡಬಹುದಾಗಿದೆ.

Whats_app_banner