Optical Illusion:ಆಲಸ್ಯ ಸ್ವಭಾವ, ಮುಖ ಚಹರೆಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ತಿಳಿಸಲಿದೆ ಆಪ್ಟಿಕಲ್‌ ಇಲ್ಯುಷನ್‌: ತಜ್ಞರು ನೀಡಿದ ವರದಿ
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion:ಆಲಸ್ಯ ಸ್ವಭಾವ, ಮುಖ ಚಹರೆಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ತಿಳಿಸಲಿದೆ ಆಪ್ಟಿಕಲ್‌ ಇಲ್ಯುಷನ್‌: ತಜ್ಞರು ನೀಡಿದ ವರದಿ

Optical Illusion:ಆಲಸ್ಯ ಸ್ವಭಾವ, ಮುಖ ಚಹರೆಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ತಿಳಿಸಲಿದೆ ಆಪ್ಟಿಕಲ್‌ ಇಲ್ಯುಷನ್‌: ತಜ್ಞರು ನೀಡಿದ ವರದಿ

optical illusion personality test ನಿಮ್ಮ ಸ್ವಭಾವ ಅಥವಾ ಮುಖ ಚಹರೆ ಮೂಲಕವೂ ವ್ಯಕ್ತಿತ್ವವನ್ನು ಗುರುತಿಸಬಹುದು. ಇದಕ್ಕೆ ಆಪ್ಟಿಕಲ್‌ ಇಲ್ಯುಷನ್‌ ಇಂತಹದೊಂದು ಆಸಕ್ತಿದಾಯ ಮಾಹಿತಿಯನ್ನು ನೀಡಿದೆ. ಇದನ್ನು ಆಪ್ಟಿಕಲ್‌ ಇಲ್ಯುಷನ್‌ ತಜ್ಞರಾದ ಮಿಯಾ ಲಿಯನ್‌( Mia Liyin) ಅವರು ಟಿಕ್‌ಟಾಕ್‌ ಮೂಲಕ ಕಲೆಯೊಂದನ್ನು ಹಂಚಿಕೊಂಡಿದ್ದಾರೆ. ಇದರ ವರದಿ ಇಲ್ಲಿದೆ.

ಆಪ್ಟಿಕಲ್‌ ಇಲ್ಯುಷನ್‌ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸ್ವಭಾವದ ಮೂಲಕ ಗುರುತಿಸುವ ಚಿತ್ರ.
ಆಪ್ಟಿಕಲ್‌ ಇಲ್ಯುಷನ್‌ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸ್ವಭಾವದ ಮೂಲಕ ಗುರುತಿಸುವ ಚಿತ್ರ. (Tiktok/miy yilin)

ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಮುಖ ಅಥವಾ ಭಾವನೆ ಹೇಳುತ್ತದೆ ಎನ್ನುವ ಮಾತಿದೆ. ಅದನ್ನು ಆಪ್ಟಿಕಲ್‌ ಇಲ್ಯುಷನ್‌ ಕೂಡ ಅದನ್ನೇ ಹೇಳುತ್ತದೆ. ಆಪ್ಟಿಕಲ್‌ ಇಲ್ಯುಷನ್‌ ಬರೀ ಡಿಕೋಡ್‌ ಮೂಲಕ ಮಾಹಿತಿ ನೀಡುವ ತಂತ್ರಜ್ಞಾನವಲ್ಲ. ಬದಲಿಗೆ ನಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವ ಆಸಕ್ತಿದಾಯಕ ಮಾಹಿತಿಯನ್ನು ನೀಡಲಿದೆ.

ಆಲಸ್ಯದಲ್ಲಿರುವ ಮಹಿಳೆ ಅಥವಾ ಪುರುಷನ ಮುಖ ಚಹರೆಯನ್ನು ನೋಡಿದಾಗ ಅವರ ವ್ಯಕ್ತಿತ್ವ ಹೇಗಿರಬಹುದು ಎನ್ನುವುದನ್ನು ಆಪ್ಟಿಕಲ್‌ ಇಲ್ಯುಷನ್‌ ಹೇಗೆ ವಿಶ್ಲೇಷಿಸುತ್ತದೆ ಎಂಬ ಬಗ್ಗೆ ಆಪ್ಟಿಕಲ್‌ ಇಲ್ಯುಷನ್‌ ತಜ್ಞರಾಗಿರುವ ಮಿಯಾ ಲಿಯಿನ್‌ ಅವರು ಟಿಕ್‌ ಟಾಕ್‌ ನಲ್ಲಿ ವಿಭಿನ್ನ ಕಲಾ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ಹೀಗಿರಲಿದೆ ನಿಮ್ಮ ವ್ಯಕಿತ್ವ

ಈ ಆಪ್ಟಿಕಲ್‌ ಇಲ್ಯುಷನ್‌ ಮೂಲಕ ನೀವು ನಿಮ್ಮದೇ ಮಾರ್ಗವನ್ನು ಹುಟ್ಟುಹಾಕಿಕೊಳ್ಳುವವರು ಅಥವಾ ನಿಮ್ಮ ನಡವಳಿಕೆ ಮೂಲಕವೇ ಎಲ್ಲರನ್ನೂ ಒಲೈಸುವವರಾಗಿರುತ್ತೀರಿ ಎನ್ನುವುದನ್ನು ತಿಳಿಸಲಾಗಿದೆ.

ಆಲಸ್ಯ ಮೂಡ್‌ನ ಮಹಿಳೆ

ಆಲಸ್ಯದ ಮೂಡ್‌ನಲ್ಲಿ ಕುಳಿತುಕೊಂಡಿರುವ ಮಹಿಳೆ ಚಹರೆ ನೋಡಿಯೇ ಆಕೆ ವ್ಯಕ್ತಿತ್ವವನ್ನು ಮಿಯಾ ಹೀಗೆ ವಿಶ್ಲೇಷಿಸುತ್ತಾರೆ. ಇಂತವರು ತಮ್ಮ ಬದುಕಿನಲ್ಲಿ ಅತಿ ಹೆಚ್ಚು ನೈತಿಕ ಗುಣ ಅಳವಡಿಸಿಕೊಂಡಿರುತ್ತಾರೆ. ಇದರೊಟ್ಟಿಗೆ ಎಲ್ಲವನ್ನೂ ಕ್ಷಮಿಸುವ ಗುಣವೂ ನಿಮ್ಮಲ್ಲಿ ಇರುತ್ತದೆ. ಜತೆಗೆ ನೀವು ಉದಾರವಾದಿ ಗುಣವನ್ನೂ ಹೊಂದಿರುತ್ತೀರಿ. ನಿಮ್ಮ ಪಾಸಿಟಿವ್‌ ಗುಣವನ್ನು ಎಲ್ಲರೂ ಹೊಗಳುತ್ತಾರೆ. ಎಲ್ಲಾ ಕಾರ್ಯವನ್ನೂ ಗುಣಾತ್ಮಕತೆ ಹಾಗೂ ದಕ್ಷತೆಯಿಂದ ಮಾಡುತ್ತೀರಿ. ನೀವು ಎಲ್ಲರೊಂದಿಗೂ ಸಹಜವಾಗಿ ಬೆರೆಯುವ ಗುಣ ಹೊಂದಿರುತ್ತೀರಿ. ಒಂದು ರೀತಿ ಚಿಟ್ಟೆಯ ಗುಣ ನಿಮ್ಮಲ್ಲಿ ಮೈಗೂಡಿರುತ್ತದೆ. ನೀವು ಕೆಲವು ದೌರ್ಬಲ್ಯಗಳನ್ನೂ ಹೊಂದಿರುತ್ತೀರಿ. ಅಂದರೆ ನಿಮ್ಮನ್ನು ಯಾರಾದರೂ ಪ್ರಭಾವಿಸಬಹುದು. ಅದು ನಿಮ್ಮನ್ನು ಗೊಂದಲಕ್ಕೂ ದೂಡಿಬಿಡುವ ಹಂತಕ್ಕೂ ಹೋಗಬಹುದು. ನಿಮ್ಮೊಂದಿಗೆ ಒಡನಾಟ ಹೊಂದಿದ ವ್ಯಕ್ತಿ ಋಣಾತ್ಮಕ ನಡುವಳಿಕೆಯಿಂದ ನೀವು ಒತ್ತಡಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವಿರಿ. ನಿಮ್ಮ ವೈಯಕ್ತಿಕ ಭಾವನೆಗೆ ತಕ್ಕುನಾದ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯೂ ಆಗಿರುತ್ತಾರೆ. ಅದೊಂದು ರೀತಿ ಅವರ ಬದುಕಿನ ಕನ್ನಡಿ ಇದ್ದ ಹಾಗೆ ಇರುತ್ತದೆ.

ಪುರುಷನ ಮುಖದ ಮೂಲಕ

ಅದೇ ಒಬ್ಬ ಪುರುಷನ ಮುಖವನ್ನು ನೋಡಿದಾಗ ನೀವು ಅತ್ಯಂತ ಗುಪ್ತ ಮನಸಿನ ವ್ತಕ್ತಿ ಎನ್ನುವುದು ತಿಳಿಯುತ್ತದೆ. ನೀವು ನಿಜವಾಗಿ ಏನು ಎನ್ನುವುದನ್ನು ಯಾರೊಬ್ಬರೂ ಅರ್ಥವಾಗಿಕೊಳ್ಳಲು ಆಗುವುದಿಲ್ಲ ಎನ್ನುವ ಭಾವನೆ ನಿಮಗೆ ಆಗಾಗ ಆಗುತ್ತಲೇ ಇರುತ್ತದೆ. ನೀವು ಯಾವುದೇ ವಸ್ತುವನ್ನು ವಿಶ್ಲೇಷಣಾತ್ಮಕವಾಗಿ ಮತ್ತು ತಾರ್ಕಿಕವಾಗಿ ನೋಡುವ ಗುಣ ಹೊಂದಿರುತ್ತೀರಿ. ನೀವು ಯಾವುದೇ ಕಾರಣಕ್ಕೂ ಜನರನ್ನು ಒಲೈಸುವ ಗುಣ ಹೊಂದಿರುವುದಿಲ್ಲ. ನಿಮ್ಮದೇ ಹಾದಿಯನ್ನು ಸೃಷ್ಟಿಸಿಕೊಳ್ಳುವಂತಹ ಸ್ವಭಾವ ಇರುವವರು. ಸ್ವತಂತ್ರವಾಗಿ ಇರಲು ಬಯಸುತ್ತೀರಿ. ಯಾವುದೇ ಸಂದರ್ಭದಲ್ಲಿ ಓಡಿ ಹೋಗುವ ಪ್ರಯತ್ನವನ್ನೂ ಮಾಡುವುದಿಲ್ಲ.

Whats_app_banner