Instagram New Update: ಇನ್​ಸ್ಟಾಗ್ರಾಮ್‌ಗೆ ಬಂತು ಹೊಸ ಅಪ್‌ಡೇಟ್‌; ರೀಲ್ಸ್, ಫೋಟೊ ಹಂಚಿಕೊಳ್ಳುವವರು ಫುಲ್ ಖುಷ್-technology news instagram new update big news for instagram users carousel feature limit increased instagram update vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Instagram New Update: ಇನ್​ಸ್ಟಾಗ್ರಾಮ್‌ಗೆ ಬಂತು ಹೊಸ ಅಪ್‌ಡೇಟ್‌; ರೀಲ್ಸ್, ಫೋಟೊ ಹಂಚಿಕೊಳ್ಳುವವರು ಫುಲ್ ಖುಷ್

Instagram New Update: ಇನ್​ಸ್ಟಾಗ್ರಾಮ್‌ಗೆ ಬಂತು ಹೊಸ ಅಪ್‌ಡೇಟ್‌; ರೀಲ್ಸ್, ಫೋಟೊ ಹಂಚಿಕೊಳ್ಳುವವರು ಫುಲ್ ಖುಷ್

ಇನ್​ಸ್ಟಾಗ್ರಾಮ್​ನಲ್ಲಿ ಈ ಹಿಂದೆ ಬಳಕೆದಾರರು ಒಂದೇ ಬಾರಿಗೆ10 ಫೋಟೊಗಳು ಅಥವಾ ವಿಡಿಯೊಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿತ್ತು,ಆದರೆ ಈಗ ಈ ಮಿತಿಯನ್ನು ಹೆಚ್ಚಿಸಲಾಗಿದೆ.ಸದ್ಯ ಫೋಟೊಗಳು ಮತ್ತು ವಿಡಿಯೊಗಳನ್ನು ಮುಕ್ತವಾಗಿ ಪೋಸ್ಟ್ ಮಾಡಬಹುದು. (ಬರಹ:ವಿನಯ್ ಭಟ್)

ಇನ್ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ.
ಇನ್ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ.

ಮೆಟಾ ಒಡೆತನದ ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಅದರ ಮೂಲಕ ಬಳಕೆದಾರರು ಈಗ ಹೆಚ್ಚಿನ ಫೋಟೊಗಳು ಮತ್ತು ವಿಡಿಯೊಗಳನ್ನು ಏಕಕಾಲದಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಮೊದಲಿಗಿಂತ ಹೆಚ್ಚು ಫೋಟೊಗಳು ಮತ್ತು ವಿಡಿಯೊಗಳನ್ನು ಕರೋಸೆಲ್‌ನಲ್ಲಿ ಹಂಚಿಕೊಳ್ಳಬಹುದು. ಇನ್​ಸ್ಟಾ ನೀಡಿರುವ ಈ ಹೊಸ ಫೀಚರ್ ಸದಾ ರೀಲ್ಸ್, ಫೋಟೊ ಶೇರ್ ಮಾಡುವವರಿಗೆ ತುಂಬಾ ಉಪಯುಕ್ತವಾಗಿದೆ.

ಈ ಹಿಂದೆ ಬಳಕೆದಾರರು ಒಂದೇ ಬಾರಿಗೆ 10 ಫೋಟೊಗಳು ಅಥವಾ ವಿಡಿಯೊಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿತ್ತು, ಆದರೆ ಈಗ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಸದ್ಯ ಫೋಟೋಗಳು ಮತ್ತು ವಿಡಿಯೊಗಳನ್ನು ಮುಕ್ತವಾಗಿ ಪೋಸ್ಟ್ ಮಾಡಬಹುದು. ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿ ಮೆಟಾ ಹೇಳುವಂತೆ ಇದು ಬಳಕೆದಾರರಿಗೆ ಒಂದೇ ಬಾರಿಗೆ ಬಹು ಫೋಟೋಗಳನ್ನು ಹಂಚಿಕೊಳ್ಳಲು ಸುಲಭಗೊಳಿಸುತ್ತದೆ.

ಈ ಹಿಂದೆ 10ಕ್ಕೆ ಸೀಮಿತವಾಗಿದ್ದ ಒಂದೇ ಬಾರಿಗೆ ಅಪ್ಲೋಡ್ ಮಾಡುವ ಫೋಟೊ-ವಿಡಿಯೊವನ್ನು ಈಗ 20ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ನೀವು ಅನೇಕ ಫೋಟೊಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡುವ ಅಗತ್ಯವಿಲ್ಲ. ಎಲ್ಲ ಫೋಟೊಗಳು ಒಂದೇ ಜಾಗದಲ್ಲಿ ನೋಡಲು ಸಾಧ್ಯವಾಗುತ್ತದೆ. ಇದನ್ನು ಮೊದಲಿಗೆ 2015 ರಲ್ಲಿ ಸೇರಿಸಲಾಯಿತು. ಆರಂಭದಲ್ಲಿ, ಬಳಕೆದಾರರು 5 ಫೋಟೊಗಳನ್ನು ಮಾತ್ರ ಹಂಚಿಕೊಳ್ಳುವ ಆಯ್ಕೆ ನೀಡಲಾಗಿತ್ತು. ನಂತರ ಈ ಮಿತಿಯನ್ನು 10ಕ್ಕೆ ಹೆಚ್ಚಿಸಲಾಗಿತ್ತು, ಈಗ ಅದನ್ನು 20 ಮಾಡಲಾಗಿದೆ.

ಇದರ ಜೊತೆಗೆ ಇನ್‌ಸ್ಟಾಗ್ರಾಮ್ ಕೆಲವು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಲ್ಟಿ-ಟ್ರ್ಯಾಕ್ ಬೆಂಬಲವನ್ನು ಕೂಡ ಪರಿಚಯಿಸಲಾಗಿದೆ. ಇದರ ಸಹಾಯದಿಂದ ಬಳಕೆದಾರರು ಒಂದು ರೀಲ್‌ನಲ್ಲಿ 20 ವಿಭಿನ್ನ ಆಡಿಯೊ ಟ್ರ್ಯಾಕ್‌ಗಳನ್ನು ಸೇರಿಸಬಹುದು. ವಿಶೇಷವಾಗಿ ಕಂಟೆಟ್ ಕ್ರಿಯೇಟರ್ಸ್​ಗೆ ಈ ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇನ್​ಸ್ಟಾಗ್ರಾಮ್ 'Meta AI ಸ್ಟುಡಿಯೋ' ಅನ್ನು ಸಹ ಪ್ರಾರಂಭಿಸಿದೆ, ಅದರ ಮೂಲಕ ನೀವು ನಿಮ್ಮ ಸ್ವಂತ AI ಅವತಾರ್ ಅನ್ನು ರಚಿಸಬಹುದು.