ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಆಪಲ್‌ ಐಫೋನ್‌ 15 ಉಚಿತವಾಗಿ ಪಡೆಯಲು ಹೀಗೆ ಮಾಡಿ-technology news iphone 15 for free in amazon great indian festival sale 2024 pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಆಪಲ್‌ ಐಫೋನ್‌ 15 ಉಚಿತವಾಗಿ ಪಡೆಯಲು ಹೀಗೆ ಮಾಡಿ

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಆಪಲ್‌ ಐಫೋನ್‌ 15 ಉಚಿತವಾಗಿ ಪಡೆಯಲು ಹೀಗೆ ಮಾಡಿ

ಮುಂಬರುವ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ನೀವು ಉಚಿತವಾಗಿ ಐಫೋನ್‌ 15 ಪಡೆಯಬಹುದು. ಈ ಕುರಿತು ಮತ್ತು ಅಮೆಜಾನ್‌ ಗ್ರೇಟ್‌ ಫೆಸ್ಟಿವಲ್‌ ಸೇಲ್‌ನ ಇನ್ನಷ್ಟು ಆಫರ್‌ಗಳ ಕುರಿತು ಇಲ್ಲಿದೆ ವಿವರ.

ಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಐಫೋನ್‌ 15 ಗೆಲ್ಲುವ ಅವಕಾಶ
ಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಐಫೋನ್‌ 15 ಗೆಲ್ಲುವ ಅವಕಾಶ (Apple)

ಬೆಂಗಳೂರು: ಇ-ಕಾಮರ್ಸ್‌ ತಾಣಗಳಲ್ಲಿ ಕೆಲವೇ ದಿನಗಳಲ್ಲಿ ಹಬ್ಬದ ಸಡಗರ ಹೆಚ್ಚಲಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳು ಹಬ್ಬದ ಸೇಲ್‌ ಆರಂಭಿಸುತ್ತಿದ್ದು, ಆನ್‌ಲೈನ್‌ ಖರೀದಿದಾರರು ಕಡಿಮೆ ದರಕ್ಕೆ ತಮ್ಮ ಫೇವರಿಟ್‌ ಪ್ರಾಡಕ್ಟ್‌ಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ಅಧಿಕೃತವಾಗಿ ಸೆಪ್ಟೆಂಬರ್ 27 ರಂದು ಪ್ರಾರಂಭವಾಗಲಿದೆ. ಇಕಾಮರ್ಸ್‌ ತಾಣದ ಅತಿ ದೊಡ್ಡ ಮಾರಾಟದ ಸಮಯದಲ್ಲಿ, ಎಲ್ಲಾ ವಿಭಾಗಗಳು ಮತ್ತು ಬ್ರ್ಯಾಂಡ್‌ಗಳಾದ್ಯಂತ ಸಾಕಷ್ಟು ಡೀಲ್‌ಗಳು, ಆಪರ್‌ಗಳ ಸುರಿಮಳೆ ಇರಲಿದೆ. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ನೀವು ಐಫೋನ್ 15 ಮಾಡೆಲ್‌ ಅನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳೋಣ. ಅಮೆಜಾನ್‌ ಖರೀದಿದಾರರು ಅದೃಷ್ಟವಿದ್ದರೆ ಐಫೋನ್‌ 15 ಅನ್ನು ಉಚಿತವಾಗಿ ಪಡೆಯಬಹುದು.

ಅಮೆಜಾನ್‌ನಲ್ಲಿ ಉಚಿತ ಐಫೋನ್‌ 15 ಪಡೆಯುವುದು ಹೇಗೆ?

ಇ-ಕಾಮರ್ಸ್‌ ತಾಣ ಅಮೆಜಾನ್ "ಗೆಟ್ ಸೇಲ್ ರೆಡಿ" ಪ್ರಾರಂಭಿಸಿದೆ, ಈ ಸಮಯದಲ್ಲಿ ಇ-ಕಾಮರ್ಸ್ ಕಂಪನಿಯು ಖರೀದಿದಾರರಿಗೆ ಉಚಿತ ಐಫೋನ್ 15 ಅನ್ನು ನೀಡುತ್ತಿದೆ. ನಿಮಗೂ ಐಫೋನ್‌ ಪಡೆಯುವ ಅದೃಷ್ಟ ಇದೆಯೇ ಎಂದು ನೋಡಿಕೊಳ್ಳಬಹುದು. ಇದಕ್ಕಾಗಿ ಅಮೆಜಾನ್‌ ಆಪ್‌ನ ಸ್ಪಿನ್‌ ಆಂಡ್‌ ವಿನ್‌ ವಿಭಾಗಕ್ಕೆ ಹೋಗಬೇಕು. ಈ ಬಾರಿ ಐಫೋನ್‌ 15 ಉಚಿತವಾಗಿ ನೀಡುವ ಆಟವನ್ನು ಅಮೆಜಾನ್‌ ಆರಂಭಿಸಿದೆ.

ಐಫೋನ್‌ 15 ಲಕ್ಕಿ ಡ್ರಾದಲ್ಲಿ ಭಾಗವಹಿಸುವುದು ಹೇಗೆ?

  • ಹಂತ 1: ಮೊದಲು ಅಮೆಜಾನ್ ಇಂಡಿಯಾ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಹೋಗಿ.
  • ಹಂತ 2: ಪರದೆಯ ಮೇಲ್ಭಾಗದಲ್ಲಿರುವ "ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್" ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: "ಗೆಟ್ ಸೇಲ್ ರೆಡಿ" ಆಫರ್‌ಗೆ ಹೋಗಿ ಮತ್ತು "ಐಫೋನ್ 15 ಅನ್ನು ಗೆಲ್ಲುವ ಅವಕಾಶ" ಆಯ್ಕೆಮಾಡಿ.
  • ಹಂತ 4: ಅಮೆಜಾನ್‌ನ ಸ್ಪಿನ್ & ವಿನ್ ಆಟದ ಪುಟ ತೆರೆದುಕೊಳ್ಳುತ್ತದೆ.
  • ಹಂತ 5: ಚಕ್ರವನ್ನು ಸರಳವಾಗಿ ತಿರುಗಿಸಿ ಮತ್ತು ಐಫೋನ್ 15 ಅನ್ನು ಗೆಲ್ಲಲು ಜಾಕ್‌ಪಾಟ್ ಗೆಲ್ಲುವ ಅವಕಾಶವನ್ನು ನೀವು ಹೊಂದಿರುತ್ತೀರಿ.

ಇದನ್ನೂ ಓದಿ: ಜಿಯೋ ದೀಪಾವಳಿ ಆಫರ್‌: ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತವಾಗಿ ಬೇಕೇ, ಬಳಕೆದಾರರು ಮಾಡಬೇಕಾಗಿರುವುದು ಇಷ್ಟೇ

ಸ್ಪಿನ್‌ ಆಂಡ್‌ ವಿನ್‌ ಎನ್ನುವ ಆಟವನ್ನು ಲಕ್ಷಾಂತರ ಜನರು ಅಮೆಜಾನ್‌ನಲ್ಲಿ ಆಡುತ್ತಾರೆ. ಅದೃಷ್ಟವಂತರಿಗೆ ಐಫೋನ್‌ ದೊರಕುತ್ತದೆ. ಆಟ ಆಡಿದವರಿಗೆಲ್ಲ ಉಚಿತವಾಗಿ ಐಫೋನ್‌ ದೊರಕುವುದಿಲ್ಲ. ಲಕ್ಕಿ ಡ್ರಾದಲ್ಲಿ ಆಯ್ಕೆಯಾದ ಅದೃಷ್ಟಶಾಲಿಗಳಿಗೆ ಮಾತ್ರ ದೊರಕುತ್ತದೆ. ಡ್ರಾ ವಿಜೇತರನ್ನು ಅಕ್ಟೋಬರ್ 1, 2024 ರಂದು ಘೋಷಿಸಲಾಗುವುದು ಎಂದು ಅಮೆಜಾನ್‌ ತಿಳಿಸಿದೆ. ಒಂದು ಬಾರಿ ಮಾತ್ರ ಒಬ್ಬರು ಈ ಆಟದಲ್ಲಿ ಪಾಲ್ಗೊಳ್ಳಬಹುದು.

mysore-dasara_Entry_Point