iPhone 16 vs iPhone 15: ಆಪಲ್‌ ಐಫೋನ್‌ 15 ನಿಮ್ಮಲ್ಲಿದ್ರೆ ತಪ್ಪಿಯೂ ಹೊಸ ಐಫೋನ್‌ 16 ಖರೀದಿಸಬೇಡಿ, 4 ಕಾರಣಗಳು-technology news iphone 16 vs iphone 15 why you should not upgrade to new generation 4 reasons pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Iphone 16 Vs Iphone 15: ಆಪಲ್‌ ಐಫೋನ್‌ 15 ನಿಮ್ಮಲ್ಲಿದ್ರೆ ತಪ್ಪಿಯೂ ಹೊಸ ಐಫೋನ್‌ 16 ಖರೀದಿಸಬೇಡಿ, 4 ಕಾರಣಗಳು

iPhone 16 vs iPhone 15: ಆಪಲ್‌ ಐಫೋನ್‌ 15 ನಿಮ್ಮಲ್ಲಿದ್ರೆ ತಪ್ಪಿಯೂ ಹೊಸ ಐಫೋನ್‌ 16 ಖರೀದಿಸಬೇಡಿ, 4 ಕಾರಣಗಳು

iPhone 16 vs iPhone 15: ಕಳೆದ ವರ್ಷ ನೀವು ಆಪಲ್‌ ಐಫೋನ್‌ 15 ಖರೀದಿಸಿದ್ರೆ ನಿನ್ನೆ ಬಿಡುಗಡೆಯಾದ ಐಫೋನ್‌ 16ಗೆ ಅಪ್‌ಗ್ರೇಡ್‌ ಆಗಬೇಕಿಲ್ಲ. ಅದಕ್ಕೆ ಏನು ಕಾರಣ ಅಂತೀರ. ಇಲ್ಲಿ ನಾಲ್ಕು ಕಾರಣಗಳನ್ನು ನೀಡಲಾಗಿದೆ.

ಆಪಲ್‌ ಐಫೋನ್‌ 15 ನಿಮ್ಮಲ್ಲಿದ್ರೆ ತಪ್ಪಿಯೂ ಹೊಸ ಐಫೋನ್‌ 16 ಖರೀದಿಸಬೇಡಿ
ಆಪಲ್‌ ಐಫೋನ್‌ 15 ನಿಮ್ಮಲ್ಲಿದ್ರೆ ತಪ್ಪಿಯೂ ಹೊಸ ಐಫೋನ್‌ 16 ಖರೀದಿಸಬೇಡಿ (Apple)

iPhone 16 vs iPhone 15: ಆಪಲ್‌ ಐಫೋನ್‌ 15 ಸೀರಿಸ್‌ಗಳು ಬಿಡುಗಡೆಯಾಗಿವೆ. ವಿನ್ಯಾಸ, ಎಐ ಫೀಚರ್ಸ್‌, ಸಾಫ್ಟ್‌ವೇರ್‌ ಮತ್ತು ಇತರೆ ಅಂಶಗಳಲ್ಲಿ ಕೆಲವು ಬದಲಾವಣೆಗಳ ಮೂಲಕ ಆಪಲ್‌ ಐಫೋನ್‌ 16 ಆಗಮಿಸಿದೆ. ಹೊಸ ಫೀಚರ್‌ಗಳು ಮತ್ತು ಸ್ಪೆಸಿಫಿಕೇಷನ್‌ಗಳನ್ನು ಕಂಡಾಗ ಹೊಸ ಐಫೋನ್‌ ಖರೀದಿಸಬೇಕೆಂದು ನಿಮಗೆ ಮನಸ್ಸಗಬಹುದು. ಆದರೆ, ಈ ರೀತಿ ಅಪ್‌ಗ್ರೇಡ್‌ ಮಾಡುವುದು ಉತ್ತಮವೇ? ನೀವು ಹೊಸ ಐಫೋನ್‌ ಬಂದಾಗ ಅಪ್‌ಗ್ರೇಡ್‌ ಮಾಡುತ್ತ ಬಂದವರಾಗಿದ್ದರೆ ಐಫೋನ್‌ 16ಗೆ ಬಡ್ತಿ ಪಡೆಯಲು ನಿರ್ಧರಿಸಿದ್ದರೆ ತುಸು ಎಚ್ಚರಿಕೆವಹಿಸುವುದು ಉತ್ತಮ. ಐಫೋನ್‌ 15 ಮತ್ತು ಐಫೋನ್‌ 16 ನಡುವೆ ಹೋಲಿಕೆ ಮಾಡಿ ನೋಡಿದ್ರೆ ನಿಮಗೆ ಯಾಕೆ ಅಪ್‌ಗ್ರೇಡ್‌ ಆಗುವ ಅಗತ್ಯವಿಲ್ಲ ಎಂಬ ವಿಚಾರ ಮನವರಿಕೆಯಾಗಬಹುದು.

ಐಫೋನ್‌ 15 ವರ್ಸಸ್‌ ಐಫೋನ್‌ 16

ಡಿಸೈನ್‌ ಮತ್ತು ಡಿಸ್‌ಪ್ಲೇ

ಈ ವರ್ಷ ಆಪಲ್‌ ಕಂಪನಿಯು ಆಪಲ್‌ ಐಫೋನ್‌ 16ನ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿದೆ. ಸ್ಪೆಟಿಯಲ್‌ ವಿಡಿಯೋ ರೆಕಾರ್ಡಿಂಗ್‌ ಮತ್ತು ಕ್ಯಾಮೆರಾ ಕಂಟ್ರೋಲ್‌ ಬಟನ್‌ಗಳನ್ನು ಅಳವಡಿಸಿದೆ. ಆದರೆ, ಐಫೋನ್‌ 15ನಲ್ಲಿರುವ 6.1 ಇಂಚಿನ ಒಲೆಡ್‌ ತಂತ್ರಜ್ಞಾನ, ಡೈನಾಮಿಕ್‌ ಇಸ್‌ಲ್ಯಾಂಡ್‌ ಮತ್ತು 60ಎಚ್‌ಝಡ್‌ ರಿಫ್ರೆಶ್‌ ರೇಟ್‌ನ ಸೂಪರ್‌ ರೆಟಿನಾ ಎಕ್ಸ್‌ಡಿಆರ್‌ ಡಿಸ್‌ಪ್ಲೇ ಐಫೋನ್‌ 16ನಲ್ಲಿ ಮುಂದುವರೆದಿದೆ. ಆದರೆ, ನೀವೆಲ್ಲಾದರೂ 3499 ಡಾಲರ್‌ ಕೊಟ್ಟು ಆಪಲ್‌ ವಿಶನ್‌ ಪ್ರೊ ಹೊಂದಿದ್ದರೆ ಸ್ಪಟಿಯಲ್‌ ವಿಡಿಯೋ ಅನುಭವಕ್ಕಾಗಿ ಅಪ್‌ಗ್ರೇಡ್‌ ಆಗಬಹುದು.

ಕ್ಯಾಮೆರಾ

ಐಫೋನ್‌ 16ನಲ್ಲಿ ಹೊಸ ಫ್ಯೂಷನ್‌ ಕ್ಯಾಮೆರಾ ಇದೆ. ಇದು 48 ಮೆಗಾಫಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ. 2ಎಕ್ಸ್‌ ಆಪ್ಟಿಕಲ್‌ ಝೂಮ್‌ ಹೊಂದಿದೆ. ಇದೇ ಸಮಯದಲ್ಲಿ 12 ಮೆಗಾಫಿಕ್ಸೆಲ್‌ನ ಅಲ್ಟ್ರಾ ವೈಡ್‌ ಕ್ಯಾಮೆರಾ ಹಿಂದಿನಂತೆಯೇ ಇದೆ. ನಿಮ್ಮಲ್ಲಿ ಐಫೋನ್‌ 15 ಇದ್ರೆ ಕ್ಯಾಮೆರಾದಲ್ಲಿ ದೊಡ್ಡ ಬದಲಾವಣೆ ಇಲ್ಲದೆ ಇರುವ ಕಾರಣ ಅಪ್‌ಗ್ರೇಡ್‌ ಆಗುವ ಅಗತ್ಯವಿಲ್ಲ.

ಪರ್ಫಾಮೆನ್ಸ್‌

ಐಫೋನ್‌ 16ನಲ್ಲಿ ಹೊಸ ಎ18 ಚಿಪ್‌ಸೆಟ್‌ ಮತ್ತು 8ಜಿಬಿ ರಾಮ್‌ ಇದೆ. ಐಫೋನ್‌ 15ಗಿಂತ ಶೇಕಡ 30ರಷ್ಟು ಸ್ಪೀಡ್‌ ಆಗಿದೆ. ಆದರೆ, ಎ16 ಬಯೋನಿಕ್‌ ಚಿಪ್‌ಸಟ್‌ ಕೂಡ ಉತ್ತಮ ಪರ್ಫಾಮೆನ್ಸ್‌ ಹೊಂದಿದೆ. ಉತ್ತಮ ಗೇಮಿಂಗ್‌ ಅನುಭವ ನೀಡುತ್ತದೆ. ಉತ್ತಮ ಬ್ಯಾಟರಿ ಬಾಳ್ವಿಕೆಯನ್ನೂ ಹೊಂದಿದೆ. ಹೀಗಾಗಿ, ಅಪ್‌ಗ್ರೇಡ್‌ ಆಗುವ ಅಗತ್ಯವಿಲ್ಲ ಅನ್ನೋದು ನಮ್ಮ ಅಭಿಪ್ರಾಯ.

ಎಐ ಫೀಚರ್ಸ್‌

ತನ್ನ ಹಾರ್ಡ್‌ವೇರ್‌ ಸಾಧನಗಳಿಗೆ ಆಪಲ್‌ ಕಂಪನಿಯು ಆಪಲ್‌ ಇಂಟಲಿಜೆನ್ಸ್‌ ಅಳವಡಿಸಿದೆ. ಹಾರ್ಡ್‌ವೇರ್‌ನ ಮಿತಿಯಿಂದಾಗಿ ಐಫೋನ್‌ 15ನಲ್ಲಿ ಎಐ ಫೀಚರ್‌ ಮಿಸ್‌ ಆಗಿದೆ. ಆದರೆ, ನಿಮಗೆ ನಿಜಕ್ಕೂ ಆಪಲ್‌ ಇಂಟಲಿಜೆನ್ಸ್‌ನ ಅಗತ್ಯವಿದೆಯೇ? ಡಿವೈಸ್‌ನಲ್ಲೇ ಎಐ ನೀಡುವುದಾಗಿ ಆಪಲ್‌ ಭರವಸೆ ನೀಡಿದೆ. ಆದರೆ, ಸಿರಿಗೆ ಚಾಟ್‌ಜಿಪಿಟಿ ಅಳವಡಿಕೆಯು ಕ್ಲೌಡ್‌ ಮೂಲಕ ಮಾತ್ರ ಎಂದಿದೆ. ಆಪಲ್‌ನ ಎಐ ಫೀಚರ್‌ಗಳು ಕೇವಲ ಆಪಲ್‌ ಆಪ್‌ಗಳಿಗೆ ಮಾತ್ರ ಇರುತ್ತದೆ. ಹೀಗಾಗಿ, ಈ ಎಐ ಬಳಕೆ ನಿಮಗೆ ಒಂದಿಷ್ಟು ಮಿತಿ ಹಾಕಿದಂತೆ ಅನಿಸಬಹುದು. ಹೀಗಾಗಿ, ಅಪ್‌ಗ್ರೇಡ್‌ ಅಗತ್ಯವಿಲ್ಲ.

ಈಗ ಹೇಳಿ, ಐಫೋನ್‌ 16ಗೆ ಅಪ್‌ಗ್ರೇಡ್‌ ಆಗುವಿರಾ?

ನೀವು ಐಫೋನ್‌ 14 ಅಥವಾ ಐಫೋನ್‌ 15 ಬಳಸುತ್ತಿದ್ದರೆ ಈ ವರ್ಷ ಐಫೋನ್‌ 16ಗೆ ಅಪ್‌ಗ್ರೇಡ್‌ ಆಗುವ ಅವಶ್ಯಕತೆ ಇಲ್ಲ. ಅಪ್‌ಗ್ರೇಡ್‌ ಆದ್ರೂ ನಿಮಗೆ ವಿಶೇಷವಾದ ಅನುಭವವೇನೂ ದೊರಕದು. ಐಫೋನ್‌ 15ನಲ್ಲಿ ಐಫೋನ್‌ 16ನಲ್ಲಿರು ಅನುಭವ, ಫೀಚರ್ಸ್‌ ದೊರಕುತ್ತದೆ. ಹೀಗಿದ್ದರೂ, ಹೊಸ ತಲೆಮಾರಿನ ಐಫೋನ್‌ ತುಸು ಹೆಚ್ಚು ಸ್ಪೀಡ್‌, ಉತ್ತಮ ಪರ್ಫಾಮೆನ್ಸ್‌ ಹೊಂದಿರುತ್ತದೆ. ಎ18 ಚಿಪ್‌ನಿಂದಾಗಿ ಹೆಚ್ಚು ಉತ್ತಮ ಅನುಭವ ದೊರಕಬಹುದು. ಹಾಗಂತ, ಈಗಲೇ ಐಫೋನ್‌ 16 ಖರೀದಿಸುವ ಅವಶ್ಯಕತೆಯಿಲ್ಲ. ಇದರ ಬದಲು ಐಫೋನ್‌ 16ಗೆ ಕಾಯುವುದು ಉತ್ತಮ. ಆದರೆ, ನೀವು ಐಫೋನ್‌ 13 ಅಥವಾ ಅದಕ್ಕಿಂತಲೂ ಹಳೆಯ ಐಫೋನ್‌ ಬಳಸುತ್ತಿದ್ದರೆ ಖಂಡಿತವಾಗಿಯೂ ಐಫೋನ್‌ 16ಗೆ ಅಪ್‌ಗ್ರೇಡ್‌ ಆಗಬಹುದು.

mysore-dasara_Entry_Point