50MP ಕ್ಯಾಮೆರಾ, 5000mAh ಬ್ಯಾಟರಿ, ಬೆಲೆ ಕೇವಲ 10,499 ರೂ; ಮಾರುಕಟ್ಟೆಗೆ ಬಂತು ಅಗ್ಗದ ಫೋನ್
ಕನ್ನಡ ಸುದ್ದಿ  /  ಜೀವನಶೈಲಿ  /  50mp ಕ್ಯಾಮೆರಾ, 5000mah ಬ್ಯಾಟರಿ, ಬೆಲೆ ಕೇವಲ 10,499 ರೂ; ಮಾರುಕಟ್ಟೆಗೆ ಬಂತು ಅಗ್ಗದ ಫೋನ್

50MP ಕ್ಯಾಮೆರಾ, 5000mAh ಬ್ಯಾಟರಿ, ಬೆಲೆ ಕೇವಲ 10,499 ರೂ; ಮಾರುಕಟ್ಟೆಗೆ ಬಂತು ಅಗ್ಗದ ಫೋನ್

ಭಾರತದಲ್ಲಿ ಬಜೆಟ್ ಫೋನ್‌ಗಳ ಹಾವಳಿ ಹೆಚ್ಚಾಗುತ್ತಿದೆ. ರೆಡ್ಮಿ, ಸ್ಯಾಮ್​ಸಂಗ್​ಗೆ ಸವಾಲೊಡ್ಡಲು ಇದೀಗ ಅನೇಕ ಕಂಪನಿಗಳು ಅತಿ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್​ನ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿದೆ. ಇದೀಗ ಐಕ್ಯೂ ಕಂಪನಿ ದೇಶದಲ್ಲಿ ಬಜೆಟ್ ಬೆಲೆಗೆ ಹೊಸ ಐಕ್ಯೂ Z9 ಲೈಟ್ 5G ಅನ್ನು ರಿಲೀಸ್ ಮಾಡಿದೆ.

50MP ಕ್ಯಾಮೆರಾ, 5000mAh ಬ್ಯಾಟರಿ, ಬೆಲೆ ಕೇವಲ 10,499 ರೂ
50MP ಕ್ಯಾಮೆರಾ, 5000mAh ಬ್ಯಾಟರಿ, ಬೆಲೆ ಕೇವಲ 10,499 ರೂ (IQOO)

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ವಿವೋ ಒಡೆತನದ ಪ್ರಸಿದ್ಧ ಐಕ್ಯೂ ಬ್ರ್ಯಾಂಡ್ ಇದೀಗ ನೂತನ ಫೋನ್​ನೊಂದಿಗೆ ಪುನಃ ಬಂದಿದೆ. ಈ ಬಾರಿ ವಿಶೇಷವಾಗಿ ಬಜೆಟ್ ಪ್ರಿಯರನ್ನು ಗುರಿಯಾಗಿಸಿ ಅತಿ ಕಡಿಮೆ ಬೆಲೆಗೆ ಐಕ್ಯೂ Z9 ಲೈಟ್ 5G ಅನ್ನು ತನ್ನ Z- ಸರಣಿಯ ಅಡಿಯಲ್ಲಿ ಅನಾವರಣ ಮಾಡಿದೆ. ಇದರ ಬೆಲೆ ಕಡಿಮೆಯಾಗಿದ್ದರೂ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 50-ಮೆಗಾಪಿಕ್ಸೆಲ್ ಕ್ಯಾಮೆರಾ, 5,000mAh ಬ್ಯಾಟರಿಯನ್ನು ಕೂಡ ಪ್ಯಾಕ್ ಮಾಡುತ್ತದೆ. ಈ ಫೋನಿನ ಸಂಪೂರ್ಣ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಐಕ್ಯೂ Z9 ಲೈಟ್ 5G ಬೆಲೆ, ಲಭ್ಯತೆ

ಭಾರತದಲ್ಲಿ ಐಕ್ಯೂ Z9 ಲೈಟ್ 5G ಫೋನಿನ 4GB RAM ಮತ್ತು 128GB ಸ್ಟೋರೇಜ್​ನ ಮೂಲ ಮಾದರಿಗೆ ಕೇವಲ 10,499 ರೂಪಾಯಿ ಮಾತ್ರ ಇದೆ. ಅದೇ 6GB ಮೆಮೊರಿ ರೂಪಾಂತರಕ್ಕೆ 11,499 ರೂಪಾಯಿ ನಿಗದಿ ಮಾಡಲಾಗಿದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು HDFC ಬ್ಯಾಂಕ್ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ ರೂ. 500 ತ್ವರಿತ ರಿಯಾಯಿತಿ ಪಡೆಯಬಹುದು.

ಈ ಹ್ಯಾಂಡ್‌ಸೆಟ್ ಆಕ್ವಾ ಫ್ಲೋ ಮತ್ತು ಮೋಚಾ ಬ್ರೌನ್ ಬಣ್ಣ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜುಲೈ 20 ರಿಂದ ಅಮೆಜಾನ್, ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟ ಕಾಣಲಿದೆ.

ಐಕ್ಯೂ Z9 ಲೈಟ್ 5G ಫೀಚರ್ಸ್

ಡ್ಯುಯಲ್-ಸಿಮ್ (ನ್ಯಾನೋ) ಐಕ್ಯೂ Z9 ಲೈಟ್ 5G ಆಂಡ್ರಾಯ್ಡ್ 14-ಆಧಾರಿತ ಫನ್​ಟಚ್ OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.56-ಇಂಚಿನ HD+ (720x1,612 ಪಿಕ್ಸೆಲ್‌ಗಳು) LCD ಡಿಸ್​ಪ್ಲೇ ಹೊಂದಿದೆ. ಇದು 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 6GBಯ RAM ನೊಂದಿಗೆ ಜೋಡಿಸಲಾಗಿದೆ.

ಐಕ್ಯೂ Z9 ಲೈಟ್ ಹ್ಯಾಂಡ್‌ಸೆಟ್​ನಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ (f/1.8) ಜೊತೆಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ (f/2.4) ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು (f/2.0) ಅಳವಡಿಸಲಾಗಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ನೀಡಲಾಗಿದ್ದು, 15Wನಲ್ಲಿ ಚಾರ್ಜ್ ಮಾಡಬಹುದಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಈ ಹ್ಯಾಂಡ್‌ಸೆಟ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹೊಂದಿದೆ.

Whats_app_banner