ಕನ್ನಡ ಸುದ್ದಿ  /  Lifestyle  /  Technology News Is Your Gmail Storage Is Full How To Clear Google Account Storage How To Clear Gmail Storage Arc

Gmail: ಜಿಮೇಲ್‌ ಸ್ಟೋರೇಜ್‌ ಫುಲ್‌ ಆಗಿದೆಯಾ? ಗೂಗಲ್‌ ಅಕೌಂಟ್‌ನಲ್ಲಿ ಸ್ಪೇಸ್‌ ಹೆಚ್ಚಲು ಈ 6 ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ

Google: ಇಮೇಲ್‌ ಎಂಬ ಸಮುದ್ರದಲ್ಲಿ ಫೈಲ್‌ಗಳನ್ನು ಹುಡುಕಿ ಡಿಲೀಟ್‌ ಮಾಡುವುದು ಸುಲಭದ ಕೆಲಸವಲ್ಲ. ಬೇಡದ ಫೈಲ್‌ಗಳನ್ನು ಸುಲಭವಾಗಿ ಹುಡುಕುವ ಮತ್ತು ಡಿಲೀಟ್‌ ಮಾಡಿ ಫ್ರೀ ಸ್ಪೇಸ್‌ ಹೆಚ್ಚಿಸಿಕೊಳ್ಳುವ ಸುಲಭದ ಹಾದಿ ಇದ್ದಿದ್ದರೆ ಎಂಬ ಆಲೋಚನೆ ನಿಮಗೆ ಬಂದಿರಬಹುದು. ಜಿಮೇಲ್‌ ಅಕೌಂಟ್‌ನ ಸ್ಟೊರೇಜ್‌ ಕ್ಲಿಯರ್‌ ಮಾಡಲು ನಿಮಗೆ ಸಹಾಯ ಮಾಡುವ 6 ವಿಧಾನಗಳು ಇಲ್ಲಿವೆ ಓದಿ.

ಜಿಮೇಲ್‌ ಸ್ಟೋರೇಜ್‌ ಫುಲ್‌ ಆಗಿದೆಯಾ? ಗೂಗಲ್‌ ಅಕೌಂಟ್‌ ಸ್ಟೋರೇಜ್‌ ಕ್ಲಿಯರ್‌ ಮಾಡಲು ಇಲ್ಲಿದೆ 6 ಸಿಂಪಲ್‌ ಟ್ರಿಕ್ಸ್‌
ಜಿಮೇಲ್‌ ಸ್ಟೋರೇಜ್‌ ಫುಲ್‌ ಆಗಿದೆಯಾ? ಗೂಗಲ್‌ ಅಕೌಂಟ್‌ ಸ್ಟೋರೇಜ್‌ ಕ್ಲಿಯರ್‌ ಮಾಡಲು ಇಲ್ಲಿದೆ 6 ಸಿಂಪಲ್‌ ಟ್ರಿಕ್ಸ್‌

ಗೂಗಲ್‌ ತನ್ನ ಬಳಕೆದಾರರಿಗೆ ವೈಯಕ್ತಿಕ ಖಾತೆ ನಿರ್ವಹಿಸುವ ಸಲುವಾಗಿ 15 ಜಿಬಿ ಸಂಗ್ರಹಣೆಯನ್ನು ಉಚಿತವಾಗಿ ನೀಡುತ್ತದೆ. ಈ ಸಂಗ್ರಹಣೆಯಲ್ಲಿ ಜಿಮೇಲ್‌, ಫೈಲ್ಸ್‌, ಫೋಟೊ, ಡ್ರೈವ್‌ ಎಲ್ಲವೂ ಸೇರಿರುತ್ತದೆ. ಇದರಲ್ಲಿ ಜಿಮೇಲ್‌ ಅತಿ ಹೆಚ್ಚು ಬಳಕೆಯಾಗುತ್ತದೆ. ದಿನನಿತ್ಯ ಅದೆಷ್ಟೋ ಫೈಲ್ಸ್‌, ಫೋಟೊಗಳು ಜಿಮೇಲ್‌ ಮುಖಾಂತರವೇ ಕಳುಹಿಸಲಾಗುತ್ತದೆ ಮತ್ತು ಅದೇ ರೀತಿ ಸ್ವೀಕರಿಸಲಾಗುತ್ತದೆ. ಆದರೆ ಗೂಗಲ್‌ ನೀಡಿರುವ ಉಚಿತ ಸಂಗ್ರಹಣೆ ಒಮ್ಮೆ ಭರ್ತಿಯಾದರೆ ಆಗ ಬಳಕೆದಾರರು ಯಾವುದೇ ಮೇಲ್‌ ಅನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ ಮತ್ತು ಯಾವುದೇ ಮೇಲ್‌ಗಳನ್ನು ಸ್ವೀಕರಿಸಲೂ ಸಾಧ್ಯವಿಲ್ಲ.

ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸಂಗ್ರಹಣೆಯನ್ನು ಗೂಗಲ್‌ ಒನ್‌ ಖಾತೆಯ ಮೂಲಕ ಹೆಚ್ಚಿಸಿಕೊಳ್ಳಬಹುದು. ಆದರೆ ಇದು ಮಾಸಿಕ 130 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ ನಿಮಗೆ ದುಡ್ಡು ತೆತ್ತಿ ಸಂಗ್ರಹಣೆ ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲ ಅಂದರೆ ನಿಮ್ಮ ಮೇಲ್‌ನಲ್ಲಿರುವ ಜಂಕ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿಕೊಳ್ಳಬಹುದು. ಆದರೆ ಇಮೇಲ್‌ ಎಂಬ ದೊಡ್ಡ ಸಮುದ್ರದಲ್ಲಿ ಫೈಲ್‌ಗಳನ್ನು ಹುಡುಕಿ ಅದನ್ನು ಡಿಲೀಟ್‌ ಮಾಡುವುದು ಸುಲಭದ ಕೆಲಸವಲ್ಲ. ನಿಮಗೆ ಬೇಡದ ಫೈಲ್‌ಗಳನ್ನು ಸುಲಭವಾಗಿ ಹುಡುಕುವ ಮತ್ತು ಅದನ್ನು ಡಿಲೀಟ್‌ ಮಾಡಿ ಫ್ರೀ ಸ್ಪೇಸ್‌ ಹೆಚ್ಚಿಸಿಕೊಳ್ಳುವ ಸುಲಭದ ಹಾದಿ ಇದ್ದಿದ್ದರೆ ಎಂಬ ಆಲೋಚನೆ ನಿಮಗೆ ಬಂದಿರಬಹುದು. ಅದಕ್ಕೆ ನಿಮ್ಮ ಗೂಗಲ್‌ ಅಕೌಂಟ್‌ನಲ್ಲಿ ತುಂಬಿ ತುಳುಕುತ್ತಿರುವ ರಾಶಿ ರಾಶಿ ಜಂಕ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿ ಸಂಗ್ರಹಣೆಯನ್ನು ಪುನಃ ಸ್ಥಾಪಿಸಲು ಇಲ್ಲಿ 6 ಮಾರ್ಗಗಳನ್ನು ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸಿ, ನಿಮ್ಮ ಅಕೌಂಟ್‌ನ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳಿ.

ಜಿಮೇಲ್‌ ಅಕೌಂಟ್‌ನ ಸ್ಟೋರೇಜ್‌ ಕ್ಲಿಯರ್‌ ಮಾಡಲು ಹೀಗೆ ಮಾಡಿ

1) ಅನ್‌ರೀಡ್‌ ಇಮೇಲ್‌ಗಳನ್ನು ಡಿಲೀಟ್‌ ಮಾಡಿ

ಜಿಮೇಲ್‌ ಅನ್‌ರೀಡ್‌ ಇಮೇಲ್‌ಗಳಿಂದ ಬಹಳ ಬೇಗನೆ ತುಂಬಿಹೋಗುತ್ತದೆ. ನೀವು ಬಹಳಷ್ಟು ವೆಬ್‌ಸೈಟ್‌ಗಳಿಗೆ ಸೈನ್‌ಅಪ್‌ ಮಾಡಿದ್ದರೆ ಆಗ ಆ ವೆಬ್‌ಸೈಟ್‌ನವರು ಇಡೀ ದಿನ ನಿಮಗೆ ಅವರ ಪ್ರೊಮೋಷನಲ್‌ ಇಮೇಲ್‌ಗಳನ್ನು ಕಳುಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಇದು ಜಿಮೇಲ್‌ನಲ್ಲಿ ಅನಗತ್ಯ ಇಮೇಲ್‌ಗಳ ಸಂಗ್ರಹಣೆ ಹೆಚ್ಚುವಂತೆ ಮಾಡುತ್ತದೆ. ಇದರಿಂದ ಸಂಗ್ರಹಣೆ ತುಂಬುತ್ತಾ ಹೋಗುತ್ತದೆ. ಹಾಗಾಗಿ ಜಿಮೇಲ್‌ನ ಇನ್‌ಬಾಕ್ಸ್‌ ಅನ್ನು ಕ್ಲೀನ್‌ ಮಾಡಿಕೊಳ್ಳುವುದು ಮತ್ತು ತುಂಬಿ ಹೋದ ಜಾಗವನ್ನು ತೆರವುಗೊಳಿಸುವುದು ಅಗತ್ಯವಾಗಿರುತ್ತದೆ. ಅದಕ್ಕೆ ನೀವು ಓದದಿರುವ ಅಂದರೆ ಅನ್‌ರೀಡ್‌ ಮೆಸೇಜ್‌ಗಳನ್ನು ಅಳಿಸಬಹುದು. ಅದು ಹೇಗೆಂದರೆ ಮೊದಲಿಗೆ ಜಿಮೇಲ್‌ ತೆರೆಯಿರಿ, ಚಕ್‌ಬಾಕ್ಸ್‌ನ ಪಕ್ಕದಲ್ಲಿರುವ ಡ್ರಾಪ್‌ಡೌನ್‌ ಮೆನ್ಯು ಕ್ಲಿಕ್ಕಿಸಿ. ಅಲ್ಲಿ ಅನ್‌ರೀಡ್‌ ಆಯ್ದುಕೊಳ್ಳಿ. ಇಲ್ಲವಾದರೆ ಸರ್ಚ್‌ ಬಾರ್‌ನಲ್ಲಿ ‘is:unread’ ಎಂದು ಟೈಪಿಸಿ ಸರ್ಚ್‌ ಮಾಡಿ. ಆಗ ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಎಲ್ಲಾ ಅನ್‌ರೀಡ್‌ ಮೇಲ್‌ಗಳು ಡಿಸ್ಪ್ಲೇ ಆಗುತ್ತದೆ. ಮೇಲ್ಭಾಗದಲ್ಲಿರುವ ಚೆಕ್‌ಬಾಕ್ಸ್‌ ಅನ್ನು ಕ್ಲಿಕ್ಕಿಸಿ. ಅದು ಎಲ್ಲಾ ಅನ್‌ರೀಡ್‌ ಇಮೇಲ್‌ಗಳನ್ನು ಟಿಕ್‌ ಮಾಡುತ್ತದೆ. ಈಗ ಡಿಲೀಟ್‌ ಬಟನ್‌ ಒತ್ತಿ.

ಹಳೆಯ ಇಮೇಲ್‌ ಡಿಲೀಟ್‌ ಮಾಡಿ

ಜಿಮೇಲ್‌ನ ಸ್ಟೋರೇಜ್‌ ಅನ್ನು ಕ್ಲಿಯರ್‌ ಮಾಡಲು ಇರುವ ಸುಲಭದ ದಾರಿಯೆಂದರೆ ಹಳೆಯ ಇಮೇಲ್‌ಗಳನ್ನು ಡಿಲೀಟ್‌ ಮಾಡುವುದು. ನಿಮಗೆ ಬೇಡದ ಹಳೆಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ. ನೀವು ಸರ್ಚ್‌ ಬಾರ್‌ನಲ್ಲಿ ‘before: ’ ಟೈಪಿಸಿ. ಅಲ್ಲಿ ವರ್ಷವನ್ನು ಬರೆಯಿರಿ. ಉದಾಹರಣೆಗೆ ನೀವು before: <2020> ಎಂದು ಟೈಪಿಸಿದ್ದಾದರೆ ಅದು 2020 ರ ಎಲ್ಲಾ ಇಮೇಲ್‌ಗಳನ್ನು ಡಿಸ್ಪ್ಲೇ ಮಾಡುತ್ತದೆ. ಆಗ ನೀವು ಅದರಲ್ಲಿ ನಿಮಗೆ ಬೇಡದ ಇಮೇಲ್‌ ಡಿಲೀಟ್‌ ಮಾಡಬಹುದು.

ಲಾರ್ಜ್‌ ಇಮೇಲ್‌ ಅನ್ನು ಡಿಲೀಟ್‌ ಮಾಡುವುದು

ಲಾರ್ಜ್‌ ಸೈಜ್‌ನ ಇಮೇಲ್‌ಗಳು ಸಹ ಬಹು ಬೇಗನೆ ಸ್ಟೋರೇಜ್‌ ಖಾಲಿಯಾಗುವಂತೆ ಮಾಡುತ್ತದೆ. ಅದಕ್ಕೆ ಲಾರ್ಜ್‌ ಫೈಲ್‌ಗಳನ್ನು ಹುಡುಕಿ ಅದನ್ನು ಡಿಲೀಟ್‌ ಮಾಡುವುದು ಉತ್ತಮ. ಅದಕ್ಕೆ ಹೀಗೆ ಮಾಡಿ. ಸರ್ಚ್‌ಬಾರ್‌ನಲ್ಲಿ ‘has:attachment larger:15MB’ ಎಂದು ಟೈಪಿಸಿ. ಸೈಜ್‌ ಅನ್ನು ನಿಮಗೆ ಬೇಕಾದ ಹಾಗೆ ಹೊಂದಿಸಿಕೊಳ್ಳಿ. ಅದು 15 MB ಗಿಂತ ಹೆಚ್ಚಿರುವ ಎಲ್ಲಾ ಇಮೇಲ್‌ಗಳನ್ನು ಸರ್ಚ್‌ ಮಾಡುತ್ತದೆ. ಈಗ ನೀವು ಸುಲಭದಲ್ಲಿ ಆ ಇಮೇಲ್‌ಗಳನ್ನು ಡಿಲೀಟ್‌ ಮಾಡಬಹುದು.

ಗೂಗಲ್‌ ಫೋಟೋಗಳನ್ನು ಡಿಲೀಟ್‌ ಮಾಡಿ

ಇಮೇಲ್‌ಗಳ ಅಷ್ಟೇ ಅಲ್ಲದೇ, ಗೂಗಲ್‌ ಫೋಟೊಗಳು ಮತ್ತು ಡ್ರೈವ್ ಕೂಡ ನಿಮ್ಮ ಜಿಮೇಲ್‌ ಖಾತೆಯ ಸಂಗ್ರಹಣೆಯನ್ನೇ ಬಳಸಿಕೊಳ್ಳುತ್ತವೆ. ಅನಗತ್ಯ ಫೋಟೊ ಮತ್ತು ವಿಡಿಯೊಗಳನ್ನು ಡಿಲಿಟ್‌ ಮಾಡುವುದರಿಂದ ನಿಮ್ಮ ಇಮೇಲ್ ಖಾತೆಯಲ್ಲಿ ಜಾಗವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.

ಗೂಗಲ್‌ ಡ್ರೈವ್‌ ಕ್ಲೀನ್‌ ಮಾಡಿ

ಗೂಗಲ್‌ನಲ್ಲಿರುವ ಪಿಡಿಎಫ್, DOC ಫೈಲ್‌ಗಳು ಮತ್ತು APK ಗಳು ಸೇರಿದಂತೆ ಅನಗತ್ಯ ಮತ್ತು ಹಳೆಯದಾದ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಪತ್ತೆ ಮಾಡಿ ಅದನ್ನು ಡಿಲೀಟ್‌ ಮಾಡಿ. ಮೊದಲು ಗೂಗಲ್‌ ಡ್ರೈವ್‌ಗೆ ಹೋಗಿ ಅಲ್ಲಿ ಫೈಲ್ಸ್‌ಗಳನ್ನು ರೀಅರೇಂಜ್‌ ಮಾಡಿಕೊಳ್ಳಿ. ಅದಿಕ್ಕೆ ಬಲಬದಿಯಲ್ಲಿರುವ ಸ್ಟೋರೇಜ್‌ ಮೇಲೆ ಕ್ಲಿಕ್ಕಿಸಿ ಅದರಲ್ಲಿ ಸೈಜ್‌ ಆಯ್ದುಕೊಳ್ಳಿ. ಆ ಫೈಲ್‌ಗಳನ್ನು ಸೆಲೆಕ್ಟ್ ಮಾಡಿ ಡಿಲೀಟ್‌ ಮಾಡಿ. ಹೀಗೆ ಮಾಡುವುದರಿಂದ ನಿಮಗೆ ಅಗತ್ಯವಿರುವ ಸ್ಟೊರೇಜ್‌ಗಳನ್ನು ಪಡೆದುಕೊಳ್ಳಬಹುದು.

ಗೂಗಲ್‌ ಒನ್‌ ಸ್ಟೋರೇಜ್ ಮ್ಯಾನೇಜರ್ ಬಳಸಿ

ಗೂಗಲ್‌ ಒನ್‌ ಸ್ಟೋರೇಜ್‌ ಮ್ಯಾನೇಜರ್ ಟೂಲ್‌ ನಿಮಗೆ ಗೂಗಲ್ ಡ್ರೈವ್‌, ಜಿಮೇಲ್‌ ಮತ್ತು ಗೂಗಲ್‌ ಫೋಟೊಗಳಲ್ಲಿನ ಸಂಗ್ರಹಣೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ಎಷ್ಟು ಸಂಗ್ರಹಣೆಯನ್ನು ಬಳಸುತ್ತಿರುವಿರಿ ಎಂಬುದನ್ನು ಇದು ತಿಳಿಸುತ್ತದೆ. ಅದೇ ರೀತಿ ನೀವು ಅಳಿಸಬಹುದಾದ ದೊಡ್ಡ ಫೈಲ್‌ಗಳನ್ನು ಹುಡುಕಲು ಮತ್ತು ನಿಮಗೆ ಅಗತ್ಯವಿದ್ದರೆ ಹೆಚ್ಚಿನ ಸಂಗ್ರಹಣೆಯನ್ನು ಪಡೆಯಲು ನೀವು ಇದನ್ನು ಬಳಸಬಹುದು. ನಿಮ್ಮ ಅಕೌಂಟ್‌ನಲ್ಲಿರುವ ಕೆಲವು ಸಂಗ್ರಹಣೆಯನ್ನು ಡಿಲೀಟ್‌ ಮಾಡಬೇಕಾದಾಗ ಈ ಟೂಲ್‌ ನಿಮಗೆ ಉತ್ತಮ ದಾರಿಯಾಗಿದೆ. ಗೂಗಲ್‌ ಒನ್‌ ಸ್ಟೋರೇಜ್‌ ಮ್ಯಾನೇಜರ್‌ ಮುಖಾಂತರ ಸಂಗ್ರಹಣೆಯನ್ನು ಡಿಲೀಟ್‌ ಮಾಡಲು ಹೀಗೆ ಮಾಡಿ, ಮೊದಲಿಗೆ ಗೂಗಲ್‌ ಒನ್‌ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ನಿಮ್ಮ ಖಾತೆಗೆ ಸೈನ್‌ ಇನ್‌ ಆಗಿ. ಸ್ಟೋರೇಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅದು ಪ್ರತಿಯೊಂದರಲ್ಲೂ ನೀವು ಸ್ಟೋರೇಜ್‌ ಅನ್ನು ಎಷ್ಟು ಬಳಸಿದ್ದೀರಿ ಎಂಬುದನ್ನು ತೋರಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಫೈಲ್ ಅಥವಾ ಫೋಟೊಗಳನ್ನು ಡಿಲೀಟ್‌ ಮಾಡಿ.

(This copy first appeared in Hindustan Times Kannada website. To read more like this please logon to kannada.hindustantimes.com)