Itel Phone: ಕೇವಲ 5,699 ರೂ. ಬೆಲೆಯ ಸ್ಮಾರ್ಟ್​ಫೋನ್​ನಲ್ಲಿ ಐಫೋನ್​ನ ಫೀಚರ್- ಭಾರತಕ್ಕೆ ಬಂದಿದೆ ಹೊಸ ಮೊಬೈಲ್ ಫೋನ್-technology news itel a50 and itel a50s released in india iphone like dynamic bar feature itel a50c price in india vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Itel Phone: ಕೇವಲ 5,699 ರೂ. ಬೆಲೆಯ ಸ್ಮಾರ್ಟ್​ಫೋನ್​ನಲ್ಲಿ ಐಫೋನ್​ನ ಫೀಚರ್- ಭಾರತಕ್ಕೆ ಬಂದಿದೆ ಹೊಸ ಮೊಬೈಲ್ ಫೋನ್

Itel Phone: ಕೇವಲ 5,699 ರೂ. ಬೆಲೆಯ ಸ್ಮಾರ್ಟ್​ಫೋನ್​ನಲ್ಲಿ ಐಫೋನ್​ನ ಫೀಚರ್- ಭಾರತಕ್ಕೆ ಬಂದಿದೆ ಹೊಸ ಮೊಬೈಲ್ ಫೋನ್

ಐಟೆಲ್A50 ಮತ್ತು ಐಟೆಲ್A50Cಭಾರತದಲ್ಲಿ ರಿಲೀಸ್ ಆಗಿದೆ.ವಿಶೇಷ ಎಂದರೆ ಈ ಫೋನಿನಲ್ಲಿ ನೋಟಿಫಿಕೇಶನ್ ಮತ್ತು ಇತರ ಮಾಹಿತಿಯನ್ನು ವೀಕ್ಷಿಸಲು ಅವರು ಐಫೋನ್‌ನಂತಹ ಡೈನಾಮಿಕ್ ಬಾರ್ ವೈಶಿಷ್ಟ್ಯವನ್ನು ನೀಡಿದ್ದಾರೆ.(ಬರಹ:ವಿನಯ್ ಭಟ್)

ಐಟೆಲ್ A50 ಮತ್ತು ಐಟೆಲ್ A50C ಭಾರತದಲ್ಲಿ ರಿಲೀಸ್ ಆಗಿದೆ.
ಐಟೆಲ್ A50 ಮತ್ತು ಐಟೆಲ್ A50C ಭಾರತದಲ್ಲಿ ರಿಲೀಸ್ ಆಗಿದೆ.

ಭಾರತದಲ್ಲಿ ಬಜೆಟ್ ಸ್ಮಾರ್ಟ್​ಫೋನ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಡಿಮೆ ಬೆಲೆಗೆ ಒಂದೊಳ್ಳೆ ಫೋನ್ ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಮಾರಾಟ ಕಾಣುತ್ತದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಅನೇಕ ಚೈನೀಸ್ ಸ್ಮಾರ್ಟ್‌ಫೋನ್ ಬ್ರಾಂಡ್‌ ದೇಶದಲ್ಲಿ ಬಜೆಟ್ ಫೋನುಗಳನ್ನು ಅನಾವರಣ ಮಾಡುತ್ತಿದೆ. ಇದೇ ಸಾಲಿನಲ್ಲಿ ಇದೀಗ ಪ್ರಸಿದ್ಧ ಐಟೆಲ್ ಕಂಪನಿ ಐಟೆಲ್ A50 ಮತ್ತು ಐಟೆಲ್ A50C ಭಾರತದಲ್ಲಿ ರಿಲೀಸ್ ಮಾಡಿದೆ. ಈ ಹೊಸ ಹ್ಯಾಂಡ್‌ಸೆಟ್‌ಗಳು ಯುನಿಸೊಕ್ T603 SoC ಯೊಂದಿಗೆ ಬಹು ಬಣ್ಣದ ಆಯ್ಕೆಗಳಲ್ಲಿ ಬರುತ್ತವೆ. ವಿಶೇಷ ಎಂದರೆ ಈ ಫೋನಿನಲ್ಲಿ ನೋಟಿಫಿಕೇಶನ್ ಮತ್ತು ಇತರ ಮಾಹಿತಿಯನ್ನು ವೀಕ್ಷಿಸಲು ಅವರು ಐಫೋನ್‌ನಂತಹ ಡೈನಾಮಿಕ್ ಬಾರ್ ವೈಶಿಷ್ಟ್ಯವನ್ನು ನೀಡಿದ್ದಾರೆ.

ಭಾರತದಲ್ಲಿ ಐಟೆಲ್ A50, ಐಟೆಲ್ A50C ಬೆಲೆ

ಐಟೆಲ್ A50 ಸ್ಮಾರ್ಟ್​ಫೋನ್​ನ 3GB RAM + 64GB ಸ್ಟೋರೇಜ್ ಆವೃತ್ತಿಗೆ 6,099 ರೂ. ಇದೆ ಅಂತೆಯೆ ಇದರ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 6,499 ರೂ. ನಿಗದಿ ಮಾಡಲಾಗಿದೆ. ಇದು ಸಯಾನ್ ಬ್ಲೂ, ಮಿಸ್ಟ್ ಬ್ಲ್ಯಾಕ್, ಲೈಮ್ ಗ್ರೀನ್ ಮತ್ತು ಶಿಮ್ಮರ್ ಗೋಲ್ಡ್ ಬಣ್ಣಗಳಲ್ಲಿ ಬರುತ್ತದೆ. ಈ ಹ್ಯಾಂಡ್‌ಸೆಟ್ ಪ್ರಸ್ತುತ ಅಮೆಜಾನ್​ನಲ್ಲಿ ಮಾರಾಟಕ್ಕಿದೆ. ಐಟೆಲ್ A50C ಫೋನಿನ ಸಿಂಗಲ್ 2GB RAM + 64GB ಸ್ಟೋರೇಜ್ ಆವೃತ್ತಿಗೆ 5,699 ರೂ. ಇದು ಡಾನ್ ಬ್ಲೂ, ಮಿಸ್ಟಿ ಆಕ್ವಾ ಮತ್ತು ಸಫೈರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಐಟೆಲ್ A50, ಐಟೆಲ್ A50C ಫೀಚರ್ಸ್

ಐಟೆಲ್ A50 ಮತ್ತು ಐಟೆಲ್ A50C ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 14 (Go Edition) ನಲ್ಲಿ ರನ್ ಆಗುತ್ತದೆ. A50 ಫೋನ್ 6.56-ಇಂಚಿನ ಡಿಸ್​ಪ್ಲೇ ಹೊಂದಿದ್ದರೆ A50C 6.6-ಇಂಚಿನ ಪರದೆಯನ್ನು ಹೊಂದಿದೆ. ಅವುಗಳು ಡೈನಾಮಿಕ್ ಬಾರ್ ವೈಶಿಷ್ಟ್ಯವನ್ನು ಹೊಂದಿದ್ದು ಅದು ಡಿಸ್‌ಪ್ಲೇಯಲ್ಲಿನ ಹೋಲ್ ಪಂಚ್ ಕಟೌಟ್‌ನ ಸುತ್ತ ಕಾಲ್, ಬ್ಯಾಟರಿ ಸ್ಥಿತಿ ಮತ್ತು ಎಲ್ಲ ನೋಟಿಫಿಕೇಷನ್ ತೋರಿಸುತ್ತದೆ. ಎರಡೂ ಮಾದರಿಗಳು ಆಕ್ಟಾ-ಕೋರ್ ಯುನಿಸಾಕ್ T603 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಐಟೆಲ್ A50 ಅನ್ನು 3GB ಮತ್ತು 4GB RAM ಆಯ್ಕೆಗಳಲ್ಲಿ 64GB ಸಂಗ್ರಹಣೆಯೊಂದಿಗೆ ನೀಡಲಾಗುತ್ತದೆ. ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಮೂಲಕ, 4GB ರೂಪಾಂತರದಲ್ಲಿ ಲಭ್ಯವಿರುವ RAM ಅನ್ನು ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದು. ಐಟೆಲ್ A50C 2GB RAM + 64GB ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಐಟೆಲ್ A50 ಮತ್ತು ಐಟೆಲ್ A50C ಎರಡೂ AI-ಬೆಂಬಲಿತ 8-ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮರಾ ಮತ್ತು 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿವೆ. ದೃಢೀಕರಣಕ್ಕಾಗಿ ಲೈನ್‌ಅಪ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ನೀಡಲಾಗಿದೆ. ಇದು ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.

ಐಟೆಲ್ A50 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಆದರೆ ಐಟೆಲ್ A50C 5W ಚಾರ್ಜಿಂಗ್ ಬೆಂಬಲದೊಂದಿಗೆ 4,000mAh ಬ್ಯಾಟರಿಯನ್ನು ಪಡೆಯುತ್ತದೆ. ಗೇಮಿಂಗ್, ಕ್ಯಾಮರಾ ಆಯ್ಕೆ ಹೊರತು ಪಡಿಸಿ ನೀವು ಅತ್ಯಂತ ಕಡಿಮೆ ಬೆಲೆಗೆ ಒಂದೊಳ್ಳೆ ಸ್ಮಾರ್ಟ್​ಫೋನ್ ಅನ್ನು ನೀವು ಹುಡುಕುತ್ತಿದ್ದರೆ ಈ ಫೋನುಗಳು ಅತ್ಯುತ್ತಮ ಆಯ್ಕೆ ಆಗಿವೆ.