ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಖಯಾಲ್‌; ಒಂದು ಅಪ್ಲಿಕೇಷನ್ ಹಲವು ನೆರವು, ಏನಿದರ ವೈಶಿಷ್ಟ್ಯ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಖಯಾಲ್‌; ಒಂದು ಅಪ್ಲಿಕೇಷನ್ ಹಲವು ನೆರವು, ಏನಿದರ ವೈಶಿಷ್ಟ್ಯ ನೋಡಿ

ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಖಯಾಲ್‌; ಒಂದು ಅಪ್ಲಿಕೇಷನ್ ಹಲವು ನೆರವು, ಏನಿದರ ವೈಶಿಷ್ಟ್ಯ ನೋಡಿ

ಇಳಿ ವಯಸ್ಸಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಡಿಜಿಟಲ್ ಜಗತ್ತಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು, ಇದರೊಂದಿಗೆ ಒಂಟಿತನವೂ ಕಾಡಬಹುದು. ಹಿರಿಯ ನಾಗರಿಕರ ಈ ಎಲ್ಲಾ ಕಷ್ಟಗಳನ್ನು ದೂರ ಮಾಡುವ ಒಂದು ಆ್ಯಪ್ ಇದೆ. ಅದರ ಹೆಸರು ಖಯಾಲ್‌. ಹಿರಿಯ ನಾಗರಿಕರಿಗಾಗಿಯೇ ರೂಪಿಸಿರುವ ಈ ಆ್ಯಪ್‌ ಹಲವು ವೈಶಿಷ್ಟ್ಯ ಹೊಂದಿದೆ.

ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಖಯಾಲ್‌ ಆ್ಯಪ್‌
ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಖಯಾಲ್‌ ಆ್ಯಪ್‌

ಇಂದಿನ ಮಾಡರ್ನ್ ಜಗತ್ತಿನಲ್ಲಿ ವಯಸ್ಸಾಗುತ್ತಿದ್ದಂತೆ ಪೋಷಕರು ಒಂಟಿಯಾಗುತ್ತಾರೆ. ಡಿಜಿಟಲ್ ಜಗತ್ತಿಗೆ ಹೊಂದಿಕೊಳ್ಳಲು ಆಗದೇ, ಹೊಂದಿಕೊಳ್ಳಬೇಕೆಂಬ ಅನಿವಾರ್ಯತೆ ಇದ್ದರೂ ಡಿಜಿಟಲ್ ತಂತ್ರಜ್ಞಾನವನ್ನು ಕಲಿಯಲಾಗದೇ ಪರದಾಡುತ್ತಾರೆ. ವಯಸ್ಸಾಗುತ್ತಿದ್ದಂತೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಿರಿಯ ನಾಗರಿಕರು ಎದುರಿಸುವ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ನೀಡುವ ದೃಷ್ಟಿಯಿಂದ ಆ್ಯಪ್ ಒಂದನ್ನು ರೂಪಿಸಲಾಗಿದೆ. ಅದುವೇ ಖಯಾಲ್‌ (Khyaal).

'ಹಿರಿಯ ನಾಗರಿಕರ ಆಪ್‌‘ ಎಂದೇ ಟ್ಯಾಗ್ ಲೈನ್ ಹೊಂದಿರುವ ಈ ಆಪ್‌ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಇಳಿ ವಯಸ್ಸಿನವರು ಎದುರಿಸುವ ಬಹುತೇಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ. ಹಿರಿಯರಿಗೆ ಡಿಜಿಟಲ್ ಸಾಕ್ಷರತೆಯನ್ನೂ ಒದಗಿಸುವ ಕೆಲಸ ಮಾಡುತ್ತಿದೆ ಈ ಆ್ಯಪ್.

ಖಯಾಲ್‌ ಆ್ಯಪ್‌ (Khyaal App) ನ ವೈಶಿಷ್ಟ್ಯ?

ಹಿರಿಯ ನಾಗರಿಕರು ಎದುರಿಸುವ ಸಂಕಷ್ಟಗಳನ್ನು ದೂರ ಮಾಡುವ ಸಲುವಾಗಿಯೇ ರೂಪಿಸಲಾದ ಆ್ಯಪ್ ಇದು. ಆಧುನಿಕ ಜಗತ್ತಿನಲ್ಲಿ ಅವರು ಎದುರಿಸುತ್ತಿರುವ ಎಲ್ಲಾ ರೀತಿ ಸಮಸ್ಯೆಗಳನ್ನು ದೂರ ಮಾಡಿ ಅವರ ಜೀವನವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿರುವ ಬಹುಪಯೋಗಿ ಅಪ್ಲಿಕೇಷನ್ ಎಂದರೂ ತಪ್ಪಾಗಲಿಕ್ಕಿಲ್ಲ.‌ ಈಗಾಗಲೇ 2 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿರುವ ಆ ಆ್ಯಪ್‌ ಪ್ರಾರಂಭವಾಗಿದ್ದು 2020ರಲ್ಲಿ.

ಆ ಆ್ಯಪ್‌ ಮೂಲಕ ಡಿಜಿಟಲ್ ಸಾಕ್ಷರತೆ, ವೈಯಕ್ತಿಕ ಹಣಕಾಸು, ವಂಚನೆ ತಡೆಗಟ್ಟುವಿಕೆ ಮತ್ತು ಆರೋಗ್ಯ ಬೆಂಬಲಕ್ಕೆ ಬೆಂಬಲ ನೀಡುವ ವಿವಿಧ ಕಾರ್ಯಗಾರವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷ ಟೂರ್ ಪ್ಯಾಕೇಜ್‌ಗಳಿದ್ದು, ತಮಗೆ ಸೂಕ್ತ ಎನ್ನಿಸಿದ್ದನ್ನು ಆಯ್ಕೆ ಮಾಡಿಕೊಂಡು ಪ್ರವಾಸಕ್ಕೂ ಹೋಗಬಹುದು. ಹಿರಿಯರ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ಚಿಂತನಶೀಲವಾಗಿ ಪ್ರವಾಸವನ್ನು ವಿನ್ಯಾಸಗೊಳಿಸಿರುವುದು ವಿಶೇಷ.

ಡಿಜಿಟಲ್ ಸಾರಕ್ಷತೆಯನ್ನ ನೀಡುವ ಉದ್ದೇಶದಿಂದ ಹಿರಿಯರಿಗಾಗಿ ಭಾರತದ ಮೊದಲ ಸ್ಮಾರ್ಟ್ ಪಾವತಿ ಕಾರ್ಡ್, ಖಯಾಲ್‌ ಕಾರ್ಡ್, ಸೈಬರ್ ಸುರಕ್ಷತೆ ರಕ್ಷಣೆಯನ್ನು ಒದಗಿಸಲಾಗಿದೆ. ಈ ಅಪ್ಲಿಕೇಶನ್‌ನ ಅಮೂಲ್ಯವಾದ ವೈಶಿಷ್ಟ್ಯವೆಂದರೆ ಇದೊಂದು ಹೆಲ್ಪ್ ಸರ್ವಿಸ್ ರೀತಿ ಕೆಲಸ ಮಾಡುತ್ತದೆ. ಹಿರಿಯರು ಕ್ಯಾಬ್‌ಗಳನ್ನು ಕಾಯ್ದಿರಿಸುವುದು, ಪ್ರಯಾಣದ ವ್ಯವಸ್ಥೆಗಳು, ವೈದ್ಯಕೀಯ ಸೇವೆಗಳು ಮತ್ತು ಬಿಲ್ ಪಾವತಿಗಳಂತಹ ಸೇವೆಗಳಿಗೆ ಸಲೀಸಾಗಿ ವಿನಂತಿಸಲು ಅನುವು ಮಾಡಿಕೊಡುತ್ತದೆ.

CaratLane ಸಹಭಾಗಿತ್ವದಲ್ಲಿ, ಇತ್ತೀಚೆಗೆ ಖಯಾಲ್ ಡಿಜಿ-ಗೋಲ್ಡ್ ಅನ್ನು ಪರಿಚಯಿಸಲಾಗಿದೆ, ಇದು ಸುರಕ್ಷಿತ ಮತ್ತು ಗೊಂದಲಮುಕ್ತ ಡಿಜಿಟಲ್ ಚಿನ್ನದ ಹೂಡಿಕೆ ಪರಿಹಾರವಾಗಿದೆ. ಖಯಾಲ್ ಅಪ್ಲಿಕೇಶನ್ ಹಿರಿಯರಿಗೆ ಹೊಂದಿಕೊಳ್ಳುವ ಉದ್ಯೋಗಾವಕಾಶಗಳನ್ನು ಹುಡುಕಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಅವರು ತೊಡಗಿಸಿಕೊಳ್ಳಲು ಮತ್ತು ಅವರ ಕೌಶಲಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಈ ಎಲ್ಲಾ ಕಾರ್ಯಗಳ ಮೂಲಕ ಹಿರಿಯ ನಾಗರಿಕರಿಗೆ ಗುಣಮಟ್ಟದ ಜೀವನ ನಡೆಸುವಂತೆ ನೆರವಾಗುವುದು ಇದರ ಉದ್ದೇಶ.

ಹೇಮಾಂಶು ಜೈನ್ (ಎಡಚಿತ್ರ) ಪ್ರಿತೀಶ್ ನೆಲ್ಲೇರಿ (ಬಲಚಿತ್ರ) ಖಯಾಲ್‌ ಸಂಸ್ಥಾಪಕರು
ಹೇಮಾಂಶು ಜೈನ್ (ಎಡಚಿತ್ರ) ಪ್ರಿತೀಶ್ ನೆಲ್ಲೇರಿ (ಬಲಚಿತ್ರ) ಖಯಾಲ್‌ ಸಂಸ್ಥಾಪಕರು

ಖಯಾಲ್ ಆಪ್‌ನ ಸಂಸ್ಥಾಪಕರು

ಹೇಮಾಂಶು ಜೈನ್ ಹಾಗೂ ಪ್ರಿತೀಶ್ ನೆಲ್ಲೇರಿ ಈ ಆ್ಯಪ್‌ನ ಸಂಸ್ಥಾಪಕರು. ಹೇಮಾಂಶು ಅವರು ತಾವು ಹೊರಗಡೆ ಓಡಾಡುತ್ತಿದ್ದಾಗ ಬಿಲ್ ಪಾವತಿ ಮಾಡುವ ವಿಚಾರದಲ್ಲಿ, ಆರೋಗ್ಯ ಸಮಸ್ಯೆಯಾದಾಗ ತೊಂದರೆ ಅನುಭವಿಸುತ್ತಿದದ್ದನ್ನು ನೋಡಿ ಹಿರಿಯರ ನಾಗರಿಕರಿಗೆ ನೆರವಾಗುವಂತೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಈ ಆ್ಯಪ್ ಅನ್ನೂ ರೂಪಿಸುವ ಯೋಚನೆ ಮಾಡುತ್ತಾರೆ. ನಮ್ಮ ತಂದೆಯ ಅನುಭವವನ್ನೇ ತೆಗೆದುಕೊಂಡು ಅವರು ಹಿರಿಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಆ್ಯಪ್ ಅನ್ನು ರೂಪಿಸುತ್ತಾರೆ.

ಖಯಾಲ್‌ ಹಿರಿಯರಿಗೆ ವೈವಿಧ್ಯಮಯ ಚಟುವಟಿಕೆಗಳು ಹಾಗೂ ಕಾರ್ಯವಿಧಾನಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ವಿವಿಧ ವಿಷಯಗಳ ಕುರಿತು ದೈನಂದಿನ ಸಂವಾದ ಸೆಷನ್‌, ಅಡುಗೆ ತರಗತಿಗಳು, ಗುಂಪು ವ್ಯಾಯಾಮ ಸೆಷನ್‌, ಆಟಗಳು ಮತ್ತು ರಸಪ್ರಶ್ನೆಗಳಂತಹ ಮನರಂಜನಾ ವಿಷಯಗಳು ಸೇರಿವೆ. ಈ ಆಪ್ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಆ್ಯಪ್ ಡೌನ್‌ಲೋಡ್, ಸಬ್‌ಸ್ಕ್ರಿಪ್ಷನ್‌ ಮೊತ್ತ

ಖಯಾಲ್‌ (Khyaal) ಆ್ಯಪ್ ಅನ್ನು Google Play Store ಅಥವಾ Apple ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ವರ್ಷಕ್ಕೆ 999 ಚಂದಾದಾರಿಕೆ ಅಥವಾ ಸಬ್‌ಸ್ಕ್ರಿಪ್ಷನ್‌ ಮೊತ್ತ ನೀಡಬೇಕಾಗುತ್ತದೆ.

Whats_app_banner